ನನ್ನ ಅಪ್ಪನೆಂದರೆ…

ನನ್ನ ಅಪ್ಪನೆಂದರೆ…

ಕವನ

ನನ್ನ ಅಪ್ಪನೆಂದರೆ ಹೀಗೆ

ಹೇಗೆಂದರೆ

ನೇರ ದಿಟ್ಟ ನಿರಂತರ ದುಡಿಮೆ

ಕಾಯಕದೊಳು ನೆಲೆ

ಕಂಡುಕೊಂಡಾತ

ಇತರರಿಗೂ ಕಾಯಕದ

ಬೆಲೆಯ ಹೇಳಿ ಕೊಟ್ಟಾತ

 

ಅಪ್ಪ ಹೇಳುತ್ತಿದ್ದುದೇ

ದುಡಿದು ತಿನ್ನು

ಕೆಲಸ ಪೂರ್ಣಗೊಳಿಸುವ ತನಕ

ವಿಶ್ರಮಿಸದಿರು

ಯಾರು ತಪ್ಪೆಸಗಿದ್ದರೂ

ನಿನಗೇನು ಚಿಂತೆ ?

ನೀನೆಸಗದಿರು ಅಷ್ಟೆ !

 

ಯಾರಿಗೂ ಮಣೆ ಹಾಕದಿರು

ಒಳ್ಳೆಯವರ ಕೈ ಬಿಡದಿರು

ಬಂಧುಗಳ ಪ್ರೀತಿಸು ಎಂದಿಹರು

ನುಡಿದಂತೆ ನಡೆದವರು ನನ್ನಪ್ಪ

ನಿಮಗಿದೋ ಶರಣು ಶರಣು

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

 

ಚಿತ್ರ್