ಸನ್ಮಿತ್ರ

ಸನ್ಮಿತ್ರ

ಸನ್ಮಿತ್ರ

ಅಯ್ಯಾ ಸಹೃದಯ ಸನ್ಮಿತ್ರ
ನಿನ್ನ ನೆನಪೆನಗೆ ಮನದಲಿ ಪವಿತ್ರ
ಬಲು ಕಿನಿತು ಅದರೊಳೆನ್ನ ಪಾತ್ರ,
ದೂರದಿಟ್ಟಿನಲೆನ್ನ ಮಾತು ಅನಿಸಿ ವಿಚಿತ್ರ!
*
ವಿಚಾರಗಳೆನಿತೊ ಆಸ್ಪಷ್ಟ ಬಂದು
ಮಂಜಿನ ಮಬ್ಬಿನಲಿ ತೊರೆಯದಂದು,
ಯೋಚನೆಗಳ ಸುದ್ದಿಸುರಿ ಅನಿರ್ದಿಷ್ಟ,
ಕಾವಳದಲಿ ಕಪ್ಪು ಓದಲು ಕಷ್ಟ.
*
ಬೇಸಿಗೆಯಲಿ ಬತ್ತಿ ಬರಿದಾದ ಕೊಳದಂತೆ,
ಸಿಡುಬಿಸಿಲಲಿ ವೃತ್ತಕೊಳ ಇಂಗಿ ಮಾಯವಾಗುವಂತೆ,
ಮನದೊಳಗೊ ಮೆದುಳೊಳಗೊ ಮಾತುಗಳ ನಿವೃತ್ತಿ,
ಬಡವಾಗಿ ಪದಸಂಪತ್ತಿಗೆ ವೃದ್ದಾಪ್ಯ ಹತ್ತಿ.
*
ಸಲೀಸಾಗಿ ಸುರಿಯದು ಆಲೋಚನೆಗಳ ಮಳೆ,
ಗಂಟೆಗಟ್ಟಲೆ ಕಾದರೂ ಹರಿಯದು ಹೊಳೆ;
ಆ ದುಸ್ತಿಯಲಿ ವ್ಯವಸಾಯ ಮಾಡಲಸಾದ್ಯ,
ಅತ್ಯಂತ ದೀರ್ಘ ಹವ್ಯಾಸವು ಸೃಜಿಸದಾಗ ಪಧ್ಯ.
*
ಸನ್ಮಿತ್ರರೊಡನೆ ವ್ಯಹರಿಸೆ ವಿಚಾರವಿನಿಮಯ,
ಅಂತರಾಳದಲಿ ಅಂತರಾತ್ಮದ ಚಿಂತೆಗಳ ಸಮಯ,
ಹೊರಚಿಮ್ಮಿ ತೋರಿಸೆ ವರ್ಣಭಾವನೆಗಳ ಮಾಯ,
ಸ್ವತಃ ಒತ್ತು ಸತ್ತ ತಳಮಳದ ನಿಸ್ಸಹಾಯ.
*
ದವಳ ದುಗುಢ ನಿರಾಳ ನೀರವತೆ ಮುತ್ತಿ,
ಆಲೋಚನೆಗಳ ನಿರ್ಬಂಧಿಸಿ ಸೆರೆಹಿಡಿದ ಗತಿ,
ಕೊರೆವ ಯೋಚನೆಗಳ ಬಂದನೆಯಾದ ನಿರ್ಗತಿ,
ದರಿದ್ರತೆ ಬಡವರಿಗೆ ದಾರಿತೋರದಂತ ಸ್ಥಿತಿ.
*
ಮಾಗಿಯಲಿ ವೃಕ್ಷಪತ್ರಗಳು ಹಿಡಿಕಳೆದು
ಧರೆಗುರುಳಿ ಒಣಗಿ ಸುವರ್ಣದಲಿ ಹೊಳೆದು,
ಇನ್ನೊಂದು ತೆರನ ಸೊಬಗಿನ ಬಣ್ಣ ಪಡೆದು,
ಮೆರೆವ ಪ್ರಕೃತಿಯ ಅವತಾರ ಧರಿಸಿ ನಡೆದು.
*
ವಿಜಯಶೀಲ (೨೦೦೧೦೯)
*

Rating
No votes yet