ಅಕ್ಷಯ ತದಿಗೆ
ಕವನ
ಬರುತಿದೆ ವರುಷದ ಅಕ್ಷಯ ತದಿಗೆ
ತರುತಿದೆ ಹರುಷವ ಭಕ್ತಿಯ ಕಡೆಗೆ
ಪಾವನ ದಿನವಿದು ಒಳ್ಳೆ ಕಾರ್ಯಕೆ
ಚಿನ್ನವ ಕೊಳ್ಳುವುದು ರಕ್ಷಾ ಕವಚಕೆ
ಸಮತೆಯ ದೂತ ಶಾಂತಿಯ ನಾಥ
ನೀತಿಯ ದಾತ ಬಸವನ ಹುಟ್ಟಿದ
ಹಬ್ಬವೆಂದು ನಾಡೇ ನೆನೆವುದು ಮನ
-ದಲಿ ಅಕ್ಷಯ ತೃತೀಯ ತಿಥಿಯು ಇಂದು
ಒಳ್ಳೆ ಕಾರ್ಯವ ಮಾಡುತ ಜನರು
ಗಳಿಸಿಕೊಳುವರು ನಿಜ ಪುಣ್ಯವನು
ಪಾಪವ ಕರ್ಮವ ದೂರ ಮಾಡುತ
ಪಡೆವರು ಜೀವನದಾಸೆ ಮುಕ್ತಿಯನು
ಲಕ್ಷ್ಮೀ ಪೂಜಿಸಿ ವರವನು ಪಡೆವರು
ರಾಸುವ ಪೂಜಿಸಿ ಭಕ್ತಿಯ ಮೆರೆವರು
ಬಸವಣ್ಣನ ನಿಜ ಕಾರ್ಯವ ನೆನೆವರು
ನಿಜ ಪುಣ್ಯದ ಕಾರ್ಯವ ಮಾಡುವರು
-ಬಂದ್ರಳ್ಳಿ ಚಂದ್ರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
