ನಗು ಎಂಬ... ನಮ್ಮಲ್ಲೇ ಇರುವ ಒಂದು ಶಕ್ತಿ

ನಗು ಎಂಬ... ನಮ್ಮಲ್ಲೇ ಇರುವ ಒಂದು ಶಕ್ತಿ

ನಾವು ನಕ್ಕು, ಬೇರೆಯವರನ್ನು ನಗಿಸುಹುವುದು ಸಾಮಾನ್ಯದ ಕೆಲಸವಲ್ಲ... ಅದು ನಮ್ಮ ಜೀವನದಲ್ಲಿ ಒಂದು ಚಾಲೆಂಜ್...
ನಾವು ನಗಬೇಕು ಎಂದರೆ ನಮಗೆ, ನಮ್ಮನ್ನು ನಲಿಸುವವರು ಬೇಕು ಎಂದರ್ಥ ಅಲ್ಲ.. ನಮ್ಮ ದೈನಂದಿನ ಜೀವನದಲ್ಲಿ ಎಷ್ಟೋ ಹಾಸ್ಯಗಳು ನಡಿಯುತ್ತೆ.. ಅಂದ್ರೆ ನಮಗೆ ನಾವೇ ಜೊಕರ್ಗಳಾಗಿ ಇರ್ತಿವಿ... ಅಂದ್ರೆ ನಮ್ಮಲ್ಲೇ ನಮ್ಮನ ನಗಿಸಿಕೊಳ್ಳುವ ಒಂದು ಶಕ್ತಿ ಇದೆ ಅಂತ ಆಯಿತು..
ಬೇರೆಯವರನ್ನ ನಗಿಸಿವುದು ಒಂದು ಕಲೆ .. ಅದು ನನಗೆ ತಿಳಿದ ಮಟ್ಟಿಗೆ ಎಲ್ಲರಲ್ಲೂ ಇರುವುದಿಲ್ಲ.. ಒಬ್ಬೊಬ್ರು ಇರ್ತಾರೆ.. ತಾವು ಕುಶಿ ಇಂದ ಇದಿವೋ ಇಲ್ವೋ ಯೋಚನೆ ಮಾಡೋದಿಲ್ಲ ಬೇರೆಯವರನ್ನ ನಗಿಸುವುದೇ ಒಂದು ಹವ್ಯಾಸ.. .. ನನಗೆ ತಿಳಿದ ಮಟ್ಟಿಗೆ ಅಂಥವರು ಅವರ ಜೀವನದಲ್ಲಿ ಆದ ಯಾವೊದೋ ಒಂದು ಘಟನೆಯನ್ನು (ಒಳ್ಳೇದು ಆಗಿರಬಹುದು ಅಥವಾ ಕೆಟ್ಟದು ಆಗಿರಬಹುದು) ಮರಿಯಲು ಅಥವಾ ಅದರಿಂದ ಹೊರಬರಲು ಮಾಡುವ ಒಂದು ಪ್ರಯತ್ನ.. ಏಕೆಂದರೆ ನಗಿಸುವವನ ಮನಸ್ಸು ನಗುವವರ ಮೇಲೆ ಇರುತ್ತೆ... ಇಲ್ಲಿ ಸ್ವಾರ್ಥತೆ ತುಂಬಾ ಕಡಿಮೆ...ಅಂದ್ರೆ ನಾವು ಸಂತೋಷದಿಂದ ಇದ್ದು ಬೇರೆಯವರನ್ನ ಸಂತೋಷ ಪಡಿಸುವುದು ದೊಡ್ಡ ವಿಷಯವಲ್ಲ.. ನಮ್ಮ ದುಃಖವನ್ನು ಬದಿಗಿಟ್ಟು ಎಲ್ಲರ ಸಂತೋಷದಲ್ಲಿ ಪಾಲ್ಗೊಳ್ಳುವುದು ತುಂಬಾ ಕಷ್ಟಕರವಾದ ಸಂಗತಿ.. ಈ ಒಂದು ಸಂಧರ್ಬದಲ್ಲಿ ನನಗೆ ಚಾರ್ಲಿ ಚಾಮ್ಪಲಿನ್ ಅವರು ನೆನಪಿಗೆ ಬರುತ್ತಾರೆ.. ಒಮ್ಮೆ ನಾನು ಲೈಬ್ರರಿಗೆ ಹೋದಾಗ ಹಾಗೆ ಚಾರ್ಲಿ ಅವರ ಜೀವನ ಚರಿತ್ರೆ ಓದೋಣ ಅನ್ನಿಸಿತು.. ಅವರು ಪರದೆ ಮೇಲೆ ಇರೋದಕ್ಕೂ ಅವರ ನಿಜ ಜೀವನದಲ್ಲಿ ಇರೋದಕ್ಕೂ ತುಂಬಾ ವ್ಯತ್ಯಾಸ ಇದೆ.. ನಿಜವಾಗಲೂ ಅವರ ಕಲೆ ಅಪಾರ.. ಅವರನ್ನು ತೆರೆಯ ಮೇಲೆ ನೋಡುವಾಗ ನಮಗೆ ಅವರಲ್ಲಿ ಏನೆಲ್ಲಾ ನೋವು ಇದೆ ಅನ್ನುವುದು ಕಾಣುವುದಿಲ್ಲ... ರಿಯಲಿ ಗ್ರೇಟ್.. ಅಂದ್ರೆ ಇವರ ಪ್ರಯತ್ನ ಬೇರೆಯವರನ್ನು ಸಾದ್ಯವಾದಷ್ಟು ನಗಿಸುವುದು..

ನನ್ನ ಈ ಬರವಣಿಗೆಯ ಉದ್ದೇಶ ಏನು ಅಂದ್ರೆ.... ನಗು ಎನ್ನುವುದು ನಮ್ಮಲ್ಲೇ ಇರುವ ಶಕ್ತಿ.. ಇದನ್ನ ನಾವು ನಮ್ಮ ಜೀವನದಲ್ಲಿ ಅರಿತು ಅದನ್ನ ಉಪಯೋಗಿಸಿಕೊಳ್ಳಬೇಕು...
ನೀವು ನೋಡಿರಬಹುದು.. ಎಷ್ಟೋ ಪಾರ್ಕ್ ಗಳಲ್ಲಿ ಬೆಳಗಿನಜಾವ " ಹ ಅಹ ಅಹ ಅಹ ಹಃ" ಅಂತ ಅವರಿಗೆ ನಗು ಬರದಿದ್ದರೂ ಅವರು ಪ್ರಯತ್ನಿಸಿರುತ್ತಾರೆ.. ಅವರನ್ನು ನಾವು ನೋಡಿದರೆ ನಿಜವಾಗಲೂ ನಗಲಾರದವನಿಗೂ ನಗು ಬರುತ್ತೆ...

ನಮ್ಮ ಜೀವನದಲ್ಲಿ ಯಾವುದು ಒತ್ತಾಯ ಪೂರ್ವಕ ವಾಗಿರಬರದು,, ಅದು ನಮ್ಮ ಮನಸ್ಸಿನಿಂದ ಬರಬೇಕು... ಇದರಿಂದ ನಮ್ಮ ಜೀವನದಲ್ಲಿ ನಗು ನಗುತ್ತ ಇರಬಹುದು...

ಎಲ್ಲರ ಜೀವನದಲ್ಲೂ (ನನ್ನನು ಸೇರಿ ;-)) ಮನಸ್ಪೂರ್ವಕ ನಗು ಇರಲಿ ಎಂದು ಆಶಿಸುವ,
ಪ್ರಣವ್

Rating
No votes yet

Comments