ಅನಂಗ

ಅನಂಗ

ಬರಹ

ರಾಯ ! ಅನಂಗ
ಅಂಗ,ಭಂಗ ಅನಂಗ
ಕೊಚ್ಚೆಯೊಳಗೆ ಹಂದಿ
ಹಂದಿ, ಆನಂದಿ
ಹೊರಳಾಡಿ ಗಂಧೀ
ಸತ್ತು ಮತ್ತೂ ವಾಸನ ಗಂಧೀ
ಸೂಕರ ಸೂತಕ ಛಾಯೆ
ಮಾಯೆ ಮಾಯೆ......
'ನೀ ಕಾರಣ','ನೀ ಕಾರಣ'
ರಾಯ ಕಾರಣಕ್ಕೆ ಕಾರಣ
ಒಂದೇ ಕಣ್ಣು , ಮೂಗು
ತುರಿಸು ಹಲ್ಕಿರಿದು,
ನೂರಾರು ಬಣ್ಣ
ಸಣ್ಣ, ಸಣ್ಣ. ಸಾಲದೋ?
ಬಾಯಿಗೆ ಕೆಂಪು.
ಕಣ್ಣಿಗೆ ಹಳದಿ.
ಮೂಗಿಗೆ ಬಣ್ಣ, ತುಪ್ಪ.
ರಾಯ ಕಣ್ಮುಚ್ಚಿದರೂ
ಕಣ್ಬಿಟ್ಟರೂ ರಕ್ತ
ಭಕ್ತ, ಅವಿಭಕ್ತ (?)
ರಾಯ,ಹುಡುಕೀ
ಕೀ ಹುಡುಕೀ ...
ಸಿಗಲಿಲ್ಲ ಕಾರಣ
ದೇಹ ದೇಶ ಹತ್ತುರಿದು
ಬೊಬ್ಬಿರಿದರೂ
ಆ ಕಾರಣ ಅಕಾರಣ
ನೀರವ ಮೌನ
ಒಂಟಿ ಕಾಲ ಧ್ಯಾನ