ವ್ಯಂಗ್ಯ ಸಲ್ಲದು

ಪುಟ್ಟ ಮಗು ಅಂಬೆಗಾಲಿಕ್ಕುತ ಆಚೀಚೆ ಹೋಗುವಾಗ ಬೀಳುವುದು ಸಹಜ. ನಾವು ಮನೆಯ ಹಿರಿಯರು ಆ ಮಗುವನ್ನು ನೋಡಿಕೊಳ್ಳುತ್ತೇವೆ. ಆದರೆ ಸಮಾಜದಲ್ಲಿ ನಾವು ಅವಲೋಕಿಸಿದಾಗ ನಡೆಯುವವ ಎಲ್ಲಿಯಾದರೂ ಕಾಲಿಗೆ ತಾಗಿ ಬಿದ್ದರೂ ಸಾಕು 'ಅವನಿಗೆ ಹಾಗೆಯೇ ಆಗಬೇಕೆಂದು'ಹೇಳುವ ಮನಸ್ಸು ಕಾಣಬಹುದು. ಸಜ್ಜನರು ಬಿದ್ದವನ ಕೈಹಿಡಿದು ಏಳಿಸಿಯಾನು. ಮೂರ್ಖನು ನೋಡುತ್ತಾ ನಿಂತಾನು.

Image

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 16

 ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.

126) ಮೂಲ ಹಾಡು -  ಮೈ ಶಾಯರ್ ತೋ ನಹೀಂ

ನನ್ನ ಅನುವಾದ:
ನಾನೇನೂ ಕವಿ ಅಲ್ಲ
ಆದರೆ ಅವಳ ಕಂಡ ಗಳಿಗೆ
ನನಗೆ
ಕವಿತ್ವ ಒಲಿಯಿತು
127) ಮೂಲ ಹಾಡು -  ಗೀತ ಗಾತಾ ಹೂಂ ಮೈ

ನನ್ನ ಅನುವಾದ:

ಹಾಡ ನಾ ಹಾಡುವೆ
ಮುಗುಳು ನಗೆ ಬೀರುವೆ
ನಗುತಿರುವೆ ನಾ ಎಂದು
ಕೊಟ್ಟಿದ್ದೆ ಭಾಷೆ
ಅದಕೆಂದೆ ನಾನು
ನಗುತಾನೇ ಇರುವೆ.

128 ) ಮೂಲ ಹಾಡು - ನ ಯಹ್ ಚಾಂದ್ ಹೋಗಾ

ನನ್ನ ಅನುವಾದ:
ಈ ಚಂದ್ರ ಇಲ್ಲದಾಗಲೂ
ಈ ತಾರೆ ಇಲ್ಲದಾಗಲೂ
ನಾನಿರುವೆ ನಿನ್ನ ಸಂಗಾತಿಯಾಗಿ

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 15

ಕ್ಷಮಿಸಿ. ಈ ಕಂತನ್ನು  ಸುಮಾರು 3 ತಿಂಗಳ ನಂತರ ಮುಂದುವರೆಸುತ್ತಿರುವೆ . ನನ್ನ ಈ ತರಹ ಅನುವಾದಗಳ ಸಂಖ್ಯೆ 350 ನ್ನು , ಹೌದು 350 ನ್ನು ದಾಟಿದೆ.

115) ಮೂಲ ಹಾಡು - ಜೀವನ  ಸೆ ಭರೀ ತೇರಿ ಆಂಖೆ
ನನ್ನ ಅನುವಾದ -
ಬಾಳಿ ಬದುಕಲು ಪ್ರೇರಣೆ ನನಗೆ
ನಿನ ಕಣ್ಣಲ್ಲಿ ಇರುವ ಜೀವಕಳೆ
ಸಾಗರದ ಜಲರಾಶಿಗೂ ಮಿಗಿಲು
ನಿನ ರೂಪ ಲಾವಣ್ಯದ ಜಲರಾಶಿ

ಬಿಡಿಸಿದರೇನು ನಿನ್ನಯ ಚಿತ್ರ
ಹಾಡಿದರೇನು ನಿನ್ನ ಕುರಿತು
ಹಿಡಿಸುವುದೇನು ನಿನ್ನಯ ಚೆಲುವು
ಬಣ್ಣಗಳಲ್ಲಿ ಮತ್ತು ಪದಗಳಲ್ಲಿ
        ಹೃದಯಕೆ ನೀನೇ ಎದೆ ಬಡಿತ
        ಜೀವವೇ ಇರುವಿ ನಾ ಜೀವಿಸಲು

ಕಾಶ್ಮೀರದ ಅಭಿವೃದ್ಧಿ ಮತ್ತೊಂದು ಎತ್ತರಕ್ಕೆ

ಪಾಕಿಸ್ತಾನವು ಪಹಲ್ಗಾಮ್ ಪ್ರವಾಸಿಗರ ನರಮೇಧ ನಡೆಸುವ ಮೂಲಕ ಕಾಶ್ಮೀರದ ಅಭಿವೃದ್ಧಿಯನ್ನು ತಡೆಯುವ ಮತ್ತು ಅಲ್ಲಿಗೆ ಪ್ರವಾಸಿಗರ ಆಗಮನವನ್ನು ಕಡಿಮೆಗೊಳಿಸುವ ಉದ್ದೇಶ ಹೊಂದಿದ್ದರೆ, ಅದರ ಉದ್ದೇಶವು ಈಡೇರದು ಎಂಬ ಸ್ಪಷ್ಟ ಸಂಕೇತವನ್ನು ಭಾರತವು ನೀಡಿದೆ.

Image

ಮಾನವೀಯತೆ ಕಳೆದು ಹೋಗುವ ಮುನ್ನ...

ವೈಯಕ್ತಿಕ ಅಥವಾ ಸೈದ್ಧಾಂತಿಕ ವಾದ ವಿವಾದಗಳು ಏನೇ ಇರಲಿ, ಪರ ವಿರೋಧ ನಿಲುವುಗಳು ಏನಾದರೂ ಆಗಿರಲಿ, ಆದರೆ ಮನುಷ್ಯನ ನಾಗರಿಕ ಸಮಾಜದ ಗುಣಲಕ್ಷಣಗಳನ್ನು ನಿಜಕ್ಕೂ ಅದರ ಮೂಲ ಸ್ವರೂಪದಲ್ಲಿ ಉಳಿಸಬೇಕಾದ ಅನಿವಾರ್ಯತೆ ಈಗ ಅತ್ಯಂತ ಪ್ರಮುಖ ವಿಷಯವಾಗಬೇಕಿದೆ.

Image

ಸ್ಟೇಟಸ್ ಕತೆಗಳು (ಭಾಗ ೧೩೪೫) - ಎತ್ತರ

ರಮೇಶ ತುಂಬಾ ಎತ್ತರಕ್ಕೆ ಹತ್ತಿ ಬಿಟ್ಟಿದ್ದಾನೆ ಎಷ್ಟು ಇಣುಕಿದ್ರೂ ಆತನಿಗೆ ನಿರೀಕ್ಷಿಸಿದ ಸಂತೋಷ ಸಿಕ್ತಾ ಇಲ್ಲ. ತಾನು ಇಷ್ಟು ಎತ್ತರ ಏರಿದರೂ ಅದ್ಭುತವಾದ ದೃಶ್ಯ ಕಣ್ಣ ಮುಂದೆ ಕಾಣ್ತಾ ಇಲ್ಲ ಅನ್ನುವ ಬೇಸರ ಮತ್ತೆ ಮತ್ತೆ ಕಾಡ್ತಾ ಇದೆ. ಹಾಗಾಗಿ ಅದೇ ನೋವಿನಿಂದ ಆ ಎತ್ತರವನ್ನು ಇಳಿದುಬಂದು ತನ್ನ ಗೆಳೆಯನ ಜೊತೆ ಮಾತನಾಡಿದ. ಹಾಗೆ ಮಾತನಾಡುತ್ತಿದ್ದವನಿಗೆ ಸತ್ಯ ಅರಿವಾಗುತ್ತಾ ಹೋಯ್ತು.

Image

ಹನುಮಕೊಂಡದ ಸಾವಿರ ಕಂಬಗಳ ದೇಗುಲ

ತೆಲಂಗಾಣ ರಾಜ್ಯದ ವಾರಂಗಲ್ ಜಿಲ್ಲೆಯ ಹನುಮಕೊಂಡ ಎಂಬಲ್ಲಿದೆ ಈ ಸುಂದರ ಕೆತ್ತನೆಯ ಐತಿಹಾಸಿಕ ದೇವಾಲಯ. ರುದ್ರೇಶ್ವರಸ್ವಾಮಿ ದೇವಾಲಯ ಎಂತಲೂ ಕರೆಯಲ್ಪಡುವ ಇದು ಶಿವ, ವಿಷ್ಣು ಹಾಗೂ ಸೂರ್ಯ ದೇವರಿಗೆ ಮುಡಿಪಾಗಿದೆ. ಈ ದೇವಾಲಯದಲ್ಲಿ ಮೂರು ಗರ್ಭಗುಡಿಗಳಿದ್ದು - ಶಿವ, ವಿಷ್ಣು ಹಾಗೂ ಸೂರ್ಯರ ವಿಗ್ರಹಗಳನ್ನೊಳಗೊಂಡಿವೆ.

Image