ಅಮರ ಪ್ರೀತಿ..

ಅಮರ ಪ್ರೀತಿ..

ಕವನ


 


ನಗು ಬಂತು ನಿನ್ನ ನೆನಪಲಿ


ಮೌನ ತುಂಬಿತು ನನ್ನ ಮನದಲಿ


ಜಗ ಮರೆತೆನು ಒಂದು ಕ್ಷಣದಲಿ


ಸ್ವರ್ಗ ಕಂಡೆನು ನಿನ್ನ ಪ್ರೀತಿಯಲಿ


ತುಂಟ ನೀನು ಮಾತಿನಲಿ


ಸ್ವರ್ಶ ಸುಖ ತಿಳಿದೆ ಸರಸದಲಿ


ಅಪ್ಪಿಕೊಂಡು ಮುದ್ದಾಡಿದೆ ಕನಸಲಿ


ಹುಣ್ಣಿಮೆಯಿತ್ತು ಚಂದ್ರಮನ ಬೆಳಕಲಿ


ನೋಟದ ನಡೆಯಿತ್ತು ಆಟದಲಿ


ಕದ್ದು ಮುತ್ತಿಟ್ಟೆ ಮೂಲೆಯಲಿ


ಮೆಲ್ಲನೆ ಕೈ ಹಿಡಿದ ಕೋಣೆಯಲಿ


ಸದ್ದಿಲ್ಲದೆ ಹೇಳಿದ ಕಿವಿಯಲಿ


ನಿನ್ನ ಉಸಿರಿದೆ ಈ ಜೀವದಲಿ


ಬಾರಿಸಿದ ವೀಣೆ ಹೃದಯದಲಿ


ತಾಳ ಹಾಕುವ ಸ್ವಚ್ಛಂದ ರಾಗದಲಿ


ಮನ ದಣಿಯಿತು ನಿನ್ನ ನೋಟದಲಿ


ಬಹಳ ಪ್ರೀತಿಸುವೆ ಜೀವನದಲಿ


ಮರೆಯದಿರು ಈ ಜನ್ಮದಲಿ


ನಾನು ನಿನ್ನವನು ನಿಜ ಪ್ರೀತಿಯಲಿ


ನಂಬು ಇದು ನನ್ನ ಕವನದಲಿ

Comments