ಅಮಲು.......

ಅಮಲು.......

ಇಳಿ-ಸಂಜಿ ಹೊತ್ನ್ಯಾಗ, ನಿನ್ ಕಣ್ಣು ನಿಚ್ಚಳಾ,
ಬಾಟ್ಲಿಯಂಡಿಗೆ ಅಂಗೈಯ್ಯಾಗ ಎರ್ಡ್ಗುದ್ದಿದ್ರ,
ಬಂತ್ ನೋಡ ಸಪ್ಪಳಾ,
ಬೂಚ್ ತಿರವಿ, ಗ್ಲಾಸಿಗ್ ಬಗ್ಗಿಸಿ, ಬಾಯಾಗ ಸುರಕಂಡ್ರ.....

ನಿ ಹಚ್ಚ ಬೆಂಕಿಗ್ಯ ಯಲ್ಲಾ ಹಚ್-ಹಚ್ಚಗ,
ನಿ ಗಂಟ್ಲಾಗ್ ಕೊಚ್ಕಂಡ್ರ ಯಲ್ಲಾ ಬೆಚ್-ಬೆಚ್ಚಗ,
ಕರುಳಾಗ ಹೊಕ್ಕಂಡು, ಸಣ್ಕರುಳ ಯರದು,
ರಕುತಾನ ನೀನ..? ನೀ ರಕುತಾನ..?
ನರ್-ನರದಾಗು ಮುಣಿಗಿ, ತ್ಯಲ್ಯಾಗ ಯದ್ದು,
ತ್ಯಲೀನ ಯತ್ತಿ, ಯತ್ತೆತ್ಲಾಗ ಒಗ್ದ್ಯಂದ್ರ.....

ನಿ ಯಾರ? ಯಾವೂರ ? ಎನಾಗದೈತಿ...
ನಿನ್ ದೇವ್ರು, ನಿನ್ ದಿಂಡ್ರು ಎಲ್ ಹೋಗ್ಯೇತ್ಯ...
ಕಣ್-ಮಂಜ, ಕಿವಿ ಮಂದ, ತೊದ್-ತೊದ್ಲ ಬಾಯಿ,
ಮತ್-ಮತ್ತ ಗ್ಲಾಸಿಗ್ ಬಗ್ಗಿಸ್ಕ್ಯಂತವ ನಡುಗ ಕೈಯಿ....

Rating
No votes yet

Comments