ವಿಸ್ಮಯಕಾರಿ ಜಗತ್ತಿನಳಗೊಂದಿಷ್ಟು ವಿಸ್ಮಯಗಳು ; ಬರ್ಮುಡ ಟ್ರೈ ಅನ್ಗಲ್ ಭಾಗ-2

ವಿಸ್ಮಯಕಾರಿ ಜಗತ್ತಿನಳಗೊಂದಿಷ್ಟು ವಿಸ್ಮಯಗಳು ; ಬರ್ಮುಡ ಟ್ರೈ ಅನ್ಗಲ್ ಭಾಗ-2

ಒಂದು ವಿಷಯ ಮೊದಲೇ ಸ್ಪಷ್ಟಪಡಿಸಲು ಇಚ್ಚಿಸುತ್ತೇನೆ,ಬರ್ಮುಡ ತ್ರಿಕೋನ ಭಾಗದಲ್ಲಿ ಹಾದುಹೋದ ಎಲ್ಲ ವಿಮಾನಗಳು , ಹಡಗುಗಳು ಮತ್ತು ಸಣ್ಣ ಯಾಂತ್ರಿಕ ದೋಣಿಗಳು ಎಲ್ಲವೂ ಕಣ್ಮರೆಯಾಗಿಲ್ಲ . ಬಹುಶಃ ಈ ಯಾಕೆ ಹಾಗೆ ಆಗಿಲ್ಲ ಅನ್ನೋದೇ ಇದನ್ನು ಇಷ್ಟು ವಿಸ್ಮಯವನ್ನಾಗಿ ಮಾಡಿದೆ ಅನ್ಸುತ್ತೆ .ಮೊದಲು ಇದು ವ್ಯಾಪಿಸಿರುವ ಜಾಗದ ಬಗ್ಗೆ ತಿಳಿದುಕೊಳ್ಳೋಣ. ಈ ತ್ರಿಕೋನ ಸ್ಥಾಪಿತವಾಗಿರುವ ಜಾಗ ಮೊದಲನೆಯದಾಗಿ ಬಹು ದಟ್ಟವಾದ ಸಾರಿಗೆ ಸಂಚಾರದಿಂದ ಕೂಡಿದೆ .ಹಾಗೆಯೇ ಬಹುವಾಗಿ ವಾಯು ಮತ್ತು ನೌಕ ದಳದ ಮೇಲೆ ಅವಲಂಬಿತವಾಗಿರುವ ದೇಶಗಳೆ ಈ ಪ್ರದೇಶವನ್ನು ಸುತ್ತುವರೆದಿವೆ. ಆದ ಕಾರಣ ಸಮುದ್ರ ಹಾಗೂ ಆಗಸದಲ್ಲಿ ಸಮರಾಭ್ಯಾಸಗಳು ಆಗಾಗ ನಡೆಯುತ್ತಲೇ ಇರುತ್ತವೆ ( ಗಮನಿಸಿ : ಈ ನಿಗೂಡತೆಯ ಹಿಂದೆ ಇದರ ಕೈ ಕೂಡ ಇರಬಹುದು ,ಹೇಗೆ ಮುಂದೆ ತಿಳಿದುಕೊಳ್ಳೋಣ).

                      ಮೊದಲೇ ತಿಳಿಸಿದಂತೆ ಈ ತ್ರಿಕೋನದ ಬಗ್ಗೆ ಕುತೂಹಲ ಹೆಚ್ಚಿದ್ದು F19 ವಿಮಾನಗಳು ಕಣ್ಮರೆ ಆದ ಮೇಲೆ ಆದರೂ , ಒಮ್ಮೆ ಇದೊಂದು ವಿಸ್ಮಯವಿರಬಹುದು ಅನ್ನಿಸತೊಡಗಿದ ತಕ್ಷಣ , ಆ ತ್ರಿಕೋನದ ಸುತ್ತಮುತ್ತಲೂ ಈ ಹಿಂದೆ ಕಣ್ಮರೆಯಾದ ಎಲ್ಲ ವಸ್ತುಗಳು ಒಂದೊಂದಾಗಿ ಜಗತ್ತಿಗೆ ಪರಿಚಿತವಾಗುತ್ತಾ ಹೋಯಿತು.

ಆಗ ಸಂಶೋಧಕರ ಕಣ್ಣು ಮೊಟ್ಟ ಮೊದಲಿಗೆ ಬಿದ್ದಿದ್ದು ಕೊಲುಂಬುಸ್ ಬರೆದಿರುವ ಲಾಗ್ ಮೇಲೆ . ಅಕ್ಟೋಬರ್ 11 , 1492 ರಲ್ಲಿ ಕೊಲುಂಬುಸ್ ಇದೆ ಟ್ರೈಯಾಂಗಲ್ ಬಳಿ ಪ್ರಯಾಣಿಸುತ್ತಿದ್ದಾಗ ಕಂಡ ವಿಚಿತ್ರವನ್ನು ಇದರಲ್ಲಿ ವಿವರಿಸಿದ್ದಾನೆ."ವಿಚಿತ್ರ ( ವಿಲಕ್ಷಣ ) ಬೆಳಕಿನ ಕುಣಿತ ಸಮುದ್ರದ ಮಧ್ಯದಲ್ಲಿ ".ಇಲ್ಲಿಂದ ಆರಂಭವಾದ ಶೋಧ ನಂತರ ಬಂದು ನಿಂತಿದ್ದು 1872 ರಲ್ಲಿ ಕಣ್ಮರೆಯಾದ ಮೇರೀ ಸೆಲೆಸ್ಟ್ ಅನ್ನೋ ಹಡಗಿನಲ್ಲಿ .ಅಧಿಕೃತವಾಗಿ ಯಾರು ಇದನ್ನು ಬರ್ಮುಡ ಟ್ರೈಯಾಂಗಲ್ ಅಲ್ಲಿ ಸೇರಿಸಿಲ್ಲವಾದರೂ , ಅಲ್ಲಲ್ಲಿ ಇದರ ಉಲ್ಲೇಖ ಬರುವುದಂತೂ ನಿಜ.

 

 ಕೊಲುಂಬುಸ್

              1872 ರಲ್ಲಿ ನ್ಯೂಯಾರ್ಕ್ ಇಂದ ಜಿನೋವ ಮಾರ್ಗವಾಗಿ ಇಟಲಿಗೆ ಹೊರಟಿದ್ದ ಹಡಗು ಇದ್ದಕ್ಕಿದ್ದಂತೆ ಕಣ್ಮರೆಯಾಯಿತು.ದಿನ ತೀವ್ರ ಕಾರ್ಯಾಚರೆಣೆಗಳ ನಂತರ ಅದು ಹೊರಟ ಜಾಗದಿಂದ 400 ಕೀ ಮಿ ದೂರದಲ್ಲಿರುವ ಆಫ್ರಿಕಾದ ತೀರದಲ್ಲಿ ಯಾವುದೇ ನಾವಿಕರಿಲ್ಲದೇ ತೇಲುತ್ತಿರುವ ಸ್ಥಿತಿಯಲ್ಲಿ ದೊರಕಿತು.ಒಳಹೊಕ್ಕು ನೋಡಿದಾಗ ಯಾವುದೇ ವಸ್ತುಗಳ ದರೋಡೆ ಆಗಿರಲಿಲ್ಲ .ಆದರೆ ಕಾಣೆಯಾಗಿದ್ದ ಕೆಲವು ಬೋಟ್ಗಳು ಅದು ಯಾವುದೋ ತೀವ್ರತರವಾದ ಬಿರುಗಾಳಿಗೆ ಸಿಲುಕಿದೆ ಅಂತ ಸೂಚಿಸುತ್ತಿತ್ತು .ಆದರೆ ಆಮೇಲೆ ದೊರೆತ ಶಿಪ್ ಲಾಗ್ ಅಲ್ಲಿ ಯಾವುದೇ ತರನಾದ ಪ್ರಾಕೃತಿಕ ವಿಕೋಪದ ಮಾಹಿತಿ ಇರಲಿಲ್ಲ .ಯಾವುದೇ ಸ್ಪಷ್ಟ ಚಿತ್ರಣ ದೊರೆಯದ ಕಾರಣ ಇದರ ಕಣ್ಮರೆ ರಹಸ್ಯವಾಗೆ ಉಳಿಯಿತು .ಇನ್ನೂ ಇತಿಹಾಸ ತಿರುವುತ್ತಾ ಹೋದರೆ 1780 ರಿಂದಲೇ ಈ ಪ್ರದೇಶದಲ್ಲಿ ಕಾಣಿಯಾದ ಪ್ರಕರಣಗಳ ಮಾಹಿತಿ ಲಭ್ಯವಾಗುತ್ತೆ (ಅದರ ಬಗ್ಗೆಯೂ ವಿವರಣೆ ಬೇಕು ಅಂತ ಅನಿಸಿದರೆ ಹೇಳಿ , ಮುಂದಿನ ಲೇಖನದಲ್ಲಿ ವಿವರಿಸುತ್ತೇನೆ ).

 ಮೇರೀ ಸೆಲೆಸ್ಟ್
 
 ಚಿತ್ರ ಕೃಪೆ : wikipedia and Bermuda-triangle.org
ಮಾಹಿತಿ :bermuda-triangle.org, wikipedia,Gian quasars Into the bermuda triangle  
Rating
No votes yet