" Yes We Will, " ಅಮೆರಿಕನ್ ವೀಕ್ಷಕರ ವಿಜಯೋತ್ಸಾಹದ ಕೂಗು, ಪ್ರಿಟೊರಿಯದ ಕ್ರೀಡಾಂಗಣದಲ್ಲಿ ಪ್ರತಿಧ್ವನಿಸುತ್ತಿತ್ತು !
'ಲ್ಯಾಂಡನ್ ಡೊನೊವಾನ್ ಅವರು ' ಸಂಭ್ರಮಿಸುತ್ತಿರುವ ಸಮಯದಲ್ಲಿ, ಅವರ ಜೊತೆ ಆಟಗಾರರು ಒಬ್ಬರಾದ ಮೇಲೆ ಒಬ್ಬರು ಸಿಕ್ಕಿಬಂದು ಅವರನ್ನು ಮುತ್ತಿ, ಅಪ್ಪಿ ಸಂಭ್ರಮಿಸಿದ ದೃಷ್ಯ ! ಪಾಪ, ' ಡೊನೊವನ್ ' ಎಲ್ಲರ ಆಡಿಯಲ್ಲಿ ಇದ್ದಾರೆ. ಉಸುರು ಸಿಕ್ಕಿಹಾಕಿಕೊಂಡಿರುವಂತಿದೆ !
"ಆಫ್ರಿಕದ ಪ್ರಿಟೊರಿಯದ ಕ್ರೀಡಾಂಗಣದಲ್ಲಿ, "ಯೆಸ್ ವಿ ವಿಲ್ " ಕೂಗಿನ ಅದರದೇ ಆದ ದೊಡ್ಡ ಪಟಗಳನ್ನು ಎತ್ತಿಹಿಡಿದು ಸಂಭ್ರಮಿಸುತ್ತಿದ್ದ "ರಗ್ಬಿಯ ಆಟದ ಗುಂಗಿನಲ್ಲೇ ಇದ್ದ, ಅಮೆರಿಕನ್ ವೀಕ್ಷಕರು", ಕಾಲ್ಚೆಂಡಿನಾಟಕ್ಕೂ ಸಾಕಷ್ಟು ಪರಿಶ್ರಮ ಹಾಗೂ ತಾಲೀಮ್ ಮಾಡಿರುವುದನ್ನು ವಿಶ್ವದ ಪುಟ್ಬಾಲ್ ರಸಿಕ ವೀಕ್ಷಕರು ಗಮನಿಸುವಂತಾಗಿತ್ತು- ೨೩ ನೇ ತಾರೀಖಿನಂದು ಜರುಗಿದ, 'ಸಿ ಗೄಪಿನ ಆಟ'. ಆ ಪ್ರೇಕ್ಷಕರ ಮಧ್ಯದಲ್ಲಿ ಯಾರಿದ್ದರು ಗೊತ್ತೆ ? 'ಮಾಜಿ ಅಮೆರಿಕದ ಆಧ್ಯಕ್ಷ, ಜೆಫರ್ಸನ್ ಕ್ಲಿಂಟನ್ ' !
ಲ್ಯಾಂಡನ್ ಡೊನೊವಾನ್ ಅವರು ಪಂದ್ಯದ ಗಾಯಾಳು ಸಮಯ ೨ ನೇ ನಿಮಿಷದಲ್ಲಿ ಗಳಿಸಿದ ನಾಟಕೀಯ ಗೋಲು ಅಮೆರಿಕಾಕ್ಕೆ ೧-೦ ಗೋಲು ಅಂತರದ ವಿಜಯ ದೊರಕಿಸಿಕೊಟ್ಟಿತು.
ಪ್ರಥಮಾರ್ಧದಲ್ಲಿಯೇ ಅಮೆರಿಕಾ ಮುನ್ನಡೆ ಸಾಧಿಸುವುದಕ್ಕೆ ಸಾಧ್ಯವಿತ್ತು. ಆದರೆ ಕ್ಲಿಂಟ್ ಡೆಂಪ್‌ಸೆಯ್ ಅವರು ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ಕಳುಹಿಸಿದಾಗ ಅದನ್ನು ರೆಫರಿ ಆಫ್‌ಸೈಡ್ ಎಂದು ತೀರ್ಮಾನಿಸಿದರು. ಆದ್ದರಿಂದ ಪಂದ್ಯದ ಕೊನೆಯವರೆಗೆ ಅಮೆರಿಕಾ ಗೆಲುವಿನ ಗೋಲಿಗಾಗಿ ನಿರೀಕ್ಷಿಸಬೇಕಾಯಿತು. ಅಮೆರಿಕಕ್ಕೆ ಬೇಕಾಗಿದ್ದ ಗೋಲನ್ನು ೯೧ ನೆಯ ನಿಮಿಷದಲ್ಲಿ, ಲ್ಯಾಂಡನ್ ಡೊನೊವಾನ್ ಅವರು ಝಾಡಿಸಿ ಹೊಡೆದು, ಅಮೆರಿಕವನ್ನು ಪಾರುಮಾಡಿದರು. (ಹೆಚ್ಚುವರಿ ಸಮಯ ೪ ನಿಮಿಷಗಳು ದೊರೆತಿದ್ದವು)
ಪ್ರಭಾವಿ ಆಟವಾಡದ ಅಲ್ಜೀರಿಯಾ ನಿರೀಕ್ಷೆಯಂತೆ ಲೀಗ್ ಹಂತದಲ್ಲಿಯೇ ನಿರ್ಗಮಿಸಿತು.ಈ ಪಂದ್ಯದಲ್ಲಿ ಎರಡನೇ ಹಳದಿ ಕಾರ್ಡ್ ದರ್ಶನ ಪಡೆದ ಅಲ್ಜೀರಿಯಾದ ಆಯಂಟರ್ ಯಾಹಿಯಾ ಅವರು ಅಂಗಳದಿಂದ ಹೊರನಡೆಯಬೇಕಾಯಿತು.
ಮೊದಲ ೧೨ ಸೆಕೆಂಡ್ ನಲ್ಲೇ ಒಂದು ಚಾನ್ಸ್ ಸಿಕ್ಕಿತ್ತು. ಕರೀಮ್ ಝಿಯಾನಿಯವರು, ವಾಲಿಯಿಂದ ಹೊರಗೆ ಪೆನಾಲ್ಟಿ ಪೆಟ್ಟಿಗೆಯಿಂದ ಬಾರಿಸಿದ ಚೆಂಡು ಟಿಮ್ ಹೊವರ್ಡ್ ರವರ ಗೋಲ್ ತಲುಪಲು ಸಾಧ್ಯವಾಗಲಿಲ್ಲ. ಆಲ್ಜೀರಿಯಕ್ಕೆ ಮತ್ತೊಂದು ಸೊಗಸಾದ ಅವಕಾಶ, ೬ ನೇ ನಿಮಿಷದಲ್ಲಿ ಕಾದಿತ್ತು. ರಫಿಕ್ ಜೆಬ್ಬೊರ್ ರವರು, ಜೆ ಡಿಮೆರಿಟ್ ಮಾಡಿದ ತಪ್ಪಿನ ಫಾಯಿದೆ ಪಡೆದು, ಬಾರಿಸಿದ ಹೊಡೆತ, ಬಾರ್ ಗೆ ತಗುಲಿ ಶಾಂತವಾಯಿತು. ಸ್ಟ್ರೈಕರ್ ಹರ್ಕ್ಯುಲಿಸ್ ಗೊಮೆಜ್ ಬಾರಿಸಿದ ಹೊಡೆತವನ್ನು ಗೋಲಿ, ರಾಯಿಸ್ ಮೊಬೊಲೊಯಿಯವರು, ತಮ್ಮ ಮೊಳಕೈ ಬಲದಿಂದ ಹೊರಕ್ಕೆ ತಳ್ಳಿಹಾಕಿ ಗೋಲ್ ಆಗದಂತೆ ಕಾಪಾಡಿದರು. ಹೀಗೆ ಎರಡೂ ಕಡೆ ಗೋಲಿಗಾಗಿ ಸೆಣೆಸಾಟ ಜಾರಿಯಲ್ಲಿತ್ತು. ಅಮೆರಿಕಕ್ಕೆ ಸಿಕ್ಕ ಹಲವಾರು ಅವಕಾಶಗಳನ್ನು ಅವರು ತಮ್ಮ ಕಡೆ ಸೆಳೆದುಕೊಳ್ಳುವಲ್ಲಿ ಅಸಮರ್ಥರಾಗಿದ್ದರು. ಒಂದು ಸಮಯದಲ್ಲಿ ಆಲ್ಜೀರಿಯದ ಗೋಲಿ ಚೆಂಡನ್ನು ಹಿಡಿಯುವ ಸಂಭ್ರಮದಲ್ಲಿ ಗೋಲ್ ವಲಯದಿಂದ ದೂರವಿದ್ದಾಗ, ಅಲ್ಲಿ ಅಮೆರಿಕನ್ ಆಟಗಾರರು ಇರಲಿಲ್ಲ. ದೂರದಲ್ಲಿದ್ದು ಗೋಲ್ ಹೊಡೆಯುವ ಅವಕಾಶದಿಂದ ವಂಚಿತರಾದರು.
ಈ ಪಂದ್ಯ ಆಟದ ಗುಣಮಟ್ಟದಿಂದ ಅತಿ ಶ್ರೇಷ್ಠವೆಂದು ಪರಿಗಣಿಸಲ್ಪಡದಿದ್ದರೂ ಮನರಂಜನೆಯ ದೃಷ್ಟಿಯಿಂದ ಬಹಳ ಸೊಗಸಾಗಿತ್ತು. ವಿಶ್ವದ ಎಲ್ಲ ರಸಿಕ, ಕಾಲ್ಚೆಂಡಿನ-ಕ್ರೀಡಾಭಿಮಾನಿಗಳು ಎವೆಯಿಕ್ಕಿ ನೋಡುತ್ತಾ ತಮ್ಮ ಮನೆಯ ಟೆಲಿವಿಶನ್
ಪೆಟ್ಟಿಗೆಗಳಿಗೆ ಅಂಟಿಕೊಂಡಿದ್ದರು.
-ಚಿತ್ರ : ಇಂಡಿಯನ್ ಎಕ್ಸ್ ಪ್ರೆಸ್ ದೈನಿಕ.