ಗುಬ್ಬಿ ಹಬ್ಬ: ಮಾರ್ಚ್ ೨೦

ಅದೊಂದು ಕಾಲವಿತ್ತು - ಮನೆಯೊಳಗೆ ಮತ್ತು ಮನೆಯ ಹೊರಗೆ ಗುಬ್ಬಿಗಳ ಚಿಂವ್ ಚಿಂವ್ ಸದ್ದು ಆಗಾಗ ಕೇಳುತ್ತಿದ್ದ ಕಾಲ. ಮನೆಯ ಮೂಲೆಗಳಲ್ಲಿ, ಜಂತಿಗಳಲ್ಲಿ, ಗೋಡೆಗೆ ಆನಿಸಿದ್ದ ಫೋಟೋಗಳ ಹಿಂಭಾಗದಲ್ಲಿ ಗುಬ್ಬಿಗಳು ಗೂಡುಕಟ್ಟಿ ಬಾಳುತ್ತಿದ್ದವು. ಹಗಲಿನಲ್ಲಿ ಅಂಗಳದಲ್ಲಿ ಗುಬ್ಬಿಗಳ ಆಟವೇ ಆಟ. ಈಗ ಮನುಷ್ಯರೊಂದಿಗೆ ಈ ಪುಟ್ಟ ಪಕ್ಷಿಗಳ ಸಹಜೀವನ ಕೇವಲ ನೆನಪು.

ಯಾಕೆ ಹೀಗಾಯಿತು? ಈಗ ಹುಲ್ಲಿನ ಮತ್ತು ಹಂಚಿನ ಚಾವಣಿಯ ಮನೆಗಳೇ ಅಪರೂಪ. ಆದ್ದರಿಂದ ಗುಬ್ಬಿಗಳಿಗೆ ಮನೆಯೊಳಗೆ ಗೂಡು ಕಟ್ಟಲು ಅವಕಾಶವೇ ಇಲ್ಲವಾಗಿದೆ. ಅದಲ್ಲದೆ, ಹೊಲದ ಬೆಳೆಗಳಿಗೆ ಮಾರಕ ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತಿದೆ. ಧಾನ್ಯಗಳನ್ನು ತಿನ್ನುವ ಗುಬ್ಬಿಗಳು ಆ ವಿಷದಿಂದಾಗಿ ಸಾಯುತ್ತಿವೆ.

Image

ಡಿಜಿಟಲ್ ಯೋಗಕ್ಷೇಮ - ೧

ರಾತ್ರಿಯ ಹೊತ್ತು ಮಕ್ಕಳಿಗೆ ಕಥೆ ಹೇಳಲೆಂದು ಹಿಂದಿನ ಕಾಲದಲ್ಲಿ ಪುಸ್ತಕಗಳನ್ನು ಇಟ್ಟುಕೊಳ್ಳುತ್ತಿದ್ದರು. ಈಗ ಮೊಬೈಲು ಫೋನುಗಳನ್ನು ಇಟ್ಟುಕೊಳ್ಳುತ್ತಾರೆ. ಮೊನ್ನೆ ನಲ್ಮೆಯ ಮಡದಿ ಹೀಗೆಯೇ ಮಕ್ಕಳಿಗೆ ಕಥೆ ಹೇಳಲೆಂದು ಮೊಬೈಲ್ ಹಿಡಿದುಕೊಂಡವಳು ಕಥೆ ಹೇಳುತ್ತ ಹಾಗೆಯೇ ನಿದ್ರೆ ಹೋಗಿಬಿಟ್ಟಿದ್ದಳು. ಮಕ್ಕಳೂ ನಿದ್ರೆ ಹೋಗಿದ್ದರು. ಆದರೆ ಮೊಬೈಲು ಮಾತ್ರ ಇವರುಗಳ ನಡುವೆ ಸಿಕ್ಕಿಹಾಕಿಕೊಂಡು ಕಾದು ಕೆಂಡದಂತೆ ಬಿಸಿಯಾಗಿತ್ತು. ನಾನು ನೋಡದೇ ಹೋಗಿದ್ದರೆ ಅದು ಬಹುಶಃ “ಭಡ್" ಅಂದಿರುತ್ತಿತ್ತೋ ಏನೋ. ಸ್ವಲ್ಪದರಲ್ಲಿ ಬದುಕಿಕೊಂಡೆವು. ಹಿಂದಿನ ಕಾಲದವರಿಗೆ ಈ ಸಮಸ್ಯೆ ಇರಲಿಲ್ಲ. ಪುಸ್ತಕದ ಮೇಲೆ ಮಲಗಿ ಹೊರಳಾಡಿದರೂ ಕೂಡ ಬೆಳಗಾಗುವವರೆಗೂ ಜಡವಾಗಿ ಬಿದ್ದಿರುತ್ತಿದ್ದವು ಎನಿಸುತ್ತದೆ, ಹೀಗಾಗಿ ಇದರ ಬಗ್ಗೆ ಯಾರಾದರೂ ಬರೆದಿದ್ದು ಓದಿ ಕಾಣೆ.

Image

ಮಳೆಗಾಲದ ದಿನದಿನವೂ ಕಪ್ಪೆ ಯಾಕೆ ಕೂಗುತ್ತದೆ?

ಒಂದಾನೊಂದು ಕಾಲದಲ್ಲಿ ಮರಿಗಪ್ಪೆಯೊಂದು ತಾಯಿಕಪ್ಪೆಯೊಂದಿಗೆ ವಾಸಿಸುತ್ತಿತ್ತು. ಈ ಮರಿಗಪ್ಪೆ ತನ್ನ ತಾಯಿಯ ಯಾವ ಮಾತನ್ನೂ ಕೇಳುತ್ತಿರಲಿಲ್ಲ. ತನಗೆ ಖುಷಿ ಬಂದಂತೆ ಮಾಡುತ್ತಿತ್ತು.

“ಮಗೂ, ಹೊರಗೆ ಹೋಗಿ ಆಟವಾಡು. ಯಾಕೆಂದರೆ ನಾನು ಮನೆ ಶುಚಿ ಮಾಡಬೇಕಾಗಿದೆ” ಎಂದು ತಾಯಿ ಕಪ್ಪೆ ಹೇಳಿದರೆ, ಮರಿಗಪ್ಪೆ ಮನೆಯೊಳಗೇ ಅತ್ತಿತ್ತ ಓಡಾಡುತ್ತಿತ್ತು ವಿನಃ ಹೊರಗೆ ಹೋಗುತ್ತಿರಲಿಲ್ಲ. ಬೆಟ್ಟಕ್ಕೆ ಹೋಗಿ ಬಾ ಎಂದು ತಾಯಿಕಪ್ಪೆ ಹೇಳಿದರೆ, ಮರಿಗಪ್ಪೆ ನದಿಗೆ ಹೋಗುತ್ತಿತ್ತು. ಮರದ ಬುಡಕ್ಕೆ ಹೋಗೆಂದರೆ ಬಾವಿಯ ಹತ್ತಿರ ಹೋಗುತ್ತಿತ್ತು.

Image

ಬರದಿಂದ ಬಚಾವ್ ತಂತ್ರ – ಕೊಳವೆಬಾವಿಯಿಂದ ಜಲಮರುಪೂರಣ

ಎಚ್.ಕೆ. ಆನಂದಪ್ಪ ಅವರ ಎರಡು ಹೆಕ್ಟೇರ್ ಜಮೀನು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊನ್ನನಾಯಕನಹಳ್ಳಿಯಲ್ಲಿದೆ. ೫೮ ವರುಷ ವಯಸ್ಸಿನ ಅವರು ತನ್ನ ಜಮೀನಿನಲ್ಲಿ ಕೊರೆಸಿದ ಕೊಳವೆಬಾವಿಗಳ ಸಂಖ್ಯೆ ಹನ್ನೊಂದು.
ಅವುಗಳ ಗತಿ ಏನಾಯಿತು? ಕೆಲವು ಕೊಳವೆಬಾವಿಗಳಲ್ಲಿ ನೀರೇ ಸಿಗಲಿಲ್ಲ. ಇನ್ನುಳಿದ ಕೊಳವೆಬಾವಿಗಳು ಒಂದೆರಡು ವರುಷ ನೀರು ಒದಗಿಸಿದ ನಂತರ ಬತ್ತಿ ಹೋದವು. ಈ ಬೆಂಬಿಡದ ಸೋಲಿನಿಂದಾಗಿ ಹತಾಶರಾದ ಆನಂದಪ್ಪ ಅದೊಮ್ಮೆ ಆತ್ಮಹತ್ಯೆ ಮಾಡಬೇಕೆಂದು ಯೋಚಿಸಿದ್ದರು. “೨೦೦೮ರಲ್ಲಿ ನನ್ನ ಸಾಲದ ಹೊರೆ ತಾಳಿಕೊಳ್ಳುವಂತಿರಲಿಲ್ಲ” ಎಂದು ಅಂದಿನ ಶೋಚನೀಯ ಪರಿಸ್ಥಿತಿಯನ್ನು ನೆನೆಯುತ್ತಾರೆ ಅವರು..

Image

ಕಾಡು ನಾಶ ಮತ್ತು ಕೊರೊನಾ-೧೯ ವೈರಸ್ ಧಾಳಿ

ನಾವು ಕಾಡುಗಳನ್ನು ಹೇಗೆ ನಾಶ ಮಾಡುತ್ತಿದ್ದೇವೆ? ಈ ಬರಹದ ಜೊತೆಗಿರುವ ಫೋಟೋ ನೋಡಿದರೆ ನಿಮಗೆ ಅಂದಾಜಾದೀತು. ಇದು, ಅಂದೊಮ್ಮೆ ಬ್ರೆಜಿಲಿನಲ್ಲಿ ದಟ್ಟ ಅರಣ್ಯವಾಗಿದ್ದ ಭೂ ಪ್ರದೇಶ. ಈಗ ಹೇಗಾಗಿದೆ ನೋಡಿ! ಅಲ್ಲಿ ಈಗ ಒಂದೇ ಒಂದು ಮರ ಉಳಿದಿದೆ!

Image

ಸದ್ಭಾವನೆ: ಯಶಸ್ಸಿನ ಕೀಲಿಕೈ

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್.

ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ, ಮೈಸೂರಿನಲ್ಲಿ ನೆಲೆಸಿದ ದಿ. ಎ. ವೆಂಕಟ ರಾವ್ ಪ್ರಾಮಾಣಿಕ, ಸಜ್ಜನ, ಧೀಮಂತ ವ್ಯಕ್ತಿ. ಅವರು ಬಾಳಿನಲ್ಲಿ ನುಡಿದಂತೆ ನಡೆದವರು. ಈ ಅನುಭವಗಳನ್ನು ಮೊದಲು ಮೈಸೂರಿನ ಸಂಜೆ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲಿ ಅಂಕಣವಾಗಿ ಬರೆದರು. ಅವುಗಳ ಸಂಕಲನ ೨೦೦೬ರಲ್ಲಿ ಪ್ರಕಟವಾದ “ಮೆಮೊಯರ್ಸ್ ಆಫ್ ಎ ಜಡ್ಜ್”. ಅದರ ಕನ್ನಡಾನುವಾದವೇ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ೨೦೦೯ರಲ್ಲಿ ಪ್ರಕಟಿಸಿದ ಈ ಪುಸ್ತಕ.

Image

ಐಟಿ ಉದ್ಯೋಗಕ್ಕೆ ವಿದಾಯ, ಕೃಷಿಕನಾಗಿ ಮೂರು ಪಟ್ಟು ಆದಾಯ!

“ಸಂಬಳದ ಕೆಲಸದ ಸುಳಿಯಿಂದ ಹೊರ ಬರಬೇಕಾದರೆ ಧೈರ್ಯ ಬೇಕು” ಎಂದು ಸಾಪ್ಟ್-ವೇರ್ ಇಂಜಿನಿಯರ್ ಉದ್ಯೋಗ ತೊರೆದು ಈಗ ಕೃಷಿಯಲ್ಲಿ ತೊಡಗಿರುವ ಅನುಪ್ ಪಾಟೀಲ್ (೨೮ ವರುಷ) ಹೇಳುವಾಗ ಕಿವಿಗೊಡ ಬೇಕಾಗುತ್ತದೆ.
ಯಾಕೆಂದರೆ, ವರುಷಕ್ಕೆ ರೂ.೬.೫ ಲಕ್ಷ ವೇತನ ಪಡೆಯುತ್ತಿದ್ದ ಅನುಪ್ ಪಾಟೀಲ್ ಆ ಸುಳಿಯಲ್ಲಿ ನಾಲ್ಕು ವರುಷ ಸಿಲುಕಿದ್ದರು. ಎರಡು ವರುಷಗಳ ಮುಂಚೆ ಆ ಸುಳಿಯಿಂದ ಪಾರಾದ ಅನುಪ್ ಈಗ ಕೃಷಿಕರಾಗಿ ಗಳಿಸುತ್ತಿರುವ ಆದಾಯ ವರುಷಕ್ಕೆ ರೂ.೨೦ ಲಕ್ಷ!

Image

ಕವಿತೆ

ಕವಿತೆ
** **

೧ 
ನೋಡು,
ಜಗದಗಲ, ಮುಗಿಲಗಲ
ಆ ಬಾನು ಈ ಭೂಮಿ
ಪ್ರಕೃತಿಯ ಅಣು ಅಣುವ 
ನೋಡು.... 
ಆ ಬೆಳಕಲ್ಲಿ
ಸೂರ್ಯ, ಚಂದ್ರ, ತಾರೆ
ತಲೆ‌ ಎತ್ತಿ 
ದಿಗಂತವ ನೋಡು.....


ಒಮ್ಮೆ ಕಣ್ತೆರೆದು ನೋಡು
ಬೆಟ್ಟ ಗುಡ್ಡಗಳ
ಅಲ್ಲೆಲ್ಲೋ ಸಣ್ಣಗೆ ಹರಿವ ನದಿಯ
ಗಿರಿ ತೊರೆಯ
ಜಳಪಾತ, ಪ್ರಪಾತವ ನೋಡು
ಜಲಚರಗಳ ಬಯಲಾಟವ.


ದಿಟ್ಟಿಸಿ ನೋಡು 
ಆ ಕಾನನದ ನಡುವೆ
ತಂಪಾಗಿ ಬೀಸೋ ಗಾಳಿಯ
ಆ ಮರದ ಕೊಂಬೆಯಲಿ 
ಕೂಗೋ ಕೊಗಿಲೆಯ
ಆ ವನ ಸುಮಗಳ ನಡುವೆ
ನಲಿದು ನರ್ತಿಸೋ
ನವಿಲ.

ರೈತ ಮತ್ತು ಹುಲಿ

ಒಂದಾನೊಂದು ಕಾಲದಲ್ಲಿ ದೊಡ್ಡ ಹುಲಿಯೊಂದಿತ್ತು. ಅದು ಕಾಡುಪ್ರಾಣಿಗಳ ರಾಜನಾಗಿತ್ತು. ಕಪ್ಪು ಚರ್ಮದ, ಬೆಂಕಿಯಂತಹ ಕಣ್ಣುಗಳ ಮತ್ತು ಚೂರಿಯಂತಹ ಹರಿತ ಹಲ್ಲುಗಳ ಈ ಹುಲಿ, ಕಾಡಿನ ಪ್ರಾಣಿಗಳಲ್ಲಿ ನಡುಕ ಹುಟ್ಟಿಸುತ್ತಿತ್ತು. ಹಲವಾರು ಪ್ರಾಣಿಗಳನ್ನು ಕೊಂದು ತಿನ್ನುತ್ತಿತ್ತು.

ಅದೊಂದು ದಿನ ಬೆಳಗ್ಗೆ ಜಿಂಕೆಯನ್ನು ಕೊಂದು ತಿಂದ ಹುಲಿ ಸುತ್ತಾಡಲು ಹೊರಟಿತು. ತನ್ನನ್ನು ಕಾಣುತ್ತಲೇ ಇತರ ಪ್ರಾಣಿಗಳು ಓಡುವುದನ್ನು ಕಂಡು ಅದರ ಸೊಕ್ಕು ಹೆಚ್ಚುತ್ತಿತ್ತು. ಆಗ ಹುಲಿಗೆ ಅಲ್ಲೊಂದು ದೃಶ್ಯ ಕಂಡಿತು; ಅದೇನೆಂದು ಅದಕ್ಕೆ ಅರ್ಥವಾಗಲಿಲ್ಲ. ಅಲ್ಲಿನ ಪರ್ವತದ ಬುಡದಲ್ಲಿದ್ದ ಗದ್ದೆಯಲ್ಲಿ ಕೋಣವೊಂದು ಸದ್ದಿಲ್ಲದೆ ನೇಗಿಲನ್ನು ಎಳೆಯುತ್ತಿತ್ತು. ಅದನ್ನು ಬಿದಿರಿನ ಕೋಲಿನಿಂದ ಬಡಿಯುತ್ತಾ, ಬೊಬ್ಬೆ ಹಾಕುತ್ತಾ ಯುವಕನೊಬ್ಬ ಹಿಂಬಾಲಿಸುತ್ತಿದ್ದ.

Image

ಪಾರಂಪರಿಕ ಕೆರೆಗಳು: ನೀರಾವರಿ ಮತ್ತು ಕುಡಿನೀರಿನ ಆಕರಗಳು

ಭಾರತದಂತಹ ಉಷ್ಣವಲಯ ದೇಶಗಳಲ್ಲಿ ಬಾವಿಗಳು, ಕೆರೆಗಳು ಮತ್ತು ಕಾಲುವೆಗಳು – ಈ ಮೂರು ನೀರಿನ ಆಕರಗಳೇ  ಕೃಷಿಗೆ ಆಧಾರ.
ಭಾರತದಲ್ಲಿ ೧೯೫೦ರ ದಶಕದಿಂದ ಶುರುವಾಯಿತು ಹಸುರು ಕ್ರಾಂತಿ. ಅದಕ್ಕಿಂತ ಮುಂಚೆ, ಕೃಷಿ ನೀರಾವರಿಗಾಗಿ ರೈತರು ಅಂತರ್ಜಲವನ್ನು ಅವಲಂಬಿಸಿರಲಿಲ್ಲ. ಆದರೆ ಈಗ ಇದುವೇ ಕೃಷಿ ನೀರಾವರಿಯ ಮೊದಲ ಆಕರವಾಗಿದೆ.
೧೯೭೦ರ ದಶಕದ ವರೆಗೆ ಹಲವು ರಾಜ್ಯಗಳಲ್ಲಿ ಕೆರೆಗಳೇ ಕೃಷಿ ನೀರಾವರಿಯ ಆಕರಗಳಾಗಿದ್ದವು. ಕ್ರಮೇಣ, ಬೃಹತ್ ನೀರಾವರಿ ಯೋಜನೆಗಳು ಮತ್ತು ಅಣೆಕಟ್ಟುಗಳ ನಿರ್ಮಾಣವೇ ಪ್ರಧಾನವಾಯಿತು ಮತ್ತು ಕೆರೆ ನೀರಾವರಿಯಂತಹ ಸಣ್ಣ ನೀರಾವರಿ ಯೋಜನೆಗಳನ್ನು ನಿರ್ಲಕ್ಷಿಸಲಾಯಿತು.

Image