ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 28
ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.
245) ಮೂಲ ಹಾಡು:- ಜೋ ವಾದಾ ಕಿಯಾ
ನನ್ನ ಅನುವಾದ :
ಮಾತು ಕೊಟ್ಟ ಮೇಲೆ
ಉಳಿಸಿಕೊಳ್ಳಬೇಕು
ಲೋಕ ಬೇಡೆಂದರೂ
ಆ ದೇವ್ರೆ ಬೇಡೆಂದರೂ
ನೀನು ಬರಲೇಬೇಕು
246) ಮೂಲ ಹಾಡು:- ಕಸಮೆ ವಾದೇಂ ಪ್ಯಾರ ವಫಾ
ನನ್ನ ಅನುವಾದ :
ಪ್ರೇಮ ಪ್ರೀತಿ ಆಣೆ ವಚನ
ಎಲ್ಲ ಬರಿಯ ಶಬ್ದಗಳು
ಯಾರಿಗೆ ಯಾರೂ ಸಂಬಂಧ ಇಲ್ಲ
ಎಲ್ಲ ಬರಿಯ ಶಬ್ದಗಳು
247) ಮೂಲ ಹಾಡು : ತುಝೆ ದೇಖಾ ತೋ ಏ ಜಾನಾ
ನನ್ನ ಅನುವಾದ :
ನಿನ್ನ ಕಂಡಾಗ ನನಗನಿಸಿತು
ಪ್ರೀತಿ ತಾ ಒಂದು ಮರುಳಾಟ ಅಂತ
248) ಮೂಲ ಹಾಡು : ಹಮ್ ಪ್ಯಾರ ಕರನೇ ವಾಲೇ
ನನ್ನ ಅನುವಾದ :
ನಾವು ಪ್ರೀತಿ ಮಾಡುವವರು
ಲೋಕಕ್ಕೆ ಹೆದರದೋರು
ಹೊಟ್ಟೆ ಉರಿಸಿಕೊಳ್ಳುವ ಜನರ
ಹೊಟ್ಟೆ ಉರಿಸೋರು
ಪ್ರೀತಿಯಲ್ಲಿ ಬದುಕೋರು ನಾವು
ಪ್ರೀತಿಯಲ್ಲಿ ಸಾಯೋರು
249) ಮೂಲ ಹಾಡು : ಸಾರೀ ಸಾರೀ ರಾತ ತೇರಿ ಯಾದ್ ಸತಾಯೆ
ನನ್ನ ಅನುವಾದ :
ಇಡೀ ರಾತ್ರಿಯೆಲ್ಲ ನಿನ್ನ ನೆನಪೆನ್ನ ಕಾಡಿದೆ
ಪ್ರೀತಿಯ ಕಾರಣ ಬರಲಿಲ್ಲ ನಿದಿರೆ
ಬರಲಿಲ್ಲ ನಿದಿರೆ
250) ಮೂಲ ಹಾಡು : ಬೇಕರಾರ ಕರಕೆ ಯೂ ನ ಜಾಯಿಯೆ
ನನ್ನ ಅನುವಾದ :
ಮರುಳು ಮಾಡಿ ನನ್ನನು
ಹೀಗೆ ಹೋಗಬೇಡವೇ
ನನ್ನ ಮೇಲೆ ಆಣೆ ಇಹುದು
ಮರಳಿ ಬಾರೆ ನೀ
251) ಮೂಲ ಹಾಡು : ತಾರೀಫ ಕರೂಂ ಕ್ಯಾ ಉಸಕೀ
ನನ್ನ ಅನುವಾದ :
ನಾ ಹೊಗಳಲಿ ಹೇಗೆ ಅವನ
ನಿನ್ನನ್ನು ಸೃಷ್ಟಿಸಿದವನ
252) ಮೂಲ ಹಾಡು : ತುಮ್ಹಾರೇ ದಿಲ್ ಹಮಾರೇ ಪಾಸ್ ಹೈ
ನನ್ನ ಅನುವಾದ :
ನಿನ್ನ ಹೃದಯ ನನ್ನಲ್ಲಿದೆ
ನನ್ನ ಹೃದಯ ನಿನ್ನಲ್ಲಿದೆ
253) ಮೂಲ ಹಾಡು : ಆಫರೀ ಆಫರೀ
ನನ್ನ ಅನುವಾದ : ಅವಳ ಸೌಂದರ್ಯ ಹೊಗಳುವುದು ಸಾಧ್ಯ ಇಲ್ಲ
ಅದು ದೈವಿಕ , ಅದು ದೈವಿಕ
254) ಮೂಲ ಹಾಡು : ತೂ ಮಿಲೆ ದಿಲ ಖಿಲೆ
ನನ್ನ ಅನುವಾದ :
ನೀನೊಲಿದೆ
ಬಾಳು ಬಂಗಾರವೇ
ಬದುಕೋಕೆ
ಬೇಕು ಇನ್ನೇನು ,