ಒಂದು ಗಝಲ್

ಒಂದು ಗಝಲ್

ಕವನ

ನಿನ್ನಯ ಒಲವಿಗೆ ಕಾದೆ, ನೀನು ಬಾರದೇ ಹೋದೆ 

ಶಯನ ಮಂಚದಿ ಚೆಲುವ ,ಏನು ಬೀರದೇ ಹೋದೆ 

 

ಹೊತ್ತು ಮುಳುಗಿದ ಮೇಲೆ , ಸೂರ್ಯ ಬರುವನೆ

ಸೊತ್ತು ಕಳೆದಾ ನಂತರ,ಚೀಲ ತಾರದೇ ಹೋದೆ 

 

ಬೇವು ಬೆಲ್ಲದ ಜೊತೆ, ಸವಿ ಒಗರೇ ತುಂಬಿಹುದು

ತೋಷ ಕಾಣದ ದಾರಿ, ಬೆಳಕ ಮೀರದೇ ಹೋದೆ 

 

ಭವದೊಳಗೆ ತುಂಬಿರುವ, ನೋವನ್ನು ಮರೆತೆನು

ನಡೆನುಡಿಯ ಸುಳಿಯೊಳಗೆ, ನಾರದೇ ಹೋದೆ 

 

ಬೆತ್ತಲೆಯ ಮನದಲ್ಲಿ, ಸ್ನೇಹ ಮೂಡುವುದೇ ಈಶ

ಪ್ರೀತಿ ಕಾಣದೆ ಇದ್ದರೂ, ಏನನ್ನೂ ಕೋರದೇ ಹೋದೆ 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್