ಅಬಲೆ..

ಅಬಲೆ..

ಕವನ

 

ಬಳಲಿಸಿವೆ ಎಡೆಬಿಡದೆ ;
ಹೊರಗೆ ಸುರಿಯುವ ಮಳೆಯು
ಕರುಳ ಕೊರೆಯುವ ಚಳಿಯು;
ಇರುಳ ಕಳೆಯುವ ಮೊದಲೆ
ಬರಸೆಳೆದೆದೆಗೆ  ಎದೆಯನು ಕೊಡುವ
ಇರುವ ದುಗುಡವ  ಕಳೆವ
ಒಲವನೀಯುವ ಇವ ಬರಬಾರದೇ?
-ಮಾಲು 
(ಸ್ಫೂರ್ತಿ: ನಲವತ್ತರ ದಶಕದ ಗಾಯಕಿ
ಅಮೀರ್ ಬಾಯ್ ಕರ್ನಾಟಕಿ ರವರ 
ಪ್ರಖ್ಯಾತ ಗೀತೆ 'ನಿನ್ನನೆ ನೆನೆಯುತೆ ರಾತ್ರಿಯ ಕಳೆದೆ...')