ಅನ್ನದಾತರ ಹಬ್ಬ
ಸನಾತನ ಧರ್ಮ ಪರಂಪರೆ
ಹಬ್ಬಗಳ ಆಚರಣೆ ನಿರಂತರ
ಋತುಮಾನಕ್ಕೆ ಒಪ್ಪುವ ಹಿನ್ನೆಲೆ
ಧಾರ್ಮಿಕ ನಂಬಿಕೆಯ ಚೆಲುವಲೆ
ಹಿರಿಯರ ಮಾರ್ಗದರ್ಶನದ ಬಲೆ
ಸಂಪ್ರದಾಯಗಳ ಸುಸೂತ್ರ ಆಚರಣೆ
ಅನ್ನದಾತರು ಕೂಡಿ ಸಂಭ್ರಮಿಸುವರು
ವೈಜ್ಞಾನಿಕ ಜಾನಪದ ಮೇಳೈಸಿರಲು
ಕಾರ ಹುಣ್ಣಿಮೆಯೆಂಬ ಪೆಸರನಿಟ್ಟಿಹರು
ಮಣ್ಣಿನಲಿ ಎತ್ತುಗಳ ಮೂರುತಿ ಮಾಡಿ
ಜೇಷ್ಠ ಮಾಸ ಶುಕ್ಲಪಕ್ಷ ಪೌರ್ಣಿಮೆ
ಪೂಜೆ ಕಥಾಶ್ರವಣಮನೆ ಮಂದಿಯೆಲ್ಲ ಕೂಡಿಹರು
ರಾಸುಗಳ ಕೋಡುಗಳ ಸಿಂಗರಿಸಿ
ಗೆಜ್ಜೆ ಬಾಸಿಂಗ ಕಿರುಗಂಟೆ ಕಟ್ಟಿ
ಕಲಶದಾರತಿ ಬೆಳಗಿ ಪೂಜಿಸಿ
ವಾದ್ಯ ಗೋಷ್ಠಿಯಲಿ ಮೆರವಣಿಗೆ ಮಾಡಿ
ಭೂಮಿತಾಯಿಗೆ ಶೃದ್ಧಾಭಕ್ತಿಯಲಿ ನಮಿಸಿ
ಸಮೃದ್ಧಿ ಬೆಳೆ ನೀಡಮ್ಮ ಎಂದು ಪ್ರಾರ್ಥಿಸುವರು
ಗ್ರಾಮರಕ್ಷಣೆ ಬೆಳೆಯನಿತ್ತು ಅನವರತ ಪೊರೆದು
ಕಷ್ಟ ನಷ್ಟಗಳು ದುಷ್ಟ ಶಕ್ತಿ ಗಳು ಬಾರದಂತೆ ತಡೆದು
ಭವಿಷ್ಯದಲಿ ಬುವಿಯ ಮಕ್ಕಳನು ಪೊರೆದು
ಕ್ಷಾಮ ಬೆಳೆ ನಾಶವಾಗದಂತೆ ತಡೆದು
ಹಾಡು ಕುಣಿತ ಮೆರವಣಿಗೆ ಕ್ರೀಡೆಯಲಿ
ಸಂತಸದಲಿ ಎಲ್ಲರೊಂದಾಗಿ ಕೈಮುಗಿದು ಬೇಡುವರು
(ಕಾರ ಹುಣ್ಣಿಮೆ ವಿಶೇಷ)
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
