ಅಮರರಾದಿರಿ
ಹೊಂಬಳದ ನೆಲದಲ್ಲಿ ಚೆಂಬಳಕ ಬೀರುತಲಿ
ಮೋಂಬತ್ತಿಯಂತೆ ಬೆಳಕನ್ನು ಪಸರಿಸುತಲಿ
ತಾನುರಿದು ಜಗಕೆಲ್ಲ ಪ್ರಕಾಶವನು ಹರಡುತಲಿ
ಸಾಹಿತ್ಯ ಲೋಕದಲಿ ಧ್ರುವತಾರೆಯಾಗುತಲಿ
ಕತೆಗಾರ್ತಿ ಸಾಹಿತಿ ಶಾಂತಾದೇವಿಯ ಚೆನ್ನಿಗರು
ಸುಸಂಸ್ಕೃತರು ಮೆಲುಮಾತಿನ ಕಣವಿಯವರು
ಮೃದು ಧೋರಣೆಯ ಮೆರೆದ ಸಂಪನ್ನರು
ಆರುನೂರು ಕವನಗಳ ರಚಿಸಿದ ಧೀಮಂತರು
ಕನ್ನಡ ಪರ ಹೋರಾಟದಲಿ ದುಡಿದವರು
ಗೋಕಾಕ ಚಳವಳಿಯ ಉಪಾಧ್ಯಕ್ಷರು
ಕನ್ನಡಮ್ಮನ ಕೂಸಾಗಿ ಕೈಂಕರ್ಯ ಮಾಡಿದಿರಿ
ಚಿಂತನೆಯ ಹೊಲವನ್ನು ಮಥಿಸಿ ಬೆಳಕ ಚೆಲ್ಲಿದಿರಿ
ಮಾನವತ್ವತೆಯ ಸಾರವನು ಕಾವ್ಯದಲಿ ಬಿತ್ತಿದಿರಿ
ಸಾಂಸ್ಕೃತಿಕ ಪ್ರಗತಿಶೀಲತೆಯ ಬರವಣಿಗೆಯಲಿ ತಂದಿರಿ
ಕನ್ನಡಿಗರ ಹೃದಯಕದವ ತಟ್ಟಿ ನೆಲೆಸಿದಿರಿ
ಸಾಹಿತ್ಯ ಕ್ಷೇತ್ರದ ಮೇರು ಪರ್ವತ ಎನಿಸಿದಿರಿ
ಸೃಜನಶೀಲ ಕವಿವರೇಣ್ಯರಿಗೆ ಗೌರವ ಡಾಕ್ಟರೇಟ್ ಒಲಿಯಿತು
ಸಾಹಿತ್ಯ ಅಕಾಡೆಮಿ
ನಾಡೋಜ ಪಂಪ ಪ್ರಶಸ್ತಿಮುಡಿಗೇರಿತು
ಕರ್ನಾಟಕ ಕವಿರತ್ನ ಬೇಂದ್ರೆ ಕಾವ್ಯ ಪ್ರಶಸ್ತಿ ಅರಸಿ ಬಂದಿತು
ಭಾವಜೀವಿ ಭಾವಯಾನವ ಮುಗಿಸಿ ಅಮರರಾದಿರಿ
-ರತ್ನಾ ಕೆ ಭಟ್,ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ