ಹಿಂದೂಗಳು ಮೂರ್ತಿಪೂಜಕರಾಗಲು ಕಾರಣ ಮೂರ್ತಿಪೂಜೆ ಭಕ್ತಿಗೆ ಆಧಾರ

ಹಿಂದೂಗಳು ಮೂರ್ತಿಪೂಜೆ ಯಾಕೆ ಮಾಡುತ್ತಾರೆ? ಎಂಬ ಜಿಜ್ಞಾಸೆ ಇಂದು ನಿನ್ನೆಯದಲ್ಲ. ನಮ್ಮ ಋಷಿಮುನಿಗಳು ಸಾವಿರಾರು ವರುಷಗಳ ಮುಂಚೆಯೇ ಈ ಪ್ರಶ್ನೆಗೆ ಸುಸ್ಪಷ್ಟವಾದ ಉತ್ತರ ಕೊಟ್ಟಿದ್ದಾರೆ: ಅನಂತವಾದ ವಿಶ್ವವನ್ನು ನಿಯಂತ್ರಿಸುವ ಶಕ್ತಿಯನ್ನು ಮೂರ್ತಿಯ ರೂಪದಲ್ಲಿ ನಾವು ಪೂಜಿಸುತ್ತೇವೆ; ಇದು ನಮಗೆ ನಮ್ಮ ಮನಸ್ಸನ್ನು ಕೇಂದ್ರೀಕರಿಸಿ ಭಕ್ತಿಯ ಪಥದಲ್ಲಿ ಮುನ್ನಡೆಯಲು ಆಧಾರ.

ಈ ಉತ್ತರ ತಪ್ಪೆಂದು ಸಾಧಿಸಲಿಕ್ಕಾಗಿ ಮೂರ್ತಿಪೂಜೆಯ ಟೀಕಾಕಾರರಿಗೆ ಯಾವುದೇ ತರ್ಕವನ್ನು ಮುಂದೊಡ್ಡಲು ಸಾಧ್ಯವಾಗಿಲ್ಲ. “ಅದು ತಪ್ಪೆಂದು ನಾವು ಹೇಳುತ್ತೇವೆ; ಆದ್ದರಿಂದ ಅದು ತಪ್ಪು” ಎಂಬುದೇ ಅವರ ಉಡಾಫೆಯ ಮಾತು.

Image

ವೈಫಲ್ಯಗಳನ್ನು ಎದುರಿಸುವುದನ್ನು ಕಲಿಯಿರಿ

ನಾನಾ ವಿಧದ ಪರೀಕ್ಷೆಗಳ ಸಮಯ ಈಗ ಬಂದಿದೆ. ವಿದ್ಯಾರ್ಥಿಗಳಿಗೆ ಶಾಲಾ ಪರೀಕ್ಷೆ, ರಾಜಕಾರಣಿಗಳಿಗೆ ಚುನಾವಣಾ ಪರೀಕ್ಷೆ ಎಲ್ಲವೂ ಮುಂದಿನ ಒಂದೆರಡು ತಿಂಗಳಲ್ಲಿ ನಡೆಯಲಿವೆ. ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ ಎಂದರೆ ಮನದಲ್ಲಿ ಏನೋ ಒಂದು ರೀತಿಯ ಗಾಬರಿ. ಅದೂ ಮಂಡಳಿ ಅಥವಾ ಬೋರ್ಡ್ ಪರೀಕ್ಷೆಗಳೆಂದರೆ ಇನ್ನಷ್ಟು ಹೆದರಿಕೆ. ಚೆನ್ನಾಗಿ ತಿಳಿದಿದ್ದರೂ ಬರಿಯುವಾಗ ಏನೋ ಒಂದು ರೀತಿಯ ಅಳುಕು.

Image

ಭಾಷೆ ಆಧಾರದ ಮೇಲೆ ಭಾರತದ ಛಿದ್ರತೆ -ಇನ್ನಾದರೂ ನಿಲ್ಲಬಾರದೇಕೆ?

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ವಿ.ಬಿ.ಕಾಮತ್, ಅನುವಾದ: ಎಂ ಎಸ್ ವೆಂಕಟರಾಮಯ್ಯ
ಪ್ರಕಾಶಕರು
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು - ೫೬೦೦೫೬
ಪುಸ್ತಕದ ಬೆಲೆ
ರೂ. ೧೦.೦೦, ಮುದ್ರಣ : ೨೦೧೦

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು ಮತ್ತು ಭಾರತೀಯ ವಿದ್ಯಾಭವನ, ಮೈಸೂರು ಕೇಂದ್ರದ ಸಹಯೋಗದೊಂದಿಗೆ ಹೊರತಂದಿರುವ ಜ್ಞಾನ ಭರಿತ ಪುಸ್ತಕ ‘ಭಾಷೆ ಆಧಾರದ ಮೇಲೆ ಭಾರತದ ಛಿದ್ರತೆ -ಇನ್ನಾದರೂ ನಿಲ್ಲಬಾರದೇಕೆ?' ಈ ಪುಸ್ತಕ ಮಾಲೆಯ ಪ್ರಧಾನ ಸಂಪಾದಕರು ಡಾ. ಪ್ರಧಾನ್ ಗುರುದತ್ತ ಹಾಗೂ ಸಂಪಾದಕರು ಡಾ ಎ ವಿ ನರಸಿಂಹಮೂರ್ತಿ.

ಸ್ಟೇಟಸ್ ಕತೆಗಳು (ಭಾಗ ೯೦೧)- ಅಹಂಕಾರ

ಆಕಾಶಕ್ಕೆ ಸ್ವಲ್ಪ ಅಹಂಕಾರ ಬಂದಿತ್ತು. ಬೆಳಗ್ಗೆ ಒಂದು ಬಣ್ಣ, ಸಂಜೆಗೊಂದು ಬಣ್ಣ, ಮಧ್ಯಾಹ್ನಕ್ಕೆ ಇನ್ನೊಂದು ಬಣ್ಣವನ್ನ ನೀಡುತ್ತಲೇ ಇದ್ದೇನೆ, ಮೋಡಗಳನ್ನ ಹಾಗೆ ತೇಲಿಸುವುದಕ್ಕೆ ಬಿಟ್ಟು ಜನರಿಗೆ ಮಳೆ ಸುರಿಸುವುದಕ್ಕೆ ಸಹಾಯ ಮಾಡಿದ್ದೇನೆ, ನೆಮ್ಮದಿಗಾಗಿ ಕಣ್ಣಿತ್ತಿ ನೋಡಿದರೆ ನಕ್ಷತ್ರಗಳನ್ನ ಮಿನುಗಿಸಿ ಅವುಗಳಿಗೆ ಬೆನ್ನೆಲುಬಾಗಿ ನಿಂತಿರುತ್ತೇನೆ.

Image

ಗೆಲ್ಲಲು ಹೊರಟವಳು...

ಹುಟ್ಟಿದ್ದು ಬಡತನದ ಮನೆಯಲ್ಲಿ. ಅಪ್ಪ- ಅಮ್ಮನಿಗೆ ಇದ್ದದ್ದು ಒಂದಷ್ಟು ಹೊಲ. ಅದರಲ್ಲಿ ಬಿತ್ತಿ ಬೆಳೆದದ್ದು ಬದುಕುವುದಕ್ಕಷ್ಟೇ ಸಾಕಾಗುತ್ತಿತ್ತು. ಈ ಮಧ್ಯೆ ನಾವು ಆರು ಮಂದಿ ಹುಟ್ಟಿಕೊಂಡೆವು. ಎಲ್ಲಾ ಸರದಿಯಲ್ಲಿ ಹೆಣ್ಣಾಗಿ ಹುಟ್ಟುವ ಮುಂಚೆ, ಮನೆಗೊಬ್ಬ ಗಂಡಾಗಿ ಅಣ್ಣ ಹುಟ್ಟಿದ್ದ. ಆರು ಮಂದಿಯ ಹೊಟ್ಟೆ ತುಂಬಿಸಲು ನನ್ನವ್ವ ಬಹಳನೇ ಹೆಣಗಾಡುತ್ತಿದ್ದಳು.

Image

ಮಾಧ್ಯಮಗಳ ಬುರುಡೆ ಸುದ್ದಿಗಳಿಗೆ ಇಲ್ಲಿದೆ ಸಾಕ್ಷಿ...!

ಮಾಧ್ಯಮಗಳ ಬುರುಡೆ, ಸುಳ್ಳು, ಅತಿರೇಕದ, ಬಾಲಿಶ ಸುದ್ದಿಗಳಿಗೆ ಮತ್ತೊಂದು ಕಪಾಳಮೋಕ್ಷ ಸಾಕ್ಷಿ ಇಲ್ಲಿದೆ. ಬೆಂಗಳೂರಿಗೆ ಕುಡಿಯುವ ನೀರಿನ ಅಭಾವ ಉಂಟಾಗಿ ಎಲ್ಲೆಲ್ಲೂ ಹಾಹಾಕಾರ ಉಂಟಾಗಿದೆ.

Image

ಸ್ಟೇಟಸ್ ಕತೆಗಳು (ಭಾಗ ೯೦೦)- ಪತ್ರ

ಪತ್ರವೊಂದು ಕಳುಹಿಸಿದ್ದೇನೆ. ನಿನ್ನ ಬಳಿಗೆ ಭಗವಂತ. ಕಳೆದ ಸಲವೂ ನಿನ್ನ  ಉತ್ತರ ಸಿಕ್ಕಿತು. ಆದರೆ ನಾನು ಬರೆದ ಪತ್ರಗಳಿಗೆ ನೀನು ಉತ್ತರ ರೂಪದಲ್ಲಿ ಒಮ್ಮೆಯೂ ಪ್ರತಿ ಉತ್ತರ ಬರೆಯಲಿಲ್ಲ. ಆದರೆ ನನ್ನ ಯೋಚನೆ ಸಮಸ್ಯೆಗಳಿಗೆ ಪರಿಹಾರವನ್ನು ಆಗಾಗ ಬೇರೆ ಬೇರೆ ರೂಪದಲ್ಲಿ ನೀಡುತ್ತಾ ಬಂದಿದ್ದೀಯಾ. ಈ ಸಲದ ಪತ್ರದ ಉದ್ದೇಶವೇ ಬೇರೆ. ತುಂಬಾ ಭಯವೆನಿಸಿದೆ ಭಗವಂತ.

Image