ವಿಸ್ಮಯಕಾರಿ ಜಗತ್ತಿನಳಗೊಂದಿಷ್ಟು ವಿಸ್ಮಯಗಳು ; ಬರ್ಮುಡ ಟ್ರೈ ಅನ್ಗಲ್ ಭಾಗ - 1

ವಿಸ್ಮಯಕಾರಿ ಜಗತ್ತಿನಳಗೊಂದಿಷ್ಟು ವಿಸ್ಮಯಗಳು ; ಬರ್ಮುಡ ಟ್ರೈ ಅನ್ಗಲ್ ಭಾಗ - 1

ಮನುಷ್ಯನ ಸಹಜಗುಣ ತನಗೆ ಗೊತ್ತಿಲ್ಲದೇ ಇರುವುದರ ಬಗ್ಗೆ ಅರಿಯುವ ಪ್ರಯತ್ನ .ಅಂತಹ ಅರಿವಿಕೆಯ ಜಾಡು ಹಿಡಿದು ಹೊರಟಾಗಲೇ ಗೋಚರವಾಗೋದು ಇಂತಹ ಉಹಿಸಲಸಾಧ್ಯವಾದ ವಿಷಯಗಳು . ಕೆಲವೊಮ್ಮೆ ಆ ಅರಿಯುವ ಆತುರ ಕಲ್ಪನೆಗಳಿಗೂ ಎಡೆ ಮಾಡಿಕೊಡುತ್ತದೆ , ಮತ್ತೆ ಕೆಲವೊಮ್ಮೆ ನೋಡಿದರೂ ನಂಬಲಸಾಧ್ಯವಾದುದ್ದನ್ನು ಅವನ ಮುಂದೆ ತೆರೆದಿಟ್ಟೂ ಬಿಡುತ್ತದೆ .ಹಾಗೆಯೇ ಕೆಲವೊಂದು ಅವನ ಊಹೆಗಳನ್ನು ಮೀರಿ ನಿಂತು ಬಿಡುತ್ತವೆ. ಅಂತಹ ವಿಚಿತ್ರಗಳಲ್ಲೇ ಒಂದು ಈ ಬರ್ಮುಡ ಟ್ರೈ ಅನ್ಗಲ್ . 

             ಒಮ್ಮೆ ಯೋಚಿಸಿ ಯಾವುದೋ ಒಂದು ನಿರ್ದಿಷ್ಟ ಪ್ರದೇಶದೊಳಗೆ ಹೋದ ತಕ್ಷಣ ಮಾಯವಾಗುವುದು ಎಂದರೆ ಎಷ್ಟು ವಿಚಿತ್ರದ ಸಂಗತಿ ಅಲ್ವಾ . ಉಹಿಸಿಕೊಳ್ಳಲು ಸಾಧ್ಯವಾಗೋದಿಲ್ಲ .ಆದರೆ ನಂಬಲೇಬೇಕಾಗಿರುವಂತದ್ದು . ಜಗತ್ತಿನ ಸಾವಿರಾರು ಹಡಗು ಮತ್ತು ವಿಮಾನಗಳನ್ನು ನುಂಗಿ ತನಗೆ ಏನು ತಿಳಿದಿಲ್ಲವೇನೋ ಅನ್ನೋ ರೀತಿ ತನ್ನ ಪಾಡಿಗೆ ಹಾಯಾಗಿ ಇರೋ ಜಾಗವೇ ಈ ಬರ್ಮುಡ ಟ್ರೈ ಅನ್ಗಲ್ .EPIRB(emergency position indicatining radio beacon) , ELT(emergency locator transmitter) ಗಳಂತಹ ಅತ್ಯಾಧುನಿಕ ವ್ಯವಸ್ತೆಗಳಿರುವ ನೌಕೆಗಳು ಯಾವುದೇ ಸುಳಿವು ಕೊಡದೆ ಕ್ಷಣಾರ್ಧದಲ್ಲಿ ಮರೆಯಾಗುವುದು ಅಂದರೆ ವಿಸ್ಮಯವಲ್ಲದೆ ಮತ್ತಿನ್ನೇನು .ಅಟ್ಲಾಂಟಿಕ್ ಮಹಾ ಸಾಗರದ ಸುತ್ತ ಮುತ್ತ ಬರುವ ಬರ್ಮುಡಾ , ಮಯಾಮಿ , ಸ್ಯಾನ್ ಜುಯನ್ ಪುಅರ್ಟೋ ರಿಕೋ , ಫ್ಲೊರಿಡ ಮತ್ತು ಬಹಾಮ ದ್ವೀಪ ಸಮೂಹಗಳ ನಡುವೆ ಇರೋದೇ ಈ ಬರ್ಮುಡಾ ಟ್ರೈ ಅನ್ಗಲ್ .

 

         ಜಗತ್ತಿನಲ್ಲಿ ಹೀಗೆ ಹೇಳದೇ ಕೇಳದೇ ಕಾಣಿಯಾಗುವ ಹಲವಾರು ಜಾಗಗಳಿದ್ದರೂ , ದೊಡ್ಡ ಮೊತ್ತದಲ್ಲಿ ಕಾಣೆಯಾದ ಘಟನೆಗಳು ಇಲ್ಲಿ ನಡೆದಿರುವುದರಿಂದ ಇದು ಜಗತ್ತಿನ ಗಮನವನ್ನು ತನ್ನೆಡೆಗೆ ತುಸು ಜಾಸ್ತಿಯಾಗೇ ಸೆಳೆದಿದೆ . ಈ ರೀತಿಯ ವಿದ್ಯಮಾನಗಳು ನಡೆಯುವ ಜಗತ್ತಿನ ಇತರ ಸ್ಥಳಗಳೇಂದರೆ :

1ಟೋಕಿಯೋ ಹತ್ತಿರವಿರುವ ಮಿಯಾಕೆ ಐಸ್ಲ್ಯಾಂಡ್ ಸುತ್ತಮುತ್ತ ಬರುವ ಡೆವಿಲ್ ಸೀ ಅಥವಾ ಪೈಶಾಶಿಕ ಸಮುದ್ರ .2)ಬರ್ಮುಡ ಟ್ರೈ ಅನ್ಗಲ್ನ ಪೂರ್ವಕ್ಕೆ ಬರುವ ಸಾರ್ಗ್ಯಾಸೊ ಸಮುದ್ರ .3)ಮೀಚಿಗನ್ ಸಮೀಪ ಬರುವ ದಿ ಮೀಚಿಗನ್ ಟ್ರೈ ಅನ್ಗಲ್ . 4)ತೈವನ್ ಸಮೀಪ ಬರುವ ಫಾರ್ಮೋಸ ಟ್ರೈ ಅನ್ಗಲ್ . 
ಇವುಗಳ ಬಗ್ಗೆ ಮುಂದಿನ ಸರಣಿಯಲ್ಲಿ ವಿವರಿಸುವೆ.

    ಇದರ ಕಾರ್ಯ ನಿರಂತರವಾಗಿ ಸಾಗುತ್ತಾ ಇದ್ದರೂ ಜಗತ್ತಿನ ಅರಿವಿಗೆ ಬಂದಿದ್ದು ಸ್ವಲ್ಪ ನಿಧಾನವೇ ಅಂತ ಹೇಳಬಹುದು. ಅದು ದಶಂಬರ್ 5 ,1945 2ನೇ ಮಹಾ ಯುದ್ದದ ಸಂದರ್ಭ, ಆವಾಗಲೇ ಈ ಕಾಣದ ಕೈ ತನ್ನ ಮೊಟ್ಟ ಮೊದಲ ದೊಡ್ಡ ಬೇಟೆಯಾಡಿ ಜಗತ್ತಿಗೆ ತನ್ನ ಇರುವನ್ನು ತೋರಿಸಿದ್ದು . ಅಭ್ಯಾಸಕ್ಕೆಂದು ಹೋದ F19 ಸರಣಿಯ 5 ಯುದ್ದ ವಿಮಾನಗಳ ಹಾಗೂ ತರುವಾಯ ಅದನ್ನು ಹುಡುಕಲು ಹೋದ ಮತ್ತೊಂದು ವಿಮಾನವನ್ನು ಯಾರಿಗೂ ತಿಳಿಯದಂತೆ ತನ್ನ ತೆಕ್ಕೆಯೊಳಗೆ ಎಳೆದುಕೊಂಡಿದ್ದು ಆವಾಗಲೇ.ಇದರ ಬಗ್ಗೆ ಮೊದಲ ಸುದ್ದಿ ಪ್ರಕಟಗೊಂಡಿದ್ದು ಅಸೋಸೇಟೆಡ್ ಪ್ರೆಸ್ ಎಂಬ ಪತ್ರಿಕೆಯಲ್ಲಿ . ಬರೆದವನು ಈ . ವಿ . ಡಬ್ಲ್ಯೂ. ಜೋನ್ಸ್ , ಪ್ರಕಟಗೊಂಡ ದಿನಾಂಕ ಸೆಪ್ಟೆಂಬರ್ 16 , 1950 .2 ವರ್ಷಗಳ ನಂತರ ಲೇಟ್ ಮ್ಯಾಗಸೀನ್ ಅಲ್ಲಿ ಜಾರ್ಜ್ .ಎಕ್ಸ್ . ಸ್ಯಾಂಡ್ ಎಂಬುವವನು "ಸಮುದ್ರದ ನಿಗೂಡತೆ ನಮ್ಮ ಹಿಂದಿನ ಬಾಗಿಲಿನಲ್ಲಿ " ಅನ್ನೋ ಲೇಖನವನ್ನು ಪ್ರಕತಿಸಿದ.ಅದರಲ್ಲಿ ಆತ. F19 ವಿಮಾನದ ನಾಪತ್ತೆ ಅಲ್ಲದೇ ಹಿಂದೆ ಅದೇ ಜಾಗದಲ್ಲಿ ನಡೆದ ಇತರ ನಾಪತ್ತೆ ಪ್ರಕರಣಗಳ ಬಗ್ಗೆಯೂ ಬೆಳಕು ಚೆಲ್ಲಿದ್ದ .ಬರ್ಮುಡ ಟ್ರೈ ಅನ್ಗಲ್ ಎಂಬ ಪದ ಮೊಟ್ಟ ಮೊದಲ ಬಾರಿಗೆ ಬಳಸಲಾಗಿದ್ದು ವಿನ್ಸೆಂಟ್ ಗಡ್ಡೀಸ್ ಫೆಬ್ರುವರೀ 1964 ರಲ್ಲಿ ಬರೆದ "The deadly bermuda triangle".ಗಮನಿಸಬೇಕಾದ ಅಂಶ ಅಂದ್ರೆ ಈ ವಿಚಿತ್ರ ಟ್ರೈ ಅನ್ಗಲ್ಗಳ ಬಗ್ಗೆ ಕೊಲುಂಬುಸ್ ಕೂಡ ಉಲ್ಲೇಖ ಮಾಡಿದ್ದಾನೆ ಅನ್ನೋದು.

ಇದರ ಬಗ್ಗೆ ನಡೆದಿರೋ ವಿಶ್ಲೇಷಣೆಗಳ ಬಗ್ಗೆ , F 19 ನಾಪತ್ತೆಯಾಗೊ ಮುಂಚೆ ಪರಸ್ಪರ ಸಹಮಿತ್ರರು ನಡೆಸಿದ ಸಂಭಾಷಣೆ ಹಾಗೆಯೇ ಇದರ ಹಿಂದೆ ಇರಬಹುದಾದ ಕಾರಣಗಳ ಬಗ್ಗೆ ಮುಂದಿನ ಲೇಖನದಲ್ಲಿ ವಿವರಿಸುತ್ತೇನೆ . 

 ಮೂಲ :Gian.j. quasar ರವರು ಬರೆದಿರುವ Into the Bermuda triangle

ಚಿತ್ರ ಕೃಪೆ : Crystal.com  

Rating
No votes yet

Comments