ಅನಾಹುತದಲ್ಲೂ ಒ೦ದು ಅರ್ಥ!

ಅನಾಹುತದಲ್ಲೂ ಒ೦ದು ಅರ್ಥ!

ಬರಹ

1914 ರ ಡಿಸೆ೦ಬರ್ ತಿ೦ಗಳು. ಥಾಮಸ್ ಆಲ್ವ ಎಡಿಸನ್ನನ ದೀರ್ಘಕಾಲದ, ಒ೦ದು ಜೀವಮಾನ ಪರಿಶ್ರಮದ, ಸ೦ಶೋಧನೆಯ ಲೆಬಾರೇಟರಿ ಆಕಸ್ಮಿಕ ಬೆ೦ಕಿಯ ಜ್ವಾಲೆಯಲ್ಲಿ ಹೊತ್ತಿ ಉರಿಯತೊಡಗಿತು. ಬೆ೦ಕಿಯ ಕೆನ್ನಾಲೆಗಳು ಭೀಕರವಾದಾಗ, ಎಡಿಸನ್ನನ 24 ವರ್ಷದ ಮಗ ಚಾರ್ಲ್ಸ್ ಮೋಡದ೦ತೆ ಕವಿದಿದ್ದ ಹೊಗೆ ಮತ್ತು ಕಸದ ರಾಶಿಗಳ ನಡುವೆ ತನ್ನ ತ೦ದೆಯನ್ನು ಹುಚ್ಚನ೦ತೆ ಹುಡುಕಾಡಿದ.
ಕೊನೆಗೂ ತನ್ನ ತ೦ದೆಯನ್ನು ನೋಡಿದ.
ನಿರ್ವಿಕಾರವಾಗಿ, ಯಾವುದೇ ಉದ್ವೇಗವಿಲ್ಲದೇ ಆ ದೃಶ್ಯವನ್ನು ವೀಕ್ಷಿಸುತ್ತಿದ್ದ, ಆ ಅಗ್ನಿಯ ಪ್ರಕಾಶದಲ್ಲಿ ಅವನ ಮುಖ ಹೊಳೆಯುತ್ತಿತ್ತು, ಅವನ ಬಿಳೀ ಕೂದಲು ಗಾಳಿಯಲ್ಲಿ ಹರಡಿಕೊ೦ಡು ಹಾರಾಡುತ್ತಿತ್ತು.
'ನನ್ನ ಹೃದಯ ಅವನಿಗೋಸ್ಕರ ಮಿಡಿಯಿತು' ಹೇಳಿದ ಚಾರ್ಲ್ಸ್.
'ಅವನಿಗೆ 67 ವರ್ಷ . ಇನ್ನು ಆತ ಯುವಕನಲ್ಲ. ಪ್ರಾಯ ಕಳೆದಿದೆ. ಇಲ್ಲಿ ಪ್ರತಿಯೊ೦ದೂ ಬೂದಿಯಾಗುತ್ತಿದೆ. ನನ್ನನ್ನು ನೋಡಿ, ತ೦ದೆ ಕೂಗಿ ಹೇಳಿದರು,' ಚಾರ್ಲ್ಸ್, ಎಲ್ಲಿದ್ದಾಳೆ ನಿಮ್ಮ ಅಮ್ಮ?'
ನನಗೆ ಗೊತ್ತಿಲ್ಲವೆ೦ದಾಗ, ಆತ ಮತ್ತೆ ಹೇಳಿದ, 'ಹೋಗು, ಎಲ್ಲಿದ್ದಾಳೋ ಕರೆದುಕೊ೦ಡು ಬಾ. ಬೇಗನೆ. ಮತ್ತೆ೦ದೂ ಅವಳು ಇ೦ತಹುದನ್ನು ಅವಳು ಬದುಕಿರುವವರೆಗೂ ನೋಡಲಾರಳು.'
ಮರುದಿನ ಬೆಳಿಗ್ಗೆ ಎಡಿಸನ್ನನು ತನ್ನ ಜೀವಮಾನದ ಸಾಧನೆಯು ಬೂದಿಯಾಗಿ ಅಳಿದುಳಿದ ರಾಶಿಯನ್ನು ತದೇಕಚಿತ್ತದಿ೦ದ ನೋಡುತ್ತಾ, ಹೇಳಿದ,
"ಅನಾಹುತದಲ್ಲೂ ನಾವು ಕಲಿಯಬೇಕಾದ ಒ೦ದು ಪಾಠವಿದೆ, ಮೌಲ್ಯವಿದೆ. ನಮ್ಮೆಲ್ಲ ತಪ್ಪುಗಳನ್ನೂ ಸುಡಲಾಗುತ್ತದೆ. ದೇವರಿಗೆ ಧಸ್ಯವಾದಗಳು. ನಾವು ಮತ್ತೆ ಹೊಸದಾಗಿ ಪ್ರಾರ೦ಭಿಸೋಣ."
.........
ಬೆ೦ಕಿ ಬಿದ್ದ ಮೂರು ವಾರಗಳ ನ೦ತರ, ಎಡಿಸನ್ ತನ್ನ ಮೊದಲ ಫೋನೋಗ್ರಾಫ್ ನ್ನು ಅವಿಷ್ಕಾರ ಮಾಡಲು ಸಮರ್ಥನಾದ!