ಸ್ಟೇಟಸ್ ಕತೆಗಳು (ಭಾಗ ೧೩೬೪) - ಅರ್ಥವಾಯಿತು

ಸ್ಟೇಟಸ್ ಕತೆಗಳು (ಭಾಗ ೧೩೬೪) - ಅರ್ಥವಾಯಿತು

ಪರೋಕ್ಷ ಸಾವು ಹೆಚ್ಚು ನೋವು ನೀಡುತ್ತದೆ. ಅವನು ಕೆಲವು ದಿನ ಕಳೆದರೂ ದುಃಖ ಕಡಿಮೆ ಮಾಡಿಕೊಳ್ತಿಲ್ಲ. ಕಳೆದುಕೊಂಡದ್ದು ಅವನು ತುಂಬ ಪ್ರೀತಿಸುವ ಅಜ್ಜನನ್ನು.‌ ಅವರು ವಯಸ್ಸಾದ ಕಾರಣ ದೇವರ ಪಾದ ಸೇರಿದ್ದಾರೆ. ಇದನ್ನ ಒಪ್ಪಿಕೊಂಡು ದಿನ ಕಳೆಯೋಕೆ ಏನು? ಎಷ್ಟು ದಿನ ಅಂತ ಯೋಚನೆಯಲ್ಲೆಯೇ ಕಾಲ ಕಳೆಯೋದು, ಇದೆಲ್ಲ ಯೋಚನೆ ಬಿಡಬೇಕು, ಸ್ವಲ್ಪ ವಾಸ್ತವದಲ್ಲಿ ಬದುಕಬೇಕು. ಹೀಗೆ ಅವನಿಗೆ ಬೋಧನೆ‌ ಮಾಡುತ್ತಿದ್ದವನಿಗೆ ನಮ್ಮ‌ ಮನೆ ಬೆಕ್ಕು ಕೆಲವು‌ ದಿನ ಅನಾರೋಗ್ಯ ಹೊಂದಿ ಒಂದು ದಿನ‌ ಪ್ರಾಣ ಬಿಟ್ಟಿತು. ಯಾರೋ ಇಲಿ‌ ಸಾಯುವುದ್ದಕ್ಕೆ ಇಟ್ಟ ವಿಷ ತಿಂದು ಪ್ರಾಣ ಬಿಟ್ಟಿತು. ತನ್ನದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಂಡು ಬಿಟ್ಟಿತು. ವಾರ ತಿಂಗಳು ಕಳೆದರೂ ಆ ಬೆಕ್ಕನ್ನು ಮರೆಯೋದ್ದಕ್ಕೆ ಸಾದ್ಯವಾಗುತ್ತಿಲ್ಲ.‌ ಮನೆಯಲ್ಲಿ ಬದುಕುವುದ್ದಕ್ಕೆ ಆರಂಭವಾಗಿ ತಿಂಗಳಾದರೂ ಮರೆಯುವುದ್ದಕ್ಕೆ ಸಾದ್ಯವಾಗುತ್ತಿಲ್ಲ. ಅವನ ಅಜ್ಜನ ಮರೆಯುವುದ್ದಕ್ಕೆ ಹೇಳುವ ಅರ್ಹತೆಯೂ ನನಗಿಲ್ಲ, ಅಲ್ಲದೆ ಮರೆಯುವುದು ಸಾಧ್ಯವಿಲ್ಲ ಅನ್ನೋದು ಅರ್ಥವಾಯಿತು.

ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ