ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 20
ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.
165) ಮೂಲ ಹಾಡು -ರಘುವರ ತುಮ ತೋ ಮೋರಿ ಲಾಜ
ನನ್ನ ಅನುವಾದ:
ರಾಘವ ನೀನೆ ನನಗೆ ಗತಿಯೋ
ನೀನೇ ಬಡವರ ಬಂಧು
ಪತಿತರ ಉದ್ಧಾರಕ ನೀನೇ ಅಂತೆ
ಯುಗ ಯುಗದಿಂದ ಕೇಳಿರುವೆ
ನಾನೋ ಪತಿತ ಬಹುದಿನದಿಂದ
ಪಾರುಗಾಣಿಸೋ ಭವಸಾಗರವ
ರಾಘವ ಪಾರುಗಾಣಿಸೋ ಭವಸಾಗರವ
ಪಾಪವ ಕಳೆಯುವೆ ದುಃಖವ ತೊಡೆಯುವೆ
ಇರುವೆ ನೀನೇ ಎಲ್ಲ ಕಾಲಕು
ರಾಘವ ಇರುವೆ ನೀನೇ ಎಲ್ಲ ಕಾಲಕು
ತುಳಸಿದಾಸಗೂ ಕೊಂಚ ಕೃಪೆ ತೋರು
ಈ ತುಳಸಿದಾಸಗೂ ಕೊಂಚ ಕೃಪೆ ತೋರು
ಕೇಳಿ ಮೊರೆಯ
ಭಕುತಿಯ ಕೊಡು ನೀ ಸಂತತ ನನಗೆ
ರಾಘವ ಭಕುತಿಯ ಕೊಡು ನೀ ಸಂತತ ನನಗೆ
ರಾಘವ ನೀನೇ ನನಗೆ ಗತಿಯೋ
166) ಮೂಲ ಹಾಡು - ತೇರೆ ಘರ ಕೆ ಸಾಮನೇ
ನನ್ನ ಅನುವಾದ:
ನಿನ್ನ ಮನೆಯ ಎದುರೇನೇ
ಒಂದು ಮನೆಯ ಮಾಡುವೆ
ನಿನ್ನ ಮನೆಯ ಎದುರೇನೇ
ಬದುಕ ಕಟ್ಟಿಕೊಳ್ಳುವೆ
167) ಮೂಲ ಹಾಡು - ಕೇನು ಸಂಗ ಖೇಲೂ ಹೋಲಿ
ನನ್ನ ಅನುವಾದ:
ಯಾರ ಜತೆಗೆ ಆಡಲಿ ಹೋಳಿ,
ಪ್ರಿಯ ಮಾಡಿ ಹೋದ ನನ್ನ ಒಬ್ಬಂಟಿ
ಮುತ್ತು ರತ್ನ ಎಲ್ಲಾ ಬಿಟ್ಟೆ
ಕೊರಳಲಿ ಧರಿಸಿದೆ ತುಳಸಿಯ ಮಾಲೆ
ಭೋಜನ ಭವನ ಒಲ್ಲದೆ ಹೋದೆ
ಪ್ರಿಯನು ಇಲ್ಲದೆ ಆದೆ ಒಬ್ಬಂಟಿ
ಈಗ ನಿನ್ನ ಪ್ರೀತಿಗೆ ಪಾತ್ರಳು ಯಾರೋ
ಕೆಡವಿದೆ ನನ್ನ ಏಕೆ ಗೊಂದಲದಿ
ಕಳೆದವು ದಿನಗಳು, ಬರಲಿಲ್ಲ ಇಂದೂ
ಆಗುತಿದೆ ಕಳವಳವು
ಶ್ಯಾಮನು ಇಲ್ಲದೆ ಬಾಡಿದೆ ಹೃದಯ
ನೀರು ಕಾಣದ ಬಳ್ಳಿಯ ತೆರದಿ
ಮೀರೆಗೆ ನೀನು ದರುಶನ ನೀಡು
ನಾನೋ ಜನುಮದ ಗೆಳತಿ
(ದರುಶನ ಬೇಡುವೆ ನಿನ್ನ)
ಪ್ರಿಯ ಮಾಡಿ ಹೋದ ನನ್ನ ಒಬ್ಬಂಟಿ
168) ಮೂಲ ಹಾಡು - only you ( The platters)
ನನ್ನ ಅನುವಾದ:
ನೀ ಮಾತ್ರವೇ ಮಾಡಬಲ್ಲೆ ಈ ಬಾಳನು ಸಹನೀಯವ
ನೀ ಮಾತ್ರವೇ ಮಾಡಬಲ್ಲೆ ಈ ಕತ್ತಲನ್ನು ದೂರ
ನೀ ಮಾತ್ರವೇ ತರಬಲ್ಲೆ ಪುಳಕವ ನನ್ನಲೀ ಈ ಪರಿ
ತುಂಬಬಲ್ಲೆ ನನ್ನ ಹೃದಯವ ಪ್ರೀತಿಯಿಂದ
ಕೇವಲ ನೀನೇನೇ
ನೀ ಮಾತ್ರವೇ ತರಬಲ್ಲೆ ನನ್ನಲ್ಲಿ ಈ ಬದಲಾವಣೆ
ಏಕೆಂದರೆ ನೀನೇ ನನ್ನ ಭವಿತವ್ಯವು
ನನ್ನ ನೀ ಸೋಕಲು ಬದಲಾಗುವುದು ಈ ಲೋಕವೇ
ನನಸಾದ ನನ್ನ ಕನಸು ನೀನೇನೆ
ನೀನೆ ಸರ್ವಸ್ವವು
169) ಮೂಲ ಹಾಡು - ಪ್ಯಾರ ಕಾ ಪಹಲಾ ಖತ
ನನ್ನ ಅನುವಾದ:
ಪ್ರೇಮದ ಮೊದಲ ಪತ್ರ ಬರೆಯಲು ಸಮಯ ಹಿಡಿಯುವುದು ಸಹಜ
170) ಮೂಲ ಹಾಡು - ಪಪ್ಪಾ ಕಹತೇ ಹೈ ಬಡಾ ನಾವು ಕರೇಗಾ
ನನ್ನ ಅನುವಾದ:
ಆಪ್ತ ಅಂತಾನೆ ಒಳ್ಳೆ ಹೆಸರು ಮಾಡ್ತಾನೆ
ನನ್ನ ಮಗನು ಅಂಥ ಕೆಲಸ ಮಾಡ್ತಾನೆ
ಆದರೇನು ಯಾಂವ ಬಲ್ಲ
ಮುಂದೇನು ನನಗೆ ಕಾದಿದೆ
171) ಮೂಲ ಹಾಡು - ಯಾದ ನ ಜಾಯೆ ಬೀತೆ ದಿನೋಂಕಿ
ನನ್ನ ಅನುವಾದ:
ಮರೆತು ಬಿಡಲಾಗದು ಕಳೆದ ಆ ದಿನಗಳನು
ಕಳೆದು ಹೋದ ಆ ದಿನಗಳನು
ಕರೆವುದೇಕೆ ಈ ಹೃದಯ
ನನ್ನೆದೆ ಕರೆವುದೇಕೆ
ಆಗಿದ್ರೆ ಆ ದಿನ ಹಕ್ಕಿ
ಪಂಜರದಿ ಇಡುತ ಇದ್ದೆ
ಪಾಲಿಸುತ ಇದ್ದೆ ಅವನು
ಮುತ್ತಿನ ಕಾಳ ಹಾಕಿ
ನನ್ನೆದೆಗೆ ಒತ್ತಿಕೋತಿದ್ದೆ
172) ಮೂಲ ಹಾಡು - ಸಾವನ ಆಯೆ ಯಾ ನ ಆಯೆ
ನನ್ನ ಅನುವಾದ:
ಶ್ರಾವಣ ಬರಲಿ ಬಾರದೆ ಇರಲಿ
ಮನ ಆಡೆ ಜೋಕಾಲಿ ಶ್ರಾವಣವೇ
173) ಮೂಲ ಹಾಡು - ದಿನ ಢಲ ಜಾಯೆ ರಾತ ನ ಜಾಯೆ
ನನ್ನ ಅನುವಾದ:
ಸರಿದಾಯ್ತು ಹಗಲು,
ಸರಿಯದು ಇರುಳು !
ಬರಲಿಲ್ಲ ನೀನ್ನು, ನಿನ
ನೆನಪೊಂದೇ ಬಂದಿತು
174) ಮೂಲ ಹಾಡು - ಕಲ್ ಚೌಧವೀ ಕೀ ಚಾಂದ ಥೀ - ಜಗಜಿತ್ ಸಿಂಗ್ ಗಜಲ್
ನನ್ನ ಅನುವಾದ:
ಹುಣ್ಣಿಮ ರಾತ್ರಿ ನಿನ್ನೆ
ಎಲ್ಲೆಲ್ಲೂ ಚರ್ಚೆ ನಿನ್ನದೇ
ಯಾರೋ ಅಂದರು ಅದೋ ಚಂದಿರ
ಇನ್ನಾರೋ ನೆನೆದರು ನಿನ್ನ ಮೊಗವ