ಅದ್ಭುತ ಕಲಾಂ
ಕವನ
೧
ಕಲಾಂ ಅಸ್ತಂಗತರೆಂದು
ಭಾರನಾಗಿ ಬರೆಯಲು
ಪೆನ್ನು ತೆಗೆದರೆ
ಅಕ್ಷರಗಳು ಮೂಡಲಿಲ್ಲ
ಎಷ್ಟು ಝಾಡಿಸಿದರೂ
ಶಾಯಿ ಕಾಗದಕ್ಕಿಳಿಯಲಿಲ್ಲ
ಗದ್ಗದಿತ ಪೆನ್ನು
ಗತ ನೆನಪು..........
೨
ಪುಟ್ಟ ಹುಡುಗನಿಗೆ
ಬೈತಲೆ ಬಾಚಿ
ಕೋಟು ಪ್ಯಾಂಟು
ಟೈ ಕಟ್ಟಿ
ಪುಟಪುಟನೆ ನಡೆಸಿದ
ಸೊಬಗು
ಕಲಾಂ ಸಭೆಗಳಲ್ಲಿ
೩
ಮಕ್ಕಳ ಗುಂಪಿನ
ಕಲರವದಲ್ಲಿ ಕಲಾಂರನ್ನು
ಹೆಕ್ಕಿ ತೆಗೆಯುವುದು
ಹೇಗೆಂದರೆ:
ತುಂಬಾ ಚೂಟಿ
ಚಟುವಟಿಕೆಯ ಹುಡುಗನೇ
ಕಲಾಂ
ಚಿತ್ರ್
Comments
ಉ: ಅದ್ಭುತ ಕಲಾಂ
ಶ್ರೀ ಅನಂತ ಅವರೇ ಪ್ರಣಾಮಗಳು.ಹನಿಗವನಗಳಲ್ಲಿ ಶ್ರೀ ಕಲಾಂ ಅವರ ವ್ಯಕ್ತಿತ್ವ ಕುರಿತು ಚೆನ್ನಾಗಿ ನಿರೂಪಿಸಿರುವಿರಿ.
In reply to ಉ: ಅದ್ಭುತ ಕಲಾಂ by Shashikant P Desai
ಉ: ಅದ್ಭುತ ಕಲಾಂ
ದೇಸಾಯಿಯವರೇ, ಸದಭಿಪ್ರಾಯಗಳಿಗೆ ವಂದನೆಗಳು.