ಅಬ್ದುಲ್ ಕಲಾಮರಿಗೆ ಜನ್ಮ ದಿನದ ಶುಭಾಶಯಗಳು

ಅಬ್ದುಲ್ ಕಲಾಮರಿಗೆ ಜನ್ಮ ದಿನದ ಶುಭಾಶಯಗಳು

ಬರಹ

ವಯಸ್ಸು ಯಾವುದೇ ಇರಲಿ..ಕನಸುಗಳು ಸದಾ ನಿಮ್ಮೊಂದಿಗಿರಲಿ..ಆ ಕನಸುಗಳು ಎಂದೆಂದಿಗೂ ದೊಡ್ಡದಾಗಿರಲಿ... ಅಂತ ಹೇಳಿದ ನಮ್ಮ ಅಬ್ದುಲ್ ಕಲಾಂರ ಜನ್ಮ ದಿನ ಅಕ್ಟೋಬರ್ 15ರಂದು.

ಒಬ್ಬ ತಂತ್ರಜ್ಞಾನಿಯಾಗಿ, ಪ್ರಾಧ್ಯಾಪಕರಾಗಿ,ಭಾರತದ ಅಣುಬಾಂಬು ಹಾಗು ಕ್ಷಿಪಣಿಗಳ ಜನಕರಾಗಿ,ರಾಷ್ಟ್ರಪತಿಯಾಗಿ,ದೇಶದ ಏಳಿಗೆಗೆ ಸದಾ ನಮ್ಮನ್ನ ಹುರಿದುಂಬಿಸುವ, ತ್ಯಾಗರಾಜರ ಕೃತಿಯನ್ನು ಹಾಡಿ, ವೀಣೆಯನ್ನು ನುಡಿಸಿ, ಭಗವದ್ಗೀತೆಯನ್ನು ಪಠಿಸಿ, ಕುರಾನನ್ನೂ ಕೂಡ ಸಮಾನ ಶೃತಿಯಲ್ಲಿ ಹೇಳುವ ಅಪ್ಪಟ ಭಾರತೀಯ ನಮ್ಮ ಅಬ್ದುಲ್ ಕಲಾಮರಿಗೆ ಜನ್ಮ ದಿನದ ಶುಭಾಶಯಗಳು.

ಅವರ ಈ ಪುಸ್ತಕಗಳು ನಮ್ಮ ಯುವ ಜನಾಂಗಕ್ಕೆ ಸ್ಪೂರ್ಥಿಯ ಸೆಲೆಗಳಾಗಿವೆ.
1. Wings of Fire (ಅಗ್ನಿಯ ರೆಕ್ಕೆಗಳು) ಇವರ ಆತ್ಮಕಥೆ.
2. India 2020 ಕಲಾಮ್ ರವರು ೨೦೨೦ನೇ ಇಸ್ವಿಯಲ್ಲಿ ಭಾವಿ ಭಾರತವು ಹೇಗಿರಬೇಕೆಂದು ತಮ್ಮ ಕನಸನ್ನು ಬಿಚ್ಚಿಟ್ಟಿದ್ದಾರೆ.
3. ಬಿಲಿಯನ್ ಬೀಟ್ಸ್(ಇ-ಪೇಪರ್)

ಅವರ ಬಗ್ಗೆ ಹೆಚ್ಚಿನ ತಿಳಿವಿಗಾಗಿ ಈ ಲಿಂಕ್ www.abdulkalam.com

-ಸವಿತ