ಮುತ್ತಿನ ಎರಡು ಮಾತು

ಮುತ್ತಿನ ಎರಡು ಮಾತು

ಎರಡು ವಾಕ್ಯಗಳು ನಮ್ಮ ಬದುಕಿನ ಪ್ರಗತಿಯನ್ನು ನಿರ್ಧರಿಸುತ್ತವೆ

.
1) ನಿಮ್ಮ ಕೈಯಲ್ಲಿ ಎನೂ ಇಲ್ಲದಿರುವಾಗ ನೀವು ವ್ಯವಹರಿಸುವ ರೀತಿ

2) ನಿಮ್ಮ ಕೈಯಲ್ಲಿ ಎಲ್ಲವೂ ಇರುವಾಗ ಅವುಗಳನ್ನು ನೀವು ನಿರ್ವಹಿಸುವ ರೀತಿ.

ಬದುಕಿನಲ್ಲಿ ಎರಡೇ ಅವಕಾಶವಿರುವುದು

1) ಸ್ವೀಕರಿಸುವುದು

2) ಬದಲಿಸುವುದು

ಬದಲಿಸಲಾರದ್ದನ್ನು ಸ್ವೀಕರಿಸಲು ಪ್ರಯತ್ನಿಸಿ ಮತ್ತು ಸ್ವೀಕರಿಸಲಾರದ್ದನ್ನು ಬದಲಿಸಲು ಪ್ರಯತ್ನಿಸಿ.

ನಾವು ಮಗುವಿನಿಂದ ಕಲಿಯಬೇಕಾದ ಎರಡು ಸಂಗತಿಗಳಿವೆ

1) ವಿನಾಕಾರಣ ಸಂತೋಷವಾಗಿರುವುದು.

2) ಯಾವಾಗಲೂ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಕೊಂಡಿರುವುದು.

ಪ್ರತಿದಿನ ಬೆಳಿಗ್ಗೆ ನಿಮಗೆ ಎರಡು ಅವಕಾಶಗಳಿರುತ್ತವೆ.

1) ಕನಸುಗಳನ್ನು ಕಾಣುತ್ತಾ ನಿಮ್ಮ ನಿದ್ದೆ ಮುಂದುವರೆಸುವುದು

2) ಎದ್ದು ನಿಮ್ಮ ಕನಸುಗಳನ್ನು ಬೆನ್ನತ್ತುವುದು.

Submitted by ಭಾಗ್ವತ Wed, 10/10/2012 - 23:44

ಸಂಪದದಲ್ಲಿ ಮೊದಲಿನಂತೆ ಬಿಡಿ ಬಿಡಿಯಾಗಿ ಕವನ ಅಥವಾ ಸಾಲು ಜೋಡಿಸುವ ವಿಧಾನ ಬಗ್ಗೆ ಮಾಹಿತಿ ನೀಡಿ