ಶಾಲೆಯತ್ತ ಮಕ್ಕಳ ಚಿತ್ತ...

ಶಾಲೆಯತ್ತ ಮಕ್ಕಳ ಚಿತ್ತ...

ಶಾಲೆಯತ್ತ ಮಕ್ಕಳ ಚಿತ್ತ...
- ಎಂ. ಆರ್. ಮಾನ್ವಿ, ಭಟ್ಕಳ
ಬುಧವಾರ - ಜೂನ್ -02-2010 
  ಒಂದು ಕಾಲವಿತ್ತು. ಮಕ್ಕಳಿಗೆ ಸಂಪೂರ್ಣವಾಗಿ ಎರಡು ತಿಂಗಳು ರಜೆ ಸಿಗುತ್ತಿತ್ತು. ಆದರೆ ಇದು ಜ್ಞಾನದ ಯುಗ. ಈಗ ರಜೆಗಳು ಮಾಯವಾಗಿವೆ. ಮಕ್ಕಳಿಗೆ ಮಣ್ಣಿನೊಂದಿಗೆ ಬೆರತು ಆಟ ಆಡುವ ಅವಕಾಶಗಳು ಮಾಯವಾಗುತ್ತಿವೆ. ಏಕೆಂದರೆ ರಜೆಗಳಲ್ಲಿ ಸಜೆ ನೀಡುವ ಸ್ಪೆಷಲ್ ಕ್ಲಾಸ್, ಸಮ್ಮರ್ ಕ್ಲಾಸ್‌ಗಳು, ಕಂಪ್ಯೂಟರ್ ಕೋರ್ಸ್ ಇಂದು ಮಕ್ಕಳನ್ನು ನಿಸರ್ಗದೊಂದಿಗೆ ಬೆರೆತು ಮಣ್ಣಿನೊಡನೆ ಆಟ ಆಡುವ ಅವಕಾಶದಿಂದ ವಂಚಿತರನ್ನಾಗಿ ಮಾಡುತ್ತಿವೆ.
 ಅದಕ್ಕಾಗಿಯೆ ನಮ್ಮ ವಿದ್ಯಾರ್ಥಿಗಳು ದುರ್ಬಲರಾಗುತ್ತಿರುವುದು. ಅತಿಯಾದ ಪಾಠದ ಹೊರೆ, ಪರೀಕ್ಷಾ ಭಯ, ಪಾಲಕ ಪೋಷಕ, ಶಿಕ್ಷಕರ ಒತ್ತಡ ಇವೆಲ್ಲ ಕಾರಣಗಳಿಂದಾಗಿ ಮಗು ನೈಸರ್ಗಿಕವಾಗಿ ಬೆಳೆಯಲಾರದು. ಯಾರದೋ ಒತ್ತಡಕ್ಕೆ ಮಣಿದು ಮನಸ್ಸಿಲ್ಲದ ಮನಸ್ಸಿನಿಂದ ಮಾಡುವ ಯಾವುದೆ ಕಾರ್ಯ ಸಿದ್ಧಿಸದು. ಆದ್ದರಿಂದ ಮಕ್ಕಳನ್ನು ವಿಶೇಷವಾಗಿ 6 ರಿಂದ 14 ವರ್ಷ ವಯೋಮಾನದವರನ್ನು ಹೊಡೆದು ಬಡಿದು ಬೈದು ಬುದ್ಧಿ ಹೇಳದೆ ಪ್ರೀತಿ ಮತ್ತು ಮಮತೆಯಿಂದ ಅವನ ಬೆನ್ನು ತಟ್ಟಿ ಹೇಳಿದರೆ ಅದು ನೂರಕ್ಕೆ ನೂರು ಸಕ್ಸಸ್ ಆಗುತ್ತದೆ.
 ಹೊಡೆದು ಬಡಿದು ಗದರಿಸುವಲ್ಲಿ ಯಾವುದೇ ಪ್ರಯೋಜನವಿಲ್ಲ. ಶೈಕ್ಷಣಿಕ ಮನೋವಿಜ್ಞಾನಿಗಳು ಕೂಡ ಇದನ್ನೇ ಹೇಳುತ್ತಾರೆ. ಸರಕಾರವು ಪ್ರಾಥಮಿಕ ಶಿಕ್ಷಣವನ್ನು ಎಲ್ಲಾ ಮಕ್ಕಳಿಗೂ ಕಡ್ಡಾಯಗೊಳಿಸಿದೆ. 6ರಿಂದ 14ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವ ಐತಿಹಾಸಿಕ ಮಸೂದೆಯನ್ನು ಸಂಸತ್ ಅಂಗೀಕರಿಸಿದೆ.
  ವಿಕಲಚೇತನರಿಗೂ ಇತರ ವಿದ್ಯಾರ್ಥಿಗಳ ಜೊತೆಯೇ ಶಿಕ್ಷಣ ನೀಡುವ ಮಹತ್ವದ ಅಂಶವನ್ನು ಮಸೂದೆ ಒಳಗೊಂಡಿದೆ. ಮಸೂದೆಯ ಅನ್ವಯ 6ರಿಂದ 14ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಶಿಕ್ಷಣ ನೀಡುವುದು ಕಡ್ಡಾಯ. ಶಿಕ್ಷಣ ಉಚಿತವಾಗಿರಬೇಕು. ಖಾಸಗಿ ಶಾಲೆಗಳಲ್ಲಿ ಬಡಮಕ್ಕಳಿಗೆ ಶೇ.25ರಷ್ಟು ಸೀಟು ಮೀಸಲಿಡಬೇಕು. ಶಾಲಾ ದಾಖಲಾತಿ ವೇಳೆ ವಿದ್ಯಾರ್ಥಿಯನ್ನಾಗಲಿ, ಪೋಷಕರನ್ನಾಗಲಿ ಯಾವುದೇ ಸಂದರ್ಶನದ ಪರೀಕ್ಷೆಗೆ ಒಳಪಡಿಸುವಂತಿಲ್ಲ. 
 ಆದರೆ ಇದು ಎಲ್ಲಿ ಅನುಷ್ಠಾನಕ್ಕೆ ಬಂದಿದೆ. ಕೆಲವು ಪ್ರತಿಷ್ಠಿತ ಶಾಲೆಗಳು ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಂತಹ ಶಾಲೆಗಳು ವಿದ್ಯಾರ್ಥಿಗಳನ್ನು ತಮ್ಮ ಶಾಲೆಯಲ್ಲಿ ದಾಖಲಾತಿ ಮಾಡಲು ಸಿ.ಇ.ಟಿ ಮಾದರಿಯ ಆರ್ಹತಾ ಪರೀಕ್ಷೆಯನ್ನು ನಡೆಸುತ್ತಿವೆ. ಇಷ್ಟೆ ಅಲ್ಲದೆ ವಿದ್ಯಾರ್ಥಿಗಳ ಪಾಲಕ, ಪೋಷಕರು ಸಹ ಪರೀಕ್ಷೆಯನ್ನು ನೀಡಬೇಕಾದಂತಹ ಪರಿಸ್ಥಿತಿ ಇದೆ. ತಮ್ಮ ಮಗನಿಗೆ ಆ ಶಾಲೆಯಲ್ಲಿ ದಾಖಲೆ ಸಿಗಲಿಲ್ಲ ಎಂಬ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೈದ ಉದಾಹರಣೆಯೂ ನಮ್ಮಲ್ಲಿದೆ.
 ಇದು ಪ್ರತಿಷ್ಠಿತ ಶಾಲೆಗಳ ಸ್ಥಿತಿಯಾದರೆ ಸರಕಾರಿ ಶಾಲೆಗಳು ಇದಕ್ಕೆ ತೀರ ವಿರುದ್ಧ ಎಂಬಂತೆ ಮಕ್ಕಳ ದಾಖಲಾತಿಯೆ ಇರುವುದಿಲ್ಲ. ಕಡಿಮೆ ಮಕ್ಕಳ ದಾಖಲಾತಿ ಹೊಂದಿದ ಅದೆಷ್ಟೋ ಸರಕಾರಿ ಶಾಲೆಗಳು ಈಗ ಮುಚ್ಚುವ ಆದೇಶಕ್ಕಾಗಿ ಕಾಯುತ್ತಿವೆ. ಗ್ರಾಮೀಣ ಪ್ರದೇಶದಲ್ಲಂತೂ ಕೇವಲ 5-6 ವಿದ್ಯಾರ್ಥಿಗಳಿರುವ ಶಾಲೆಗಳಿವೆ. ಶಾಲೆಗಳು ಜ್ಞಾನದ ದೇಗುಲಗಳು ಇದ್ದ ಹಾಗೆ. ಯಾವುದೇ ಶಾಲೆ ಇರಲಿ. ಅಲ್ಲಿ ಸರಿಯಾಗಿ ಮನಸ್ಸಿಟ್ಟು ಆಸಕ್ತಿಯಿಂದ ಕಲಿತರೆ ಎಲ್ಲರಿಗೂ ಕಲಿಕೆ ಲಭ್ಯವಾಗುತ್ತಿದೆ. ನಮ್ಮ ಪೂರ್ವಜರು ಯಾವ ಪ್ರತಿಷ್ಠಿತ ಶಾಲೆಯಲ್ಲಿ ಕಲಿತರು? ಅದೇ ಕನ್ನಡ,ಉರ್ದು ಶಾಲೆಗಳಲ್ಲಿ ಕಲಿತೇ ದೇಶದ ಮಹಾನ್ ವ್ಯಕ್ತಿಗಳಾದರು.
 ಆದ್ದರಿಂದ ಜೂನ್ ಆರಂಭದಿಂದಲೆ ಕಲಿಕೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ನಿರಂತರವಾಗಿ ಕಲಿಯುವ ಪ್ರಯತ್ನ ಮಾಡಬೇಕು. ವಿದ್ಯಾರ್ಥಿ ಮಿತ್ರರೇ, ಕಳೆದ ಬಾರಿಗಿಂತ ಈ ಬಾರಿಯ ಎಸೆಸೆಲ್ಸಿ ಫಲಿತಾಂಶದಲ್ಲಿ ದ.ಕ. ಉಡುಪಿ ಹಿಂದಕ್ಕೆ ತಳ್ಳಲ್ಪಟ್ಟಿವೆ. ಕಾರಣ ಏನೆ ಇರಬಹುದು. ಪರೀಕ್ಷಾ ಸಮಯದಲ್ಲಿನ ಐ.ಪಿ.ಎಲ್. ಆಗಲಿ ಸ್ಥಳಿಯವಾಗಿ ಸಂಘಟಿಸಲ್ಪಡುವ ಕ್ರೀಡೆಗಳೇ ಆಗಲಿ ಇದರ ಮೇಲೆ ಸಾಕಷ್ಟು ಪರಿಣಾಮ ಬೀರಿವೆ ಎಂಬುದರಲ್ಲಿ ಸಂಶಯವಿಲ್ಲ.
 ಆದರೆ ಕಳೆದ ಹಲವಾರು ವರ್ಷಗಳಿಂದ ಮೌಲ್ಯಮಾಪನ ಕಾರ್ಯಕ್ಕೆ ಹೋಗುತ್ತಿರುವ ಶಿಕ್ಷಕರು ಹೇಳುವಂತೆ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ಉತ್ತರಗಳನ್ನು ಬರೆಯದೆ ‘‘ಸಿನಿಮಾದ ಹಾಡುಗಳನ್ನು ಮತ್ತಿತರ ವಿಷಯಗಳನ್ನು ಅಥವಾ ನಾವು ತುಂಬಾ ಬಡವ ನನಗೆ ದಯಮಾಡಿ ಪಾಸ್ ಮಾಡಿ ನಿಮ್ಮ ಮಕ್ಕಳಿಗಾಗಿ ನಾನು ಪ್ರಾರ್ಥಿಸುತ್ತೇನೆ’’ ಎಂತಲೂ ಬರೆಯುತ್ತಾರೆ. ಇಷ್ಟೆಲ್ಲ ಬರೆಯುವವರು ವಿಷಯಕ್ಕನುಗುಣವಾಗಿ ಒಂದರೆಡು ವಾಕ್ಯಗಳನ್ನು ಬರೆದಿದಲ್ಲಿ 30, 35 ಅಂಕಗಳನ್ನು ಪಡೆಯಬಹುದಿತ್ತು. 
  ಆದರೆ ಹೀಗೆ ಮಾಡದೆ ಹಾಲ್ ಟಿಕೆಟ್‌ನ ಹಿಂದೆ ನೀಡಿದ ಸೂಚನೆಗಳನ್ನು ಬರೆಯುತ್ತಾರೆ. ಐದು ಅಂಕದ ಪ್ರಬಂಧ ಬರೆಯುವಲ್ಲಿ ಒಂದು ಪುಟದಷ್ಟು ಮೌಲ್ಯಮಾಪಕರಿಗೆ ಮನವಿಯನ್ನು ಮಾಡಿಕೊಂಡಿರುತ್ತಾರೆ. ಇದನ್ನೆ ದೂರದರ್ಶನದ ಕುರಿತಾಗಿನಾಲ್ಕೈದು ಸಾಲಗಳಲ್ಲಿ ಅದರ ಉಪಯೋಗ, ದುರುಪಯೋಗದ ಕುರಿತು ಬರೆದರೆ ಅದಕ್ಕೆ 3 ಅಂಕವಾದರೂ ಸಿಗುತ್ತದೆ ಎಂದು ಈ ಬಾರಿ ಎಸೆಸೆಲ್ಸಿ ಮೌಲ್ಯಮಾಪನಕ್ಕೆ ಹೋದ ಶಿಕ್ಷಕರು ತಿಳಿಸುತ್ತಾರೆ.
 ಫಲಿತಾಂಶಗಳು ವಿದ್ಯಾರ್ಥಿ, ಪಾಲಕ ಹಾಗೂ ಶಾಲೆಯ ಮೇಲೆ ಬಹಳಷ್ಟು ಪ್ರಭಾವ ಬೀರುತ್ತವೆ. ಶಾಲೆಯ ಫಲಿತಾಂಶ ಉತ್ತಮವಾಗಿ ಬಂದರೆ ಮುಂದಿನ ದಿನಗಳಲ್ಲಿ ಅಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗುತ್ತಾರೆ. ವಿದ್ಯಾರ್ಥಿಯ ಫಲಿತಾಂಶ ಉತ್ತಮವಾಗಿದ್ದರೆ ಒಳ್ಳೆಯ ಕಾಲೇಜಿನಲ್ಲಿ ಮುಂದಿನ ಓದನ್ನು ಓದಬಹುದು. ಪಾಲಕರು ತಮ್ಮ ಮಗ/ಮಗಳ ಉತ್ತಮ ಫಲಿತಾಂಶಕ್ಕಾಗಿ ಸಂತೋಷವನ್ನು ಪಡುತ್ತಾರೆ. 
  ಹೀಗೆ ಫಲಿತಾಂಶವು ನಮ್ಮ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಇದಕ್ಕಾಗಿ ಹೆಚ್ಚಿನ ಶ್ರಮದ ಅಗತ್ಯವಿಲ್ಲ. ಕೇವಲ ಶಾಲಾ ಅವಧಿಯಲ್ಲಿ ಶಿಕ್ಷಕರು ನೀಡಿದ ಮಾಹಿತಿಯನ್ನು ಗಮನದಲ್ಲಿಟ್ಟರೆ ಸಾಕು. ಮುಂದೆ ಪರೀಕ್ಷೆಯ ಸಮಯದಲ್ಲಿ ಮೊದಲೆ ಟಿಪ್ಪಣೆ ಮಾಡಿಟ್ಟುಕೊಂಡ ವಿಷಯವನ್ನು ಮೆಲಕು ಹಾಕಿದರೆ ಶೇ 90% ಫಲಿತಾಂಶ ಬಂದೆ ಬರುತ್ತದೆ. ಆದರೆ ಇಂದು ಜೂನ್ ನಿಂದ ಹಿಡಿದು ಪರೀಕ್ಷೆ ಬರೆಯುವವರೆಗೂ ವಿದ್ಯಾರ್ಥಿಯು ಒತ್ತಡದಲ್ಲಿ ಇರುವುದರಿಂದಾಗಿ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ. ಇಲ್ಲಿ ಕಲಿಕೆ ಮುಖ್ಯ. ಎಲ್ಲರೂ 99% ಬೆನ್ನ ಹಿಂದೆ ಬೀಳುವುದು ಸರಿಯಲ್ಲ.
 ತಾಯಂದರಿಗೊಂದಿಷ್ಟು:    ಎಂದಿನಂತೆ ಜೂನ್ ಒಂದಕ್ಕೆ ಶಾಲೆಗಳು ಪುನಃ ಆರಂಭವಾಗುತ್ತಿವೆ. ಜೂನ್,ಜುಲೈ, ಆಗಸ್ಟ್ ಈ ಮೂರು ತಿಂಗಳು ಮಳೆಗಾಲ ಬೇರೆ. ಈ ನಿಟ್ಟಿನಲ್ಲಿ ಪಾಲಕರು ತಮ್ಮ ಪುಟಾಣಿಗಳ ಕುರಿತು ಜಾಗೃತೆಯನ್ನು ವಹಿಸುವುದು ಒಳಿತು. ಆದಷ್ಟು ಕಡಿಮೆ ಪುಸ್ತಕದ ಭಾರ, ಕೊಡೆ, ರೆನ್‌ಕೋಟ್ ಮತ್ತಿತರ ಮಳೆಯಿಂದ ರಕ್ಷಣೆಯನ್ನು ಹೊಂದುವ ಸಾಧನಗಳನ್ನು ಈ ಮೊದಲೆ ಕೊಂಡುಕೊಳ್ಳುವುದು ಒಳಿತು. ಏಕೆಂದರೆ ಮಳೆಗಾಲ ಆರಂಭವಾದ ಮೇಲೆ ಇದು ಕಷ್ಟವಾಗಬಲ್ಲುದು. 
 ಮಕ್ಕಳ ಆರೋಗ್ಯದ ಕುರಿತಂತೆ ನಿರ್ಲಕ್ಷ ಬೇಡ. ಆರೋಗ್ಯವೇ ಭಾಗ್ಯ ಅಲ್ಲವೆ. ಹಾಗಾಗಿ ಮಳೆಗಾಲದಲ್ಲಿ ಬರುವ ಶೀತ, ನೆಗಡಿಯನ್ನು ನಿರ್ಲಕ್ಷಿಸದೆ ಅದಕ್ಕೆ ಕೂಡಲೆ ಚಿಕಿತ್ಸೆ ನೀಡಬೇಕು. ಇಡಿ ದಿನ ಮಕ್ಕಳ ಹಿಂದೆ ಓದು ಓದು ಎಂದು ಗಂಟು ಬೀಳದೆ ಅವರಿಗೆ ಪ್ರೀತಿಯ ಹಾರೈಕೆಯೊಂದಿಗೆ ಓದಿದ ಒಂದಷ್ಟು ವಿಷಯಕ್ಕೆ ಬೆನ್ನು ತಟ್ಟಿ. ಆಗ ಮಗು ಮುಂದಿನ ಓದನ್ನು ತಾನಾಗಿ ಓದಿಕೊಳ್ಳುವನು. 
 ಬೇರೆ ಪಾಲಕರ ಮುಂದೆ ತನ್ನ ಮಗ ದಡ್ಡ ಎಂದು ಅಪಮಾನಿಸದೆ ಅವನ ಗುಣಗಾನ ಮಾಡಿ. ಯಾವಾಗಲು ಮಕ್ಕಳಿಗೆ ‘ನೀನು ದಡ್ಡ ನಿನಗೆ ಏನು ಬರುವುದಿಲ್ಲ. ನಿನ್ನ ಸಹಪಾಠಿ ತುಂಬಾ ಜಾಣ’ ಎನ್ನುವ ಹರಗಿಸುವಿಕೆ ಮಾಡದಿರಿ.

 ಬೇರೆ ಪಾಲಕರ ಮುಂದೆ ತನ್ನ ಮಗ ದಡ್ಡ ಎಂದು ಅಪಮಾನಿಸದೆ ಅವನ ಗುಣಗಾನ ಮಾಡಿ. ಯಾವಾಗಲು ಮಕ್ಕಳಿಗೆ ‘ನೀನು ದಡ್ಡ ನಿನಗೆ ಏನು ಬರುವುದಿಲ್ಲ. ನಿನ್ನ ಸಹಪಾಠಿ ತುಂಬಾ ಜಾಣ’ ಎನ್ನುವ ಹಂಗಿಸುವಿಕೆ ಮಾಡದಿರಿ.

Rating
No votes yet

Comments