ಕಾನ್ ಚಿಟ್ಟೆ

ಪುಸ್ತಕದ ಲೇಖಕ/ಕವಿಯ ಹೆಸರು
ಶಿವಾನಂದ ಕಳವೆ
ಪ್ರಕಾಶಕರು
ಚೇತನಾ ಸಹಕಾರಿ ಪ್ರಕಾಶನ, ಶಿರಸಿ
ಪುಸ್ತಕದ ಬೆಲೆ
ರೂ.45/-

ಉತ್ತರ ಕನ್ನಡದ ಪರಿಸರ ಲೇಖಕ ಶಿವಾನಂದ ಕಳವೆಯವರು 1994ರಿಂದೀಚೆಗೆ ಒಂದು ದಶಕದ ಅವಧಿಯಲ್ಲಿ ರಾಜ್ಯದ ವಿವಿಧ ಭಾಗದಲ್ಲಿ ಅಲೆದಾಡಿದಾಗಿನ ಅನುಭವವನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಇಲ್ಲಿನ 31 ಬರಹಗಳು “ವಿಜಯ ಕರ್ನಾಟಕ” ದಿನಪತ್ರಿಕೆಯಲ್ಲಿ ಅಂಕಣ ಬರಹಗಳಾಗಿ ಪ್ರಕಟವಾಗಿದ್ದವು.

ಉಳ್ಳಾಲದ ಗೇರು ಮೇಳಕ್ಕೆ ಬನ್ನಿ…

ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕಾಪಿಕಾಡ್-ಉಳ್ಳಾಲ ಇಲ್ಲಿ ‘ಗೇರು ಮೇಳ ಮತ್ತು ವಿಚಾರ ಸಂಕಿರಣ'ವು ಇದೇ ಬರುವ ಬುಧವಾರ ಮಾರ್ಚ್ 6, 2024ರಂದು ಜರುಗಲಿದೆ. ಆ ದಿನ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.

Image

ಸಾಮಾಜಿಕ ಪರಿವರ್ತನೆಗಾಗಿ ಸಿದ್ದರಾಗಿ...

ಕೆಟ್ಟದ್ದನ್ನು, ಕೆಟ್ಟವರನ್ನು ಕೆಟ್ಟದ್ದು ಎಂದು ಹೇಳುತ್ತಾ ಆ ಕೆಟ್ಟವರಿಂದ ಕೆಟ್ಟವರೆನಿಸಿಕೊಳ್ಳುವ  ಮೂಲಕ ಯಾವುದೇ ನಿರೀಕ್ಷೆ ಮತ್ತು ಪ್ರತಿಫಲ ಅಪೇಕ್ಷೆ ಇಲ್ಲದೇ, ತಾಳ್ಮೆಯಿಂದ, ಪ್ರಬುದ್ಧತೆಯಿಂದ ಸಾಮಾಜಿಕ ಪರಿವರ್ತನೆಗಾಗಿ ಹೋರಾಡುವ ಒಂದಷ್ಟು ಸಾಮಾನ್ಯ ಜನರ ಅವಶ್ಯಕತೆ ಈ ಸಮಾಜಕ್ಕೆ ಈಗ ಇದೆ.

Image

ಕಲ್ಲಂಗಡಿ ಹಣ್ಣಿನ ಗೊಜ್ಜು

Image

ತೆಂಗಿನ ತುರಿ, ಹುಣಸೆ ಹಣ್ಣು, ಒಣ ಮೆಣಸಿನ ಕಾಯಿ, ಎಳ್ಳು ಹುಡಿ, ಸಾಸಿವೆ ಸೇರಿಸಿ ನುಣ್ಣಗೆ ರುಬ್ಬಿ. ಬಾಣಲೆಯಲ್ಲಿ ಎಣ್ಣೆ ಕಾಯಲಿರಿಸಿ, ಸಾಸಿವೆ, ಇಂಗು, ಅರಶಿನ ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಗೆ ರುಬ್ಬಿದ ಮಿಶ್ರಣ, ಕಲ್ಲಂಗಡಿ ಹಣ್ಣಿನ ತಿರುಳು, ಉಪ್ಪು, ಬೆಲ್ಲ ಸೇರಿಸಿ ಕುದಿಸಿದರೆ ರುಚಿಯಾದ ಕಲ್ಲಂಗಡಿ ಹಣ್ಣಿನ ಗೊಜ್ಜು ರೆಡಿ.

ಬೇಕಿರುವ ಸಾಮಗ್ರಿ

ಬೀಜ, ಸಿಪ್ಪೆ ತೆಗೆದ ಕಲ್ಲಂಗಡಿ ಹಣ್ಣಿನ (ಬಚ್ಚಂಗಾಯಿ) ತಿರುಳು - ೨ ಕಪ್, ಒಣ ಮೆಣಸಿನ ಕಾಯಿ - ೪, ತೆಂಗಿನ ತುರಿ - ೧ ಕಪ್, ಎಳ್ಳು ಹುಡಿ - ೧ ಚಮಚ, ಸಾಸಿವೆ - ಅರ್ಧ ಚಮಚ, ಬೆಲ್ಲದ ಹುಡಿ - ೧ ಚಮಚ, ಹುಣಸೆ ಹಣ್ಣು - ೧ ಸಣ್ಣ ತುಂಡು, ಒಗ್ಗರಣೆಗೆ - ಎಣ್ಣೆ ೩ ಚಮಚ, ಸಾಸಿವೆ ಕಾಳು - ಅರ್ಧ ಚಮಚ, ಇಂಗು - ಕಾಲು ಚಮಚ, ಅರಶಿನ ಹುಡಿ - ಅರ್ಧ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ಸ್ಟೇಟಸ್ ಕತೆಗಳು (ಭಾಗ ೮೯೩)- ತಪ್ಪಿದ ಮಾತು

ಆತ ಉತ್ತಮ ಮಾತುಗಾರ ಅಷ್ಟು ಮಾತ್ರವಲ್ಲ ಹಲವಾರು ವಿಚಾರಗಳನ್ನ ಜನರಿಗೆ ಸುಲಭವಾಗಿ ಅರ್ಥ ಮಾಡಿಸುವುದು ಕೂಡ ಅವನಿಗೆ ತಿಳಿದಿತ್ತು. ಸಮಾಜದ ಹಲವು ಸಮಸ್ಯೆಗಳನ್ನ ಆತ ನೇರವಾಗಿ ಜನರಿಗೆ ಅರ್ಥ ಮಾಡಿಸ್ತಾ ಇದ್ದ.  ಅದರಿಂದ ಜನ ಬದಲಾಗುತ್ತಿದ್ದರು. ಇತ್ತೀಚೆಗೆ ಆತ ರಸ್ತೆ ಸುರಕ್ಷತೆ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡಲಾರಂಭಿಸಿದ.

Image

ಮಿಣುಕು ಹುಳಗಳು

ಮಳೆಗಾಲದ ಒಂದು ದಿನ; ನಮ್ಮ ಹಳ್ಳಿಮನೆಯ ಮುಂಭಾಗದಲ್ಲಿರುವ ಪೋರ್ಟಿಕೋದಂತಹ ರಚನೆಯಲ್ಲಿ ಕುಳಿತಿದ್ದೆ; ಹಗಲು ಒಂದೆರಡು ಗಂಟೆ ಮಳೆ ಸುರಿದು, ಸಂಜೆ ಹೊಳವಾಗಿತ್ತು.

Image

ಬೆಂಗ್ಳೂರಲ್ಲಿ ಬಾಂಬ್ ಸ್ಫೋಟ : ಜನರ ಬೆಚ್ಚಿ ಬೀಳಿಸಿದ ಘಟನೆ

ಬೆಂಗಳೂರಿನ ಹೋಟೇಲ್ ಒಂದರಲ್ಲಿ ಬಾಂಬ್ ಸ್ಫೋಟಿಸಿರುವ ಘಟನೆ ಉದ್ಯಾನನಗರಿಯ ಜನರನ್ನು ಬೆಚ್ಚಿ ಬೀಳಿಸಿದೆ. ಹೆಚ್ಚುಕಮ್ಮಿ ೧೦ ವರ್ಷಗಳ ಬಳಿಕ ರಾಜಧಾನಿಯಲ್ಲಿ ಬಾಂಬ್ ಸ್ಫೋಟಿಸಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದ ಸಮಯದಲ್ಲಿ ಬಾಂಬ್ ಸ್ಫೋಟಿಸಿದ್ದರಿಂದ ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ. ಆದರೆ ಕೆಲವು ಗಾಯಗೊಂಡಿದ್ದಾರೆ.

Image

ಬದುಕಿನ ಪಯಣದ ಹಾದಿಯಲ್ಲಿ ನಮ್ಮ ಸಮಾಜ...

ಶೂನ್ಯದಿಂದ ಪ್ರಾರಂಭವಾಗುವ ಜೀವನದ ಪಯಣ 100 ನಿಲ್ದಾಣಗಳನ್ನು ತಲುಪುತ್ತದೆ ಎಂದು ಹೇಳಲಾಗುತ್ತದೆ. ಆದರೆ ವಾಸ್ತವ ಅನುಭವದಲ್ಲಿ 60 ರಿಂದ 80 ರ ನಡುವಿನ ಯಾವುದಾದರೂ ನಿಲ್ದಾಣದಲ್ಲಿ ಪ್ರಯಾಣ ಮುಗಿಯುವ ಸಾಧ್ಯತೆಯೇ ಹೆಚ್ಚು. ಜೀವ ಅಂಕುರವಾಗುವ ಘಳಿಗೆಯಿಂದ ಉಸಿರು ನಿಲ್ಲುವವರೆಗೆ ಇರುವ ಕಾಲವನ್ನು ಸರಳವಾಗಿ ಜೀವನ ಎಂದು ಪರಿಗಣಿಸಲಾಗುತ್ತದೆ.

Image