ಅಚ್ಚರಿ ಹುಟ್ಟಿಸುವ ಆಂಗ್ಲ ಭಾಷೆಯ ಪ್ರಭಾವ!!

ಅಚ್ಚರಿ ಹುಟ್ಟಿಸುವ ಆಂಗ್ಲ ಭಾಷೆಯ ಪ್ರಭಾವ!!

ಆಂಗ್ಲ ಭಾಷೆ ಇಂದು ಪ್ರಪಂಚದಾದ್ಯಂತ ವ್ಯಾಪಿಸಿದೆ. ಜಗತ್ತಿನ ಎಲ್ಲ ವ್ಯಾಪಾರ ವಹಿವಾಟುಗಳು ಬಹುತೇಕ ಆಂಗ್ಲ ಭಾಷೆಯಲ್ಲೇ ನಡೆಯುತ್ತವೆ.
ಇದಕ್ಕೆ ಕಾರಣಗಳು ಬಹಳ ಸ್ಪಷ್ಟವಾಗಿವೆ. ಬ್ರಿಟಿಷರ ಆಡಳಿತ ಇದ್ದಲ್ಲೆಲ್ಲ ಜನ ಇಂಗ್ಲಿಷ್ ನ ಪ್ರಭಾವಕ್ಕೆ ಒಳಗಾದರು. ಇಂದು ಇಂಗ್ಲಿಷ್ ಮತ್ತು ಕಂಪ್ಯೂಟರ್ ಕಲಿಕೆ ಅತ್ಯವಶ್ಯಕ ಎನಿಸಿದೆ.
ಗ್ರಾಮೀಣ ಪ್ರದೇಶದಿಂದ ಬರುವವರಿಗಂತೂ ಇಂಗ್ಲಿಷ್ ಗೊತ್ತಿಲ್ಲವೆಂಬುದು ಅವರಲ್ಲಿ ಕೀಳರಿಮೆ, ಅಪರಾಧಿ ಭಾವಗಳನ್ನು ಉಂಟುಮಾಡಿರುವುದನ್ನು ನಾನೇ ಕಣ್ಣಾರೆ ನೋಡಿದ್ದೇನೆ.
 
    ಇದನ್ನೇ ಸವಾಲಾಗಿ ತೆಗೆದುಕೊಂಡು ಇಂಗ್ಲಿಷ್ ಕಲಿತು ಒಳ್ಳೆಯ ಹುದ್ದೆಗಳಿಗೆ ಹೋದವರಿದ್ದಾರೆ. ಗ್ರಾಮೀಣ ಪ್ರದೇಶಗಳಿಂದ ಬಂದ ಪ್ರತಿಭಾನ್ವಿತ ಇಂಜಿನಿಯರ್ ಗಳು, ಡಾಕ್ಟರರೂ ಇದ್ದಾರೆ.
ಆದರೆ ಇಂಗ್ಲೀಷನ್ನೇ ದೇವರನ್ನಾಗಿಸಿ ಪೂಜೆ ಮಾಡುವವರನ್ನು ನೋಡಿದ್ದೀರಾ? ಅದೂ ಜಾತಿ ಸಮಸ್ಯೆ ಇಂದ ಹೊರಬರಲು?
ಇಂದು BBC ನ್ಯೂಸ್ನಲ್ಲಿ ನಾನು ಓದಿದ ಸುದ್ದಿ ಇದು. ಇಲ್ಲಿ ದಲಿತ ಜನ ಇಂಗ್ಲೀಷನ್ನೇ ದೇವರನ್ನಾಗಿಸಿದ್ದಾರೆ,ಪೂಜಿಸುತ್ತಾರೆ. ಇಂಗ್ಲಿಷ್ ಒಂದರಿಂದಲೇ ತಮಗೆ ಮುಕ್ತಿ ಎಂದು ನಂಬಿದ್ದಾರೆ.
ಇದು ನಡೆಯುತ್ತಿರುವುದು ಉತ್ತರ ಪ್ರದೇಶದ ಬಂಕ ಎನ್ನುವ ಊರಿನಲ್ಲಿ.

ಸಾಮಾಜಿಕವಾಗಿ ಸಮಾನತೆ ಪಡೆಯಲು ಹೀಗೆ ಮಾಡುತ್ತಿದ್ದಾರೆ. ಇದನ್ನು ಓದಿ ಹೇಗೆ ಪ್ರತಿಕ್ರಯಿಸಬೇಕೋ ತಿಳಿಯಲಿಲ್ಲ.
ಆ ಲೇಖನದ ಕೊಂಡಿ ಇಲ್ಲಿದೆ:
http://www.bbc.co.uk/news/world-south-asia-12355740

ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು?

Comments