ಅಭಿಜ್ಞಾ ಗೌಡ ಅವರ ಭಾವಗೀತೆ

ಅಭಿಜ್ಞಾ ಗೌಡ ಅವರ ಭಾವಗೀತೆ

ಕವನ

ಮನದಭಾವದ ಮಿಳಿತ

ಭಾವದ ವೀಣೆಯು ಮೀಟಿದೆ ಹೃದಯದಿ

ಜೀವದ ತಾಣದ ಅಂಗಳದಿ

ತಾಯಿಯ ಮಡಿಲಲಿ ಕುಣಿದಿಹ ಬಂಧದಿ

ನಾನಾ ನೀನಾ ಗೊಂದಲದಿ||

 

ದಿವ್ಯತೆ ತೇರಲಿ ಸಾಗಿದೆ ಕನಸದು

ಭವ್ಯತೆ ನಾಡಲಿ ಚಿಗುರುತಿದೆ

ನವ್ಯತೆ ಕಾವ್ಯದ ವಿಶೇಷ ವಿಸ್ಮಯ

ಗಮ್ಯತೆಯಿಂದಲೆ ಮೆರೆಯುತಿದೆ||

 

ಪದವನು ಕಟ್ಟುತ ರಾಗವ ಹಾಕುತ

ಕದವನು ತಟ್ಟುತ ಹೊಮ್ಮುತಿದೆ

ವದನದ ಖುಷಿಯಲಿ ಚಿಮ್ಮಿದೆ ಸಂತಸ

ಮದನನ ರೂಪ ಚೆಲ್ಲುತಿದೆ||

 

ವೀಣೆಯ ನಾದದ ಮಿಡಿತದ ಸೊಬಗದು

ವಾಣಿಯ ಪರಿಯದು ಪಸರಿಸಿದೆ

ಕಾಣದ ಭಾವದ ತುಡಿತದ ಬೆರಗದು

ರಾಣಿಯ ಸೊಗಸನು ಹೆಚ್ಚಿಸಿದೆ||

 

ಹೃನ್ಮನ ಸೆಳೆದಿಹ ಭಾವದ ಮೇಳವು

ತನ್ಮಯಳಂತೆಯೆ ಕುಳಿತಿರುವೆ

ವಿಸ್ಮಯ ಸಿರಿಯದು ಭಾತಿಯ ತಾಳವು

ಕಣ್ಮನ ತುಂಬುತ ನಿಂತಿರುವೆ||

 

ಪ್ರಕೃತಿಯ ತಾವಡಿ ಮನಸಿಗೆ ತಂದಿದೆ

ಸುಕೃತಿ ಕಾಯಕ ಮಾಡುತಲಿ

ವಿಕೃತಿಯ ಹೆದರಿಸಿ ಧೃತಿಯನು ಹೆಚ್ಚಿಸಿ

ಆಕೃತಿ ರಾಗದಿ ಬೆಸೆಯುತಲಿ||

 

-ಅಭಿಜ್ಞಾ ಪಿ ಎಮ್ ಗೌಡ 

 

ಚಿತ್ರ್