ಬದುಕ ರಾಗ
ಕವನ
ಬದುಕ ರಾಗ
ನದಿಯ ತೊರೆಯು
ಮದುರ ಹರೆಯವಾಗುತ
ಕದಿವ ನೆರಳ
ಕದನದಿಂದ
ಬೆದೆಗೆ ಬಂಧಿಯಾಗುತ
ಮತಿಯ ಮನದ
ಸತಿಯ ಮೋಹ
ಕತೆಯ ರೂಪ ಪಡೆಯುತ
ಮತವೆ ಇರುವ
ಹಿತದ ಮನದಿ
ಅತುಳ ಕರುಣೆ ಸಮ್ಮತ
ಮತ್ತಿನಲ್ಲಿ
ಮುತ್ತು ಚಿಗುರಿ
ಹೊತ್ತು ಸರಿಯೆ ಹೊಮ್ಮುತ
ಕತ್ತು ತಿರುಗಿ
ಸುತ್ತ ನಡೆವ
ಮತ್ತೆ ಸವಿಯ ಹೇಳುತ
ಹರೆಯ ಬರಲಿ
ಹುರುಪ ತರಲಿ
ನೆರೆಯಲೀಗ ಕರೆಯುತ
ಜರೆಯದಿರಲಿ
ಕರೆಯ ಪಯಣ
ಮರೆಯ ಬೇಡ ಕವಿಯುತ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
