ಅಪೂರ್ಣತೆ

ಅಪೂರ್ಣತೆ

ಕವನ

 


ಎಲ್ಲ ಬಗೆಯ ಫಲ


ಸಿಹಿಯಾಗುತ್ತಿಲ್ಲ.


ಆದವೆಲ್ಲ ಸುಲಿಸಿಕೊಂಡವು ಸಿಪ್ಪೆ.


 


ಎಲ್ಲ ಕಡೆ ನೆಲ


ಫಲವತ್ತಾಗುತ್ತಿಲ್ಲ.


ಆದ ಕಡೆ ಕಾಣಿಸಿಕೊಂಡವು ತಿಪ್ಪೆ.


 


ತುಳಿಸಿಕೊಂಡ ಮಣ್ಣೆಲ್ಲ


ಗಡಿಗೆಯಾಗುತ್ತಿಲ್ಲ


ಆದವೆಲ್ಲ ಹೋದವು ಒಡೆದು.


 


ಸುಡಿಸಿಕೊಂಡ ಮಣ್ಣೆಲ್ಲ


ಇಟ್ಟಿಗೆಯಾಗುತ್ತಿಲ್ಲ.


ಆದವೆಲ್ಲ ಹೋದವು ಬಿದ್ದು.


 


ಸೇರಬೇಕಾದ ನದಿಗಳು


ಸಮುದ್ರ ಸೇರುತ್ತಿಲ್ಲ.


ಸೇರಿದವೆಲ್ಲ ಉಪ್ಪಾದವು.


 


ಆವಿಯಾಗಬೇಕಾದ ಸಮುದ್ರಗಳು


ಆವಿಯಾಗುತ್ತಿಲ್ಲ.


ಆದವೆಲ್ಲ ಕಪ್ಪಾದವು.


 


ಮುಳುಗಬೇಕಾದ ಬಿಂದಿಗೆಗಳು


ಮುಳುಗುತ್ತಿಲ್ಲ.


ಮುಳುಗಿದವೆಲ್ಲ ಅರ್ಧ ತುಂಬಿದವು.


 


-------------------------------


 


c v sheshadri holavanahalli


 (" ರೆಕ್ಕೆ ಗೂಡು ಆಕಾಶ " ಸಂಕಲನದಿಂದ )


 

Comments