ಕ್ಯಾಲಿಫೋರ್ನಿಯದಲ್ಲಿ ಜೂನ್ ೧೧ರಂದು ಡಾ. ವೀಣ ಶಾಂತೇಶ್ವರ ಅವರ ರೇಡಿಯೊ ಸಂದರ್ಶನ

ಕ್ಯಾಲಿಫೋರ್ನಿಯದಲ್ಲಿ ಜೂನ್ ೧೧ರಂದು ಡಾ. ವೀಣ ಶಾಂತೇಶ್ವರ ಅವರ ರೇಡಿಯೊ ಸಂದರ್ಶನ

ಹೊಸಗನ್ನಡದ ಮಹಿಳಾ ಸಾಹಿತ್ಯದ ಶತಮಾನೋತ್ಸವ

ಆಧುನಿಕ ಕನ್ನಡ ಮಹಿಳಾ ಸಾಹಿತ್ಯದ ಶತಮಾನೋತ್ಸವ ಸಂಭ್ರಮದ ಈ ಹೊತ್ತಿನಲ್ಲಿ ನಾಡಿನ ಹಿರಿಯ ಲೇಖಕಿ ಡಾ. ವೀಣಾ ಶಾಂತೇಶ್ವರ ಅವರೊಂದಿಗೆ ಸ್ಟಾನ್‌ಫರ್ಡ್ ಬಾನುಲಿ ಕೇಂದ್ರದಲ್ಲಿ ಜೂನ್ 11ರಂದು ಗುರುವಾರ ಸಂದರ್ಶನ ಪ್ರಸಾರವಾಗಲಿದೆ.
ಇಂದಿಗೆ 100 ವರ್ಷಗಳ ಹಿಂದೆ (1909) ಧಾರವಾಡದ ಸಂತೂಬಾಯಿ ನೀಲಗಾರ ತಮ್ಮ ಮೊದಲ ಕಾದಂಬರಿ "ಸದ್ಗುಣಿ ಕೃಷ್ಣಾಬಾಯಿ"ಯ ಮೂಲಕ ಹೊಸಗನ್ನಡದಲ್ಲಿ ಸ್ತ್ರೀ ಸಮಾಜದ ವೈಚಾರಿಕ ಜಾಗೃತಿಗಾಗಿ ಹಾಗು ಸ್ತ್ರೀ ಶಿಕ್ಷಣದ ಪರವಾಗಿ ಮೊದಲ ಬಾರಿಗೆ ದನಿ ಎತ್ತಿದರು. ಆಧುನಿಕ ಕನ್ನಡ ಮಹಿಳಾ ಸಾಹಿತ್ಯದ ಶತಮಾನೋತ್ಸವವಾಗಿರುವ (1909 - 2009) ಪ್ರಸ್ತುತ ಸಂದರ್ಭದಲ್ಲಿ ವೀಣಾ ಶಾಂತೇಶ್ವರ ಅವರ ಸಂದರ್ಶನ ಪ್ರಸಾರವಾಗಲಿದೆ.

ಕಾರ್ಯಕ್ರಮದ ವಿವರ :

ವಿಷಯ : ಆಧುನಿಕ ಕನ್ನಡ ಮಹಿಳಾ ಸಾಹಿತ್ಯದ ಶತಮಾನೋತ್ಸವ
ದಿನಾಂಕ : 2009 ಜೂನ್ 11 ಗುರುವಾರ
ಸಮಯ :
ಬೆಳಗ್ಗೆ 6.00ರಿಂದ 8.00 AM PST (ಕ್ಯಾಲಿಫೋರ್ನಿಯ ಸಮಯ) - ಜನಪ್ರಿಯ ಮತ್ತು ಶಾಸ್ತ್ರೀಯ ಸಂಗೀತದ ಕಾರ್ಯಕ್ರಮ.
7.30ರಿಂದ 9.00 AM PST (ಕ್ಯಾಲಿಫೋರ್ನಿಯ ಸಮಯ) ಡಾ. ವೀಣಾ ಶಾಂತೇಶ್ವರ ಅವರೊಂದಿಗೆ ಸಂದರ್ಶನ.
(ಭಾರತೀಯ ಕಾಲಮಾನಕ್ಕೆ ಕೆಳಗಿರುವ ಟಿಪ್ಪಣೆ ಗಮನಿಸಿ.)
ಬಾನುಲಿ ಕೇಂದ್ರ : ಸ್ಟಾನ್‌ಫರ್ಡ್ KZSU 90.1 FM [ಕ್ಯಾಲೀಫೋರ್ನಿಯ ಸ್ಯಾನ್‌ಫ್ರಾನ್‌ಸಿಸ್ಕೊ ಬೇ ಏರಿಯ]
ಇಂಟರ್ನೆಟ್ ಮೂಲಕ : http://kzsulive.stanford.edu/ (from anywhere in the world)

ನಡೆಸಿಕೊಡುವವರು : ಮಧು ಕೃಷ್ಣಮೂರ್ತಿ

ಹಿಂದೆ ಪ್ರಸಾರವಾದ ಕಾರ್ಯಕ್ರಮಗಳನ್ನು ಇಲ್ಲಿ ಕೇಳಬಹುದು : http://www.itsdiff.com/Kannada.html
ಭಾರತೀಯ ಕಾಲಮಾನ: ಗುರುವಾರ ರಾತ್ರಿ 6.30ರಿಂದ 9.30

Rating
No votes yet