ಅಪರಾಧ‌

ಅಪರಾಧ‌

ಕವನ

ಮೋಡಗಳು ವೇಷ ಬದಲಾಯಿಸಿಕೊಂಡು

ನಿರ್ಭಯವಾಗಿ ಓಡಾಡುತ್ತಿವೆ.

ಇದ್ದಕ್ಕಿದ್ದಂತೆ ಬಿರುಗಾಳಿ ಎಬ್ಬಿಸುತ್ತಿವೆ.

ಯಾರೂ ಕೂಡ ತಲೆಯೆತ್ತಿ ನೋಡುತ್ತಿಲ್ಲ.

 

ಪ್ರತಿನಿತ್ಯ ಹೊಸ ಹೊಸ ದಂಡಯಾತ್ರೆ. ಕಬಳಿಕೆ.

ಒಬ್ಬೊಬ್ಬನೂ ಒಂದೊಂದು ಸೈನ್ಯ.

ಹೋದೆಡೆಯೆಲ್ಲ ಸಿಂಹಾಸನ ವಶ.

ಕಿರೀಟ ಧಾರಣೆ.

 

ಕಿರೀಟವೆಂಬುದು ಅಪರಾಧದ ಸಂಕೇತ.

ಕಿರೀಟಗಳು ತಲೆಯೆತ್ತದಂತೆ ಮಾಡಿಬಿಟ್ಟಿವೆ.

----------------------------------

ಸಿ ವಿ ಶೇಷಾದ್ರಿ