ಇಡ್ಲಿ ಚಾಟ್

Image

ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಹಸಿಮೆಣಸಿನ ಕಾಯಿ, ಈರುಳ್ಳಿ, ಟೊಮ್ಯಾಟೋ, ದೊಣ್ಣೆ ಮೆಣಸಿನಕಾಯಿಗಳನ್ನು ಹಾಕಿ ಬಾಡಿಸಿ. ಬಾಡಿಸಿದ ಮಿಶ್ರಣಕ್ಕೆ ಶುಂಠಿ ತುರಿ, ಜೀರಿಗೆ ಹುಡಿ, ಹುಣಸೆ ರಸ, ನಿಂಬೆ ರಸ, ಸಕ್ಕರೆ, ಉಪ್ಪು, ಚಾಟ್ ಮಸಾಲೆ ಹಾಕಿ ಕಲಕಿ ಒಲೆಯಿಂದ ಇಳಿಸಿರಿ. ಈ ಮಿಶ್ರಣಕ್ಕೆ ಇಡ್ಲಿ ತುಂಡುಗಳು, ಖಾರಾ ಸೇವ್, ಬೂಂದಿ ಕಾಳು, ಹಾಕಿ ಚೆನ್ನಾಗಿ ಕಲಕಿ.

ಬೇಕಿರುವ ಸಾಮಗ್ರಿ

ಕತ್ತರಿಸಿದ ಇಡ್ಲಿ ತುಂಡುಗಳು - ೩ ಕಪ್, ಖಾರಾ ಸೇವ್ - ೧ ಕಪ್, ಬೂಂದಿ ಕಾಳು - ಕಾಲು ಕಪ್, ಕತ್ತರಿಸಿದ ಈರುಳ್ಳಿ - ೧, ಕತ್ತರಿಸಿದ ಹಸಿಮೆಣಸಿನ ಕಾಯಿ - ೮ ತುಂಡುಗಳು, ಕತ್ತರಿಸಿದ ಟೊಮ್ಯಾಟೋ - ೧ ಕಪ್, ಕತ್ತರಿಸಿದ ದೊಣ್ಣೆ ಮೆಣಸು (ಕ್ಯಾಪ್ಸಿಕಂ) -೧ ಕಪ್, ತೆಂಗಿನ ತುರಿ - ಅರ್ಧ ಕಪ್, ಕತ್ತರಿಸಿದ ಕೊತ್ತಂಬರಿ ಸೊಪ್ಪು - ಅರ್ಧ ಕಪ್, ಕತ್ತರಿಸಿದ ಪುದೀನಾ ಸೊಪ್ಪು ಅರ್ಧ ಕಪ್, ಶುಂಠಿ ತುರಿ ೧ ಚಮಚ, ಚಾಟ್ ಮಸಾಲೆ - ೩ ಚಮಚ, ನಿಂಬೆ ರಸ - ೧ ಚಮಚ, ಹುಣಸೆ ರಸ - ೨ ಚಮಚ, ಜೀರಿಗೆ ಹುಡಿ - ೩ ಚಮಚ, ಎಣ್ಣೆ - ಅರ್ಧ ಕಪ್, ಸಕ್ಕರೆ - ೧ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ಸ್ಟೇಟಸ್ ಕತೆಗಳು (ಭಾಗ ೮೮೬)- ಬಲಿಪಶು

ಸತತವಾಗಿ ಹುಡುಕಾಟ ಆರಂಭವಾಗಿದೆ, ಬಲಿಪಶುಗಳಿಗಾಗಿ. ಬಲಿಬಶುಗಳು ಪ್ರಶ್ನೆ ಮಾಡಬಾರದು, ಅನುಸರಿಸಬೇಕು.

Image

ನಾಮಫಲಕ ; ನಿಲುವು ದಿಟ್ಟವಾಗಿರಲಿ

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆ ಅನ್ವಯ ರಾಜ್ಯದ ಎಲ್ಲ ಅಂಗಡಿ ಮುಂಗಟ್ಟುಗಳು, ಕಂಪೆನಿಗಳು, ಸಂಸ್ಥೆಗಳು, ವಾಣಿಜ್ಯ ಮಳಿಗೆಗಳು, ಕಾರ್ಖಾನೆಗಳು, ಸಂಘ ಸಂಸ್ಥೆ, ಶಿಕ್ಷಣ ಸಂಸ್ಥೆಗಳು ಸೇರಿ ಎಲ್ಲಾ ರೀತಿಯ ನಾಮಫಲಕಗಳಲ್ಲಿ ಶೇ, ೬೦ರಷ್ಟು ಕನ್ನಡ ಭಾಷೆ ಕಡ್ಡಾಯ ಮಾಡಲಾಗಿದ್ದು, ಇದನ್ನು ಅಳವಡಿಸಲು ಫೆ.೨೮ ಕೊನೆಯ ದಿನವಾಗಿದೆ.

Image

ಸದಾ ಶಾಂತಿಯ ಪರವಾಗಿ ಮಾತನಾಡೋಣ !

ಸ್ಪಂದಿಸುವ ಶಕ್ತಿಯನ್ನೇ ಅಥವಾ ಮನೋಭಾವವನ್ನೇ ಅಥವಾ ಸೂಕ್ಷ್ಮತೆಯನ್ನೇ ಕಳೆದುಕೊಂಡರೆ ವಿಶ್ವದ ಧಾರ್ಮಿಕ ಮತ್ತು ರಾಜಕೀಯ ನಾಯಕರು  ಎಂಬ ಅನುಮಾನ ಕಾಡುತ್ತಿದೆ.

Image

ಸ್ಟೇಟಸ್ ಕತೆಗಳು (ಭಾಗ ೮೮೫)- ತಪ್ಪು

ತಪ್ಪು ಹಲವು ಸಮಯದಿಂದ ದಾರಿ ಗೊತ್ತಾಗದೆ ಅಡ್ಡಾದಿಡ್ಡಿಯಾಗಿ ಓಡಾಡ್ತಾ ಇದೆ. ಅದನ್ನ ಯಾರು ಕೂಡ ಧೈರ್ಯವಾಗಿ ಒಪ್ಪಿಕೊಳ್ಳದೇ ಇರುವುದಕ್ಕೆ ತಪ್ಪು ಬೇಸರಿಸಿಕೊಂಡಿದೆ. ತಪ್ಪನ್ನು ಮಾಡುವಾಗ ಇರುವ ಧೈರ್ಯ ತಪ್ಪನ್ನ ಒಪ್ಪಿಕೊಳ್ಳುವಾಗ ಇರದಿದ್ದನ್ನ ನೋಡಿ ತಪ್ಪಿಗೆ ತನ್ನ ಬಗ್ಗೆ ತನ್ನನ್ನು ಉಪಯೋಗಿಸಿಕೊಳ್ಳುತ್ತಿರುವವರ ಬಗ್ಗೆ ಅಸಹ್ಯ ಹುಟ್ಟುತ್ತಿದೆ.

Image