ಸ್ಟೇಟಸ್ ಕತೆಗಳು (ಭಾಗ ೧೩೬೭) - ತರಗೆಲೆ

ಸ್ಟೇಟಸ್ ಕತೆಗಳು (ಭಾಗ ೧೩೬೭) - ತರಗೆಲೆ

ಇಬ್ಬರ ವಾದ ತುಂಬಾ ಜೋರಾಗಿತ್ತು. ಇಬ್ಬರೂ ಸಮ ವಯಸ್ಕರೇ, ಜೀವನದಲ್ಲಿ ಅಷ್ಟು ಅದ್ಭುತವಾದ ಅನುಭವವನ್ನು ಏನೂ ಪಡೆದುಕೊಂಡವರಲ್ಲ. ಆದರೆ ತಾವು ಹೇಳಿದ್ದೆ ಸತ್ಯ ಎಂದು ವಾದಿಸುವವರು. ಮೊದಲನೇ ಅವನ ವಾದ "ನಾವು ಜೀವನದಲ್ಲಿ ಹಸಿರಲೆಯಾಗಬೇಕು ಆಹಾರವನ್ನು ತಯಾರಿಸಿಕೊಂಡು ನಾವು ನಮ್ಮನ್ನು ನಂಬಿರುವ ಗಿಡಗಳಿಗೆ ಕಳಿಸುವುದೇ ನಮ್ಮ ಕೆಲಸ. ನೋಡುಗರಿಗೆ ಹಕ್ಕಿಗಳಿಗೆ ಎಲ್ಲರಿಗೂ ನಮ್ಮಿಂದ ಉಪಯೋಗವೇ ಆಗುತ್ತದೆ ಕಣ್ಣು ತಂಪಾಗುತ್ತದೆ.

ಅವನ‌ ವಾದ ಇದಲ್ಲ, ಒಣಗಿ ಉದುರಿದ ನಂತರ ಗಾಳಿ ಬಂದ ಕಡೆ ತೂರಿಕೊಳ್ಳಬೇಕು. ಪ್ರಸ್ತುತ ಕಾಲಘಟ್ಟದಲ್ಲಿ ತುಂಬಾ ಅವಶ್ಯಕವಾಗಿದೆ. ನಮ್ಮ ಬದುಕಿನ ನೆಲೆ ಎಲ್ಲೋ ಒಂದು ಕಡೆ ನಿಲ್ಲುವುದಲ್ಲ. ಪ್ರತಿದಿನವೂ ಚಲಿಸುತ್ತಿರಬೇಕು, ಹೊಸ‌ ಊರು, ಹೊಸ‌ ಕ್ಷಣ ಎಲ್ಲವನ್ನು ಅನುಭವಿಸಬೇಕು. ಎಲ್ಲೋ ಒಂದು ಕಡೆ ಕೊನೆಗೆ ಕೊನೆಯಾಗಿ ಹೋಗುತ್ತೇವೆ ಅಲ್ವಾ? ಇಷ್ಟಾದರೂ ವಾದ ಕೊನೆಗೂ ಮುಗಿಯಲಿಲ್ಲ. ಮನೆಯೊಳಗಿನ ಕರೆಂಟ್ ಹೋದ ತಕ್ಷಣ ಇಬ್ಬರೂ ವಾದವನ್ನು ನಿಲ್ಲಿಸಿ ಊಟಕ್ಕಾಗಿ ಅಡುಗೆ ಕೋಣೆ ಕಡೆಗೆ ಧಾವಿಸಿದ್ದರು. ವಾದ ಮುಂದುವರಿಕೆಯ ಹಂತದಲ್ಲಿದ್ದು...

ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ