ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 18
ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.
146) ಮೂಲ ಹಾಡು - ದಿಲ ಕೀ ಬಾತ್ ಕಹೀಂ ಲಬ ಪೆ ನ ಆ ಜಾಯ
ನನ್ನ ಅನುವಾದ:
ಮನಸ್ಸಿನ ಮಾತು ಎಂದೂ ಬಾಯಿಗೆ ಬರದಿರಲಿ
ನಗುತಾ ನಗುತಾ ಕಣ್ಣಿಗೆ ನೀರು ಬರದಿರಲಿ
ನೆನಪಿರಲಿ, ಇದು ನೆನಪಿರಲಿ, ಏನು?
ಮುಖದ ಮೇಲೆ ಹಾಕಿ ಮುಖವಾಡ
ಮರೆಮಾಡು ನಿನ್ನ ಅಂತರ್ಯ
ಮುರುಳು ಜನಕ್ಕೆ ಹೇಗೆ
ತಿಳಿಹೇಳುವುದು?
ಮನ ಬಿಚ್ಚಿ ಮಾತಾಡುವಾಗ
ಈ ಮಾತ ನೆನಪಿಡಲೇಬೇಕು
ಸುಖ-ದುಃಖ ನಮ್ಮವು
ಜನ ಪರಕೀಯರು!
147) ಮೂಲ ಹಾಡು - ಪ್ರೀತ ಜಹಾಂ ಕಿ ರೀತ ಜಹಾಂ
- Read more about ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 18
- Log in or register to post comments