ಸ್ಟೇಟಸ್ ಕತೆಗಳು (ಭಾಗ ೧೩೬೨) - ಎಚ್ಚರಿಕೆ

ಸ್ಟೇಟಸ್ ಕತೆಗಳು (ಭಾಗ ೧೩೬೨) - ಎಚ್ಚರಿಕೆ

ನೀನು ಮಾಡುತ್ತಿರುವುದಾದರೂ ಏನು? ನೀನೇನು ಸಮಾಜ ಸುಧಾರಕನಾ? ಏನು ಮಾಡೋದ್ದಕ್ಕೆ ಹೊರಟಿದ್ದೀಯಾ? ಎಲ್ಲೋ ರಾತ್ರಿ ನಾಟಕ, ಕಾರ್ಯಕ್ರಮ, ನಿರೂಪಣೆ, ಎಲ್ಲೋ ಸಮಿತಿಯ ಸದಸ್ಯ ಹೀಗೆ ನಿನ್ನ ಪಟ್ಟಿಗಳು ಬೆಳೆಯುತ್ತಿವೆ, ಆದರೆ ಮನೆಯಲ್ಲಿ ನಿನಗೋಸ್ಕರ ಕಾಯುತ್ತಿರುವವರ ಸ್ಥಿತಿಯೇನು? ನಿನ್ನ ನಂಬಿ ನಿನ್ನ ಕೈ ಹಿಡಿದು ಬಂದವರು ನಿನಗೆ ರಾತ್ರಿಯಿಡೀ ಕಾಯಬೇಕಾ? ನಿನ್ನ ಭಾನುವಾರಗಳು, ರಜಾ‌ದಿನಗಳೆಲ್ಲಾ ಸಮಾಜಕ್ಕೆ ಮೀಸಲಾದರೆ ನಿನ್ನವರಿಗೆ ಯಾವಾಗ ಸಮಯ‌ ನೀಡ್ತೀಯಾ? ಎಲ್ಲವನ್ನು ಎಷ್ಟರಲ್ಲಿ ಇಡಬೇಕು ಅನ್ನೋದು ನಿನಗೆ ಅರಿವಿರಬೇಕು. ನಿನ್ನ ಕುಟುಂಬಕ್ಕಿಂತ ದೊಡ್ಡದು ಯಾವುದೂ ಇಲ್ಲ. ಊರ ಉದ್ದಾರದಲ್ಲಿ ಮನೆಯ ನೆಮ್ಮದಿ ಕಳೆಯಬೇಡಾ ಅರ್ಥವಾಯಿತು ತಾನೇ? ವಾಸುದೇವರು ತಮ್ಮ ಮಗನಿಗೆ ಪಕ್ಕದಲ್ಲಿ ಕುಳಿತು ಬುದ್ದಿವಾದ ಹೇಳುತ್ತಿದ್ದರು.

ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ