ಅಂಬಿಗರ ಚೌಡಯ್ಯನ ವಚನ

ಅಂಬಿಗರ ಚೌಡಯ್ಯನ ವಚನ

ಬರಹ

ದೊಡ್ಡ ದೊಡ್ಡ ಚಿಂದಿಶೆತ್ತಿಗಳ ಕಂಡರೆ
ಅಡ್ಡಗಟ್ಟಿ ಶರಣಾರ್ಥಿಯೆಂಬುರಯ್ಯ
ನಿಜ ಶರಣನು ಹೋಗಿ ಶರಣೆಂದರೆ
ನೊಡದವರ ಹಾಗೆ ಅಡ್ಡ ಮೋರೆಯನ್ನಿಟ್ಟುಕೊಂಡು ಹೋಗುವ
ಗೊಡ್ಡುಮೂಳರಿಗೆ ದುಡ್ಡೇ ಪ್ರಾಣವಾಯಿತಲ್ಲಪ್ಪಾ ದೇವಾ
ಇಂತಿರ್ಪ ದುಡ್ಡಿಸ್ತರ ದೊಡ್ಡಿಸ್ತಿಕಿಯ ಕುರುಹನರಿತು
ಮೊಳಪಾದ ಹೊಡೆದು ನಗುತಿದ್ದ ನಮ್ಮ ಅಂಬಿಗರ ಚೌದಯ್ಯ.

ಈ ವಚನವನ್ನು ನೋಡಿದಾಗ ಇದರಲ್ಲಿರುವ ನಿಜಾಂಶ ನಮ್ಮ ಇವತ್ತಿನ ಮಠಾದೀಶರಿಗೆ ಹೋಲಿಸಿದಾಗ ಇದು ಸರಿಹೊಂದುತ್ತದೆ. ಅವರು ಕೂಡಾ ಹೀಗೇ ನಡೆದುಕೊಳ್ಳುತ್ತಾರೆ ಧಕ್ಷಣಿ ಕೊಡೊ ಭಕ್ತನಿಗೆ ಒಂದುತರಾ ಆಥಿತ್ಯಾ, ಇನ್ನು ಧಕ್ಷಣಿಕೊಡದೆಯಿರೊ ಭಕ್ತನ್ನಂತು ಮಾತಾಡಿಸೊದೆಯಿಲ್ಲಾ, ಹಾಗಂತಾ ಎಲ್ಲರು ಹಾಗೆ ನಡೆದುಕೊಳ್ಳೋದಿಲ್ಲಾ, ಆದರೆ ಹೆಚ್ಚಾನ್ ಹೆಚ್ಚು ಮಠಾದೀಶರು ಹೀಗೆ ನಡೆದುಕೊಳ್ಳೋದು.