ಅಮೆರಿಕೆಯಲ್ಲಾದ ಜನಾಂಗೀಯ ಹತ್ಯಾಕಾಂಡ
ಅಮೆರಿಕೆಯಲ್ಲಾದ ಜನಾಂಗೀಯ ಹತ್ಯಾಕಾಂಡ *************************** - ಮಂಜುನಾಥ ಅಜ್ಜಂಪುರ, 9901055998 ಅಮೆರಿಕಾ ಎಂದು ಬಹುಪಾಲು ನಾವೆಲ್ಲ ಸಂಬೋಧಿಸುವ ಈ ಗಖಂ ಎಂಬ ದೇಶವು ಒಂದು ಸ್ವರ್ಗ ಎಂಬ ಭಾವನೆ ತುಂಬ ಜನರಲ್ಲಿದೆ. ಅಮೆರಿಕಾ ಎಂದರೇ ಸಾಕು, ಅದೊಂದು ವಿಲಕ್ಷಣ ಆಕರ್ಷಣೆ, ಹುಚ್ಚು. ದೇವರು ಪ್ರತ್ಯಕ್ಷವಾಗಿ, 'ವತ್ಸಾ, ನಿನಗೇನು ಬೇಕು' ಎಂದರೆ ಬಹಳ ಜನ ಅಮೆರಿಕೆಯ ಪೌರತ್ವ ನಮ್ಮದಾಗಲಿ, ಎನ್ನಬಹುದು! ಮೊದಲಿನಿಂದಲೂ ಭಾರತವು ಶಾಂತಿಪ್ರಿಯ ದೇಶ. ಅದೂ ಅತಿ ಎನ್ನುವಷ್ಟು. ಭಾರತೀಯರು, ಭಾರತೀಯ ಸೈನಿಕರು ಶೂರರಾದರೂ, ನೂರಾರು ವರ್ಷಗಳಿಂದ ಇಲ್ಲಿನ ರಾಜಕಾರಣದ ಗುತ್ತಿಗೆ ಪಡೆದಿದ್ದವರು ಪರಮಹೇಡಿಗಳೂ - ದೇಶದ್ರೋಹಿಗಳೂ ಆದುದರಿಂದ, ಯುದ್ಧ ಗೆದ್ದರೂ ಭಾರತ ಸೋತದ್ದುಂಟು. ಉದಾಹರಣೆಗೆ, ಈ ಪಾಕಿಸ್ತಾನದೊಂದಿಗಿನ ಯುದ್ಧಗಳನ್ನೇ ನೆನಪು ಮಾಡಿಕೊಳ್ಳಬಹುದು. ಗೆದ್ದ ಭೂಭಾಗಗಳನ್ನೂ, ಉಳಿದ ಎಷ್ಟೋ ಭೂಭಾಗಗಳನ್ನೂ ನಮ್ಮ ನಾಯಕರು ಪಾಕಿಸ್ತಾನಕ್ಕೆ ಒಪ್ಪಿಸಿದರು. ಭಾರತವು ಪ್ರಜಾಪ್ರಭುತ್ವವನ್ನು ಉಳಿಸಿಕೊಂಡು ಬಂದಿದೆ. ಆದರೆ, ಪಾಕಿಸ್ತಾನದ ಇತಿಹಾಸ - ಇಸ್ಲಾಂ ಎರಡೂ ಸೇರಿ ಅಲ್ಲಿ ಪ್ರಜಾಪ್ರಭುತ್ವವೇ ಉಳಿಯದಂತೆ ಮಾಡಿಬಿಟ್ಟಿವೆ. ಆದರೂ, ಅಮೆರಿಕೆಯು ಪಾಕಿಸ್ತಾನವನ್ನೇ ಬೆಂಬಲಿಸುತ್ತಾ ಬಂದಿದೆ! ಪ್ರಜಾಪ್ರಭುತ್ವವಿರುವ, ಪ್ರಜಾಪ್ರಭುತ್ವದ ಪರ ತಾನಿದ್ದೇನೆ ಎಂದು ನಾಟಕವಾಡುವ ಈ ಅಮೆರಿಕೆಯು ಪಾಕಿಸ್ತಾನದಂತಹ ಭಯೋತ್ಪಾದಕ ದೇಶ, ಮತಾಂಧ ದೇಶ, ಅರಾಜಕತೆಯ ದೇಶಕ್ಕೆ ಬೆಂಬಲ ನೀಡುತ್ತಿರುವುದಾದರೂ ಏಕೆ? ಅಷ್ಟೇಕೆ, ವಿಯೆಟ್ನಾಮಿನಲ್ಲಿ - ಕೊರಿಯಾದಲ್ಲಿ - ಕುವೈತ್ನಲ್ಲಿ - ಇರಾಕ್ನಲ್ಲಿ - ಮತ್ತೊಂದೆಡೆ ಮೂಗು ತೂರಿಸುತ್ತಿರುವುದಾದರೂ ಏಕೆ? ಉತ್ತರ ಸರಳ. ಆರು ಶತಮಾನಗಳ ಹಿಂದೆ ಅಮೆರಿಕಕ್ಕೆ ಹೋದವರು ಯೂರೋಪಿನ ಕಡಲ್ಗಳ್ಳರು, ಲೂಟಿಕೋರರು. ಅವರ ಸಂತತಿಯೇ ಅಲ್ಲಿ ವಿಷವೃಕ್ಷದಂತೆ, ಪಾಪಾಸುಕಳ್ಳಿಯಂತೆ ಬೆಳೆದಿದೆ. ಅವರಿಗೆ ಅದೇ ಲೂಟಿ ಮಾಡುವ ದೋಚುವ ಬುದ್ಧಿ. ಇನ್ನೊಬ್ಬರ ಮನೆ ಮುರಿಯುವ ದುಬರ್ುದ್ಧಿ. ಸುಮ್ಮನಿರುವವರ ಮೇಲೆಯೂ ಎರಗುವ ಮನೆಹಾಳು ಸ್ವಭಾವ. 15-16ನೆಯ ಶತಮಾನಗಳಲ್ಲಿ, ಈ ಯೂರೋಪು ಇದ್ದುದಾದರೂ ಹೇಗೆ? ಪ್ಲೇಗು, ಸಿಡುಬು, ಡಿಫ್ತೀರಿಯಾ, ಟೈಫಾಯಿಡ್, ಫ್ಲೂಗಳಂತಹ ಸಾಂಕ್ರಾಮಿಕ ರೋಗಗಳು ಬಂದವು ಎಂದರೆ, ಯೂರೋಪಿನ ಪಟ್ಟಣಗಳ-ನಗರಗಳ 10 ರಿಂದ 20 ಶತಾಂಶ ಜನರು (ಪ್ರತಿ ಪಿಡುಗಿನಲ್ಲಿಯೂ) ಸಾಯುತ್ತಿದ್ದರು. ಆರ್.ಪಿ.ಆರ್.ಮೋಲ್ಸ್ ಎಂಬ ವಿದ್ವಾಂಸನು ತನ್ನ ``ಪಾಪ್ಯುಲೇಶನ್ ಇನ್ ಯೂರೋಪ್ 1500-1700'' (1973, ಪುಟ 49) ಎಂಬ ಗ್ರಂಥದಲ್ಲಿ ಗ್ರ್ರಾಮಾಂತರ ಪ್ರದೇಶಗಳಿಂದ ಈ ನಗರಗಳಿಗೆ ಜನರು ವಲಸೆ ಬರಲೇಬೇಕಿತ್ತು. ಇಲ್ಲದಿದ್ದರೆ ಈ ನಗರಗಳೇ ಖಾಲಿಯಾಗಿ ಪಾಳು ಬೀಳುತ್ತಿದ್ದವು, ಎಂದು ದಾಖಲಿಸಿದ್ದಾನೆ. ಪ್ರತಿ 25-30 ವರ್ಷಗಳಿಗೊಮ್ಮೆ, ಇಂತಹ ಅಂಟುಜಾಡ್ಯಗಳು ವಕ್ಕರಿಸಿ ಭಾರೀ ಹಾನಿಯುಂಟುಮಾಡುತ್ತಿದ್ದವು. ಅಷ್ಟೇ ಅಲ್ಲ, ವಿಶ್ವಾದ್ಯಂತವೂ ಈ ಮಾರಕ ರೋಗಗಳು ಅಪಾರ ನಷ್ಟವನ್ನು ಉಂಟುಮಾಡಿದವು. ಅದಿರಲಿ, ಇಂದಿಗೂ ಈ ರೋಗಗಳ ವಿಷಕ್ರಿಮಿಗಳನ್ನು ಪ್ರಯೋಗಶಾಲೆಗಳಲ್ಲಿ ``ಉಳಿಸಿ-ಬೆಳೆಸಿ'' ಜೀವರಸಾಯನಿಕ ಶಸ್ತ್ರಾಸ್ತ್ರಗಳನ್ನು ಸಿದ್ಧವಾಗಿಟ್ಟುಕೊಂಡಿರುವ ಈ ದೇಶಗಳಿಗೆ, ಅವುಗಳ ಸೂತ್ರಧಾರರಿಗೆ, ಅವರ ಕೊಳಕು ಮನಸ್ಸುಗಳಿಗೆ ಏನು ಹೇಳೋಣ! ಅವರ ಮನಸ್ಸುಗಳಲ್ಲಿರುವ ವಿಷಕ್ರಿಮಿಗಳು ನಾಶವಾಗಲಿ ಎಂದು ಪ್ರಾಥರ್ಿಸುವುದಷ್ಟೇ ಉಳಿದಿರುವುದು. ಅಂದಿನ ಆ ಕಾಲಘಟ್ಟದಲ್ಲಿ ಕ್ಷಾಮದ ಹಾವಳಿಯೂ ವಿಪರೀತ. ಡೇವಿಡ್ ಆರ್. ವೇಅರ್ ಎಂಬ ಲೇಖಕನು, ತನ್ನ ಮಾಕರ್ೆಟ್ಸ್ ಅಂಡ್ ಮಾಟರ್ಾಲಿಟಿ ಇನ್ ಫ್ರಾನ್ಸ್ 1600-1789 ಎಂಬ ಗ್ರಂಥದಲ್ಲಿ (1989 ಪ್ರಕಟಣೆ, ಪುಟ 229), ಶ್ರೀಮಂತರು ಬೇಕೆಂದೇ ಹಸಿದ ಸಾವಿರಾರು ಜನ ಬಡವರ ಮುಂದೆ ತಿನ್ನುತ್ತಿದ್ದರು, ಬರೀ ತಿನ್ನುವುದಲ್ಲ, ವಿಪರೀತ ತಿಂದು ಹೊಟ್ಟೆ ಉರಿಸುತ್ತಿದ್ದರು. ಆಹಾರ ಪದಾರ್ಥಗಳ ಬೆಲೆ ಪ್ರತಿಬಾರಿ ಏರಿದಾಗಲೂ ಲಕ್ಷಾಂತರ ಜನ ಹಸಿವಿನಿಂದ ಸಾಯುತ್ತಿದ್ದರು. ಎಷ್ಟೆಂದರೆ, ಅಮೆರಿಕದ ಅಂತಯರ್ುದ್ಧಗಳಲ್ಲಿ ಮೃತರಾದವರ ಸಂಖ್ಯೆಯ ಎರಡರಷ್ಟು ಜನ, ಫ್ರಾನ್ಸ್ ದೇಶದಲ್ಲಿ, ಪ್ರತಿಬಾರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದಾಗಲೂ ಹಸಿವಿನಿಂದ ಸಾಯುತ್ತಿದ್ದರು. 1482ರಲ್ಲಿ, ಪ್ಯಾರಿಸ್ನಲ್ಲಿ ಹೇಗೆ ಸಾಂಕ್ರಾಮಿಕ ರೋಗಗಳು ಹರಡಿದವೆಂದರೆ, ಹಳ್ಳಿಗಳಿಂದ ಹಸಿವಿನಿಂದ ಕಂಗಾಲಾದ ಅದೆಷ್ಟು ಜನ ವಲಸೆ ಬರುತ್ತಿದ್ದರು ಎಂದರೆ, ಅಪೌಷ್ಟಿಕತೆಯಿಂದ ಎಷ್ಟೊಂದು ಜನರು ತೊಂದರೆಗೊಳಗಾದರೆಂದರೆ, ಇಂದಿಗೂ ಇತಿಹಾಸಕಾರರಿಗೆ ಆ ಕಾಲಘಟ್ಟದ ಪೂರ್ಣ ವಿವರಗಳ ವಿಶ್ಲೇಷಣೆ ಸಾಧ್ಯವಾಗಿಲ್ಲ''. ಏಕೆಂದರೆ ದಾಖಲಿಸುವವರು-ಇತಿಹಾಸಕಾರರು ಸಹ ಸತ್ತುಹೋದರು. ನಮ್ಮ ದುಬರ್ುದ್ಧಿಜೀವಿಗಳು, ಮೆಕಾಲೆ ಸಂತಾನ, ಭಾರತವನ್ನು ಯೂರೋಪಿನಂತೆ - ಅಮೆರಿಕದಂತೆ ಪರಿವತರ್ಿಸಲು ಕಾಯುತ್ತಿರುವ ಹರಿಕಾರರು ದಯಮಾಡಿ, ಆ ದೇಶಗಳ - ಆ ಖಂಡಗಳ ಆ ಅವಧಿಯ ಇತಿಹಾಸವನ್ನು ಓದಬೇಕು. ಲಾರೆನ್ಸ್ ಸ್ಟೋನ್, ತನ್ನ ದ ಫ್ಯಾಮಿಲಿ, ಸೆಕ್ಸ್ ಅಂಡ್ ಮ್ಯಾರೇಜ್ ಇನ್ ಇಂಗ್ಲೆಂಡ್, 1500-1800 (1977, ಪುಟಗಳು 77-78) ಗ್ರ್ರಂಥದಲ್ಲಿ ದಾಖಲಿಸಿರುವ ಅಂಶಗಳು ಗಾಬರಿ ಹುಟ್ಟಿಸುತ್ತವೆ. 15ನೆಯ ಶತಮಾನದಲ್ಲಿ ಇಂಗ್ಲೆಂಡೂ ಸೇರಿದಂತೆ ಅನೇಕ ಕಡೆ ತುಂಬಿ ಚೆಲ್ಲುವ ಸಾರ್ವಜನಿಕ ಪಾಯಿಖಾನೆಗಳು, ನಾರುವ ಚರಂಡಿಗಳಿಂದ ರಸ್ತೆಗಳಲ್ಲಿ ಹರಿಯುವ ಕೊಳಚೆ, ಬಹಳ ದೊಡ್ಡ ಸಮಸ್ಯೆಗಳಾಗಿದ್ದವು. ಲಾರೆನ್ಸ್ ಚಿತ್ರಿಸಿರುವ ಲಂಡನ್ ನಗರದ ವಿವರಗಳನ್ನು ನಂಬುವುದೇ ಕಷ್ಟವಾಗುತ್ತದೆ. ನೂರಾರು ವರ್ಷಗಳಿಂದ ನಮ್ಮ ಶಾಲಾ ಕಾಲೇಜುಗಳಲ್ಲಿ, ವಿಶ್ವವಿದ್ಯಾನಿಲಯಗಳಲ್ಲಿ ಈ ಅಮೆರಿಕಾ - ಯೂರೋಪ್ಗಳು ಮುನ್ನೂರು ಕೋಟಿ ವರ್ಷಗಳಿಂದಲೂ ಭೂಮಿಯ ಮೇಲಿನ ಸ್ವರ್ಗಗಳಾಗಿಯೇ ಮುಂದುವರಿದುಕೊಂಡು ಬಂದಿವೆ ಎಂಬುದನ್ನು ಕೇಳಿ ಕೇಳಿ, ಸತ್ಯಸಂಗತಿಗಳಿಗೆ ನಾವು ಮುಕ್ತವಾಗಿ ತೆರೆದುಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಸತ್ತ-ಸಾಯಿಸಿದ ಕೊಳೆತ ಪ್ರಾಣಿಗಳು ರಸ್ತೆರಸ್ತೆಗಳಲ್ಲಿ ಕಾಣುತ್ತ್ತಿದ್ದವು. ಬಡವರ ಗುಂಡಿಗಳು ಎಂದೇ ಕುಖ್ಯಾತವಾಗಿದ್ದ ದೊಡ್ಡ-ಆಳವಾದ ತೆರೆದ ಗುಂಡಿಗಳಲ್ಲಿ ಬಡವರ ದೇಹಗಳನ್ನು ಎಸೆಯಲಾಗುತ್ತಿತ್ತು. ಅಂತಹ ಭಯಾನಕ ಗುಂಡಿ ತುಂಬಿದಾಗ ಅದರ ಮೇಲೆ ಮಣ್ಣು ಹಾಕಲಾಗುತ್ತಿತ್ತು. ಅಂತಹ ಗುಂಡಿಗಳಿಂದ ಮಳೆಗಾಲದಲ್ಲಿ ಹೊಮ್ಮುತ್ತಿದ್ದ ದುವರ್ಾಸನೆಯೂ ಸೇರಿ ಬಹಳ ಭೀಭತ್ಸವಾಗಿರುತ್ತಿತ್ತೆಂದು ಲಾರೆನ್ಸನು ಬರೆದಿದ್ದಾನೆ. ಎಷ್ಟೋ ಜನರು ಜೀವಮಾನದಲ್ಲಿ ಒಮ್ಮೆಯೂ ಸ್ನಾನ ಮಾಡಿರಲಿಲ್ಲ. ಸಿಡುಬು, ಅಲ್ಸರ್ಹುಣ್ಣು, ಎಕ್ಸಿಮಾ, ಕಜ್ಜಿ ಮುಂತಾದ ರೋಗಗಳಿಂದ ವಿಕಲಾಂಗರಾದ, ಕುರುಡರಾದ ಜನರಿಂದ ಯೂರೋಪ್ ಖಂಡವು ತುಂಬಿಹೋಗಿತ್ತು. ಇಂತಹ ಸ್ಥಿತಿಯು ತುಂಬ ವರ್ಷಗಳ ಕಾಲ (ಅದೇ ಗ್ರ್ರಂಥದ ಪುಟ 487) ಇದ್ದಿತು. ತನ್ನ ಕೃಷಿ ಆಧಾರಿತ ಸಮೃದ್ಧಿಯಿಂದ, ತುಂಬಿ ಹರಿಯುವ ನದಿಗಳಿಂದ, ತನ್ನ ವಿಶಿಷ್ಟ ಸಂಸ್ಕೃತಿ-ಪರಂಪರೆಗಳಿಂದ ಪರಿಶೋಭಿಸಿದ್ದ ಭಾರತದ ಮೇಲೆ ದಾಳಿಯಿಟ್ಟ ಈ ಯೂರೋಪ್ ಮೂಲದ ಆಕ್ರಮಣಕಾರಿಗಳು, ಕಡಲ್ಗಳ್ಳರು ಈ ದೇಶವನ್ನೇ ರೋಗರುಜಿನಗಳ - ಬಡತನದ ಕೂಪವನ್ನಾಗಿ ಮಾಡಿ, ಇಲ್ಲಿನ ಎಲ್ಲ ಐಶ್ವರ್ಯವನ್ನೂ ಲೂಟಿ ಮಾಡಿಬಿಟ್ಟರು. ಅವರ ಕೊಡುಗೆ ಎಂದರೆ, ಈ ದರಿದ್ರದ ಸಾಂಕ್ರಾಮಿಕ ರೋಗಗಳೇ. ಯೂರೋಪಿನೆಲ್ಲೆಡೆಯಿದ್ದಂತಹ ಹಳ್ಳಿಗಳ ಚಿತ್ರವು ಇಂಗ್ಲೆಂಡಿನಲ್ಲಿಯೂ ಇದ್ದಿತೆಂದು ಲಾರೆನ್ಸನು ಬರೆದಿದ್ದಾನೆ. 17ನೆಯ ಶತಮಾನದಲ್ಲಿ ಸಾಮಾಜಿಕ ಮೌಲ್ಯಗಳು, ರೀತಿನೀತಿಗಳು ಮಾಯವಾಗಿ ದ್ವೇಷ-ಸೇಡುಗಳೇ ತುಂಬಿಕೊಂಡಿದ್ದವು. ಜನರೆಲ್ಲಾ ಒಟ್ಟಾಗುತ್ತಿದ್ದುದು ಯಾವುದೋ ಮಾಟಗಾತಿಯನ್ನು ಹಿಂಸಿಸಿ ಕೊಲ್ಲುವಾಗ ಮಾತ್ರ. ಇಂಗ್ಲೆಂಡಿನಲ್ಲಿ ಮಾತ್ರವೇ ಅಲ್ಲ, ಇಡಿಯ ಯೂರೋಪಿನಲ್ಲಿ ಜನಸಂಖ್ಯೆಯ ಮೂರನೆಯ ಒಂದು ಭಾಗದಷ್ಟು ಜನರು ಮಾಟ-ಮದ್ದುಗಳಲ್ಲಿ ನಿರತರಾಗಿರುತ್ತಿದ್ದರು. ಪ್ರತಿವರ್ಷ ನೂರರಲ್ಲಿ ಹತ್ತು ಜನರಾದರೂ ಈ ಕಾರಣಕ್ಕೆ ನೇಣಿಗೇರುತ್ತಿದ್ದರು. 16-17ನೆಯ ಶತಮಾನದಲ್ಲಿ (ಇದ್ದುದರಲ್ಲಿ ಪರವಾಗಿಲ್ಲ ಎನ್ನುವಂತಹ ದೇಶವಾದ) ಸ್ವ್ವಿಟ್ಜಲರ್ೆಂಡಿನಲ್ಲಿಯೇ ಸೈತಾನನ ಮಾರ್ಗದ ದುಷ್ಕಾರ್ಯಗಳಲ್ಲಿ ತೊಡಗಿದ್ದ 3,300 ಜನರನ್ನು ಕೊಂದುಹಾಕಿದ ದಾಖಲೆಗಳು ದೊರೆತಿವೆ. ಒಂದೇ ವರ್ಷದಲ್ಲಿ ವೀಸೆನ್ಸ್ಟೀಗ್ ಎಂಬ ಹಳ್ಳಿಯಲ್ಲಿ 63 ಜನ ಮಾಟಗಾತಿಯರನ್ನು ಜೀವಂತ ಸುಡಲಾಯಿತು. ದ ಪೂರ್ ಆಫ್ ಎಯ್ಟೀನ್ತ್ ಸೆಂಚುರಿ ಆಫ್ ಫ್ರಾನ್ಸ್ ಎಂಬ ಗ್ರಂಥದಲ್ಲಿ (1750ರಿಂದ 1789ರ ಅವಧಿ, ಗ್ರ್ರಂಥ ಪ್ರಕಟಣೆ 1974, ಪುಟಗಳು 18-20), ಲೇಖಕ ಅಲ್ವೆನ್ ಹೆಚ್. ಹಫ್ಟನ್ನು, ಒಟ್ಟು ಪ್ರಜಾಸಂಖ್ಯೆಯ ಶೇಕಡಾ 90 ರಷ್ಟು ಜನರಿಗೆ ಭೂಮಿಯಿರಲಿಲ್ಲ, ಸಾಲದಲ್ಲಿ ಮುಳುಗಿದ್ದರು, ಹಸಿವಿನಿಂದ ಸಾಯುತ್ತಿದ್ದರು, ವಲಸೆ ಹೋಗುತ್ತಿದ್ದರು ಎಂದಿದ್ದಾನೆ. ಚಳಿಗಾಲದಲ್ಲಿ ಶೈತ್ಯಾಧಿಕ್ಯದಿಂದ ಸಾಯುವ ಬದಲು ಜನರು ಗುಲಾಮರಾಗಿ ತಮ್ಮನ್ನು ತಾವೇ ಮಾರಿಕೊಳ್ಳುತ್ತಿದ್ದರು. ಬೇಸಿಗೆ ಕಾಲದಲ್ಲಿ ಪ್ಲೇಗಿನಂತಹ ಭಯಾನಕ ಪಿಡುಗುಗಳ ಕಾಟ. ಲೇಖಕ ಬ್ರಾಡೆಲ್ಲನು ರೋಮ್ ಮತ್ತು ಬೇರೆಬೇರೆ (ಯೂರೋಪಿನ) ನಗರಗಳು ಬೇಸಿಗೆಯಲ್ಲಿ ಪ್ಲೇಗ್ ಜ್ವರದಿಂದ ಸ್ಮಶಾನಗಳಾಗುತ್ತಿದ್ದವು, ಎಂದು ದಾಖಲಿಸಿದ್ದಾನೆ. ಈ ಅವಧಿಯಲ್ಲಿ, ಯೂರೋಪಿನಲ್ಲಿ ಹುಟ್ಟುತ್ತಿದ್ದ ಮಕ್ಕಳಲ್ಲಿ ಅರ್ಧ ಜನ, ಗಮನಿಸಿ, ಶೇಕಡಾ 50ರಷ್ಟು ಮಕ್ಕಳು 10 ವರ್ಷ ವಯಸ್ಸನ್ನು ತಲುಪುವ ಮೊದಲೇ ಅಪೌಷ್ಟಿಕತೆಯಿಂದ - ರೋಗಗಳಿಂದ ಸಾಯುತ್ತಿದ್ದರು. ಮೈಕೆಲ್ ಡಬ್ಲ್ಯು.ಫ್ಲಿನ್ ಎಂಬ ಗ್ರಂಥಕರ್ತನು, ತನ್ನ ದಿ ಯೂರೋಪಿಯನ್ ಡೆಮೋಗ್ರಾಫಿಕ್ ಸಿಸ್ಟಮ್ 1500-1820 ಎಂಬ ಕೃತಿಯಲ್ಲಿ (ಪ್ರಕಟಣೆ 1981, ಪುಟಗಳು 16-17) ಇಂಗ್ಲೆಂಡಿಗಿಂತ ಸ್ಪೇನ್ ದೇಶದಲ್ಲಿ ಶೇಕಡಾ 40ಕ್ಕಿಂತ ಹೆಚ್ಚು ಸಂಖ್ಯೆಯ ಅಪ್ರಾಪ್ತ ವಯಸ್ಸಿನ ಮಕ್ಕಳು ಸಾಯುತ್ತಿದ್ದರು, ಎಂದಿದ್ದಾನೆ. ಸ್ಪೇನ್ನಲ್ಲಿ ಶೇಕಡಾ 30ರಷ್ಟು ಮಕ್ಕಳು ಒಂದು ವರ್ಷ ಸಹ ಬದುಕುತ್ತಿರಲಿಲ್ಲ. ಸಾವಿರ, ಸಾವಿರ ಮಕ್ಕಳು ರಸ್ತೆ ಬದಿಯ ಗುಂಡಿಗಳಲ್ಲಿ - ತಿಪ್ಪೆಗಳಲ್ಲಿ ನಿರ್ಗತಿಕರಾಗಿ ಸಾಯುತ್ತಿದ್ದರು. ಡೇವಿಡ್ ಇ. ಸ್ಟ್ಯಾನಾರ್ಡನೆಂಬ ಲೇಖಕನು ಅಮೆರಿಕನ್ ಹೋಲೋಕಾಸ್ಟ್ (ಆಕ್ಸ್ಫಡರ್್ ಯೂನಿವಸರ್ಿಟಿ ಪ್ರೆಸ್, 1992ರಲ್ಲಿ ಪ್ರಕಟಣೆ) ಎಂಬ ಗ್ರ್ರಂಥದಲ್ಲಿ ಈ ಎಲ್ಲ ದಾಖಲೆಗಳ ವಿವರ ನೀಡಿದ್ದಾನೆ. ಭಾರತದಂತಹ ದೇಶಗಳನ್ನು ಲೂಟಿ ಮಾಡಿದ, ಹಾಳು ಮಾಡಿದ ಈ ಯೂರೋಪಿಯನ್ ದಾಳಿಕೋರರ ಬಗ್ಗೆ ನಾವು ಒಂದಿಷ್ಟು ತಿಳಿದುಕೊಂಡಿರಬೇಕು, ಎಂಬ ಕಾರಣಕ್ಕೆ ಈ ಎಲ್ಲ ಭೀಭತ್ಸ ವಿವರಗಳನ್ನು ತಿಳಿಸಬೇಕಾಯಿತು. ಬರೀ ಅಸತ್ಯ, ಅನೃತಗಳೇ ಐತಿಹಾಸಿಕ ಪಠ್ಯಗಳಾಗಿ ನಮ್ಮನ್ನು ಈವರೆಗೆ ಪ್ರಭಾವಿಸಿವೆ. ಇನ್ನಾದರೂ, ಸತ್ಯದ ಪ್ರಮುಖ ಸಾಕ್ಷ್ಯಾಧಾರಗಳು ಓದುಗರಿಗೆ ದೊರೆಯಬೇಕೆಂಬ ಅಪೇಕ್ಷೆಯಿಂದ ಇದನ್ನೆಲ್ಲ ಅನಿವಾರ್ಯವಾಗಿ ಬರೆಯಬೇಕಾಗಿ ಬಂದಿತು. ಸಮಾಜದಲ್ಲಿ ಬ್ರೋಕರ್ಗಳು, ಸಮಯಸಾಧಕರು, ದೇಶದ್ರೋಹಿಗಳು, ಸಮಾಜದ್ರೋಹಿಗಳು ಇರುತ್ತಾರೆ. ಕೊಲಂಬಸ್, ವಾಸ್ಕೋಡ ಗಾಮರಂತಹ ಕಡಲ್ಗಳ್ಳರನ್ನು ವೈಭವೀಕರಿಸಿ ಅವರು ಕಾಲಿಟ್ಟ, ಕೈಯಿಟ್ಟ ತಾರೀಖುಗಳನ್ನು ಹುಡುಕಿ ತಿಥಿ ಮಾಡಲು, ಆ ಮೂಲಕ ಹಣ ಮಾಡಿಕೊಳ್ಳಲು ಇಂತಹವರು ಕಾದಿರುತ್ತಾರೆ. ಮೇ 1498ರಲ್ಲಿ, ಕೇರಳದ ಕೋಜಿಕೊಡೆಗೆ (ಕಲ್ಲಿಕೋಟೆ) ಈ ವಾಸ್ಕೋಡ ಗಾಮಾ ಬಂದಿಳಿದ. ಹತ್ತಾರು ಸಾವಿರ ವರ್ಷಗಳ ಭವ್ಯ ಪರಂಪರೆಯ ಭಾರತವನ್ನು ಈ ಕಡಲ್ಗಳ್ಳ ಕಂಡುಹಿಡಿದನೆಂದು, ಮೆಕಾಲೆ ಮಕ್ಕಳು ವಾದಿಸುವುದೂ ಉಂಟು. 1998ರಲ್ಲಿ ಈ ವಾಸ್ಕೋಡ ಗಾಮಾ ಭೇಟಿಯ ಐದನೆಯ ಶತಮಾನೋತ್ಸವಕ್ಕೂ ಕೆಲವು ಜನ ಬ್ರೋಕರ್ಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಊರಿನ ಜನ, ದೇಶದ ಜನ, ಎಲ್ಲಾ ಉಗಿದು ಉಪ್ಪಿನಕಾಯಿ ಹಾಕಿದ ಮೇಲೆ, ಪಾಪ, ಇಂತಹ ಉತ್ಸವಾಚರಣೆಗಳನ್ನು ನಿಲ್ಲಿಸಿದರು. ಇಂದಿನಂತೆ, ಅಂತರಜಾಲ, ಫೇಸ್ಬುಕ್, ಮಿಂಚಂಚೆಗಳಿದ್ದಿದ್ದರೆ ಈ ಬ್ರೋಕರ್ಗಳು ಇನ್ನೆಷ್ಟು ಉಗಿಸಿಕೊಳ್ಳುತ್ತಿದ್ದರೋ. ವಾಸ್ಕೋಡ ಗಾಮಾ, ಕೊಲಂಬಸ್ರಂತಹವರ ಬಗೆಗೆ ಪಾಶ್ಚಾತ್ಯರೇ ತುಂಬ ದಾಖಲೆಗಳನ್ನು ನೀಡಿದ್ದಾರೆ, ಗ್ರಂಥರಚನೆ ಮಾಡಿದ್ದಾರೆ. ಚಚರ್್ಗಳಿರುವುದೇ ಶಾಂತಿಪ್ರಸಾರಕ್ಕೆ, ಪೋಪ್ ಇರುವುದೇ ಕರುಣೆಯ ಸಂಕೇತವಾಗಿ ಎನ್ನುವ ಅಜ್ಞರು, ದಯವಿಟ್ಟು ಈ ಗ್ರಂಥಗಳನ್ನು ಓದಬೇಕು. ಆ ಕಾಲಘಟ್ಟದಲ್ಲಿ ಕ್ರೈಸ್ತರ ಪರಮತ-ದ್ವೇಷ ಮಿತಿಮೀರಿಹೋಗಿತ್ತು. ಟಿಡಣಣಠಟಿ (ಇನ್ಕ್ವಿಸಿಷನ್) ಎಂಬುದು ಪರಮತೀಯರನ್ನು ದಂಡನೆಗೆ ಗುರಿ ಮಾಡುವ, ಹಿಂಸಾವಿಚಾರಣೆಗೆ ಗುರಿಪಡಿಸುವ ಕ್ರೂರವಿಧಾನವಾಗಿತ್ತು. ಬಾಸ್ವೆಲ್ಲನ ಕೈಂಡ್ನೆಸ್ ಆಫ್ ಸ್ಟ್ರೇಂಜರ್ಸ್ ಕೃತಿಯಲ್ಲಿ (ಪುಟ 406) 1492 ರಲ್ಲಿ ಕೊಲಂಬಸ್ನು ಸ್ಪೇನ್ ದೇಶದಿಂದ 1,20,000 ದಿಂದ 1,50,000 ದಷ್ಟು ಸಂಖ್ಯೆಯ ಯಹೂದಿಗಳನ್ನು ಸಮುದ್ರಕ್ಕೆ ಎಸೆದು ಕೊಂದ ವಿವರಗಳಿವೆ. ಅದಕ್ಕೂ ಮೊದಲು ಆ ಯಹೂದಿಗಳ ಬಳಿಯಿದ್ದ ಬೆಲೆಬಾಳುವ ವಸ್ತುಗಳನ್ನು ಕಿತ್ತುಕೊಂಡರಂತೆ. ಬಾತರ್ೊಲೋಮಿ ಸೆನರೇಗಾ ಎಂಬ ಪ್ರತ್ಯಕ್ಷದಶರ್ಿಯು ಆ ಯಹೂದಿಗಳ ಪ್ರಲಾಪವನ್ನು-ಸಂಕಟವನ್ನು ನೋಡಲಾಗುತ್ತಿರಲಿಲ್ಲ, ಎಂದಿದ್ದಾನೆ. ಹಸುಕಂದಗಳು, ಅವುಗಳ ತಾಯಂದಿರು ಹಸಿವಿನಿಂದಲೇ ಸತ್ತುಹೋದರು. ಮಡಿಲಿನಲ್ಲಿ ಮಕ್ಕಳಿದ್ದಂತೆಯೇ ಇಂತಹ ಎಷ್ಟೋ ತಾಯಂದಿರು ಸಾಯಬೇಕಾಯಿತು. ಇವರೆಲ್ಲರ ಬಗೆಗೆ (ಕೊಲಂಬಸ್ನ ತಂಡದವರು) ತುಂಬ ಕ್ರೂರಿಗಳಾಗಿದ್ದರು. ಹಣದಾಸೆಯ ನಾವಿಕರು ಇವರೆಲ್ಲರನ್ನೂ ದೋಚಿದ ಮೇಲೆ, ಸಮುದ್ರಕ್ಕೆ ಎಸೆದು ಕೊಂದುಹಾಕಿದರು, ಎಂದಿದ್ದಾನೆ ಆ ಪ್ರತ್ಯಕ್ಷದಶರ್ಿ. ನಾವು ಕ್ರೂರಿ ಹಿಟ್ಲರನ ಬಗೆಗೆ ಕೇಳಿರುತ್ತೇವೆ. ಆದರೆ, ಕೊಲಂಬಸ್ನ ಬಗೆಗೆ ಏನೂ ಓದಿಕೊಂಡಿಲ್ಲ. ನ್ಯೂಯಾಕರ್್ನ `ದ ಹೆರಿಟೇಜ್ ಪ್ರೆಸ್' ಸಂಸ್ಥೆಯು 1963ರಲ್ಲಿ, ಕೊಲಂಬಸ್ನು ತನ್ನ ಮೊದಲ ಸಮುದ್ರಸಾಹಸದ (1493 ರಲ್ಲಿ) ಬಗೆಗೆ ತನ್ನ `ಕಿಂಗ್'ಗಳಿಗೆ ಬರೆದ ಪತ್ರವನ್ನು ಉಳಿದ ದಾಖಲೆಗಳೊಂದಿಗೆ ಪ್ರಕಟಿಸಿದೆ: ಜುವಾನಾ ಮತ್ತು ಇತರ ಎಲ್ಲ ದ್ವೀಪಗಳು ತುಂಬ ಸಮೃದ್ಧವಾಗಿದ್ದವು. ಎತ್ತರವಾದ ಮರಗಳು, ಬೆಟ್ಟಗುಡ್ಡಗಳು, ತುಂಬ ವೈವಿಧ್ಯದ ಹಣ್ಣುಗಳು, ಹೂವುಗಳು, ಇತ್ಯಾದಿ ನೋಡಿದೆ. ನವೆಂಬರ್ 1492ರಲ್ಲಿ ನಾನು ಅಲ್ಲಿಗೆ ಭೇಟಿ ನೀಡಿದಾಗ ಸಾವಿರಾರು ಬಗೆಯ ಪಕ್ಷಿಗಳ ಕಲರವ ಕೇಳಿದೆ. ತುಂಬಿ ಹರಿಯುವ ನದಿಗಳ ದಡದಲ್ಲಿ ಚಿನ್ನ ನೋಡಿದೆ. ಅನೇಕ ಬಗೆಯ ಜಾನುವಾರುಗಳು, ಜನ, ಪಟ್ಟಣಗಳು, ಹಳ್ಳಿಗಳು. ಅಲ್ಲಿನ ಬಂದರುಗಳು ಹೇಗಿದ್ದವು ಎಂದು ವಣರ್ಿಸಿದರೆ, ನೋಡದೆಯೇ ನೀವು ನಂಬಲಾರಿರಿ. ಇಲ್ಲಿನ (ಮೂಲನಿವಾಸಿಗಳು) ಜನರು ನಗ್ನರಾಗಿದ್ದರು. ಕೆಲವರು ಹೆಂಗಸರು ಮಾತ್ರ, ತಮ್ಮ ಗುಪ್ತಾಂಗವನ್ನು ಎಲೆಗಳಿಂದ ಮುಚ್ಚಿಕೊಂಡಿದ್ದರು. ಎಲ್ಲರೂ ದೃಢಕಾಯರಾಗಿದ್ದರು, ಸುಂದರವಾಗಿದ್ದರು. ಆದರೆ ಅವರಲ್ಲಿ ಯಾರಿಗೂ ಆಯುಧಗಳ, ಶಸ್ತ್ರಾಸ್ತ್ರಗಳ, ಉಕ್ಕಿನ ಪರಿಚಯವೇ ಇರಲಿಲ್ಲ. ಅವರ ಬಳಿಯಿದ್ದುದನ್ನು ನಾವು ಯಾರು ಏನು ಕೇಳಿದರೂ ಕೊಟ್ಟುಬಿಡುತ್ತಿದ್ದರು. ಅವರಿಗೆ ಇಲ್ಲ ಎಂದು ಹೇಳಿಯೇ ಗೊತ್ತಿಲ್ಲ. ಬದಲಿಗೆ ಅವರೇ ಕರೆದು ಕರೆದು ತಮ್ಮ ಬಳಿ ಇರುವುದನ್ನು ಹಂಚುವಂತಹವರು. ಪ್ರೀತಿಪೂರ್ವಕವಾದ ನಡವಳಿಕೆಯ ಈ ಜನರಲ್ಲಿ ಸಂತೃಪ್ತಿಯ ಭಾವ ಸೂಸುತ್ತಿತ್ತು (ಪುಟ 182-183). ಕೊಲಂಬಸ್ನ ಈ ದೀರ್ಘ ಪತ್ರವು - ವರದಿಯು ಮುದ್ರಿತವಾಯಿತು, ಅನೇಕ ಭಾಷೆಗಳಿಗೆ ಭಾಷಾಂತರಗೊಂಡಿತು, ಆ ಭಾಷೆಗಳಲ್ಲೂ ಮುದ್ರಿಸಲ್ಪಟ್ಟಿತು. ತೀರತೀರ ಕೆಟ್ಟ ಸ್ಥಿತಿಯಲ್ಲಿದ್ದ ಯೂರೋಪಿಯನ್ನರಿಗೆ ಮೇಲಿನ ಈ ದ್ವೀಪಗಳು ಸ್ವರ್ಗದಂತೆ ಕಂಡವು. ಮುಂದೆ ಆದ ದಾಳಿಗಳಿಗೆ, ಲೂಟಿಗಳಿಗೆ ಇತಿಮಿತಿಯಿಲ್ಲ. ಸ್ಪಾನಿಶ್ ಸೈನಿಕರು ಕ್ರೂರವಾದ ಬೇಟೆ ನಾಯಿಗಳನ್ನೂ ಸಾಕಿದ್ದರು (ಈ ಎಲ್ಲ ಯೂರೋಪಿಯನ್ ಕಡಲ್ಗಳ್ಳರು-ಲೂಟಿಕೋರರು ಸಮೃದ್ಧವಾದ ಭಾರತವನ್ನು ಗುರಿಮಾಡಿಕೊಂಡು ಹೊರಟಿದ್ದುದರಿಂದ ಕ್ಯೂಬಾ, ಜಮೈಕಾ ಮುಂತಾದ ಅನೇಕ ದ್ವೀಪಗಳಲ್ಲಿನ ಮೂಲನಿವಾಸಿಗಳನ್ನು ಇಂಡಿಯನ್ನರೆಂದೇ ಕರೆದಿದ್ದಾರೆ. ಇಂದಿಗೂ ಬಹುತೇಕ ಗ್ರಂಥಗಳಲ್ಲಿ, ದಾಖಲೆಗಳಲ್ಲಿ ಹಾಗೆಯೇ ಕರೆಯಲಾಗುತ್ತಿದೆ. ಗೊಂದಲ ತಪ್ಪಿಸಲು, ನಾನಿಲ್ಲಿ ಇಂಡಿಯನ್ ಪದದ ಬದಲು ಮೂಲನಿವಾಸಿಗಳು ಎಂದೇ ಸಂಬೋಧಿಸಿದ್ದೇನೆ - ಲೇಖಕ). ಬೇಟೆನಾಯಿಗಳನ್ನು ಛೂ ಬಿಟ್ಟು ಈ ಸೈನಿಕರು ಆ ಮೂಲನಿವಾಸಿಗಳಿಂದ ಆಹಾರವನ್ನು, ಹೆಂಗಸರನ್ನು ಕಿತ್ತುಕೊಂಡರು. ಆ ಮೂಲನಿವಾಸಿಗಳನ್ನು ಗುಲಾಮರನ್ನಾಗಿ ಮಾಡಿಕೊಂಡರು. ಕೇಳಿದುದೆಲ್ಲಾ ಈ ಸೈನಿಕರಿಗೆ ಸಿಕ್ಕಿತು. ಕೊಲಂಬಸ್ನ ಸೈನಿಕರು ಕೊಂದು ಹಾಕಿದ ಮೂಲನಿವಾಸಿಗಳಿಗೆ ಲೆಕ್ಕವೇ ಇಲ್ಲ. ಅವರಿಗೆ ಕೊಲ್ಲುವುದೇ ಒಂದು ಆಟವಾಗಿತ್ತು. ಪಶುಪಕ್ಷಿ ಪ್ರಾಣಿಗಳನ್ನೂ ಹೀಗೆಯೇ ಕೊಂದು ಕೊಂದುಹಾಕಿದರು. ಈ ಕ್ರಿಸ್ಟೋಫರ್ ಕೊಲಂಬಸ್ನ ಮಗ ಫನರ್ಾಂಡೊ, ತುಂಬ ಹಷರ್ೋಲ್ಲಾಸದಿಂದ, ನಮ್ಮ ಸೈನಿಕರು ಏನು ಸಿಕ್ಕಿದರೂ ಲೂಟಿ ಮಾಡಿದರು, ನಾಶಮಾಡಿದರು.... ಕದಿಯುವುದು, ಕೊಲ್ಲುವುದು, ಹಿಂಸೆ-ಅತ್ಯಾಚಾರ ಮಾಡಿ ಸಂಭೋಗಿಸುವುದು, ಹಿಂಸಿಸುವುದು, ಚಿನ್ನ ಸಂಗ್ರಹಿಸಿರುವ ತಾಣಗಳಿಗಾಗಿ ಚಿತ್ರಹಿಂಸೆ ಮಾಡಿ ಹುಡುಕುವುದು.... ಇದನ್ನೇ ಮುಂದುವರಿಸಿದರು ಎಂದು ದಾಖಲಿಸಿದ್ದಾನೆ. 1918ರಲ್ಲಿ ಯೂರೋಪಿನಿಂದ ಹಬ್ಬಿದ ಫ್ಲೂ (ಸಾಂಕ್ರಾಮಿಕ) ಒಂದು ರೋಗದಿಂದಲೇ, ವಿಶ್ವದಾದ್ಯಂತ ಎರಡು ಕೋಟಿಗಿಂತಲೂ ಹೆಚ್ಚು ಜನರು ಸತ್ತುಹೋದರೆಂದು ದಾಖಲೆಗಳು ಹೇಳುತ್ತವೆ. ಈ ಪ್ಲೇಗ್, ಸಿಡುಬು, ಫ್ಲೂನಂತಹ ಭಯಾನಕ ರೋಗಗಳ ಪರಿಚಯವೇ ಇಲ್ಲದ ಆ ದ್ವೀಪಗಳ ಮೂಲನಿವಾಸಿಗಳು 15-16-17ನೆಯ ಶತಮಾನಗಳಲ್ಲಿ, ತುಂಬ ದೊಡ್ಡ ಸಂಖ್ಯೆಯಲ್ಲಿ ಸಾಯಲು ಈ ರೋಗಗಳೇ ಕಾರಣವೆಂದು ಸ್ಪೇನ್ ದೇಶದ ವೈದ್ಯಕೀಯ ಶಾಸ್ತ್ರದ ಇತಿಹಾಸಕಾರ ಡಾ|| ಫ್ರಾನ್ಸಿಸ್ಕೋ ಗೆರ್ರಾ ಅಭಿಪ್ರಾಯ ಪಡುತ್ತಾರೆ. ಸರಿಯಾದ ಆಯುಧಗಳ ಪರಿಚಯವಿಲ್ಲದ, ರೋಗಗಳೇ ಗೊತ್ತಿರದ ಮುಗ್ಧರಾದ ಆ ಮೂಲನಿವಾಸಿಗಳು, ಈ ಸ್ಪಾನಿಶ್ ಸೈನಿಕರನ್ನು ಎದುರಿಸಲಾಗಲೇ ಇಲ್ಲ. ಕೊಲ್ಲಲ್ಪಟ್ಟವರು ಎಷ್ಟೋ ಜನ. ಭಯಾನಕ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಸತ್ತವರು ಇನ್ನೆಷ್ಟೋ ಜನ. ಕೆಲವರು ಓಡಿಹೋಗಲು ಸಹ ಪ್ರಯತ್ನಿಸಿದರು. ಹಿಸ್ಪಾನಿಯೋಲಾದಲ್ಲಿ ಕೊಲಂಬಸ್ನು ಅನಾರೋಗ್ಯದಿಂದ ಸ್ವಲ್ಪ ದಿನ ಮಲಗಿದ್ದಾಗ, ಅವನ ತಂಡವರು ಈ ಕಲ್ಯಾಣಕಾರ್ಯವನ್ನು ಮುಂದುವರಿಸಿದರು. ಆ ಅವಧಿಯಲ್ಲಿ ಕೊಲ್ಲಲ್ಪಟ್ಟ ಮೂಲನಿವಾಸಿಗಳ ಸಂಖ್ಯೆಯು 50ಸಾವಿರಕ್ಕಿಂತ ಹೆಚ್ಚೆಂದು, ಅವರೇ ದಾಖಲಿಸಿದ್ದಾರೆ. ಭಾರತದ ಹೆಸರಿನಲ್ಲಿಯೇ 'ವೆಸ್ಟ್ ಇಂಡೀಸ್' ಎಂಬ ಹೆಸರು ಪಡೆದ ಈ ದ್ವೀಪ ಸಮೂಹಗಳ ಮೂಲನಿವಾಸಿಗಳ ಓರ್ವ ನಾಯಕ ಹ್ಯಾಚುಯೇ ಎಂಬವನು ಒಂದಿಷ್ಟು ಜನರೊಂದಿಗೆ ತಪ್ಪಿಸಿಕೊಂಡು ಕ್ಯೂಬಾ ದ್ವೀಪಕ್ಕೆ ಓಡಿ ಹೋದ. ಪುಂಟಾ ಮೈಸಿ ಎಂಬ ಸ್ಥಳದಲ್ಲಿ, ತನ್ನ ಅನುವತರ್ಿಗಳನ್ನು ಒಟ್ಟುಗೂಡಿಸಿ, ತಾನು ತಂದಿದ್ದ ಒಂದಿಷ್ಟು ಚಿನ್ನವನ್ನು ತೋರಿಸಿ, ಇದಕ್ಕಾಗಿಯೇ (ಸ್ಪೇನಿನ) ಈ ಸೈನಿಕರು ನಮ್ಮನ್ನೆಲ್ಲಾ ಬೇಟೆಯಾಡುತ್ತಿದ್ದಾರೆ, ಹಿಂಸಿಸುತ್ತಿದ್ದಾರೆ, ಎಂದು ವಿವರಿಸಿದ. ಅನಂತರ ತೊಂದರೆ ನೀಗಿಕೊಳ್ಳಲು, ಹತ್ತಿರದ ನದಿಯೊಂದಕ್ಕೆ ಆ ಚಿನ್ನವನ್ನು ಎಸೆದ. ಆದರೇನು, ಸ್ಪೇನ್ನ ಈ ಕ್ರೈಸ್ತ ಸೈನಿಕರು ನುಗ್ಗಿಬಂದು ಈ ಗುಂಪಿನ ಹಲವರನ್ನು ಕೊಂದುಹಾಕಿದರು, ಇನ್ನು ಕೆಲವರನ್ನು ಗುಲಾಮರನ್ನಾಗಿ ಮಾಡಿಕೊಂಡರು. ನಾಯಕ ಹ್ಯಾಚುಯೇನನ್ನು ಜೀವಂತ ಸುಟ್ಟುಹಾಕಿದರು. ಸುಡುವ ಮುನ್ನ ಈ ಸೈನಿಕರ ತಂಡದಲ್ಲಿದ್ದ, (ಫ್ರಾನ್ಸಿಸ್ ಎಂಬ) ಕ್ರೈಸ್ತಸಂತನ ಅನುಯಾಯಿಯೊಬ್ಬ, 'ಸಾಯುವ ಮೊದಲು ಯೇಸುವನ್ನು ಹೃದಯಪೂರ್ವಕವಾಗಿ ಪ್ರಾಥರ್ಿಸು, ನರಕದ ಬದಲು ಸ್ವರ್ಗಕ್ಕೆ ಹೋಗುವೆ', ಎಂದ. ಸ್ವಾಭಿಮಾನಿಯಾದ ಹ್ಯಾಚುಯೇ, ನಿಮ್ಮಂತಹ ಕ್ರೈಸ್ತರು ತುಂಬಿರುವ ಸ್ವರ್ಗದ ಬದಲು ನಾನು ನರಕಕ್ಕೆ ಹೋಗುವುದು ಉತ್ತಮವೆಂದು ಭಾವಿಸುತ್ತೇನೆ, ಎಂದ (ಬಾತರ್ೋಲೋಮ್ ಡಿ ಲಾಸ್ ಕ್ಯಾಸಾಸ್ ಎಂಬ ಲೇಖಕನ ದ ಡೀವ್ಯಾಸ್ಟೇಶನ್ ಆಫ್ ದಿ ಇಂಡೀಸ್ ಗ್ರಂಥದ ಪುಟಗಳು 54-55. ಸೀಬರಿ ಪ್ರೆಸ್, ನ್ಯೂಯಾಕ್, 1974). ಸರಿ, ಸ್ಪೇನ್ ಸೈನಿಕರು ಅವನನ್ನು ಜೀವಂತ ಸುಟ್ಟುಹಾಕಿದರು. ಸ್ಪೇನ್ದೇಶದ ಈ ಕ್ರೈಸ್ತ ಸೈನಿಕರು, ಸಿಕ್ಕಸಿಕ್ಕಲ್ಲಿ ಮೂಲನಿವಾಸಿಗಳನ್ನು ಹಿಂಸಿಸಿ ಕೊಲ್ಲುತ್ತಿದ್ದರು. ಅತಿಯಾದ ಕ್ರೌರ್ಯದಿಂದ ಕೊಲ್ಲುವ ಆಟವಾಡುವ ಹಿಂಸಾರತಿ, ಹಿಂಸಾನಂದ ಅವರದ್ದಾಗಿತ್ತು. ಪ್ರತಿದಾಳಿ ಮಾಡಲು ಸಾಧ್ಯವಾಗದಂತೆ ಚಿತ್ರಹಿಂಸೆ ಮಾಡಿ ಆ ಮೂಲನಿವಾಸಿಗಳನ್ನು ಬೆದರಿಸುತ್ತಿದ್ದರು. ಅವರ ಕೈಗಳನ್ನು ನೇತಾಡುವಂತೆ ಅರ್ಧಂಬರ್ಧ ಕತ್ತರಿಸಿ 'ನಿಮ್ಮ ನಾಯಕನಿಗೆ ಹೋಗಿ ಹೇಳು' ಎಂದು ಓಡಿಸುತ್ತಿದ್ದರು. ಸೆರೆಸಿಕ್ಕ ಈ ಮೂಲನಿವಾಸಿಗಳ ತಲೆಗಳನ್ನು, ಕೈಕಾಲು, ಅಂಗಾಂಗಗಳನ್ನು ಒಂದೇ ಏಟಿಗೆ ಕತ್ತರಿಸುವ, ಅರ್ಧರ್ಧ ಕತ್ತರಿಸುವ ಅತಿಕ್ರೂರ ಆಟಗಳನ್ನು ಆಡುತ್ತಿದ್ದರು. ಮೂಲನಿವಾಸಿಗಳ ಇನ್ನೋರ್ವ ನಾಯಕನನ್ನು ಬಂಧಿಸಿ, ಸರಪಳಿ ಬಿಗಿದು, ಎಲ್ಲರಿಗೂ ಕಾಣುವಂತೆ ಹಡಗಿನಲ್ಲಿ ಕಟ್ಟಿಹಾಕಿ ಪ್ರದಶರ್ಿಸುತ್ತ, ಉಳಿದ ಗುಲಾಮರೊಂದಿಗೆ ಸ್ಪೇನ್ ದೇಶಕ್ಕೆ ತೆಗೆದುಕೊಂಡು ಹೋಗಿ ಅಲ್ಲಿನ ತಮ್ಮ ದೇಶವಾಸಿಗಳಿಗೆ ತೋರಿಸಲೂ ಪ್ರಯತ್ನಿಸಿದರು. ಆದರೆ, ಆ ನಾಯಕನು ಹಾದಿಯಲ್ಲಿಯೇ ಸತ್ತುಹೋದನು. ಉಳಿದ ತುಂಬ ಜನ ನಾಯಕರನ್ನು ನೇಣು ಹಾಕಲಾಯಿತು, ಸುಟ್ಟು ಕೊಲ್ಲಲಾಯಿತು (ಮೇಲೆ ಹೇಳಿದ ಅದೇ ಗ್ರ್ರಂಥ, ಪುಟ 94). 'ಕಾಂಕ್ವೆಸ್ಟ್ ಆಫ್ ಅಮೆರಿಕಾ ಗ್ರಂಥದಲ್ಲಿ (139-140 ಪುಟಗಳಲ್ಲಿ) ಟೋಡೋರೋವ್ ಎಂಬವನು ದಾಖಲಿಸಿರುವ ವಿವರಗಳು ಇನ್ನಷ್ಟು ಭೀಭತ್ಸವಾಗಿವೆ. ತಾಯಿಹಾಲು ಕುಡಿಯುತ್ತಿರುವ ಮೂಲನಿವಾಸಿಗಳ ಎಳೆಯ ಕಂದಮ್ಮಗಳನ್ನು ಎಳೆದುಹಾಕಿ, ತಮ್ಮ ಬೂಟುಗಾಲುಗಳಿಂದ ಹೊಸಕಿ ಹಾಕುತ್ತಿದ್ದರು. ಬಂಡೆಗಳಿಗೆ ಆ ಕಂದಮ್ಮಗಳನ್ನು ಅಪ್ಪಳಿಸಿ ಕೊಲ್ಲುವುದು ಇನ್ನೊಂದು ಹಿಂಸಾನಂದದ ವಿಧಾನ. ತಮ್ಮ ಖಡ್ಗದಲ್ಲಿ ಮಗುವನ್ನೂ ತಾಯಿಯನ್ನು ಒಟ್ಟಿಗೇ, ಒಂದೇ ಹೊಡೆತಕ್ಕೆ, ಚುಚ್ಚಿ ಸಾಯಿಸುವುದು ಇನ್ನೊಂದು ಬಗೆಯ ಆಟವಾಗಿತ್ತು. ಒಂದು ಘಟನೆಯ ಇನ್ನೂ ಭಯಾನಕವಾಗಿದೆ. ಕ್ಯೂಬಾದಲ್ಲಿ, ಹೀಗೆ ನೂರಕ್ಕೂ ಹೆಚ್ಚಿನ ಸೈನಿಕರಿದ್ದ ಪಡೆಯೊಂದಕ್ಕೆ ಒಣಗಿಹೋದ ನದಿಯೊಂದು ಸಿಕ್ಕಿತು. ಅಲ್ಲಿ ಸಿಕ್ಕಿದ ಕಲ್ಲುಗಳಲ್ಲಿ ಈ ಸೈನಿಕರು, ತಮ್ಮ ಕತ್ತಿಗಳನ್ನು ಹರಿತ ಮಾಡಿಕೊಂಡರು. ಪ್ರತ್ಯಕ್ಷದಶರ್ಿಯೊಬ್ಬ (ಅದೇ ಕಾಂಕ್ವೆಸ್ಟ್ ಆಫ್ ಅಮೆರಿಕಾ ಗ್ರಂಥದ ಪುಟಗಳು 139-140) ವರದಿ ಮಾಡಿರುವಂತೆ, ಹೆದರಿದ ಮೂಲನಿವಾಸಿಗಳನ್ನು ಮಕ್ಕಳು - ವೃದ್ಧರು - ಹೆಂಗಸರು ಎಂಬುದನ್ನು ನೋಡದೆಯೇ, ಜೊತೆಯಲ್ಲಿದ್ದ ಕುರಿಮಂದೆಯನ್ನೂ ಸೇರಿಸಿ ಎಲ್ಲರ-ಎಲ್ಲವುಗಳ ಹೊಟ್ಟೆಗೇ ಕತ್ತಿಯಿಂದ ಹೊಡೆದು ತಮ್ಮ ಕತ್ತಿಗಳು ಎಷ್ಟು ಹರಿತವಾಗಿವೆ, ಎಂಬುದನ್ನು ಪರೀಕ್ಷಿಸಲಾರಂಭಿಸಿದರಂತೆ. ಸ್ವಲ್ಪ ಹೊತ್ತಿಗೆ ಯಾರೂ ಉಳಿಯಲಿಲ್ಲ. ಹತ್ತಿರದಲ್ಲಿ ದೊಡ್ಡ ಮನೆಯೊಂದಿತ್ತು. ಅಲ್ಲಿ ಒಳಗಿದ್ದವರನ್ನೆಲ್ಲಾ ಎಳೆದೆಳೆದು ಹೀಗೆಯೇ ಕತ್ತರಿಸಿ ಕತ್ತರಿಸಿ ಆಟವಾಡಿದರು. ಅಲ್ಲಿ ಹೀಗೆ ಸತ್ತುಹೋದವರ ಮೇಲಿನ ಗಾಯಗಳು, ಹರಿಯುವ ರಕ್ತ ಹೆದರಿಕೆ ಹುಟ್ಟಿಸುವಂತಿತ್ತು. ಝುಕಾಯೋ ಎಂಬ ಹಳ್ಳಿಯ ಜನರು ಒಮ್ಮೆ ಈ ಸೈನಿಕರಿಗೆ ಹಣ್ಣುಗಳನ್ನು, ಮೀನುಗಳನ್ನು, ಮರಗೆಣಸಿನ ಹಿಟ್ಟಿನ ರೊಟ್ಟಿಗಳನ್ನು ಕೊಟ್ಟಿದ್ದರು. ನರಹತ್ಯಾಕ್ರೀಡೆಯು ಈಗ ಇಲ್ಲಿಯೂ ಮುಂದುವರಿಯಿತು. ಲ್ಯಾಸ್ ಕ್ಯಾಸಾಸ್ನು, ಈ ಸೈನಿಕರ ಕೊಲ್ಲುವ ಆಟಕ್ಕೆ ಇಪ್ಪತ್ತು ಸಾವಿರಕ್ಕೂ ಹೆಚ್ಚು ಸಂಖ್ಯೆಯ ಇಂಡಿಯನ್ನರು (ಅಂದರೆ ಮೂಲನಿವಾಸಿಗಳು) ಬಲಿಯಾದರು, ಎಂದು ಅಂದಾಜು ಮಾಡಿದ್ದಾನೆ. ಕ್ರೈಸ್ತ ಸಂತ ಡಾಮಿನಿಕನ್ ಎಂಬವನ ಪಂಥದ ಕ್ರೈಸ್ತ ಸೈನಿಕರ ಒಂದು ತಂಡಕ್ಕೆ ಮೂಲನಿವಾಸಿ ಬಾಣಂತಿ ಹೆಂಗಸೊಬ್ಬಳು ಸಿಕ್ಕಳು. ಮಗು ಅವಳ ಎದೆ ಹಾಲು ಇನ್ನೂ ಕುಡಿಯುತ್ತಿತ್ತು. ಹಾಗೆಯೇ ಅದನ್ನು ಕಿತ್ತುಕೊಂಡು ಹಸಿದ ತಮ್ಮ ನಾಯಿಗೆ ತಿನ್ನಲು ಜೀವಂತವಾಗಿಯೇ, ಆ ತಾಯಿಯ ಕಣ್ಣೆದುರಿಗೇ ಹಾಕಿದರು. ತಮ್ಮ ಗುಲಾಮ ಪಡೆಯ ಹೆಂಗಸರ ಮಕ್ಕಳಲ್ಲಿ ಯಾವುದಾದರೂ ಮಗು ಅತ್ತರೆ, ತಕ್ಷಣವೇ ಹಿಡಿದೆಳೆದು ಅದರ ಕಾಲುಗಳನ್ನು ಹಿಡಿದು ಬೀಸಿಬೀಸಿ ಕಲ್ಲುಬಂಡೆಗಳಿಗೆ ಅಪ್ಪಳಿಸಿ ಕೊಲ್ಲುತ್ತಿದ್ದರು. ಇಲ್ಲವೇ ಕಾಡಿನೊಳಗೆ ಬೀಸಿಬೀಸಿ ಎಸೆಯುತ್ತಿದ್ದರು. ಪ್ರತ್ಯಕ್ಷದಶರ್ಿಯಾದ ಲ್ಯಾಸ್ ಕ್ಯಾಸಾಸ್ನು ತನ್ನ 'ಹಿಸ್ಟರಿ ಆಫ್ ದಿ ಇಂಡೀಸ್' (ಪುಟ 121) ಕೃತಿಯಲ್ಲಿ ಇನ್ನೊಂದು ಭಯಾನಕ ಪ್ರಕರಣವನ್ನು ವರದಿ ಮಾಡಿದ್ದಾನೆ. ಯೇಸುಕ್ರಿಸ್ತನು ತನ್ನ ಮತದ ಪ್ರಸಾರಕ್ಕೆ ಹನ್ನೆರಡು ಜನ ಶಿಷ್ಯರನ್ನು (ಂಠಿಠಣಟಜ) ಕಳುಹಿಸಿದ್ದನು. ಯೇಸುಕ್ರಿಸ್ತನನ್ನೂ ಸೇರಿಸಿದರೆ ಈ ಸಂಖ್ಯೆಯು ಹದಿಮೂರಾಗುತ್ತದೆ. ಈ ಸ್ಪೇನ್ ದೇಶದ ಕ್ರೈಸ್ತ ಸೈನಿಕರು, ಈ ಹಿನ್ನೆಲೆಯಲ್ಲಿ, ಈ ಹದಿಮೂರು ಜನರ ಗೌರವಾರ್ಥವಾಗಿ, ಹದಿಮೂರು ಜನ ಮೂಲನಿವಾಸಿಗಳನ್ನು ಹಿಡಿದು ಎಲ್ಲರನ್ನೂ ಸಾಲಾಗಿ ಗಲ್ಲುಮರಕ್ಕೆ ನೇಣು ಹಾಕಿದರು. ತಕ್ಷಣವೇ ನೇತಾಡಿ ಸಾಯದಂತೆ, ಅವರನ್ನೆಲ್ಲಾ ತುದಿಗಾಲು ನೆಲಕ್ಕೆ ತಾಕುವಂತೆ ಕೆಳಕ್ಕೆ ಇಳಿಸಿದರು. ಆ ಹದಿಮೂರು ಜನ ಬದುಕಿರುವಂತೆಯೇ ಈ ಕ್ರೈಸ್ತ ಸೈನಿಕರು ಒಂದೇ ಹೊಡೆತಕ್ಕೆ ಆ ಮುಗ್ಧ ನಿರಪರಾಧಿಗಳ ಹೊಟ್ಟೆ ಸೀಳಿ ಕರುಳು ಆಚೆ ಬರುವಂತೆ ಹೊಡೆಯುವ ಶಕ್ತಿಸ್ಪಧರ್ೆಯನ್ನು ತಮ್ಮತಮ್ಮಲ್ಲೇ ಏರ್ಪಡಿಸಿಕೊಂಡರು. ಅನಂತರ ಆ ದೇಹಗಳಿಗೆ ಒಣಹುಲ್ಲು ಸುತ್ತಿ ಜೀವವಿದ್ದಂತೆಯೇ ಸುಟ್ಟುಹಾಕಿದರು. ಒಬ್ಬ ಸೈನಿಕನ ಎದುರಿಗೆ ಇಬ್ಬರು ಪುಟ್ಟ ಮಕ್ಕಳು ಕಾಣಸಿಕ್ಕರು. ಅವರಿಬ್ಬರ ವಯಸ್ಸು ಸುಮಾರು ಎರಡು ವರ್ಷ. ಅವನು ತನ್ನ ಕಠಾರಿಯಿಂದ ಆ ಕಂದಮ್ಮಗಳ ಗಂಟಲನ್ನು ಸೀಳಿ ಕೊಂದು, ಬೆಟ್ಟದ ಮೇಲಿದ್ದ ಕೋಡುಗಲ್ಲಿನಿಂದ ಬೀಸಿ ಎಸೆದನು. 1492ರಲ್ಲಿ ಕೊಲಂಬಸ್ನು ಹಿಸ್ಪಾನಿಯೋಲ ದ್ವೀಪಕ್ಕೆ ಕಾಲಿಡುವಾಗ ಅಲ್ಲಿದ್ದ ಮೂಲನಿವಾಸಿಗಳ ಸಂಖ್ಯೆ ಸುಮಾರು ಎಂಬತ್ತು ಲಕ್ಷ. 1496 ರ ಹೊತ್ತಿಗೆ ಅರ್ಧಕ್ಕರ್ಧ ಜನರು ಸತ್ತು ಹೋಗಿದ್ದರು. ಹತ್ಯಾಕಾಂಡದ ಜೊತೆಗೆ, ಈ ಕಡಲ್ಗಳ್ಳರು- ಆಕ್ರಮಣಕಾರಿಗಳು ತಮ್ಮೊಂದಿಗೆ ತಂದಿದ್ದ ಭಯಾನಕ ಅಂಟುಜಾಡ್ಯಗಳಿಂದ ಸತ್ತವರಿಗೂ ಲೆಕ್ಕವೇ ಇಲ್ಲ. ಅಂತಹ ರೋಗಗಳನ್ನೇ ಕೇಳಿರದ - ರೋಗ ಪ್ರತಿರೋಧ ಶಕ್ತಿಯೂ ಇಲ್ಲದಿದ್ದ, ಆ ಮೂಲನಿವಾಸಿಗಳು ತದನಂತರವೂ ತುಂಬತುಂಬ ದಾರುಣವಾದ ನೋವು ಅನುಭವಿಸಿದರು, ಸಾಮೂಹಿಕವಾಗಿಯೇ ಸತ್ತುಹೋದರು. ತಮ್ಮ ಗುಲಾಮರ ಸಂಖ್ಯೆ ಹೀಗೆ ಕಡಿಮೆಯಾದುದನ್ನು ನೋಡಿ ಸ್ಪೇನ್ನ ಸೈನಿಕರು, ಈ ಹಿಸ್ಪಾನಿಯೋಲ ದ್ವೀಪಕ್ಕೆ ಬೇರೆ ದ್ವೀಪಗಳ ಮೂಲನಿವಾಸಿಗಳನ್ನು ಹಿಡಿದು ತಂದರು. ಇದೇ ರೀತಿಯ ಹಿಂಸೆ-ಕಿರುಕುಳ ಅವರ ಮೇಲೆಯೂ ಆಯಿತು. ಕ್ಯೂಬಾ ದ್ವೀಪವೂ ಹೀಗೆಯೇ ಇತ್ತು. ಸಮೃದ್ಧಿಯೂ ಹೀಗೆಯೇ ಇತ್ತು. ಪ್ರಜಾಸಂಖ್ಯೆಯೂ ಹೆಚ್ಚಾಗಿಯೇ ಇತ್ತು. ಅವರ ಕಥೆಗೂ ಇಂತಹುದೇ ದುರಂತ ಕಾದಿತ್ತು. ಕಾಲುಶತಮಾನದ ಚಿಕ್ಕ ಅವಧಿಯಲ್ಲಿ, ಸ್ಪೇನ್ನ ಈ ರಕ್ಕಸರ ಹಿಂಸೆ-ದುರಾಸೆ-ಹತ್ಯಾಕಾಂಡಗಳಿಗೆ ಸಿಲುಕಿ ಲಕ್ಷಲಕ್ಷ ಜನ ಮೂಲನಿವಾಸಿಗಳು ಸತ್ತುಹೋದರು. ಇಡೀ ಕ್ಯೂಬಾ ದ್ವೀಪವು ನಿರ್ಜನವಾಗಿಹೋಯಿತು. ಹೊಂಡೂರಾಸ್ ದ್ವೀಪಗಳಾಚೆಯ ಗ್ವನಾಜಾ ದ್ವೀಪಗಳಿಂದ ಅಲ್ಲಿನ ಮೂಲನಿವಾಸಿಗಳನ್ನು ಈ ನಿರ್ಜನವಾಗಿಹೋಗಿದ್ದ ಕ್ಯೂಬಾಗೆ ತಂದು, ಕಠಿಣಾತಿಕಠಿಣವಾದ ಪರಿಶ್ರಮ ಮಾಡಬೇಕಾದ ಗುಲಾಮರ ಕ್ಯಾಂಪುಗಳಿಗೆ ಹಾಕಿದರು. ಸುಮಾರು 1525ರ ಹೊತ್ತಿಗೆ, ಇಂತಹುದೇ ಕಲ್ಯಾಣ ಗುಣಗಳ ಪೋತರ್ುಗೀಸರು ಈ ದ್ವೀಪಗಳಿಗೆ ಬಂದಿಳಿದಾಗ, ಬಹುಪಾಲು ದ್ವೀಪಗಳ ಮೂಲನಿವಾಸಿಗಳನ್ನು ಕತ್ತರಿಸಿಹಾಕಲಾಗಿತ್ತು, ಅವು ಬಹುತೇಕ ನಿರ್ಜನವಾಗಿದ್ದವು. ತನ್ನ ಸೈನಿಕರು ದಂಗೆ ಎದ್ದರೆ, ಆಜ್ಞಾಪಾಲನೆ ಮಾಡದಿದ್ದರೆ ಎಂಬ ಕಾರಣದಿಂದ ಕೊಲಂಬಸ್ನು, ಇಂಡಿಯನ್ ಗ್ರ್ಯಾಂಟ್ಸ್ ಎಂಬ ಯೋಜನೆಯನ್ನು ಜಾರಿಗೆ ತಂದನು. ಈ ಚಂದದ ಹೆಸರು ನೋಡಿ! ಅಮೆರಿಕವು ಆಗಾಗ ಸ್ಯಾಂಕ್ಷನ್ಸ್ ಎಂಬ ಆಯುಧವನ್ನು ಪ್ರಯೋಗಿಸುವುದು ನೆನಪಾಯಿತೇ? ಹೆಸರಿಗೂ, ಇವರು ಮಾಡುವ ದುಷ್ಕಾರ್ಯಗಳಿಗೂ ತಾಳವೂ ಇಲ್ಲ, ಮೇಳವೂ ಇಲ್ಲ! ಸೇವರ್ ಎಂಬ ಗ್ರಂಥಕರ್ತನ ಅಲರ್ಿ ಸ್ಪ್ಪಾನಿಶ್ ಮೇಯ್ನ್ (ಪುಟ 101) ಕೃತಿಯಲ್ಲಿ ದಾಖಲಿಸಿರುವಂತೆ, ಈ ಇಂಡಿಯನ್ ಗ್ರ್ಯಾಂಟ್ಸ್ ಜಾರಿಗೆ ಬಂದ ಮೇಲೆ ಇಡೀ ಗುಲಾಮರ, ಅವರ ಕೆಲಸದ ಅವಧಿಯ ಮೇಲೆ ನಿರ್ಬಂಧಗಳೇ ಇಲ್ಲದಂತಾಗಿಹೋಯಿತು. ಸ್ಪಾನಿಶ್ ಸೈನಿಕರು ಗಣಿಕೆಲಸದಲ್ಲಾಗಲೀ, ಕೃಷಿಯಲ್ಲಾಗಲೀ ಎಷ್ಟು ಜನರನ್ನಾದರೂ - ಹೇಗೆ ಬೇಕಾದರೂ ಬಳಸಿಕೊಳ್ಳಬಹುದು, ಎಷ್ಟು ಹೊತ್ತಾದರೂ ಕೆಲಸ ಮಾಡಿಸಬಹುದು, ಇತ್ಯಾದಿ. ಮೂಲನಿವಾಸಿಗಳ ವಿಧ್ವಂಸನಕ್ಕೆ ಈಗ ಇತಿಮಿತಿಗಳೇ ಇಲ್ಲದಂತಾಗಿಹೋಯಿತು. ಗಣಿಕೆಲಸಕ್ಕೆ ಗುಲಾಮರನ್ನು ತಂದು ಒಟ್ಟಲಾಯಿತು. ಲ್ಯಾಸ್ ಕ್ಯಾಸಾಸನು ಬರೆದಿರುವಂತೆ, ಕ್ರೌರ್ಯವು ಇನ್ನಷ್ಟು ಹೆಚ್ಚಿತು. ಗಣಿಗಳಲ್ಲಿ ತೋಟಗಳಲ್ಲಿ ಕೆಲಸ ಮಾಡುವ ಇಂಡಿಯನ್ನರು (ಮೂಲನಿವಾಸಿ ಗುಲಾಮರು) ಇನ್ನಷ್ಟು ಅಮಾನವೀಯವಾದ ನರಕಕ್ಕೆ ಸಿಲುಕಿದರು. ಹೊಡೆತ, ಒದೆತ, ಚಾಟಿಯೇಟು, ಮುಷ್ಟಿಪ್ರಹಾರ, ನಾಯಿಗಳೆಂದೇ ಸಂಬೋಧಿಸುವುದು ನಿರಂತರವಾಗಿ ನಡೆಯುತಿತ್ತು ಎಂದು ಆತ ವರದಿ ಮಾಡಿದ್ದಾನೆ. ಸಹಜವಾಗಿಯೇ, ಕೆಲವು ಜನ ಮೂಲನಿವಾಸಿಗಳು ಈ ಚಿತ್ರಹಿಂಸೆ ತಾಳಲಾರದೇ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದರು. ಈ ನರರಕ್ಕಸರು ಅವರನ್ನು ಬೇಟೆಯಾಡಿ ಹಿಡಿದು, ಈ ಯಾತನಾ ಶಿಬಿರಗಳಿಗೇ ಎಳೆದು ತಂದು, ಉಳಿದ ಗುಲಾಮರಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದ, ಅವರೆದುರಿಗೇ ಶಿಕ್ಷಿಸಿದರು. ಕಂಬಕ್ಕೆ ಕಟ್ಟಿ ನಾವಿಕರು ಉಪಯೋಗಿಸುವ ಬಲವಾದ ಚಾಟಿಯಿಂದ ಸೆರೆಸಿಕ್ಕ ಗುಲಾಮರನ್ನು ಥಳಿಸಲಾಗುತ್ತಿತ್ತು. ಅವರ ಬೆತ್ತಲೆ ದೇಹಗಳಿಂದ ರಕ್ತ ಸೋರಿ ಸೋರಿ, ಬರಿಯ ಎಲುಬುಗಳ ಹಂದರ ಉಳಿಯುತ್ತಿತ್ತು. ಆ ನತದೃಷ್ಟರನ್ನು ನರಳಿ ನರಳಿ ಸಾಯಲು ಬಿಟ್ಟು, ಉಳಿದೆಲ್ಲರನ್ನು ಬೆದರಿಸಲಾಗುತ್ತಿತ್ತು. ಆಹಾರವಿಲ್ಲದೆ, ಪೌಷ್ಟಿಕತೆಯಿಲ್ಲದೆ, ಆರೋಗ್ಯವಿಲ್ಲದೆ ಸಾಯುವ ಸ್ಥಿತಿಗೆ ಬಂದ ಗುಲಾಮರನ್ನು ಈ ಕ್ಯಾಂಪುಗಳಿಂದ ಹೊರತಳ್ಳಲಾಗುತ್ತಿತ್ತು. ಹೀಗೆ ಹೊರತಳ್ಳಲ್ಪಟ್ಟವರಲ್ಲಿ ಉಳಿಯುತ್ತಿದ್ದವರು ಶೇಕಡಾ ಹತ್ತರಷ್ಟು ಮಾತ್ರ. ಎಷ್ಟೋ ಜನ ಮೂಲನಿವಾಸಿಗಳಿಗೆ ಈ ರೀತಿಯ ಶ್ರಮದ ಕೆಲಸ ಮಾಡಿಯೇ ಗೊತ್ತಿರಲಿಲ್ಲ. ಇಷ್ಟೊಂದು ಹಿಂಸೆಗೂ ಅವರು ಎಂದೂ ಒಳಗಾಗಿರಲಿಲ್ಲ. ದಾರಿಯಲ್ಲಿಯೇ ತುಂಬ ಜನ ಸಾಯುತ್ತಿದ್ದರು. ಲ್ಯಾಸ್ ಕ್ಯಾಸಾಸನು, ತನ್ನ ಆ ಗ್ರಂಥ ಹಿಸ್ಟರಿ ಆಫ್ ದಿ ಇಂಡೀಸ್ ಕೃತಿಯಲ್ಲಿ (ಪುಟಗಳು 112-114) ತಾನು ದಾರಿಯುದ್ದಕ್ಕೂ ಮೂಲನಿವಾಸಿಗಳ ಹೆಣಗಳು ಬಿದ್ದಿರುವುದನ್ನು ಕಂಡುದಾಗಿಯೂ, ಬದುಕಿರುವ ಎಷ್ಟೋ ಜನರು ಹಸಿವು ಹಸಿವು ಎಂದು ಕೂಗುತ್ತಿದ್ದರೆಂದೂ, ಇನ್ನು ಕೆಲವರು ನದಿಗಳು ಕಂಡ ತಕ್ಷಣ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆಂದೂ, ದಾಖಲಿಸಿದ್ದಾನೆ. ಈ ಮೂಲನಿವಾಸಿಗಳು ತಮ್ಮ ನೆಲ, ತಮ್ಮ ಕುಟುಂಬ, ಮನೆ-ಮಠ, ಸ್ವಾತಂತ್ರ್ಯ, ಸಂತೋಷ ಎಲ್ಲವನ್ನೂ ಕಳೆದುಕೊಂಡರು. ತಮ್ಮ ಕುದುರೆಗಳಿಂದ ತುಳಿಸಿ ಸಾಯಿಸುತ್ತಿದ್ದ, ಕತ್ತಿಗಳಿಂದ ಕೊಚ್ಚಿ ಹಾಕುತ್ತಿದ್ದ, ತಮ್ಮ ಬೇಟೆನಾಯಿಗಳಿಂದ ದಾಳಿ ಮಾಡಿಸುತ್ತಿದ್ದ ಸ್ಪೇನ್ನ ಈ ಕ್ರೈಸ್ತ ಘಾತುಕರಿಂದ ಪಾರಾಗಲು ಸಾಧ್ಯವಿಲ್ಲವೆಂದು ತಿಳಿದು ಕೊನೆಕೊನೆಗೆ ಅಳಿದುಳಿದ ಗುಲಾಮರು ಪ್ರತಿರೋಧ, ಪಲಾಯನ ಎಲ್ಲ ಕೈಬಿಟ್ಟು ಶರಣಾಗತರಾಗಿಹೋದರು. ತಮ್ಮೆದುರಿಗೇ ತಮ್ಮವರನ್ನು ಹಿಂಸಿಸಿ ಜೀವಂತ ಹೂಳಲಾಗಿತ್ತು. ಇದನ್ನು ಜಾನ್ ಬಾಯ್ಡ್ ಥ್ಯಾಚರ್ ಎಂಬ ಲೇಖಕನು ತನ್ನ ಕ್ರಿಸ್ಟೋಪರ್ ಕೊಲಂಬಸ್: ಹಿಸ್ ಲೈಫ್, ಹಿಸ್ ವಕರ್್, ಹಿಸ್ ರಿಮೇಯ್ನ್ಸ್ (1903 ರಲ್ಲಿ ನ್ಯೂಯಾಕರ್್ನಲ್ಲಿ ಪ್ರಕಟಣೆ, ಸಂಪುಟ ಎರಡು, ಪುಟಗಳು 348-349) ಗ್ರಂಥದಲ್ಲಿ ವರದಿ ಮಾಡಿದ್ದಾನೆ. ಅಳಿದುಳಿದ ಕೆಲವೇ ಕೆಲವು ಮೂಲನಿವಾಸಿಗಳು ತಮ್ಮ ಸ್ವಗ್ರಾಮ ಸೇರಿದರೂ ಎಲ್ಲ ತುಂಬ ತುಂಬ ದುರ್ಬಲರಾಗಿದ್ದರು. ಅಕಸ್ಮಾತ್, ಅವರಲ್ಲಿ ಗಂಡ-ಹೆಂಡತಿ ಒಟ್ಟಾದರೂ ಅವರು ಸಂಸಾರ ಮಾಡುವ, ಮಕ್ಕಳನ್ನು ಹುಟ್ಟಿಸುವ ಶಕ್ತಿಯನ್ನೂ ಕಳೆದುಕೊಂಡಿದ್ದರು. ಹೆಂಗಸರಿಗೆ ಗರ್ಭ ಧರಿಸಲು ಸಾಧ್ಯವಾಗುತ್ತಿರಲಿಲ್ಲ. ಬಹಳ ಜನರಿಗೆ ಎದೆ ಹಾಲೂ ಬರುತ್ತಿರಲಿಲ್ಲ. ಲ್ಯಾಸ್ ಕ್ಯಾಸಾಸನು, ಮೇಲೆ ಹೇಳಿದ ತನ್ನ ಗ್ರಂಥದಲ್ಲಿ (ಪುಟ 110) ಅವನು ಕ್ಯೂಬಾ ದ್ವೀಪದಲ್ಲಿದ್ದಾಗ, ನವಜಾತ ಹಸುಗೂಸುಗಳು, ಹುಟ್ಟಿದ ಮೂರು ತಿಂಗಳೊಳಗೇ ಸಾಯುತ್ತಿದ್ದುದನ್ನು, ಅಂತಹ 7000 ಮಕ್ಕಳು ಸತ್ತುಹೋದುದನ್ನು ದಾಖಲಿಸಿದ್ದಾನೆ. ತಮ್ಮ ಸಂತಾನದ ಭೀಕರ ಭವಿಷ್ಯವನ್ನು ಊಹಿಸಿಕೊಂಡು, ಎಷ್ಟೋ ಜನ ತಾಯಂದಿರು ತಮ್ಮ ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಸಾವಿಗಟ್ಟಿ ಮುಕ್ತಿ ಕಾಣಿಸುತ್ತಿದ್ದರು. ಇನ್ನು ಕೆಲವರು ಗಿಡಮೂಲಿಕೆಗಳಿಂದ ಬಲವಂತವಾಗಿ ಗರ್ಭಪಾತ ಮಾಡಿಕೊಳ್ಳುತ್ತಿದ್ದರು. ಹೀಗೆ ಗಂಡಂದಿರು ಗಣಿಗಳಲ್ಲಿ ಸಾಯುತ್ತಿದ್ದರು, ಹೆಂಗಸರು ಚಾಕರಿ ಮಾಡಿಮಾಡಿ ಸಾಯುತ್ತಿದ್ದರು. ಇನ್ನು ಕೆಲವರಿಗೆ ಮಕ್ಕಳನ್ನು ಹುಟ್ಟಿಸುವ ಶಕ್ತಿಯೇ ಹೊರಟುಹೋಗಿತ್ತು. ಸಾವಿರಾರು ವರ್ಷಗಳಿಂದ ಸಮೃದ್ಧವಾಗಿದ್ದ, ಫಲಭರಿತವಾಗಿದ್ದ, ನೆಮ್ಮದಿಯಿಂದಿದ್ದ ಈ ದ್ವೀಪಗಳ ಅನೇಕ ಮೂಲನಿವಾಸಿಗಳು ಲಕ್ಷಲಕ್ಷ ಸಂಖ್ಯೆಯಲ್ಲಿದ್ದವರು ಕೆಲವೇ ವರ್ಷಗಳಲ್ಲಿ ದಾರುಣವಾದ ಹಿಂಸೆಗೆ ಒಳಗಾದರು, ಸತ್ತುಹೋದರು, ನಾಮಾವಶೇಷವಾಗಿಬಿಟ್ಟರು. 1508ರ ಹೊತ್ತಿಗೆ ಒಟ್ಟು ಪ್ರಜಾಸಂಖ್ಯೆಯು ಒಂದು ಲಕ್ಷಕ್ಕಿಂತ ಕೆಳಗಿಳಿಯಿತು. 1518ರ ಹೊತ್ತಿಗೆ, ಇಪ್ಪತ್ತು ಸಾವಿರಕ್ಕೂ ಕಡಿಮೆಯಾಗಿ ಹೋಯಿತು. ಸಂಶೋಧಕರು, ವಿದ್ವಾಂಸರು ದಾಖಲಿಸಿರುವಂತೆ, 1535 ರ ಕಾಲಕ್ಕೆ ಎಲ್ಲ ಎಲ್ಲ ಮೂಲನಿವಾಸಿಗಳೂ ನಿಮರ್ೂಲವಾಗಿಹೋದರು (ಕುಕ್ ಮತ್ತು ಬೋರಾ ಅವರ ಅಬಾರಿಜಿನಲ್ ಪಾಪ್ಯುಲೇಶನ್ ಆಫ್ ಹಿಸ್ಪಾನಿಯೋಲಾ, ಪುಟ 401). ಬಾರ್ಬರಾ ಹಾಫರ್್ ಅವರ ದಿ ಎಟಿಯಾಲಜಿ ಆಫ್ ಜೆನೋಸೈಡ್ಸ್ (ಗ್ರೀನ್ವುಡ್ ಪ್ರೆಸ್ನಿಂದ 1987ರಲ್ಲಿ ಪ್ರಕಟವಾಗಿದೆ. ಪುಟ 46) ಲೇಖನದ ಜೊತೆಗಿನ ಕೋಷ್ಟಕ 3.1ರಲ್ಲಿ ಇಪ್ಪತ್ತನೆಯ ಶತಮಾನದ ಜನಾಂಗ ಹತ್ಯೆಗಳ - ನರಹತ್ಯೆಗಳ ಪಟ್ಟಿ ನೋಡಿದರೆ ತುಂಬ ಸಂಕಟವಾಗಿಬಿಡುತ್ತದೆ. ಆಮರ್ೇನಿಯನ್ನರ ಮೇಲೆ, ಯೆಹೂದಿಗಳು - ಜಿಪ್ಸಿಗಳು - ಇಬೋಗಳು - ಭಾರತೀಯರು - ಕಾಂಬೋಡಿಯಾದವರು - ಉಗಾಂಡದವರ ಮೇಲೆೆ ಆದ ಹಿಂಸಾಪಾತದ - ಕಗ್ಗೊಲೆ ಕಾಂಡಗಳ ವಿವರಗಳಿವೆ. ಓದಿದರೆ-ನೋಡಿದರೆ ತುಂಬ ಸಂಕಟವಾಗಿಬಿಡುತ್ತದೆ. ಇನ್ನೂ ದುಃಖದ ವಿಷಯವೆಂದರೆ, ಈ ಯೂರೋಪಿಯನ್ ಕ್ರೈಸ್ತ ಆಕ್ರಮಣಕಾರಿಗಳು ಈ ಎಲ್ಲ ವೆಸ್ಟ್ಇಂಡೀಸ್ - ಉತ್ತರ ಅಮೆರಿಕಾ ಖಂಡ - ದಕ್ಷಿಣ ಅಮೆರಿಕಾ ಖಂಡ - ಆಸ್ಟ್ರೇಲಿಯಾ ಖಂಡ ಇತ್ಯಾದಿ ಭೂಭಾಗಗಳ ಮೇಲೆ ದಾಳಿಮಾಡಿ ಕೊಂದುಹಾಕಿದ ಮೂಲನಿವಾಸಿಗಳ ಸಂಖ್ಯೆಯು ಇನ್ನೂ ಬಹಳ ದೊಡ್ಡದು, ಈ ಮೇಲಿನ ಕೋಷ್ಟಕದ ಹತ್ಯಾಕಾಂಡಗಳ ಸಂಖ್ಯೆಗಿಂತಲೂ ತುಂಬ ತುಂಬ ಹೆಚ್ಚು. ನಮ್ಮ ಒಡಿಸ್ಸಾ ರಾಜ್ಯದಲ್ಲಿ ಮತಾಂತರದಿಂದ ಹಿಡಿದು ಎಲ್ಲ ಬಗೆಯ ಮಾಡಬಾರದ ದುಷ್ಕಾರ್ಯಗಳನ್ನು ಮಾಡುತ್ತಿದ್ದ ಗ್ರಹಾಂ ಸ್ಟೇನ್ಸ್ ಎಂಬ ಪಾದ್ರಿಯ ಹತ್ಯೆಯಾದಾಗ, ಈ ಎಲ್ಲ ಯೂರೋಪಿಯನ್ ಶ್ವೇತವಣರ್ೀಯ ಮೂಲದ ದೇಶಗಳ ರಾಕ್ಷಸರೆಲ್ಲಾ ಒಟ್ಟಾಗಿ ಭಾರತದ ಮೇಲೆ ಮುಗಿಬಿದ್ದಿದ್ದರು. ಕ್ರೈಸ್ತ ಮಿಷನರಿಗಳ ಕೈಯಲ್ಲಿ ಸಾಧನಗಳಾಗಿರುವ ಕಿರುತೆರೆಯ ಸುದ್ದಿವಾಹಿನಿಗಳವರು ಮಾಡಿದ ಅಪಪ್ರಚಾರವಾದರೂ ಎಷ್ಟು, ಅಬ್ಬಬ್ಬ್ಬಾ! ಈ ಒಬ್ಬ ಅಯೋಗ್ಯನ ಸಾವಿಗೆ ಎಲ್ಲ ಒಟ್ಟಾಗಿ ವಾಕ್ಸಮರವನ್ನೇ ಸಾರಿಬಿಟ್ಟಿದ್ದರು. ಮೇಲೆ ಹೇಳಿದ ಈ ಕೋಷ್ಟಕದ ಹತ್ಯಾಕಾಂಡಕ್ಕೆ, 15-16-17-18ನೆಯ ಶತಮಾನಗಳ ಅವಧಿಯಲ್ಲಿ ಅವರೇ ಮಾಡಿದ ಹತ್ಯಾಕಾಂಡಕ್ಕೆ, ಈ ಅಯೋಗ್ಯರು ಏನು ಹೇಳುತ್ತಾರೆ? ನಾಚಿಕೆಯಿದ್ದರೆ ತಾನೆ? ಅನೇಕ ಕೋಟಿಗಳ ದೊಡ್ಡ ಸಂಖ್ಯೆಯ ಮೂಲನಿವಾಸಿಗಳನ್ನು ಕೊಂದುಹಾಕಿದ್ದರೂ ಸ್ವಲ್ಪವೂ ಇವರಿಗೆ ಪಾಪಪ್ರಜ್ಞೆಯೇ ಇಲ್ಲ. ಬ್ರಿಟಿಷರಿಗಿಂತ ಫ್ರೆಂಚರು, ಅವರಿಗಿಂತ ಜರ್ಮನರು, ಜರ್ಮನರಿಗಿಂತ ಪೋತರ್ುಗೀಸರು, ಈ ಸ್ಪೇನ್ ದೇಶದವರು ಹಿಂಸೆಯಲ್ಲಿ ಒಬ್ಬರನ್ನೊಬ್ಬರು ಮೀರಿಸುತ್ತಾರೆ. ಕಳೆದ ಐದಾರು ಶತಮಾನಗಳ ಈ ಯೂರೋಪಿಯನ್ನರ ವಿಜ್ಞಾನ -ಸಂಶೋಧನೆಗಳು ಜನರನ್ನು ಸಾಮೂಹಿಕವಾಗಿ ಕೊಲ್ಲುವುದು ಹೇಗೆ, ಬಡರಾಷ್ಟ್ರಗಳಲ್ಲಿ ವಿಷಾನಿಲ ಬಿಟ್ಟ್ಟರೆ ಏನೇನು ಪರಿಣಾಮಗಳು ಆಗುತ್ತವೆ, ಜೀವರಸಾಯನಿಕ ಶಸ್ತ್ರಾಸ್ತ್ರಗಳಿಂದ - ಸಾಂಕ್ರಾಮಿಕ ರೋಗಗಳಿಂದ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಹೇಗೆಲ್ಲಾ ಕೊಲ್ಲಬಹುದು, ಎಂಬ ಹಾದಿಯ ಮಹತ್ಸಾಧನೆಯಲ್ಲಿಯೇ ನಿರತವಾಗಿವೆ. ನೈಪುಣ್ಯದಿಂದ ಇವರು ತಯಾರಿಸುವ ಗನ್ನುಗಳು, ಬಾಂಬುಗಳು, ರಾಕೆಟ್ಟುಗಳು ತಾಲಿಬಾನಿ ಉಗ್ರರಿಗೆ, ಅಲ್ ಖೈದಾ ಭಯೋತ್ಪಾದಕರಿಗೆ, ತಮಿಳು ಉಗ್ರರಿಗೆ, ಪಾಕಿಸ್ತಾನಿಗಳಿಗೆ ಸುಲಭವಾಗಿ ದೊರೆಯುತ್ತವೆ. ಇವರ ಸಂಶೋಧನೆಯು `ಸಾರ್ಥಕ್ಯ' ಪಡೆಯುತ್ತಿದೆ. ಡೈನಾಮೈಟ್ ಕಂಡುಹಿಡಿದ ಆಲ್ಫ್ರೆಡ್ ನೊಬೆಲ್ನು, ಅವುಗಳ ವಿನಾಶಕಾರಿ ಉಪಯೋಗವನ್ನು ನೋಡಿ ಪರಿವರ್ತನೆ ಹೊಂದಿ, ನೊಬೆಲ್ ಶಾಂತಿ ಪ್ರಶಸ್ತಿಯನ್ನು ಸ್ಥಾಪಿಸಿದನು. ತಮ್ಮ ಸಂಶೋಧನೆಯು ಅಣ್ವಸ್ತ್ರಗಳನ್ನು ರೂಪಿಸಲು, ಕಂಡು ಕೇಳರಿಯದ ವಿನಾಶವನ್ನು ತರಲು ಕಾರಣವಾಯಿತೆಂದು ಆಲ್ಬಟರ್್ ಐನ್ಸ್ಟೈನರು ವ್ಯಥೆಪಟ್ಟರು. ಆದರೆ, ಉಳಿದ ಕೋಟಿ ಕೋಟಿ ಜನ ಈ ಶ್ವೇತವಣರ್ೀಯರಿಗೆ, ಅವರ ನಾಯಕಮಣಿಗಳಿಗೆ ಇನ್ನೂ ಪಶ್ಚಾತ್ತಾಪವುಂಟಾಗಿಲ್ಲ, ವಿನಾಶದ ಹಾದಿಯಿಂದ ಅವರಿನ್ನೂ ವಿಮುಖರಾಗಿಲ್ಲ. ಇವರ ಅಂ, ಏಉಃ ಅಂತಹ ಬೇಹುಗಾರಿಕೆ ಸಂಸ್ಥೆಗಳು ದೇಶ ದೇಶಗಳ ನಡುವೆ ಯುದ್ಧ ಮಾಡಿಸುವುದನ್ನು ಇನ್ನೂ ನಿಲ್ಲಿಸಿಲ್ಲ. ಇತ್ತೀಚೆಗೆ ದಕ್ಷಿಣ ಅಮೆರಿಕೆಯ ಒಂದು ಸ್ಪಾನಿಷ್ ಭಾಷೆಯ ಶಾಲೆಯಲ್ಲಿ, ಯೂರೋಪಿಯನ್ನರು ಅಮೆರಿಕೆಗೆ ಏನು ತಂದರು? ಎಂದು ಪ್ರಶ್ನೆಗೆ ಸಂಸ್ಕೃತಿ-ನಾಗರಿಕತೆಗಳನ್ನು ಎಂಬ ಉತ್ತರವನ್ನು ವಿದ್ಯಾಥರ್ಿಗಳಿಗೆ ಹೇಳಿಕೊಡುತ್ತಿದ್ದುದನ್ನು, ಕಲಿಸುತ್ತಿದ್ದುದನ್ನು ಕಿರುತೆರೆಯಲ್ಲಿ ನೋಡಿ ಚಕಿತನಾದೆ. ಚಿನ್ನದ ಅನ್ವೇಷಣೆಯಲ್ಲಿ, ಮಾಡಬಾರದುದನ್ನೆಲ್ಲಾ ಮಾಡಿದವರು, ಗುಲಾಮರ ಪಡೆಯನ್ನು ನಿಮರ್ಿಸಿ ಮಾರಿ ಮಾರಿ ಹಣ ಮಾಡುತ್ತಾ ಅನೇಕ ಶತಮಾನಗಳ ಕಾಲ ಹತ್ಯಾಕಾಂಡ ನಡೆಸಿದವರು, ಇಂದಿಗೂ ತಮ್ಮದು ಮಾತ್ರವೇ ಸಂಸ್ಕೃತಿ, ತಮ್ಮದು ಮಾತ್ರವೇ ನಾಗರಿಕತೆ ಎಂದೇ ಭಾವಿಸುತ್ತ, ಎಲ್ಲ ಮೂಲನಿವಾಸಿಗಳು ಕಾಡುಮನುಷ್ಯರು - ಅನಾಗರಿಕರು ಎಂದು ಇಂದಿಗೂ ಹೇಳಿಕೊಳ್ಳುತ್ತಿರುವುದು ಎಂತಹ ವಿರೋಧಾಭಾಸ ಎನ್ನಿಸಿತು. ಅವರ ಮಾನಸಿಕತೆ - ಮನೋಭಾವಗಳಲ್ಲಿ ಬದಲಾವಣೆಯಾಗಿಯೇ ಇಲ್ಲ. ಕ್ರೈಸ್ತಮತವೂ ಅಂತೆಯೇ ಇದೆ. ಇಂದಿಗೂ ಭಾರತದಲ್ಲಿ - ಆಫ್ರಿಕಾ ಖಂಡದಲ್ಲಿ, ಬೇರೆಬೇರೆ ದೇಶಗಳಲ್ಲಿ ಕ್ರೈಸ್ತ ಮತದಿಂದ ತಾವು ಇವರನ್ನೆಲ್ಲಾ ಉದ್ಧಾರ ಮಾಡುತ್ತಿದ್ದೇವೆ ಎಂದೇ ಹೇಳಿಕೊಳ್ಳುತ್ತಾರೆ, ಇವರ ಬಿಡುಗಡೆ - ಮುಕ್ತಿಗಳಿಗಾಗಿ ತಾವು ಅವತಾರವೆತ್ತಿದ್ದೇವೆ ಎಂದೇ ಭಾವಿಸಿದ್ದಾರೆ. ಕಾಫಿರರನ್ನು, ಪರಮತಧರ್ಮದವರನ್ನು, ಅನ್ಯ ಸಿದ್ಧಾಂತದವರನ್ನು ಹೀಗೆ ಕೊಲ್ಲುವ - ನಿಮರ್ೂಲ ಮಾಡುವ ಇಸ್ಲಾಂ, ಕ್ರ್ರೈಸ್ತಮತ, ಕಮ್ಯುನಿಸಂ ಸಿದ್ಧಾಂತಗಳವರು ತಾವು ಶಾಂತಿಸಂದೇಶ ಸಾರುವವರು, ತಾವು ವಿಶ್ವಭ್ರಾತೃತ್ವದ ವಕ್ತಾರರು ಎಂದು ಹೇಳಲು ಸ್ವಲ್ಪವೂ ನಾಚಿಕೆಪಡದಿರುವುದು ಎಷ್ಟು ವಿಚಿತ್ರ ನೋಡಿ. ಇಂತಹುದಕ್ಕೆ ತಲೆಯಾಡಿಸುವ, ಬೆಂಬಲಿಸುವ ಲೇಖಕರಿಗೆ - ದುಬರ್ುದ್ಧಿಜೀವಿಗಳಿಗೆ ಏನೆನ್ನೋಣ? ಗೋವಾದಲ್ಲಿ ಇನ್ಕ್ವ್ವಿಸಿಷನ್ ಹೆಸರಿನಲ್ಲಿ ಹಿಂಸಾಕಾಂಡ, ಹತ್ಯಾಕಾಂಡ ನಡೆಸಿದ ಪೋತರ್ುಗೀಸ್ ಪಾದ್ರಿಗಳ - ಚಚರ್್ಗಳ ಪ್ರದರ್ಶನ ವಿಜೃಂಭಣೆಗಳು ಈಗಲೂ ಸಾಗಿರುವುದಕ್ಕೆ ಏನೆನ್ನೋಣ! ಉತ್ತರ ಅಮೆರಿಕಾ ಮತ್ತು ದಕ್ಷಿಣ ಅಮೆರಿಕಾ ಖಂಡಗಳ ನಡುವಿನ ಭಾಗದ ಮೆಕ್ಸಿಕೋ ಒಂದು ಅತ್ಯದ್ಭುತವಾದ ಭೂಭಾಗ. ಹಿಂದೂ ಧರ್ಮ, ಹಿಂದೂ ಸಮಾಜಗಳಿಗೆ ಸಾಂಸ್ಕೃತಿಕವಾಗಿ ತುಂಬ ಹತ್ತಿರದ ಮಯನ್ ಸಂಸ್ಕೃತಿ, ಅಜಟೆಕ್ ಸಂಸ್ಕೃತಿಗಳು ಅರಳಿ ಬೆಳೆದ ಭೂಮಿಯಿದು. ಭಾರತೀಯ ವಿದ್ಯಾಭವನವು 1960ರಲ್ಲಿ ಹೊರತಂದ, ಚಮನ್ ಲಾಲ್ರ ಹಿಂದೂ ಅಮೆರಿಕಾ? ತುಂಬ ಮಹತ್ತ್ವದ ಕೃತಿ. ಅಮೆರಿಕೆಯನ್ನು ಕಂಡು ಹಿಡಿದವರು ಯಾರು? (ಪುಟ 8-9) ಎಂಬ ಅಧ್ಯಾಯದಲ್ಲಿ ಸ್ವಾರಸ್ಯಪೂರ್ಣ ವಿವರಗಳಿವೆ. ಭಾರೀ ಹೆದ್ದೆರೆಗಳನ್ನು ದಾಟಿಕೊಂಡು, ಭೇದಿಸಿಕೊಂಡು ಪೂರ್ವದಿಕ್ಕಿಗೆ ಹಡಗುಗಳಲ್ಲಿ ಪಯಣಿಸುತ್ತಾ ಭಾರತದಿಂದ ಬಂದವರೇ, ಮುಂದೆ ಅಮೆರಿಕಾ ಎಂದು ಕರೆಯಲಾದ ಈ ಭೂಭಾಗಕ್ಕೆ ಮೊದಲು ಬಂದವರು ('ಮೆಕ್ಸಿಕೋ ಇತಿಹಾಸ', ಮೆಕ್ಸಿಕೋ ಸಕರ್ಾರದ ಪ್ರಕಟಣೆ). ಮಯನ್ ಜನರು ಭಾರತೀಯರಂತೆಯೇ ಇದ್ದಾರೆ. ಗಂಡಸರು ಧರಿಸುವ ಭಾರೀ ಪೇಟ, ಈ ಜನರ ಕಟ್ಟಡ ನಿಮರ್ಾಣದ ಶೈಲಿ, ಭಾರೀ ಕಟ್ಟಡಗಳ ನಿಮರ್ಾಣ, ಇವೆಲ್ಲವೂ ಭಾರತೀಯ ಶೈಲಿಯನ್ನೇ ಹೋಲುತ್ತವೆ (ಪ್ರೊಫೆಸರ್ ರಾಮನ್ ಮೇನಾ, ಮೆಕ್ಸಿಕೋದ ರಾಷ್ಟ್ರೀಯ ವಸ್ತುಸಂಗ್ರಹಾಲಯದ ಮುಖ್ಯಪಾಲಕರು). ಈ 'ಹಿಂದೂ ಅಮೆರಿಕಾ' ಕೃತಿಯಲ್ಲಿ ಮಹತ್ತ್ವದ ಅನೇಕ ಛಾಯಾಚಿತ್ರಗಳೂ, ಲೇಖನಗಳೂ ಇವೆ. ಎಲ್ಲ ಭಾರತೀಯರೂ, ಈ ಗ್ರಂಥದ ಸಮಗ್ರ ಅಧ್ಯಯನ ಮಾಡಬೇಕಾದ ಆವಶ್ಯಕತೆಯಿದೆ. ನಮ್ಮ ಮೌಢ್ಯ, ನಮ್ಮ ಭ್ರಮೆಗಳು, ನಮ್ಮ ತಪ್ಪು-ತಿಳುವಳಿಕೆಗಳನ್ನು ದೂರ ಮಾಡಿಕೊಳ್ಳಲಾದರೂ ಓದಬೇಕಾಗಿದೆ. ಇಂದಿನ ಅಜರ್ೆಂಟೈನಾ, ಬೊಲೀವಿಯಾ, ಚಿಲಿ, ಕೊಲಂಬಿಯಾ, ಈಕ್ವಡಾರ್, ಪೆರು ಮತ್ತು ಮುಖ್ಯವಾಗಿ ಮೆಕ್ಸಿಕೋ ದಂತಹ ದೇಶಗಳಿರುವ ಭೂಭಾಗದಲ್ಲಿ ಇಂದ್ರ, ಗಣಪತಿ, ಶಿವ, ಯಮನ ದೊಡ್ಡದೊಡ್ಡ ದೇವಾಲಯಗಳು ಇದ್ದವು. ಅನೇಕ ರೀತಿಯ ನಾಗದೇವತೆಗಳನ್ನು ಪೂಜಿಸಲಾಗುತ್ತಿತ್ತು. ಆನೆಗಳಿರುವುದು ಮುಖ್ಯವಾಗಿ ಏಷ್ಯಾ-ಆಫ್ರಿಕಾ ಖಂಡಗಳಲ್ಲಿ. ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ ಖಂಡಗಳಲ್ಲಿ ಆನೆಗಳಿಲ್ಲ. ಆದರೂ ಆನೆಯ ತಲೆಯ ಗಣೇಶ, ಆನೆ-ಸವಾರಿ ಮಾಡುವ ಇಂದ್ರನ ದೇವಾಲಯಗಳ ಅಸ್ತಿತ್ವ, ಪೂಜೆಗಳಿಗೆ ಕೇವಲ ಕೇವಲ ಭಾರತೀಯ ಹಿಂದೂಗಳ ವಲಸೆಯಿಂದ ರೂಪಿತವಾದ ಸಂಸ್ಕೃತಿಯೇ ಕಾರಣವಾಗುತ್ತದೆ. ಕೊಲಂಬಸ್ನಂತಹ ಕಡಲ್ಗಳ್ಳರು ಯೂರೋಪಿನಿಂದ ಇಲ್ಲಿಗೆ ವಕ್ಕರಿಸುವ ಅನೇಕ ಶತಮಾನಗಳ ಮೊದಲೇ ಭಾರತಮೂಲದ ಹಿಂದೂಗಳು ಇಲ್ಲಿಗೆ ಬಂದಿದ್ದರು. ಪ್ರಸಿದ್ಧವಾದ ಲಾಸ್ಟ್ ಕಾಂಟಿನೆಂಟ್ ಕೃತಿಯ ಲೇಖಕ ಕರ್ನಲ್ ಜೇಮ್ಸ್ ಚಚರ್್ವಾಡರ್್ನು, ಈಸ್ಟರ್ ದ್ವೀಪ ಸಮೂಹದ ಆಗ್ನೇಯ ದಿಕ್ಕಿಗೆ ಇರುವ ಕುಸೈ ದ್ವೀಪ ಕುರಿತು, ಪನಪೆ ಎಂಬಲ್ಲಿ ದೊರೆತಿರುವ ಭಗ್ನಾವಶೇಷಗಳಿಗೆ ಹೋಲುವಂತಹುವು. ಕುಸೈ ಮತ್ತು ಹತ್ತಿರದ ದ್ವೀಪಗಳಲ್ಲಿ ದೊರೆತಿವೆ. ಈ ದ್ವೀಪಗಳ ನಡುನಡುವೆ ಮನುಷ್ಯನಿಮರ್ಿತ ಕೃತಕ ದ್ವೀಪಗಳಿವೆ. ಮುಂಚೆ ಇಲ್ಲೆಲ್ಲಾ ದೊಡ್ಡದೊಡ್ಡ ಕಟ್ಟಡಗಳಿದ್ದವು. ಅಳಿದುಳಿದ ಒಂದು ಗೋಪುರವಂತೂ 35 ಅಡಿ ಎತ್ತರವಿದೆ. ಒಂದು ಕಾಲದಲ್ಲಿ ಇಲ್ಲೆಲ್ಲಾ ಇದ್ದ ಜನರು ತುಂಬ ಬಲಿಷ್ಠರಾಗಿದ್ದರು. ಅವರೆಲ್ಲಾ ಬಹಳ ದೊಡ್ಡ ಹಡಗುಗಳನ್ನು ನಿಮರ್ಿಸಿ, ಪೂರ್ವದಿಕ್ಕಿಗೆ - ಪಶ್ಚಿಮದಿಕ್ಕಿಗೆ ಅನೇಕ ತಿಂಗಳು ಪಯಣಿಸುವ ಸಾಮಥ್ರ್ಯವಿದ್ದ ಸಾಹಸಿಗಳಾಗಿದ್ದರು. ಭಾರತೀಯ ಮಹಾಕವಿಗಳು ವಣರ್ಿಸುವ ಮಯನಿಗೆ ಪೂರ್ಣವಾಗಿ ಹೋಲುತ್ತಿದ್ದರು (ಅದೇ ಗ್ರಂಥ, ಪುಟ 17). ಭಾರತ, ಅಮೆರಿಕಾ ಮತ್ತು ಮುಳುಗಿಹೋದ ಭೂಖಂಡ (ಲಾಸ್ಟ್ ಕಾಂಟಿನೆಂಟ್) ಇವುಗಳ ಬಗೆಗಿನ ಸಂಶೋಧನೆಗಾಗಿಯೇ ಐವತ್ತು ವರ್ಷಕಾಲ ಶ್ರಮಿಸಿದ ಈ ಚಚರ್್ವಾಡರ್್ನ ಅಭಿಮತವು ತುಂಬ ಮಹತ್ತ್ವದ್ದು. ಈ ಅಜಟೆಕ್ಕರು ಇದ್ದುದಾದರೂ ಹೇಗೆ? ವೆಸ್ಟ್ ಇಂಡೀಸ್ ಎಂದು ಕರೆಯಲಾಗುವ ಅನೇಕ ದ್ವೀಪಗಳ ಸಮೂಹದಲ್ಲಿದ್ದ ಮೂಲನಿವಾಸಿಗಳಿಗಿಂತ ಇವರೆಲ್ಲ ಯುದ್ಧಕಲೆಯಲ್ಲಿ ಹೆಚ್ಚಿನ ಪರಿಣತಿ ಸಾಧಿಸಿದ್ದರು. ಮಲ್ಲಯುದ್ಧದಂತಹ ಪಂದ್ಯಗಳಲ್ಲಿಯೂ ಒಬ್ಬೊಬ್ಬರೂ ಸಾಧನೆ ಮಾಡಿದ್ದರು. ರಾಸ್ ಹ್ಯಾಸಿಗ್ ಎಂಬ ಲೇಖಕನ ಅಜಟೆಕ್ ವಾರ್ಫೇರ್: ಇಂಪೀರಿಯಲ್ ಎಕ್ಸ್ಪಾನ್ಶನ್ ಅಂಡ್ ಪೊಲಿಟಿಕಲ್ ಕಂಟ್ರೋಲ್ (ನಾರ್ಮನ್: ಯೂನಿವಸರ್ಿಟಿ ಆಫ್ ಓಕ್ಲಾಹೋಮಾ ಪ್ರೆಸ್, 1988, ಪುಟ 237) ಗ್ರಂಥದಲ್ಲಿ ಈ ಕುರಿತ ತುಂಬ ವಿವರಗಳಿವೆ. ಸ್ಪೇನ್ ದೇಶದ ಸೈನಿಕರಿಗೆ ಭಾರೀ ಪ್ರತಿಹೊಡೆತ ಕೊಟ್ಟವರು ಈ ಅಜಟೆಕ್ಕರು. ಕೆಲವರು ಅಶ್ವಾರೋಹಿ ಸೈನಿಕರು ದಾಳಿ ಮಾಡಿದಾಗ, ಅಜಟೆಕ್ ಯೋಧನೊಬ್ಬ ಅದ್ಭುತವಾಗಿ ಕಾದಿದ. ಮಲ್ಲಯುದ್ಧದಲ್ಲಿ ಎಲ್ಲರೂ ಸೇರಿಯೂ ಅವನನ್ನು ಮಣಿಸಲಾಗದ, ಸೋಲಿಸಲಾಗದ ಸ್ಥಿತಿ ಬಂದಾಗ, ಓರ್ವ ಸ್ಪೇನ್ ಅಶ್ವಾರೋಹಿಯು ಅವನೆಡೆ ದೊಡ್ಡ ಭಲ್ಲೆಯೊಂದನ್ನು ಎಸೆದು ಕೊಲ್ಲಲು ಪ್ರಯತ್ನಿಸಿದ. ಆ ಅಜಟೆಕ್ಕನು ಅದನ್ನೇ ಹಿಡಿದು, ಒಂದು ಘಂಟೆಕಾಲ ದಿಟ್ಟ ಹೋರಾಟ ಮಾಡಿದ. ಕೊನೆಗೆ ಇಬ್ಬರು ಸ್ಪೇನ್ ಬಿಲ್ಲುಗಾರರು ಸೇರಿ ಆಕ್ರಮಣ ಮಾಡಿ, ಗಾಯ ಮಾಡಿ, ನಂತರ ಇರಿದು ಸಾಯಿಸಬೇಕಾಯಿತು. ಇಂತಹ ಸಹಸ್ರಾರು ಸಂಖ್ಯೆಯ ಪ್ರತಿಹೋರಾಟಗಳನ್ನೂ ಪ್ರತಿರೋಧವನ್ನೂ ಸ್ಪೇನಿನ ಸೈನಿಕರು ಎದುರಿಸಬೇಕಾಯಿತು. ಇಂಗಾ ಕ್ಲೆಂಡಿನೆನ್ ರಚಿಸಿದ ಫಿಅಸರ್್ ಅಂಡ್ ಅನ್ನ್ಯಾಚುರಲ್ ಕ್ರೂಯೆಲಿ:್ಟ ಕೋಟರ್ೆಸ್ ಅಂಡ್ ದ ಕಾಂಕ್ವೆಸ್ಟ್ ಆಫ್ ಮೆಕ್ಸಿಕೋ (1991ರಲ್ಲಿ ಪ್ರಕಟವಾಗಿದೆ) ಕೃತಿಯನ್ನಂತೂ ನಾವೆಲ್ಲಾ ಓದಲೇಬೇಕಾಗಿದೆ. ಅಜಟೆಕ್ಕರ ಯುದ್ಧಶೈಲಿ-ಕಾರ್ಯತಂತ್ರಗಳು ಹಿಂದೂಗಳ 'ಧರ್ಮಯುದ್ಧ'ದಂತೆಯೇ ಇವೆ. ಅಜಟೆಕ್ಕರ ನಾಯಕ ಮೊಂಟೆಜéುಮಾ ಎಷ್ಟು ಮುಗ್ಧನೆಂದರೆ, ಈ ಸ್ಪೇನ್ ಸೇನಾನಾಯಕ ಕೋಟರ್ೆಸ್ನನ್ನು ಅವನು ಸ್ನೇಹದಿಂದ ಸ್ವಾಗತಿಸಿದನು. ಎಷ್ಟೋ ಜನ ಅಮೆರಿಕನ್ - ಯೂರೋಪಿಯನ್ ಇತಿಹಾಸಕಾರರಿಗೆ ಈ ಮೊಂಟೆಜéುಮಾ ಮೂರ್ಖನಂತೆ, ಹೇಡಿಯಂತೆ ಕಾಣಿಸಿದ್ದಾನೆ. ಆದರೆ, ಈ ಅಜಟೆಕ್ಕರಿಗೆ ಮತ್ತು ಅಂತಹ ಉಳಿದ ಮೂಲನಿವಾಸಿ ಜನಾಂಗಗಳಿಗೆ ಯುದ್ಧವೆಂಬುದು ಮೊದಲೇ ಘೋಷಿಸಿ ಮಾಡಬೇಕಾದಂತಹ ವಿಧಿಯಾಗಿತ್ತು, ಸಂಪ್ರದಾಯವಾಗಿತ್ತು. ಯುದ್ಧದ ಕಾರಣವನ್ನೂ ತಿಳಿಸಬೇಕಾಗಿತ್ತು. ಯುದ್ಧವೂ ಧಾಮರ್ಿಕ ಕ್ರಿಯೆಯಾಗಿತ್ತು. ಗಮನಿಸಿ. ಯುದ್ಧದಲ್ಲಿ ಮೋಸಮಾಡುವುದು ಧರ್ಮವಿರುದ್ಧವಾಗಿತ್ತು, ನಿಷಿದ್ಧವಾಗಿತ್ತು. ಈ ಇಂಗಾ ಕ್ಲೆಂಡಿನೆನ್ ದಾಖಲಿಸಿರುವ ಶತ್ರುಗಳಿಗೆ ಆಹಾರವನ್ನು-ಆಯುಧಗಳನ್ನು ಕಳುಹಿಸಿ, ತದನಂತರ ಅವರು ಸಿದ್ಧರಾದಮೇಲೆಯೇ ಯುದ್ಧವನ್ನು ಆರಂಭಿಸಲಾಗುತ್ತಿತ್ತು. ದುರ್ಬಲ ಶತ್ರುವಿನ ಮೇಲೆ ದಾಳಿ ಮಾಡುವ, ಯುದ್ಧ ಮಾಡುವ ಪ್ರಶ್ನೆಯೇ ಇರಲಿಲ್ಲ ಎಂಬ ಸಂಗತಿಯು ಹೇಗಿದೆ, ನೋಡಿ. ಕೋಟರ್ೆಸ್ನು ತಾನು ಶಾಂತಿದೂತನಾಗಿ ಬಂದಿರುವುದಾಗಿ ಹೇಳಿ, ತನ್ನ ಪಡೆಯೊಂದಿಗೆ ಒಳಹೊಕ್ಕನು. ಅಲ್ಲಿ ಅಜಟೆಕ್ಕರ ನಾಯಕ, ಪುರೋಹಿತರು, ಗಣ್ಯರು, ಸೈನಿಕರು, ಜನರು ಎಲ್ಲರೂ ತಮ್ಮ ಹುಯಿಜಿಲೋಪೋಷ್ಟ್ಲಿ ಎಂಬ ದೈವದ ಪೂಜೆ-ಉತ್ಸವ-ಸಂಗೀತ-ನೃತ್ಯಗಳಲ್ಲಿ ಮಗ್ನರಾಗಿದ್ದರು. ಕೋಟರ್ೆಸ್ನ ಕ್ರೂರಿ ಸೇನಾನಾಯಕ ಪೆಡ್ರೋ ಡಿ ಅಲ್ವರಾಡೋನ ಪಡೆಯು ಅವರನ್ನೆಲ್ಲಾ ಸುತ್ತುವರಿದಾಗಲೂ, ಆ ಮೂಲನಿವಾಸಿಗಳು, ಈ ಪಡೆಯು ತಮ್ಮ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದೆ, ಎಂದೇ ಭಾವಿಸಿದರು. ಏಕಾಏಕಿ ಈ ಸ್ಪೇನಿನ ಪಡೆಯವರು ಸಂಗೀತಕಾರರ-ನರ್ತಕರ ತಲೆಗಳನ್ನು, ಕೈಕಾಲುಗಳನ್ನು ಕತ್ತರಿಸಿದರು. ಅಲ್ಲಿದ್ದವರನ್ನೆಲ್ಲಾ ಅಮಾನುಷವಾಗಿ ಬೇಟೆಯಾಡಿ ಕತ್ತರಿಸಿ, ಕತ್ತರಿಸಿ ಎಸೆಯಲಾಯಿತು. ಇದನ್ನು ಊಹಿಸಿರದ ಮುಗ್ಧ ಅಜಟೆಕ್ಕರ ರಕ್ತದ ಹೊಳೆಯೇ ಹರಿಯಿತು. ದೇವಸ್ಥಾನದ ಮೇಲೆ ಹತ್ತಿದವರನ್ನೂ ಬಿಡದೆ ಕೊಂದುಹಾಕಲಾಯಿತು. ಮೊಂಟೆಜéುಮಾನನ್ನು ಬಂಧಿಸಿ, ಸರಪಳಿ ಹಾಕಿ ಹಿಂಸಿಸಲಾಯಿತು. ಎರಡು ವಾರ ನಡೆದ ರಾತ್ರಿಯುದ್ಧ, ಮೋಸದ ಯುದ್ಧಗಳಲ್ಲಿ ಅಜಟೆಕ್ಕರಿಗೆ ಭಾರೀ ಹಾನಿಯಾಯಿತು. ಈ ಯುದ್ಧಕ್ಕಿಂತ ಹೆಚ್ಚಿನ ಹಾನಿಯು, ಈ ಸ್ಪೇನಿನವರಿಂದ ಸಾಂಕ್ರಾಮಿಕವಾಗಿ ಹರಡಲ್ಪಟ್ಟ ಸಿಡುಬು ರೋಗದಿಂದ ಆಗಿಹೋಯಿತು. ಸಾಮುದಾಯಿಕ ಜೀವನಪದ್ಧತಿಯ ಅಜಟೆಕ್ಕರ ಅಂತಹ ಶೈಲಿಯಿಂದಲೇ ಈ ಸಿಡುಬು ರೋಗವು ತುಂಬ ಬೇಗ ಹರಡಿ, ಎಲ್ಲ ಅಜಟೆಕ್ಕರೂ ನರಳಿ ನರಳಿ ಹೆಸರಿಲ್ಲದಂತಾಗಿ ಸತ್ತುಹೋದರು. ಹಾಗೆ ನೋಡಿದರೆ ಕೋಟರ್ೆಸ್ನ ಪಡೆಯನ್ನು, ಈ ಅಜಟೆಕ್ಕರು ಸೋಲಿಸಿ ಓಡಿಸಿದ್ದರು. ಹೆಚ್ಚಿನ ತೊಂದರೆಯಾದುದು ಸಿಡುಬು ರೋಗದಿಂದಲೇ. ದ್ವೀಪಕ್ಕೆ ಹೊರಗಿನಿಂದ ಬರುತ್ತಿದ್ದ ಆಹಾರ, ನೀರಿನ ಸರಬರಾಜು ಆಗದಂತೆ ತಡೆದ ಈ ಕೋಟರ್ೆಸ್ನ ಪಡೆಗೆ ಗೊತ್ತಿದ್ದುದು, ವಿಶಿಷ್ಟ ಯೂರೋಪಿಯನ್ ಯುದ್ಧತಂತ್ರವಾದ ಹೇಗಾದರೂ ಕೊಲ್ಲು, ಹೇಗಾದರೂ ಗೆಲ್ಲು ಎಂಬ ಅನೀತಿಯುತವಾದ ಶೈಲಿಯೇ. ಸಾತ್ತ್ವಿಕರಾದ ಅಜಟೆಕ್ಕರು ಈ ವಿಕೃತ ಮಾನವರ ಎದುರು ಹೇಗೆ ತಾನೇ ನಿಂತಾರು? ಇಂತಹ ಐತಿಹಾಸಿಕ ಘಟನೆಗಳು, ಸಂಗತಿಗಳು ಒಂದೇ, ಎರಡೇ, ಸಹಸ್ರ-ಸಹಸ್ರ. ಸಾರಾಂಶರೂಪವಾಗಿ ಹೇಳುವುದಾದರೆ, ಯೂರೋಪಿಯನ್ ಪಾತಕಿಗಳು ಹೆಜ್ಜೆಯಿಡುವ ಸಮಯದಲ್ಲಿ, ಈ ಮಧ್ಯಭಾಗದ ಮೆಕ್ಸಿಕೋ ಪ್ರದೇಶದಲ್ಲಿ 1519ರ ಸುಮಾರಿಗೆ ಅಂದಾಜು 250 ಲಕ್ಷ ಜನರಿದ್ದರು. 1595ರ ಹೊತ್ತಿಗೆ ಬರಿಯ 13 ಲಕ್ಷ ಜನರು ಉಳಿದಿರಬಹುದೆನ್ನಲಾಗಿದೆ. ಎರಡು ಕೋಟಿ ಮೂವತ್ತೇಳು ಲಕ್ಷಗಳಷ್ಟು ಬೃಹತ್ ಸಂಖ್ಯೆಯ ಮೂಲನಿವಾಸಿಗಳು ಈ ಪಾತಕಿಗಳ ಆಕ್ರಮಣಕ್ಕೆ - ಮೋಸಕ್ಕೆ - ಇವರು ಹರಡಿದ ರೋಗಗಳಿಗೆ ತುತ್ತಾಗಿ ಸತ್ತುಹೋಗಿದ್ದರು. ಇಂದಿಗೂ ಈ ಯೂರೋಪಿಯನ್ ಮೂಲದ ಪಾಪಿಗಳಿಗೆ ತಾವು ಮಾಡಿದ ಘೋರಕೃತ್ಯಗಳ ಬಗೆಗೆ ಪಶ್ಚಾತ್ತಾಪವೂ ಇಲ್ಲ, ದುಃಖವೂ ಇಲ್ಲ. ಇಲ್ಲವಾದರೆ, ಅಂತಹುದೇ ದುಷ್ಕಾರ್ಯಗಳನ್ನು ಅವರು ಆಫ್ರಿಕಾ-ಭಾರತ-ಮುಂತಾದೆಡೆ ಇಂದಿಗೂ ಮುಂದುವರಿಸುತ್ತಿರಲಿಲ್ಲ. 1492ಕ್ಕೆ ಮುಂಚಿನ ಅಂದಾಜುಗಳನ್ನು ಗಮನಿಸಿದರೆ, ಆಗ್ನೇಯ ಮೆಕ್ಸಿಕೋ ಭಾಗದಲ್ಲಿದ್ದ 17 ಲಕ್ಷ ಜನರ ಬದಲಾಗಿ, ಒಂದೂವರೆ ಶತಮಾನದ ಅವಧಿಯ ನಂತರ ಬರಿಯ 2,40,000 ಜನರು ಉಳಿದಿದ್ದರು. ಉತ್ತರ ಮೆಕ್ಸಿಕೋ ಭೂಭಾಗದಲ್ಲಿ 25 ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಮೂಲನಿವಾಸಿಗಳಿದ್ದರು. ಅಲ್ಲಿಯೂ ಅವರ ಸಂಖ್ಯೆಯು 3,20,000ಕ್ಕೆ ಇಳಿಯಿತು. ಜಾಜರ್್ ಲೋವೆಲ್ಲನ ಕಾಂಕ್ವೆಸ್ಟ್ ಅಂಡ್ ಸವರ್ೈವಲ್ ಇನ್ ಕಾಲೋನಿಯಲ್ ಗ್ವಾಟೆಮಾಲಾ 1500-1821 (ಮಾಂಟ್ರಿಯಾಲ್, 1985 ಪ್ರಕಟಣೆ, ಪುಟ 145), ವಿಲಿಯಂ ಎಂ. ಡೆನ್ವೆನ್ನ ದ ನೇಟೀವ್ ಪಾಪ್ಯುಲೇಶನ್ ಆಫ್ ದಿ ಅಮೆರಿಕಾಸ್ (1976 ಪ್ರಕಟಣೆ, ಪುಟಗಳು 67-76) ಮತ್ತು ಇನ್ನೂ ಹತ್ತಾರು ಸಾಕ್ಷ್ಯಾಧಾರ, ಕೋಷ್ಟಕಗಳ ದಾಖಲೆಗಳಿಂದ ಈ ವಿವರಗಳನ್ನು ಕ್ರೋಡೀಕರಿಸಲಾಗಿದೆ. ಗ್ವಾಟೆಮಾಲಾದಲ್ಲಿ ಯೂರೋಪಿಯನ್ನರು ಕಾಲಿಟ್ಟ ಐವತ್ತು ವರ್ಷಗಳಲ್ಲಿ ಶೇಕಡಾ 82ರಷ್ಟು ಜನರು ನಾಶವಾದರು. ಅನಂತರದ ನೂರೈವತ್ತು ವರ್ಷಗಳಲ್ಲಿ ಉಳಿದಿದ್ದವರಲ್ಲಿ ಶೇಕಡಾ 94ರಷ್ಟು ಜನ ನಾಮಾವಶೇಷವಾಗಿಹೋದರು. ಪಶ್ಚಿಮ ನಿಕರಾಗುವಾದಲ್ಲಿದ್ದ ಹತ್ತುಲಕ್ಷ ಜನರಲ್ಲಿ, ಉಳಿದವರು ಬರಿಯ ಹತ್ತುಸಾವಿರ. ಅಂದರೆ, ಶೇಕಡಾ 99ರಷ್ಟು ಜನರ ಮಾರಣಹೋಮ. 1520ರಲ್ಲಿ ಜಲಾಪಾದಲ್ಲಿದ್ದವರು ಸುಮಾರು 180,000 ಜನ. 1626ರ ಹೊತ್ತಿಗೆ ಬರಿಯ 5 ಸಾವಿರ ಜನ ಉಳಿದಿದ್ದರು. ಇಂದು ಇಂಕಾ ಸಂಸ್ಕೃತಿಯ ಕುರುಹುಗಳನ್ನು, ಬರಹಗಳನ್ನು ಓದುವವರು ಯಾರೂ ಇಲ್ಲ. ಅಂತಹ ಅಮೂಲ್ಯವಾದ ಮಾಹಿತಿಯ ಕೊಂಡಿಯೇ ಇಲ್ಲ. ಮೂಲನಿವಾಸಿಗಳಲ್ಲಿ, ಒಬ್ಬರೂ ಉಳಿಯದಂತೆ ಕೊಂದುಹಾಕಿಬಿಟ್ಟರೆ, ಎಂತಹ ಪರಿಸ್ಥಿತಿ ಬರುತ್ತದೆ, ನೋಡಿ. ರಾತ್ರಿಯ ಕಗ್ಗತ್ತಲೆಯಲ್ಲಿ ನಗರವೊಂದು ಎಚ್ಚರತಪ್ಪಿ ಮಲಗಿದೆ. ವಿದೇಶೀ ಕಂಪೆನಿಯೊಂದರ ವಿಷದ ಅನಿಲದ ಟ್ಯಾಂಕ್ ಸೋರುತ್ತದೆ. ಅದು ಬರೀ ವಿಷವಲ್ಲ. ಉಸಿರಾಡಿದರೆ ಸತ್ತೇ ಹೋಗುವಂತಹ ಕಾಕರ್ೋಟಕ ವಿಷಾನಿಲ. ಸಾವಿರ ಸಾವಿರ ಜನ ನಿದ್ರೆಯಲ್ಲಿಯೇ ವಿಲವಿಲ ಒದ್ದಾಡಿ ಸಾಯುತ್ತಾರೆ. ಅರ್ಧಂಬರ್ಧ ಉಸಿರೆಳೆದುಕೊಂಡವರಿಗೆ, ತಪ್ಪಿಸಿಕೊಂಡು ಓಡಲೆತ್ನಿಸಿದವರಿಗೆ ಇನ್ನೂ ಭಯಂಕರ ನರಕ. ಸತ್ತಿದ್ದರೇ ಚೆನ್ನಾಗಿತ್ತು ಎನ್ನುವಂತಹ ಆಘಾತ. ಏನಾಗಿದೆ, ಏನು ಮಾಡಬಹುದು ಎಂದು ಸಕರ್ಾರ ಯೋಚಿಸುವುದರೊಳಗೆ ಆಗಬಾರದ್ದು ಆಗಿಹೋಗಿದೆ. ನಿಮಗೆ ಗೊತ್ತು, ಅದು ಭೋಪಾಲ್ ಮಹಾನಗರ ಎಂದು. ಅಂತೆಯೇ ಆ ವಿದೇಶೀ ಕಂಪನಿ ಯೂನಿಯನ್ ಕಾಬರ್ೈಡ್ ಎಂಬುದೂ ಗೊತ್ತು. ಡಿಸೆಂಬರ್ 1984 ರ ಆ ದುರಂತ ಸಂಭವಿಸಿ ಮೂರು ದಶಕಗಳೇ ಉರುಳಿವೆ. ಸತ್ತ ಸಾವಿರಾರು ಜನರಂತೆಯೇ, ಪ್ರಶ್ನೆಗಳೂ ಸತ್ತಿವೆ. ಆಯೋಗ, ಸಕರ್ಾರ ಏನು ಮಾಡಿದವು? ಸುರಕ್ಷತಾ ಕ್ರಮದ ಲೋಪಕ್ಕೆ ಆ ವಿದೇಶೀ ಕಂಪನಿಯ ಅಧಿಕಾರಿಗಳಿಗೆ ಏನು ಶಿಕ್ಷೆಯಾಯಿತು? ಮೃತರ, ತೊಂದರೆಗೆ ಒಳಗಾದವರ ಕುಟುಂಬಗಳಿಗೆ ಸೂಕ್ತ ಪರಿಹಾರ ದೊರೆಯಿತೇ? ಉತ್ತರ ಕೊಡುವವರು, ಸಮಾಧಾನ ಹೇಳುವವರು ಯಾರು? ಯಾರೂ ಇಲ್ಲ. ಯಾರೋ ಅನುಮಾನ ವ್ಯಕ್ತಪಡಿಸುತ್ತಾರೆ. ಇದು ಅಮೆರಿಕದಂತಹ ದೇಶಗಳ - ಬಹುರಾಷ್ಟ್ರೀಯ ಕಂಪನಿಗಳ ಪ್ರಯೋಗ ಎನ್ನುತ್ತಾರೆ. ಪ್ರಯೋಗ ಪಶು ಎಂಬಂತೆ ಭಾರತೀಯರನ್ನು ಪರಿಗಣಿಸಲಾಗಿದೆ, ಎನ್ನುತ್ತಾರೆ. ರಾಸಾಯನಿಕ ಅಸ್ತ್ರಗಳ ಬಳಕೆಯಿಂದ ಆಗಬಹುದಾದ ದುರಂತ, ಸಾವು ನೋವುಗಳನ್ನು ಅಂದಾಜಿಸಲು ಈ ರೀತಿ ಪ್ರಯೋಗ ಮಾಡಿರಬಹುದು, ಎನ್ನುತ್ತಾರೆ. ಇದರ ಮಧ್ಯೆಯೇ, ಬಾಹ್ಯಶಕ್ತಿಗಳು ಒತ್ತಡ ಉಂಟುಮಾಡುತ್ತವೆ. ವಿಚಾರಣೆ - ಮೊಕದ್ದಮೆಗಳು ನಿಷ್ಪ್ರಭಾವಿಯಾಗುತ್ತವೆ. ಅಮೆರಿಕದಲ್ಲಿ, ಯೂರೋಪಿನಲ್ಲಿ ಈ ಬಗೆಯ ದುರಂತಗಳು ಸಂಭವಿಸದಂತೆ, ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ, ಎನ್ನುತ್ತಾರೆ. ಅಲ್ಲಿನ ವ್ಯವಸ್ಥೆ ಇನ್ನಷ್ಟು ಬಿಗಿಯಾಗುತ್ತದೆ, ವೈಜ್ಞಾನಿಕವಾಗುತ್ತದೆ. ಇಲ್ಲಿ ಮಾತ್ರ ಯಥಾಸ್ಥಿತಿ. ಕೆಲವು ವರ್ಷಗಳು ಉರುಳುತ್ತವೆ. ದುರಂತಕ್ಕೆ ಸಿಲುಕಿದ ಅಮಾಯಕರನ್ನು ಬಿಟ್ಟು, ನಾವೆಲ್ಲ ಎಲ್ಲವನ್ನೂ ಮರೆಯುತ್ತೇವೆ. ಮರೆವು ಎನ್ನುವುದು ಒಂದು ಬಗೆಯ ಔಷಧಿ, ಒಂದು ಬಗೆಯ ಉಪಶಮನಕಾರಿ, ಎಂಬ ವೇದಾಂತದ ಮಾತೂ ಆಡುತ್ತೇವೆ. ಇಂತಹ 'ವೇದಾಂತ'ಕ್ಕಂತೂ, ನಮ್ಮಲ್ಲಿ ಯಾವ ಕೊರತೆಯೂ ಇಲ್ಲ. ಒಂದು ದಿನ ಇದ್ದಕ್ಕಿದ್ದಂತೆ, ಸೂರತ್ ನಗರದಲ್ಲಿ ಪ್ಲೇಗ್ ಹರಡುತ್ತದೆ. ಕೆಲವರು ಪ್ಲೇಗ್ ಎನ್ನುತ್ತಾರೆ, ಇನ್ನು ಕೆಲವರು ಇದು ಬೇರೆ ಎನ್ನುತ್ತಾರೆ. ನೂರಾರು ಜನ ಪಟಪಟನೆ ಸಾಯುತ್ತಾರೆ. ವಿಷಾಣುಗಳು ಗಾಳಿಯಲ್ಲೇ ಹರಡಿ, ಜನ ದಿಕ್ಕಾಪಾಲಾಗಿ, ಕೈಗೆ ಸಿಕ್ಕ ವಾಹನದಲ್ಲಿ ಊರು ಬಿಟ್ಟು ಹೊರಗೆ ಓಡುತ್ತಾರೆ, ಹೇಗಾದರೂ ಜೀವ ಉಳಿಸಿಕೊಳ್ಳೋಣ ಎಂದು ಪಲಾಯನ ಮಾಡುತ್ತಾರೆ. ಎಂದಿನಂತೆ ಸಕರ್ಾರವು ಎಲ್ಲ ರೀತಿಯಲ್ಲಿಯೂ ವಿಫಲವಾಗುತ್ತದೆ. ಪ್ಲೇಗ್, ಸಿಡುಬು ಎಂಬ ಭಯಾನಕ ಅಂಟುಜಾಡ್ಯಗಳು ತೊಲಗಿಹೋದವು, ಹಿಂದೆ ಕೋಟಿ ಕೋಟಿ ಜನರನ್ನು ಅವು ಬಲಿ ತೆಗೆದುಕೊಂಡಿದ್ದವು, ಎಂದೆಲ್ಲಾ ನಾವು ಪಠ್ಯಪುಸ್ತಕಗಳಲ್ಲಿ ಓದಿದ್ದೆವು, ಎಂಬುದು ನೆನಪಾಗಿ ಬೆಚ್ಚಿಬೀಳುತ್ತೇವೆ. ಮುಂದುವರಿದ ಕೆಲವು ದೇಶಗಳು ಈ ಪ್ಲೇಗ್ - ಸಿಡುಬು ಅಂತಹ ಭಯಾನಕ ರೋಗಗಳ ವಿಷಾಣುಗಳನ್ನು ಪ್ರಯೋಗಾಲಯಗಳಲ್ಲಿ ಜೋಪಾನವಾಗಿ ಬೆಳೆಸುತ್ತಿವೆ, ಅಡಗಿಸಿಟ್ಟುಕೊಂಡಿವೆ. ಮಾರಕಾಸ್ತ್ರಗಳಂತೆ, ಶತ್ರುಗಳನ್ನು ಕೊಲ್ಲಲು ಇವುಗಳನ್ನು ಪ್ರಯೋಗಿಸಲಾಗಿದೆ, ಎಂದು ಕೆಲವರು ಭಾವಿಸುತ್ತಾರೆ. ಈ ಅಸ್ತ್ರವನ್ನು ಜೀವರಸಾಯನ ಮಾರಕಾಸ್ತ್ರ ಎಂದು ಕರೆಯಬಹುದೇ ಎಂದು ಪಂಡಿತರು ನಿರುಕಿಸುತ್ತಾರೆ. ಹೇಗೆ ಈ ರೋಗ ಹರಡಿತು? ಸಮುದ್ರತೀರದ ಈ ನಗರವನ್ನು ಪ್ರಯೋಗಕ್ಕಾಗಿ ಆರಿಸಲಾಯಿತೇ? ಇದು ಹಳೆಯ ಪ್ಲೇಗಿನ ಅವತಾರವೇ? ಅಥವಾ ಹೊಸಬಗೆಯ ರೋಗವೇ? ಪ್ರಶ್ನೆಗಳಿಗೇನು ಬಿಡಿ, ಕೇಳುವವರು ಇದ್ದೇ ಇರುತ್ತಾರೆ. ಉತ್ತರಿಸುವವರು ಯಾರೂ ಇಲ್ಲ. ಈ ಬಗೆಯ ದುರಂತ ಮತ್ತೆಲ್ಲೂ ಯಾವ ದೇಶದಲ್ಲೂ ಮತ್ತೆ ಸಂಭವಿಸಿಲ್ಲ, ಎಂದು ಯಾರೋ ಬರೆಯುತ್ತಾರೆ. ಅದೇ ಕಥೆ. ಉತ್ತರಗಳಿಲ್ಲದ ಪ್ರಶ್ನೆಗಳು. ಸಮಾಧಾನವಿರದ ಸಂದೇಹಗಳು. ಭಾರತದಂತಹ ದೇಶಗಳಲ್ಲಿ ಮಾತ್ರ ಇದು ಸಂಭವಿಸುತ್ತದೆ. ಯೂರೋಪಿನಲ್ಲಿ - ಅಮೆರಿಕಾದಲ್ಲಿ ಆಗುವುದಿಲ್ಲ ನೋಡಿ, ಎಂದು ಕೆಲವರು ಸಂದೇಹ ವ್ಯಕ್ತಪಡಿಸುತ್ತಾರೆ. ಸ್ಪೇನ್, ಪೋತರ್ುಗಲ್, ಇಂಗ್ಲೆಂಡ್, ಹಾಲೆಂಡ್ ಮುಂತಾದ ದೇಶಗಳ ಕಡಲ್ಗಳ್ಳರ - ಲೂಟಿಕೋರರ - ಪಾತಕಿಗಳ ಸಂತಾನವಿದೆ ಅಮೆರಿಕಾ ದೇಶದಲ್ಲಿ, ಅವರದ್ದೇ ಈ ಕೆಲಸ, ಎಂದು ಕೆಲವರು ಹಿಡಿಶಾಪ ಹಾಕುತ್ತಾರೆ. ನಿಧಾನವಾಗಿ ನಾವು ಇದನ್ನು ಮರೆಯುತ್ತೇವೆ. ಕಳೆದ ಹತ್ತಾರು ವರ್ಷಗಳಲ್ಲಿ ಮಿತಿಮೀರಿರುವ ಮುಸ್ಲಿಂ ಭಯೋತ್ಪಾದಕತೆ, ಎಲ್ಲವನ್ನೂ ಮರೆಸಿಬಿಡುತ್ತದೆ. ನಾವೇ ಮರೆತ ಮೇಲೆ, ನಾವು ಅಧಿಕಾರಕ್ಕೆ ತಂದ ಕೇಂದ್ರ ಸಕರ್ಾರಕ್ಕೆ ಇನ್ನೂ ಒಳ್ಳೆಯ ಮರೆವು. ಸಂಸತ್ತಿನ ಮೇಲೆ ದಾಳಿ ಮಾಡಿದವನಿಗೇ ತುಂಬ ವರ್ಷ ಶಿಕ್ಷೆಯಾಗಲಿಲ್ಲ ಎಂದ ಮೇಲೆ, ಬೇರೆ ವ್ಯಾಖ್ಯಾನದ ಅಗತ್ಯವಿದೆಯೇ? ನಮ್ಮ ದೇಶದ ಸಮೀಪವೇ ವಿಯೆಟ್ನಾಮ್ ಎಂಬ ದೇಶವಿದೆ. ಯೂರೋಪಿನ ಕೈಗಾರಿಕಾ ಕ್ರಾಂತಿ, ಸಿಡಿಮದ್ದು - ಬಾಂಬು - ಬಂದೂಕು - ಫಿರಂಗಿಗಳಂತಹ ವೈಜ್ಞಾನಿಕ ಅನ್ವೇಷಣೆ ಎಂದರೆ ಸಾಮಾನ್ಯವೇ. 19ನೆಯ ಶತಮಾನದಲ್ಲಿ ಫ್ರೆಂಚ್ ವಸಾಹತುದಾರರ ವಶವಾಯಿತು ಈ ದೇಶ. ಅದೊಂದು ಕೃಷಿಪ್ರಧಾನ ದೇಶ. ಮೀನುಗಳು - ಖನಿಜಗಳು ಇನ್ನೂ ಏನೇನೋ. ನಮ್ಮ ಗಂಗಾನದಿಯ ಹೆಸರಿನ 'ಮೆಕೊಂಗ್' (ಮಾ ಗಂಗಾ, ತಾಯಿ ಗಂಗೆ) ನದಿ ಟೆಬೆಟ್ಟಿನಲ್ಲಿ ಹುಟ್ಟಿ, ಕಾಂಬೋಡಿಯಾದಲ್ಲಿ ಹರಿದು, ಈ ವಿಯೆಟ್ನಾಮಿನಲ್ಲಿ ಸಮುದ್ರವನ್ನು ಸೇರುತ್ತದೆ. ನಮ್ಮ ಗಂಗೆಯಂತೆಯೇ, ಈ ಮೆಕೊಂಗ್ ನದಿಯು ವಿಯೆಟ್ನಾಮಿನ ಜೀವನಾಡಿ. ಕಿತ್ತಾಡಲು, ಹೊಡೆದಾಡಲು ಕಾರಣಗಳೇನೂ ಬೇಡ. ಉತ್ತರ ವಿಯೆಟ್ನಾಮ್ - ದಕ್ಷಿಣ ವಿಯೆಟ್ನಾಮ್ ಎರಡು ವಿಭಿನ್ನ ಧ್ರುವಗಳಾದವು. ಮುಂದೆ ಉತ್ತರ ವಿಯೆಟ್ನಾಮ್ ಪ್ರಾಂತವು ಫ್ರೆಂಚ್ ವಸಾಹತುಶಾಹಿಗಳ ಕೈತಪ್ಪಿ ಕಮ್ಯುನಿಸ್ಟರ ವಶವಾಯಿತು. ಅಕ್ಷರಶಃ ಬಾಣಲೆಯಿಂದ ಬೆಂಕಿಗೆ. ಅಮೆರಿಕಾದ ಸಜ್ಜನರು ಕಾಲಹರಣ ಮಾಡದೇ, ದಕ್ಷಿಣ ವಿಯೆಟ್ನಾಮನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ರಷ್ಯಾ - ಚೀನಾಗಳ ಸನಿಹದಲ್ಲಿ ಒಂದು ಆಯಕಟ್ಟಿನ ಜಾಗ ಬೇಡವೇ, ಪಾಪ ಅವರಿಗೆ. ದಕ್ಷಿಣ ವಿಯೆಟ್ನಾಮಿನ ಪೂರ್ಣ ನಿಯಂತ್ರಣ ಮತ್ತು ಉತ್ತರ ವಿಯೆಟ್ನಾಮನ್ನು ಕಮ್ಯುನಿಸ್ಟರಿಂದ ವಿಮೋಚನೆಗೊಳಿಸುವುದು ಅಮೆರಿಕಾದ ಗುರಿ. ಪ್ರಯೋಗ ಪಶು ಎನ್ನಿ, ಪ್ರಯೋಗ ಜನ ಎನ್ನಿ, ಪ್ರಯೋಗ ದೇಶ ಎನ್ನಿ, ಅಮೆರಿಕಾ ಎಸಗದ - ಮಾಡದ ದುಷ್ಕೃತ್ಯವೇ ಇಲ್ಲ. ದಕ್ಷಿಣ ಮತ್ತು ಉತ್ತರ ವಿಯೆಟ್ನಾಮುಗಳ ಮೇಲಿನ ಅತ್ಯಾಚಾರದ ವಿವರಗಳು ಬಲು ಭಯಂಕರ. ಆಗ ದಕ್ಷಿಣ ವಿಯಟ್ನಾಮಿನಲ್ಲಿ 5,40,000 ಜನ ಅಮೆರಿಕನ್ ಸೈನಿಕರಿದ್ದರು. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಥಾಯ್ಲ್ಯಾಂಡ್, ದಕ್ಷಿಣ ಕೊರಿಯಾ ದೇಶಗಳಿಂದ ಬಾಡಿಗೆ ಆಧಾರದ ಮೇಲೆ 7,55,000 ಜನ ಸೈನಿಕರನ್ನು ಸಹ ಕರೆಸಲಾಗಿತ್ತು. ಸಮುದ್ರತೀರದಲ್ಲೇ ಏಳನೆಯ ನೌಕಾಪಡೆ ಎಂದು ಹೆಸರಾದ ಆಧುನಿಕ ಶಸ್ತ್ರಾಸ್ತ್ರಗಳಿಂದ ಸುಸಜ್ಜಿತವಾದ ಅಮೆರಿಕಾದ ಸೇನೆ ಸುತ್ತಾಡುತ್ತಿತ್ತು. ಬಾಂಗ್ಲಾ ವಿಮೋಚನೆಯ ಸಂದರ್ಭದಲ್ಲಿ, ಭಾರತವನ್ನು ಬೆದರಿಸಲು 1971 ರಲ್ಲಿ, ನಮ್ಮ ತೀರಗಳ ಬಳಿ ಪ್ರತ್ಯಕ್ಷವಾಗಿದ್ದು ಇದೇ ನೌಕಾಪಡೆ. ವಿಯೆಟ್ನಾಮಿನ ದುರಂತವನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ ದಕ್ಷಿಣದಲ್ಲಿ ಸತ್ತವರು 4,30,000 ಜನ. ಗಾಯಗೊಂಡವರು 14,35,000 ಜನ. ವಿಧವೆಯರು ಹತ್ತು ಲಕ್ಷ ಮಂದಿ ಹಾಗೂ ತಬ್ಬಲಿಗಳ ಸಂಖ್ಯೆ ಎಂಟು ಲಕ್ಷ. ಅಂಗವಿಕಲರೇ ಐದು ಲಕ್ಷ ಜನ. ಪ್ರಯೋಗ ದೇಶ ಎಂದೆನಲ್ಲಾ! ಅಮೆರಿಕನ್ನರು ಬರಿಯ ಬಾಂಬು ಹಾಕಲಿಲ್ಲ. ಮಾದಕ ದ್ರವ್ಯಗಳ ಪ್ರವಾಹವನ್ನೇ ವಿಯೆಟ್ನಾಮಿಗೆ ಹರಿಸಿದರು. ಅದಕ್ಕೆ ಬಲಿಯಾದವರು ಐದು ಲಕ್ಷ ಜನ. ಅಮೆರಿಕನ್ ಸೈನಿಕರ ಕಾಮುಕ ದಾಳಿಗೆ ಬಲಿಯಾಗಿ ವೇಶ್ಯೆಯರಾದವರ ಸಂಖ್ಯೆ ಐದು ಲಕ್ಷ. ಯಾರೋ ಪಾಪ ಮಾರ್ಗದಶರ್ಿ ಸೂತ್ರಗಳನ್ನು ಬರೆದರು. ಯುದ್ಧ ಕಾಲದಲ್ಲಿ ನಾಗರಿಕರ ಮೇಲೆ, ದೇವಾಲಯಗಳ ಮೇಲೆ, ಆಸ್ಪತ್ರೆಗಳ ಮೇಲೆ ಬಾಂಬ್ ಹಾಕಬಾರದು, ಇತ್ಯಾದಿ ಇತ್ಯಾದಿ. ಅದು ಕುರಿಮರಿಯಂತಹ ದೇಶಗಳಿಗೆ ಅನ್ವಯವಾಗುತ್ತದೆಯೇ ಹೊರತು, ಅಮೆರಿಕದಂತಹ ತೋಳಕ್ಕೆ ಅಲ್ಲ. ವಿಯೆಟ್ನಾಮಿನ ಮೂರನೇ ಎರಡು ಭಾಗ ಹಳ್ಳಿಗಳ ಮೇಲೆ ಬಾಂಬ್ ಹಾಕಲಾಗಿತ್ತು. ಎಲ್ಲ ರೈಲು ನಿಲ್ದಾಣಗಳಿಗೆ, ಎಲ್ಲ ಹಡಗು ಕಟ್ಟೆಗಳಿಗೆ, ಎಲ್ಲ ನದೀ ತೀರಗಳಿಗೆ ಬಾಂಬ್ ಹಾಕಲಾಗಿತ್ತು. 2923 ಶಾಲೆಗಳು, 465 ಬೌದ್ಧ ದೇವಾಲಯಗಳು, 484 ಚಚರ್ುಗಳು, 808 ಸಾಂಸ್ಕೃತಿಕ ಸ್ಮಾರಕಗಳು, 250 ಆಸ್ಪತ್ರೆಗಳು, 1500 ಪ್ರಸೂತಿಗೃಹಗಳ ಮೇಲೆ ದಾಳಿ ಮಾಡಲಾಗಿತ್ತು. ಪಾಪ, ದಾಳಿಕೋರರಿಗೆ ಚಚರ್ು, ಪಗೋಡ ಎಂಬ ಮತಭೇದವಿಲ್ಲ. ಎರಡು ದಶಕಗಳಿಗೂ ಮೀರಿದ ಅವಧಿಯಲ್ಲಿ ಭಯಾನಕವಾದ, ಅಮಾನುಷವಾದ ಇಂತಹ ಕೃತ್ಯಗಳನ್ನು ಎಸಗಿದ ಅಮೆರಿಕಾ, 1975 ರಲ್ಲಿ ವಿಯೆಟ್ನಾಮಿನಿಂದ ಕಾಲ್ತೆಗೆಯಿತು. ಇದು ಯಾವುದೋ ಯುಗದ ಕಗ್ಗವಲ್ಲ. ಮೂರ್ನಾಲ್ಕು ದಶಕಗಳ ಹಿಂದಿನ ಸತ್ಯಕಥೆ. ಆದರೆ ಅಮೆರಿಕನ್ನರು ಇಪ್ಪತ್ತೈದು ಲಕ್ಷ ಟನ್ ಬಾಂಬ್ ಸಿಡಿಸಿದರೂ, ವಿಯೆಟ್ನಾಮ್ ನಿನರ್ಾಮವಾಗಲಿಲ್ಲ. ಅಂತಹ ಆತ್ಮಶಕ್ತಿ, ಸ್ಥೈರ್ಯ, ಫೀನಿಕ್ಸ್ - ಚೈತನ್ಯ ವಿಯೆಟ್ನಾಮಿಗಳದ್ದು. ವಿಯೆಟ್ನಾಮು ಕೃಷಿ ಪ್ರಧಾನ ದೇಶ ಎಂದು ಹೇಳಿದ್ದೆ. ಆ ಕೃಷಿ ಭೂಮಿಯನ್ನು ಬಂಜರುಗೊಳಿಸಲು, ಭೂಮಿಯ ಮೇಲ್ಪದರದ ಸತ್ವವನ್ನು ನಿಸ್ಸತ್ವಗೊಳಿಸಲು ಅಮೆರಿಕನ್ನರು ವಿಮಾನಗಳಿಂದ ಸಿಲ್ವರ್ ಐಯೊಡೈಡ್ ದ್ರಾವಣವನ್ನು ಸುರಿಸಿ, ಕೃತಕ ಮಳೆಗರೆದರು. ಎಲ್ಲ ಸತ್ತ್ವವೂ ಭೂಮಿಯ ಆಳದ ಆಳಕ್ಕೆ ಇಳಿದು, ಏನೂ ಬೆಳೆಯದಂತಾಗಿ, ಕೃಷಿಯೇ ಅಸಾಧ್ಯವಾಗಲಿ ಎಂದು. ಇವೂ ಪ್ರಯೋಗಗಳೇ ಇರಬೇಕು! ಅತ್ಯಂತ ಶಕ್ತಿಶಾಲಿ, ದಾಳಿಕೋರ ಅಮೆರಿಕಾ ಸೋತರೂ ಪುಟ್ಟ ವಿಯೆಟ್ನಾಮು ಸೋಲಲಿಲ್ಲ. ಧೃತಿಗೆಡಲಿಲ್ಲ. ಇಂದು ಸಹ ವಿಯೆಟ್ನಾಮಿನ ಜನ ಹೋರಾಡುತ್ತಲೇ ಇದ್ದಾರೆ. ಇತಿಹಾಸ ಅವರಿಗೆ ಪಾಠ ಕಲಿಸಿದೆ, ಇತಿಹಾಸದಿಂದ ಅವರೂ ಪಾಠ ಕಲಿತಿದ್ದಾರೆ. ಅದು ನಮಗೆ ಸಹ ಪಾಠ ಆಗಬೇಕಿದೆ. ಈಸ್ಟ್ ಇಂಡಿಯಾ ಕಂಪನಿಯು ಮಾಡಿದ ಆಘಾತ ನೆನಪಿಟ್ಟುಕೊಂಡು, ಸ್ವಂತ ಶಕ್ತಿಯ ಮೇಲೆ, ಸ್ವಂತ ಕಾಲುಗಳ ಮೇಲೆ ನಿಲ್ಲುವುದನ್ನು ಕಲಿಯಬೇಕಿದೆ. ಪ್ರಯೋಗ ಪಶು, ಪ್ರಯೋಗ ದೇಶ ಆಗದಂತೆ ಎಚ್ಚರ ವಹಿಸಬೇಕಿದೆ. ಈ ಆಸ್ಟ್ರೇಲಿಯನ್ನರು ಭಾರತೀಯ ವಿದ್ಯಾಥರ್ಿಗಳ ಮೇಲೆ ಹಲ್ಲೆ ಮಾಡುವುದನ್ನು ಕೇಳುವಾಗ, ಓದುವಾಗ ಮೈ ಉರಿಯುತ್ತದೆ. ಯೂರೋಪಿಯನ್ ಮೂಲದ ಶ್ವೇತವಣರ್ೀಯರಿಗೆ ವಿಪರೀತ ದುರಹಂಕಾರ. ಕರಿಯರನ್ನು, ಏಷ್ಯನರನ್ನು, ಎಲ್ಲ ಮೂಲನಿವಾಸಿಗಳನ್ನು ನೋಡಿದರೆ ಇವರಿಗೆ ತಿರಸ್ಕಾರ. ತಾವು ಇರುವುದೇ ಕಪ್ಪುಜನರ ಉದ್ಧಾರಕ್ಕೆ, ಎಂದು ತಿಳಿದಿದ್ದಾರೆ. ಅದನ್ನು ಅವರೇ 'ವೈಟ್ಮ್ಯಾನ್ಸ್ ಬರ್ಡನ್' ಎನ್ನುತ್ತಾರೆ. ಅದೊಂದು ಸಿದ್ಧಾಂತ, ಅದೊಂದು ಮೇಲರಿಮೆಯ ಮಾನಸಿಕತೆ. ಮೂಲನಿವಾಸಿಗಳನ್ನು ಮತಾಂತರಿಸುವುದು, ಕೊಲ್ಲುವುದು ಸಹ ಬ್ಯಾಪ್ಟಿಸಮ್ನ ಒಂದು 'ಪವಿತ್ರ ಕಾರ್ಯ'ವೆಂದು ಅವರು ಭಾವಿಸಿದ್ದಾರೆಯೋ ಏನೋ! ಎಪ್ಪತ್ತರ ದಶಕದಲ್ಲಿ ಇದಿ ಅಮೀನನೆಂಬ ಸವರ್ಾಧಿಕಾರಿ ಉಗಾಂಡ ಎಂಬ ಆಫ್ರಿಕನ್ ದೇಶದ ಅಧಿಕಾರ ಸೂತ್ರ ಹಿಡಿದ. ಅಲ್ಲಿದ್ದ ಏಷ್ಯನರೂ ಸೇರಿದಂತೆ ಎಲ್ಲ ಭಾರತೀಯರನ್ನು ಗಡೀಪಾರು ಮಾಡಿದ. ಅವರ ಆಸ್ತಿ, ಪಾಸ್ತಿ ಮುಟ್ಟುಗೋಲು ಹಾಕಿಕೊಂಡ. ಅವರೆಲ್ಲ ಭಾರತಕ್ಕೆ ಹಿಂತಿರುಗಿದಾಗ ಉಟ್ಟಬಟ್ಟೆಯ ವಿನಃ ಬೇರೇನೂ ಇರಲಿಲ್ಲ. ಜೀವ ಉಳಿದಿದ್ದೇ ಹೆಚ್ಚು ಎನ್ನುವಂತಾಗಿತ್ತು. ಅವರೆಲ್ಲಾ ನೂರಾರು ವರ್ಷಗಳ ಹಿಂದೆ ಭಾರತದಿಂದ ವಲಸೆ ಹೋದವರು. ಅನೇಕ ತಲೆಮಾರುಗಳ ನಂತರ ಭಾರತಕ್ಕೆ ಬಂದಿಳಿದ ಅವರಿಗೆ ಸಂಬಂಧಿಸಿದವರು ಯಾರೂ ಇರಲಿಲ್ಲ. ಅವರ ಬದುಕು ತುಂಬ ದುರ್ಭರವಾಗಿಬಿಟ್ಟಿತು. ಆ ಕಾಲದಲ್ಲಿ ಇಂಗ್ಲೆಂಡಿಗೆ ಹೋಗುವ ಭಾರತೀಯ (ಹಾಗೂ ಏಷ್ಯನ್) ಯುವತಿಯರಿಗೆ ವಜರ್ಿನಿಟಿ ಟೆಸ್ಟ್ (ಕೌಮಾರ್ಯ ಪರೀಕ್ಷೆ) ಎಂಬ ಅವಮಾನಕರ ಪರೀಕ್ಷೆಯೂ ಇತ್ತು. ಆಗೆಲ್ಲ ಸಾಕಷ್ಟು ಪ್ರತಿಭಟನೆಗಳೂ ಆದವು. ಭಾರತ ಬಲಶಾಲಿಯಾಗಿದ್ದರೆ, ಭಾರತದ ರಾಜಕೀಯ ಸೂತ್ರ ಹಿಡಿದವರು ಸ್ವಾಭಿಮಾನಿಗಳಾಗಿದ್ದರೆ, ಆತ್ಮಗೌರವ ಉಳ್ಳವರಾಗಿದ್ದರೆ, ಮೇಲಿನ ಇಂತಹ ಪ್ರಕರಣಗಳು ಉದ್ಭವಿಸುತ್ತಿರಲಿಲ್ಲ. ಅದೇ ನಮ್ಮ ಶತ್ರುರಾಷ್ಟ್ರ ಚೀನಾ ನೋಡಿ. ಇಂದಿಗೂ ಅಮೆರಿಕಾ ಮುಂತಾದ ದೇಶಗಳಿಗೆ ಸವಾಲು ಹಾಕುತ್ತದೆ. ಸೆಡ್ಡು ಹೊಡೆಯುತ್ತದೆ. ದ್ವಿಪಕ್ಷೀಯ ಮಾತುಕತೆಗಳಲ್ಲಿ, ತಾನೇ ನಿಯಮ, ನಿಬಂಧನೆ, ಷರತ್ತು, ನಿರ್ಬಂಧಗಳನ್ನು ವಿಧಿಸುತ್ತದೆ. ತೈಲ ರಾಷ್ಟ್ರಗಳಲ್ಲಿಯೂ ನಮ್ಮವರ ಸ್ಥಿತಿ ತುಂಬ ತುಂಬ ಸೂಕ್ಷ್ಮ. ಇಲ್ಲಿಂದ ದೇವರ ಚಿತ್ರ, ಮೂತರ್ಿಗಳನ್ನು ಪೂಜೆಗೂ ತೆಗೆದುಕೊಂಡು ಹೋಗುವಂತಿಲ್ಲ. ಮನೆಯಲ್ಲೂ ಇಟ್ಟುಕೊಳ್ಳುವಂತಿಲ್ಲ, ಹೊಟ್ಟೆಪಾಡಿಗೆ ಬಿಕನಾಸಿ ಬದುಕು ಬದುಕಬೇಕು. ತಮಾಷೆ ನೋಡಿ, ತೈಲರಾಷ್ಟ್ರಗಳಿಂದ ಬಂದವರಿಗೆ ಇಲ್ಲಿ ರಾಜೋಪಚಾರ. ಅವರು ಏನು ಬೇಕಾದರೂ ಮಾಡಬಹುದು. ಹೈದರಾಬಾದಿನಲ್ಲಂತೂ ತೈಲ ರಾಷ್ಟ್ರಗಳಿಂದ ಬಂದವರಿಗೆ, ಚಿಕ್ಕ ವಯಸ್ಸಿನ ಹುಡುಗಿಯರೊಂದಿಗೆ ನಿಕಾ ಮಾಡಿಸುವ, ಎಲ್ಲ ವ್ಯವಸ್ಥೆ ಮಾಡುವ ಜಾಲಗಳೇ ಇವೆ. ಹಿಂತಿರುಗುವಾಗ ಅವರು ತಲಾಖ್ ಮಾಡಿದರೆ ಆಯಿತು. ಅವರಿಗೆ ನಿರ್ಬಂಧವೂ ಇಲ್ಲ, ಬಂಧನವೂ ಇಲ್ಲ. ಭಾರತಕ್ಕೆ, ಭಾರತೀಯರಿಗೆ, ಭಾರತೀಯರನ್ನು ಹೋಲುವ ಅನೇಕ ಶಾಂತಿಪ್ರಿಯ ಮೂಲನಿವಾಸಿ ಸಮುದಾಯಗಳಿಗೆ ಇಂತಹ ಅಪಾಯಗಳು ಇದ್ದೇ ಇರುತ್ತವೆ. ಆಂತರಿಕ ಸಂಘರ್ಷಗಳನ್ನು ಸರಿಪಡಿಸಿಕೊಂಡು, ಸಂಘಟನೆ ರೂಪಿಸಿಕೊಂಡು ಹೋರಾಟ ಮಾಡದಿದ್ದರೆ, ಇಂತಹ ಸಮುದಾಯಗಳು ಇತಿಹಾಸ ಸೇರಬೇಕಾಗುತ್ತದೆ. ನಾವು ಸಹ ತುಂಬ ತುಂಬ ಎಚ್ಚರಿಕೆ ವಹಿಸಬೇಕು ಎಂದು ತೀವ್ರವಾಗಿ ಅನ್ನಿಸಿದ್ದು, ಆಚರ್್ ಡೇವಿಡ್ಸನ್ ಅವರ 'ಎನ್ಡೇಂಜರ್ಡ್ ಪೀಪಲ್ಸ್' (ಅಪಾಯಕ್ಕೆ ಸಿಕ್ಕಿಹಾಕಿಕೊಂಡಿರುವ ಸಮುದಾಯಗಳು) ಎಂಬ ಮಹತ್ತ್ವದ ಗ್ರಂಥ ಓದಿದಾಗ. ಲೇಖಕ ಡೇವಿಡ್ಸನ್ ಅವರು ಅಲಾಸ್ಕಾ ದೇಶದ ಮೂಲನಿವಾಸಿಗಳೊಂದಿಗೆ 25 ವರ್ಷ ಇದ್ದು, ಅವರ ಸಾಂಪ್ರದಾಯಿಕ ಜೀವನವಿಧಾನ ಮತ್ತು ಮೌಲ್ಯಗಳನ್ನು ಅಭ್ಯಾಸ ಮಾಡಿದ್ದಾರೆ. ಮಾನವ ಮತ್ತು ಪ್ರಾಣಿ ಸಮುದಾಯಗಳ ಜೀವವೈವಿಧ್ಯ ಮತ್ತು ಜೀವನ ವೈಶಿಷ್ಟ್ಯಗಳ ವಿಭಿನ್ನತೆಗಳನ್ನು ಇಡೀ ಜಗತ್ತು ಉಳಿಸಿಕೊಳ್ಳಲೇಬೇಕೆಂಬ ತೀವ್ರತರ ಪ್ರೇರಣೆ ಪಡೆಯುವ ಸಲುವಾಗಿಯಾದರೂ, ಇಂತಹ ಪುಸ್ತಕಗಳನ್ನು ಓದಬೇಕು. ನಾವು ನಮ್ಮ ಸುಂದರ ಭೂಮಂಡಲದ ಪರ್ವತಗಳು, ನದಿಗಳು, ಅರಣ್ಯಗಳು, ಗದ್ದೆ ಹೊಲ, ತೋಟಗಳು, ಸಮುದ್ರ ತೀರಗಳು, ಹುಲ್ಲುಗಾವಲು, ಮೈದಾನಗಳು ಎಲ್ಲವನ್ನೂ ಉಳಿಸಿಕೊಳ್ಳಬೇಕಾಗಿದೆ. ಮರುಭೂಮಿ, ಕೊರಕಲು, ನೀರ್ಗಲ್ಲು, ಹಿಮನದಿಗಳನ್ನೂ ಹಾಗೆಹಾಗೆಯೇ ಉಳಿಸಬೇಕಾಗಿದೆ. ಈ ಅಲಾಸ್ಕಾದ ಮೂಲನಿವಾಸಿಗಳು ವಿಶಿಷ್ಟ ಪರಂಪರೆ ಉಳ್ಳವರು. ಅವರ ಸೂರ್ಯನೃತ್ಯ ಪವಿತ್ರವೂ ಆಗಿದೆ, ಸಾಮುದಾಯಿಕ ಪ್ರೇರಣೆಯನ್ನೂ ನೀಡುತ್ತದೆ. ಲೇಖಕರು, 'ಈ ಸೂರ್ಯನೃತ್ಯ ನನ್ನ ಮೇಲೆ ತುಂಬ ವಿಶಿಷ್ಟ ಪ್ರಭಾವ ಬೀರಿದೆ. ಇದು ಜುಲೈ ತಿಂಗಳಲ್ಲಿ ಆಚರಿಸಲ್ಪಡುತ್ತದೆ. ಹಿಂದೂ ಧರ್ಮದಷ್ಟೇ (ಪುಟ 43) ಈ ಲಕೋಟಾ ಮೂಲನಿವಾಸಿಗಳ ಆಚರಣೆಗಳೂ ಸಂಕೀರ್ಣವಾಗಿವೆ' ಎಂದಿದ್ದಾರೆ. ವಿಶ್ವದ ಭೂಪಟ ಬಿಚ್ಚಿ ಹರಡಿಕೊಂಡು ಈ ಅಲಾಸ್ಕಾ ಎಲ್ಲಿದೆ ಎಂದು ಗುರುತಿಸಿಕೊಂಡರೆ, ಡೇವಿಡ್ಸನ್ ಅವರ ಮಾತುಗಳು ಇನ್ನಷ್ಟು ಪರಿಣಾಮಕಾರಿಯಾಗುತ್ತವೆ. ಅಂತೆಯೇ, ನಮ್ಮ ಹಿಂದೂ ಧರ್ಮವನ್ನು ನಾವೇ ಅರಿಯುವಲ್ಲಿ ಬೆಳಕು ಚಿಮ್ಮುತ್ತದೆ. ಇದು ಮೆಚ್ಚಿ ಸಂತೋಷಿಸುವ ವಿಷಯ ಮಾತ್ರವೇ ಅಲ್ಲ. ಅಮೆರಿಕದ ಸಕರ್ಾರ ಈ ಸೂರ್ಯನೃತ್ಯವನ್ನು ನಿಷೇಧಿಸಿತ್ತು. ತಮಾಷೆ ನೋಡಿ. ಮೂಲನಿವಾಸಿಗಳ ಧಮರ್ಾಚರಣೆಗಳನ್ನು ಈ ಆಕ್ರಮಕರು, ಕಳ್ಳರು, ಕಡಲ್ಗಳ್ಳರು, ವಿಕೃತ ಮನಸ್ಸಿನ ಈ ರಾಕ್ಷಸರು ನಿಷೇಧಿಸಿದರು. ಇತ್ತೀಚೆಗೆ ನಿರಂತರ ಹೋರಾಟದಿಂದ ಈ ಮೂಲನಿವಾಸಿಗಳು ಸೂರ್ಯನೃತ್ಯದ ಮೇಲಿನ ನಿಷೇಧವನ್ನು ತೆಗೆಸಲು ಸಾಧ್ಯವಾಗಿದೆ. ಆದರೆ ಪೂಜೆಯ ಸ್ವಾತಂತ್ರ್ಯ ಮತ್ತು ಧಾಮರ್ಿಕ ಸ್ವಾತಂತ್ರ್ಯಗಳಿನ್ನೂ ದೊರೆತಿಲ್ಲ. ಹೋರಾಟದ ಹಾದಿ ಕಠಿಣಾತಿಕಠಿಣ. ಉತ್ತರ ಅಮೆರಿಕಾ ಖಂಡ ಮತ್ತು ದಕ್ಷಿಣ ಅಮೆರಿಕಾ ಖಂಡಗಳ ಮೂಲನಿವಾಸಿಗಳ ಬಗೆಗಿನ ಅಧ್ಯಯನ, ವಿಶ್ಲೇಷಣೆಗಳು ಪ್ರಸ್ತುತ ಭಾರತೀಯ ಜನಮಾನಸಕ್ಕೆ ತುಂಬ ಅಗತ್ಯ. ಅಂತೆಯೇ ನಮ್ಮ ಬೆಂಬಲವೂ ಈ ಸಮುದಾಯಗಳಿಗೆ ಅವಶ್ಯ. ಮೆಕ್ಸಿಕೋ, ಗ್ವಾಟೆಮಾಲಾ, ಹೊಂಡೂರಾಸ್, ಮುಂತಾದ ಭಾಗಗಳಲ್ಲಿ ಹಿಂದೆ ಇದ್ದ ಮಯನ್ ನಾಗರಿಕತೆ, ಇಂಕಾ ನಾಗರಿಕತೆಗಳು ನಮ್ಮ ಹಿಂದೂ ಧರ್ಮ, ಸಮಾಜಗಳಿಗೆ ತುಂಬ ಹೋಲುವಂತಹವು. ಅಲ್ಲಿ ನಡೆದ ಯೂರೋಪಿಯನ್ನರ ಆಕ್ರಮಣ, ವಿಧ್ವಂಸಗಳು ತುಂಬ ಭೀಭತ್ಸ. ಅಲ್ಲಿನ ಅನೇಕ ಮೂಲನಿವಾಸಿ ಸಮುದಾಯಗಳು ನಾಶವಾಗಿಹೋಗಿವೆ. ಅಳಿದುಳಿದ ಕೆಲವು ತುಂಬ ದುಃಸ್ಥಿತಿಯಲ್ಲಿವೆ. ಅಲ್ಲಿನ ಅಲ್ಪಸಂಖ್ಯಾತ ಬಿಳಿಯರ ಸಕರ್ಾರಗಳು, ಈ ಮೂಲನಿವಾಸಿಗಳ ಭೂಮಿ, ಮನೆ, ಗ್ರಾಮಗಳನ್ನು ಕಿತ್ತುಕೊಂಡಿವೆ. ಈ ಜನರು ಪ್ರಕೃತಿಯ ಕಂದಮ್ಮಗಳು, ಮಣ್ಣಿನ ಮಕ್ಕಳು. ಈಗ ನಿರ್ಗತಿಕರಾಗಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಅವರಿಗೆ ನಗರ ಜೀವನ ಒಗ್ಗಿ ಬರುವುದಿಲ್ಲ. ಗಂಡಸರು ಪೊರಕೆ ಮಾರುವ, ರದ್ದಿ ಕಾಗದ - ಬಾಟಲಿ ಆಯುವ, ಬೂಟು ಪಾಲೀಷು ಮಾಡುವ ಸ್ಥಿತಿಗಿಳಿದಿದ್ದಾರೆ. ಮಕ್ಕಳ, ತಮ್ಮಂದಿರ, ತಂಗಿಯರ ಹೊಟ್ಟೆಗಾಗಿ ಯುವತಿಯರು ಗತಿಯಿಲ್ಲದೇ ಸೂಳೆಯರಾಗುತ್ತಿದ್ದಾರೆ. ಅವರೆಲ್ಲಾ ಹಳ್ಳಿಗಳಲ್ಲಿ ಚೆನ್ನಾಗಿದ್ದವರು. ಇದು ದುರಂತದ ಭಯಾನಕ ಮುಖ. ಈ ಮಾಹಿತಿ, ಈ ವಿಷಯಗಳು ಅಮೆರಿಕಾದಲ್ಲಿರುವವರಿಗೇ ತಿಳಿದಿಲ್ಲ, ಮಾಧ್ಯಮಗಳು ಶ್ವೇತವಣರ್ೀಯ ಶೋಷಕ ರಾಕ್ಷಸರ ಪರವಾಗಿವೆ. ಅಮೆರಿಕಾ ಅಧ್ಯಕ್ಷನೊಬ್ಬನ ಪ್ರಿಯತಮೆಯರ ಬಗ್ಗೆ, ಇಂಗ್ಲೆಂಡಿನ ಪ್ರಧಾನಮಂತ್ರಿಯ ಲಿಪ್ಸ್ಟಿಕ್ ಬಗ್ಗೆ, ಶಿಲ್ಪಾ ಶೆಟ್ಟಿಗೆ ಯಾವನೋ ಒಬ್ಬ ಅಯೋಗ್ಯ ಮುದ್ದಿಸಿದ ಬಗ್ಗೆ, ಡಯಾನಳ ಗೆಳೆಯರ ಬಗೆಗೆ ಹುಡುಕಿ ಹುಡುಕಿ ಬರೆಯುವ ಈ ಮಾಧ್ಯಮದವರಿಗೆ ಈ ಮೂಲನಿವಾಸಿಗಳು, ಅವರ ಅಳಲು ಕಾಣುವುದೇ ಇಲ್ಲ, ಕೇಳಿಸುವುದೇ ಇಲ್ಲ. 1944ರಲ್ಲಿ ನಡೆದ ಕ್ರಾಂತಿಯಲ್ಲಿ, ಜಕೋಬೋ ಆಬರ್ೆನ್ಜ್ನು ಚುನಾವಣೆಯಲ್ಲಿ ಗೆದ್ದು ಅಧಿಕಾರ ಗಳಿಸಿದ. ನಂತರ ಮೂಲನಿವಾಸಿಗಳಿಗೆ ಭೂಮಿ ಹಿಂತಿರುಗಿಸಿದ. ಗ್ವಾಟೆಮಾಲಾದ ಬಾಳೆ, ಕೋಕೋ, ಕಾಫಿ ಉತ್ಪನ್ನಗಳ ಮೇಲೆ ನಿಯಂತ್ರಣ ಹೊಂದಿದ್ದ ಶ್ವೇತವಣರ್ೀಯರ ಯುನೈಟೆಡ್ ಫ್ರೂಟ್ ಕಂಪನಿಗೆ ಈ ನಿಧರ್ಾರದಿಂದ ನಷ್ಟವಾಯಿತಂತೆ. ಅಮೆರಿಕಾ ಸಕರ್ಾರದ ಕಾರ್ಯದಶರ್ಿ ಜಾನ್ ಫಾಸ್ಟರ್ ಡಲ್ಲೆಸ್ ಮತ್ತು ಸಿಐಎ ಗೂಢಚಾರ ಸಂಸ್ಥೆಯ ನಿದರ್ೇಶಕ ಅಲ್ಲೆನ್, ಈರ್ವರೂ ಸೋದರರು ಮತ್ತು ಮೇಲಿನ ಕಂಪನಿಗೆ ಸಂಬಂಧಿಸಿದವರು. ಮುಂದಿನದು ವಿಧ್ವಂಸದ ಮತ್ತೊಂದು ರಕ್ತಸಿಕ್ತ ಅಧ್ಯಾಯ: 1954ರಲ್ಲಿ ಸಿಐಎ ದಂಗೆಯೊಂದನ್ನು ಏಪರ್ಾಟು ಮಾಡಿ ಆಬರ್ೆನ್ಜನ ಸಕರ್ಾರವನ್ನು ಉರುಳಿಸಿತು. ಮೂಲನಿವಾಸಿಗಳ ಜಮೀನು ಕಿತ್ತುಕೊಂಡುದರಿಂದ ಎಪ್ಪತ್ತು ಸಾವಿರ ಕುಟುಂಬಗಳು ಭೂಮಿ ಕಳೆದುಕೊಂಡವು. ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಅಧಿಕೃತವಾಗಿಯೇ ಕೊಲ್ಲಲ್ಪಟ್ಟರು. ಹಳ್ಳಿಗಳನ್ನು ತೊರೆದು ಓಡಿಹೋಗಿ ಕಾಡು ಸೇರಿದ ಮೂಲನಿವಾಸಿಗಳನ್ನು, ದಂಗೆಕೋರರೆಂದು - ಕಮ್ಯೂನಿಸ್ಟರೆಂದು ಹೇಳುತ್ತ ಹುಡುಕಿ ಹುಡುಕಿ ಕೊಲ್ಲಲಾಯಿತು. 1981ರಲ್ಲಿ ಹದಿನೆಂಟು ತಿಂಗಳ ಅವಧಿಯಲ್ಲಿ, ಸೇನೆಯಿಂದ ದಾಳಿ ನಡೆಸಲಾಯಿತು. ಮೂಲನಿವಾಸಿಗಳ 440 ಹಳ್ಳಿಗಳನ್ನು ಧ್ವಂಸ ಮಾಡಲಾಯಿತು. ಸ್ಯಾನ್ಫ್ರಾನ್ಸಿಸ್ಕೋ ಬಳಿಯ ಹಳ್ಳಿಯ ಚಚರ್್ ಒಂದರಲ್ಲಿ ಹೆಂಗಸರು, ಮಕ್ಕಳನ್ನು ಕೂಡಿ ಹಾಕಿ, ಎಲ್ಲ ಗಂಡಸರನ್ನು ಕೊಲ್ಲಲಾಯಿತು. ಬದುಕುಳಿದವನೊಬ್ಬ ಹೇಳಿದಂತೆ, ಎಲ್ಲ ಹೆಂಗಸರನ್ನು ಮನೆಗಳಿಗೆ ಕರೆದುಕೊಂಡು ಹೋಗಿ, ಮಚ್ಚುಗತ್ತಿಗಳಿಂದ ಕತ್ತರಿಸಿ ಕೊಂದರಂತೆ. ನಂತರ ಬಂದು ಚಚರ್್ ಒಳಗಡೆಯಿದ್ದ ಮಕ್ಕಳನ್ನು ಸಾಯಿಸಿದರಂತೆ. ಅಲ್ಲಿ ಒಂದೇ ಕಡೆ ಸತ್ತವರು 350 ಮಂದಿ. ಸೇನೆಯ ಈ ಒಟ್ಟಾರೆ ದಾಳಿಯಿಂದ ಎರಡು ಲಕ್ಷ ಜನ ಮಕ್ಕಳು ಅನಾಥರಾದರು, ಹತ್ತು ಲಕ್ಷ ಜನರು ಅವರದೇ ದೇಶದಲ್ಲಿ ನಿರಾಶ್ರಿತರಾದರು, ಎರಡು ಲಕ್ಷ ಜನರು ಜೀವವುಳಿಸಿಕೊಳ್ಳಲು ಮೆಕ್ಸಿಕೋಗೆ ಓಡಿಹೋದರು. ವಿರೋಧಾಭಾಸ, ದುರಂತಗಳ ಪರಾಕಾಷ್ಠೆಯೆಂದರೆ, ಈ ಶ್ವೇತವಣರ್ೀಯರು, ಇಂತಹ ವಿಧ್ವಂಸಕ ಹತ್ಯಾಕಾಂಡಕ್ಕೆ ಆ ಮೂಲನಿವಾಸಿಗಳನ್ನೇ ಬಳಸಿದರಂತೆ. ಮಿಲಿಟರಿ ಟ್ರಕ್ಕುಗಳಲ್ಲಿ ಬಂದು, ಹಳ್ಳಿಗಳಿಗೆ ನುಗ್ಗಿ ಯುವಕರನ್ನು, ಬಾಲಕರನ್ನು ಬಂಧಿಸಿ ಎಳೆದೊಯ್ದು ಅವರಿಗೆ ಪೈಶಾಚಿಕ ತರಬೇತಿ ನೀಡುತ್ತಿದ್ದರು. ಅಂತಹ ತರಬೇತಿ ಪಡೆದು ತಪ್ಪಿಸಿಕೊಂಡ 14 ವರ್ಷದ ಬಾಲಕನೊಬ್ಬ ನೀಡಿರುವ ವಿವರಗಳನ್ನು ಓದಿದರೆ, ಬಾಯಿ ಕಹಿಯಾಗುತ್ತದೆ. ಚಿತ್ರಹಿಂಸೆ ನೀಡುವುದಕ್ಕೂ ಕೊಲ್ಲುವುದಕ್ಕೂ ತರಬೇತಿ ಕೇಂದ್ರಗಳು. ಕಾದ ತಂತಿಗಳಿಂದ ಜನರ ಕೈಕಾಲು ಸುಡುವುದು, ಕತ್ತಿಗಳಿಂದ ನಾಲಿಗೆ, ಕಿವಿ ಕೈಕಾಲು ಕತ್ತರಿಸುವುದು, ಇತ್ಯಾದಿಗಳನ್ನು ಇಲ್ಲಿ ಕಲಿಸಲಾಗುತ್ತದೆ. ಮೂರು ದಿನಗಳಿಗೊಮ್ಮೆ ಕುಡಿಯಲು ನಾಯಿರಕ್ತ. ಹೋಗಿ ಹೋಗಿ ತಮ್ಮವರೇ ಆದ ಮೂಲನಿವಾಸಿಗಳನ್ನು ಕೊಲ್ಲಲು ಆಜ್ಞೆ. ಆ ಹುಡುಗ ಹೇಳಿದಂತೆ, ನಾಯಿರಕ್ತದಲ್ಲಿ ಅದೇನಿದೆಯೋ, ಕುಡಿದಾಗ ಕೊಂದು ಕೊಂದು ಹಾಕಲು ಹುಮ್ಮಸ್ಸು ದೊರೆಯುತ್ತಿತ್ತಂತೆ. ಎಂತಹ ಭಯಂಕರ ಉತ್ಕಟತೆಯೆಂದರೆ, `ಮಕ್ಕಳನ್ನು ಕೊಂದುಹಾಕುವಾಗಲೂ ಏನೂ ಅನ್ನಿಸುತ್ತಿರಲಿಲ್ಲ' ಎಂದಿದ್ದಾನೆ. ಆಜ್ಞೆ ಪಾಲಿಸದಿದ್ದರೆ, ಕೊಲ್ಲುವ ಕೆಲಸ ಮಾಡದಿದ್ದರೆ, ಕಮ್ಯೂನಿಸ್ಟರೆಂದು ಬ್ರ್ಯಾಂಡ್ ಮಾಡಿ ಸುಟ್ಟು ಕೊಂದುಹಾಕುತ್ತಿದ್ದರಂತೆ. ಹತ್ಯೆಯಾದವರು ಮೂಲನಿವಾಸಿಗಳಾದರೆ, ಬಡಪಾಯಿಗಳಾದರೆ ಲಕ್ಷಾವಧಿ ಸಂಖ್ಯೆಯ ಭೀಕರ ನರಹತ್ಯಾಕಾಂಡವೂ ಸುದ್ದಿಯಾಗುವುದಿಲ್ಲ. ಈ ಸೇನೆಗೆ ತರಬೇತಿ ನೀಡುವುದು ಅಮೆರಿಕನ್ ಸೈನಿಕ ಸಂಸ್ಥೆಗಳೇ. ಜಿಮ್ಮಿ ಕಾರ್ಟರ್, ರೊನಾಲ್ಡ್ ರೀಗನ್, ಜಾಜರ್್ಬುಷ್ ಎಲ್ಲ 'ಮಹನೀಯರೂ' ಗ್ವಾಟೆಮಾಲಾ ಸೇನೆಗೆ ತಮ್ಮ ಬೆಂಬಲ ಧನಸಹಾಯಗಳನ್ನು ಮುಂದುವರಿಸಿಕೊಂಡೇ ಬಂದಿದ್ದಾರೆ. ನಮ್ಮ ಶಿವಾಜಿ ಮಹಾರಾಜರು ಸೇನೆ ಕಟ್ಟಿ, ರಾಜ್ಯ ಕಟ್ಟಿ ಮೊಗಲ್ಶಾಹಿಗೆ ಸವಾಲು ಹಾಕಿದರು. ಆದರೆ ಮುಸ್ಲಿಮರ ಬಗೆಗೆ ದ್ವೇಷ ಸಾಧಿಸಲಿಲ್ಲ, ಸೇಡು ತೀರಿಸಿಕೊಳ್ಳಲಿಲ್ಲ. ಮಹಾರಾಷ್ಟ್ರದಲ್ಲಿ ಇಂದು ಕಾಣುವ ಮುಸ್ಲಿಮರು ಉಳಿದಿದ್ದೇ ಶಿವಾಜಿ ಮಹಾರಾಜರ ಪರಮತ ಸಹಿಷ್ಣುತೆಯಿಂದ. ಹಾಗೆ ನೋಡಿದರೆ ಅವರು ಶಿವಾಜಿ ಮಹಾರಾಜರ ಬಗ್ಗೆ ಕೃತಜ್ಞತೆಯಿಟ್ಟುಕೊಳ್ಳಬೇಕಿತ್ತು. ನಮ್ಮ ಮಾಧ್ಯಮಗಳು ತೋರಿಸದಿದ್ದರೂ, ಅಂತರಜಾಲದಲ್ಲಿ, ಮೀರಜ್ನಲ್ಲಿ ಮುಸ್ಲಿಮರು ಮಾಡಿದ ಗಲಭೆಗಳ ವೀಡಿಯೋ ನೋಡಿದೆ. ಶಿವಾಜಿ ಮಹಾರಾಜರು ಅಫಜಲ ಖಾನ್ನನ್ನು ವಧಿಸಿದ ಚಿತ್ರಗಳನ್ನು, ಅಲ್ಲಿ ಗಣೇಶೋತ್ಸವದಲ್ಲಿ ಪ್ರದಶರ್ಿಸಲಾಗಿತ್ತು. ಆ ಚಿತ್ರಗಳನ್ನು ಕಿತ್ತು ಧ್ವಂಸಮಾಡಿ, ಪೊಲೀಸ್ ಜೀಪು ಹತ್ತಿ ಹಸಿರು ಬಾವುಟ ಹಾರಿಸಿದ ಮುಸ್ಲಿಮರನ್ನು ನೋಡಿ ವಿಚಿತ್ರವೆನಿಸಿತು. ಮೂಲತಃ ಅವರು ಈ ದೇಶದ ಹಿಂದೂಗಳೇ, ಮೂಲನಿವಾಸಿಗಳೇ. ಸೌದಿ ಅರೇಬಿಯಾದಿಂದ ಮೊನ್ನೆ - ನಿನ್ನೆ ಬಂದವರೇನಲ್ಲ. ಡೇವಿಡ್ಸನ್ ಅವರ ಎನ್ಡೇಂಜರ್ಡ್ ಪೀಪಲ್ಸ್ ಓದುವಾಗ, ಗ್ವಾಟೆಮಾಲಾದ ಮೂಲನಿವಾಸಿಗಳಲ್ಲೇ ಕೆಲವರು ಸೇನೆ ಸೇರಿ ತಮ್ಮವರನ್ನೇ ಕೊಲ್ಲುವುದನ್ನು ಓದುವಾಗ, ಮೀರಜ್ ಗಲಭೆಗಳದ್ದೇ ನೆನಪು. ಅಮೆರಿಕಾ, ಆಫ್ರಿಕಾ, ಆಸ್ಟ್ರೇಲಿಯಾ ಖಂಡಗಳಲ್ಲಿ ಸಹಸ್ರ ಸಹಸ್ರ ವರ್ಷಗಳ ಕಾಲ ಸಮೃದ್ಧಿಯಿಂದ, ಸಂತೋಷದಿಂದ, ನೆಮ್ಮದಿಯಿಂದ ಇದ್ದ ಈ ನಿಷ್ಪಾಪಜೀವಿಗಳು ಯೂರೋಪಿಯನ್ ಕ್ರೈಸ್ತರ ಆಕ್ರಮಣದಿಂದ, ಸಾಂಕ್ರಾಮಿಕ ರೋಗಗಳಿಂದ ಎಂತಹ ವಿನಾಶಕ್ಕೆ, ಎಂತಹ ಬರ್ಬರ ಕ್ರೌರ್ಯಕ್ಕೆ ತುತ್ತಾದರಲ್ಲಾ ಎಂದು ವ್ಯಥೆಯಾಗುತ್ತದೆ. ಕಾಂಗ್ರೆಸ್ಸಿನವರು-ಮೆಕಾಲೆವಾದಿಗಳು-ಕಮ್ಯೂನಿಸ್ಟರು-ಪಾದ್ರಿ ಸಂತತಿ ನಮಗೆಲ್ಲಾ ಎಂತಹ ಮಂಕುಬೂದಿ ಎರಚಿದ್ದಾರೆ, ನಮ್ಮ ಮೆದುಳುಗಳನ್ನೇ ಹೇಗೆಲ್ಲಾ ನಿಷ್ಕ್ರಿಯಗೊಳಿಸಿಬಿಟ್ಟಿದ್ದಾರೆಂದರೆ, ಕ್ರೈಸ್ತಮತವೆಂದರೆ ಶಾಂತಿಯ ಸಂಕೇತ, ಎಂದು ನಾವು ನಾವೇ ಭ್ರಮಿಸುತ್ತೇವೆ. ನಮ್ಮ ಪಕ್ಕದ ರಾಜ್ಯ ಗೋವಾದಲ್ಲಿ ಇನ್ಕ್ವಿಸಿಶನ್ ಹೆಸರಿನಲ್ಲಿ ನಡೆದ ಭಯಾನಕವಾದ ಹಿಂಸಾಕಾಂಡವನ್ನೂ ನಾವು ಮರೆತೇಬಿಡುತ್ತೇವೆ. ಸಾಕ್ಷ್ಯಾಧಾರಗಳು-ಸಂಶೋಧನೆಗಳು ನಮ್ಮ ವಿಶ್ವವಿದ್ಯಾಲಯಗಳ ಇತಿಹಾಸ ವಿಭಾಗವನ್ನು ಪರಿಷ್ಕರಿಸಿಯೇ ಇಲ್ಲವೆಂಬುದನ್ನು, ನಾವು ಗಮನಿಸಲೂ ಹೋಗುವುದಿಲ್ಲ. ಇಂತಹ ಸಾವಿರಾರು ದಾಖಲೆಗಳಲ್ಲಿ ಕೆಲವನ್ನಾದರೂ ನಮ್ಮ ಓದುಗ-ಮಿತ್ರರೊಂದಿಗೆ ಹಂಚಿಕೊಳ್ಳಲು ಈ ಅಂಕಿ-ಅಂಶಗಳನ್ನು ನಾನು ನೀಡಲೆತ್ನಿಸಿದ್ದೇನೆ. ಹಾಗೆಯೇ, ಗ್ರಂಥದ ವಿವರಗಳು, ಪ್ರಕಟಣೆಯ ವರ್ಷ, ಪುಟ ಸಂಖ್ಯೆಗಳಿಂದ ಸರಾಗ ಓದಿಗೆ ಕಿರಿಕಿರಿಯಾದರೂ, ಈ ಗ್ರಂಥಕರ್ತರಲ್ಲಿ - ಈ ಸಂಶೋಧಕರಲ್ಲಿ ಕೆಲವರ ಹೆಸರುಗಳನ್ನಾದರೂ, ಕೆಲವು ಕೃತಿಗಳ ಹೆಸರನ್ನಾದರೂ ನಾವೆಲ್ಲ ಕೇಳಿರಬೇಕು, ಎಂಬ ಉದ್ದೇಶದಿಂದ ಕ್ರೋಡೀಕರಿಸಿದ್ದೇನೆ. ಜಗತ್ತಿನ ಎಷ್ಟೋ ಆದಿವಾಸಿಗಳಲ್ಲಿ, ಮೂಲನಿವಾಸಿಗಳಲ್ಲಿ ಪ್ರಕೃತಿ ಆರಾಧನೆಯ ಅನೇಕ ಪದ್ಧತಿಗಳಿವೆ. ವಿಶಿಷ್ಟವಾದ ಸೂಯರ್ಾರಾಧನೆಯೂ ಇದೆ. ಕೆಲವರಲ್ಲಿ ಬೆತ್ತಲೆ ನೃತ್ಯದಂತಹ ಆಚರಣೆಗಳೂ ಇವೆ. ಇಂದಿಗೂ ಕೆನಡಾದಲ್ಲಿ, ಅಮೆರಿಕಾ ಮತ್ತಿತರ ಕೆಲವು ದೇಶಗಳಲ್ಲಿ ಆದಿವಾಸಿಗಳ ಪೂಜೆ, ನೃತ್ಯ, ಉತ್ಸವಗಳಿಗೆ ಈ ಶ್ವೇತವಣರ್ೀಯ ಧೂರ್ತ ಅತಿಕ್ರಮಣಕಾರರು ಅನುಮತಿ ನೀಡಿಲ್ಲ, 'ಸ್ವಾತಂತ್ರ್ಯ' ನೀಡಿಲ್ಲ. ಅವರ ದೇಶಗಳಿಗೇ ಹೋಗಿ, ನುಗ್ಗಿ ಆಕ್ರಮಿಸಿಕೊಂಡು ಅವರಲ್ಲಿ ಅಳಿದುಳಿದ ಕೆಲವರಿಗೆ ನಗ್ನನೃತ್ಯ-ನರಬಲಿಗಳ ಹೆಸರಿನಲ್ಲಿ ಇವರು ಸ್ವಾತಂತ್ರ್ಯ ನೀಡಿಲ್ಲ, ಎಂಬುದು ಎಷ್ಟು ಹಾಸ್ಯಾಸ್ಪದ ನೋಡಿ. ಸಮುದ್ರತೀರಗಳಲ್ಲಿ ಬೆತ್ತಲೆ ಮಲಗುವ, ಜನಭರಿತ ಪ್ರದೇಶಗಳಲ್ಲಿ ಬೆತ್ತಲೆ ಓಡಿ ಪ್ರಚಾರ ಪಡೆಯುವ ಈ ಯೂರೋಪಿಯನ್ ಮೂಲದ ಶ್ವೇತವಣರ್ೀಯರಿಗೆ, ಮೂಲನಿವಾಸಿಗಳನ್ನು ಎಳ್ಳಷ್ಟಾದರೂ ಆಕ್ಷೇಪಿಸುವ ಯೋಗ್ಯತೆಯಿದೆಯೇ? ಅನೇಕ ದಶಕಗಳಿಂದ ಚಲನಚಿತ್ರಗಳಲ್ಲಿ, ಕಾಟರ್ೂನುಗಳಲ್ಲಿ ಕಾಡುಮನುಷ್ಯರೆಂದರೆ, ಮೂಲನಿವಾಸಿಗಳೆಂದರೆ ಅವರು ಅಪರಿಚಿತನೊಬ್ಬನನ್ನು-ಆಗಂತುಕನೊಬ್ಬನನ್ನು ಹಿಡಿದು ಬೇಯಿಸಿ ತಿನ್ನುವ ನರಭಕ್ಷಕರೆಂದು ಅಭಿಪ್ರಾಯ ಮೂಡುವಂತೆ ಚಿತ್ರಿಸಲಾಗಿದೆ. ಕೆಲವೆಡೆ ನರಭಕ್ಷಣೆಯಿದ್ದಿರಬಹುದು, ಆದರೆ ಎಲ್ಲ ಮೂಲನಿವಾಸಿಗಳ ಮೇಲೆ - ಎಲ್ಲ ಆದಿವಾಸಿಗಳ ಮೇಲೆ ಹಾಗೆ ಆಪಾದಿಸುವುದು, ವ್ಯಂಗ್ಯಚಿತ್ರ ಬರೆಯುವುದು, ದುರಭಿಪ್ರಾಯ ಮೂಡಿಸುವುದು ದುಷ್ಟತನವಾಗುತ್ತದೆ. ಸಾವಿರಗಳಲ್ಲಿ, ಲಕ್ಷಗಳಲ್ಲಿ ಅಲ್ಲ, ಕೋಟಿಕೋಟಿ ಸಂಖ್ಯೆಯಲ್ಲಿ ನರಹತ್ಯೆ ಮಾಡಿದ, ಜನಾಂಗಹತ್ಯೆ ಮಾಡಿದ ಈ ಶ್ವೇತವಣರ್ೀಯ ಕ್ರೈಸ್ತರಿಗೆ ಬೇರೆಯವರನ್ನು ಆಕ್ಷೇಪಿಸುವ ಇನಿತಾದರೂ ನೈತಿಕತೆಯಿದೆಯೇ? ಇದೇ ರೀತಿಯಲ್ಲಿ ಮರಣ-ಮೃದಂಗ ಬಾರಿಸಿ ಕೋಟಿಕೋಟಿ ಪರಮತೀಯರನ್ನು ಕೊಂದುಹಾಕಿದ, ಇಂದಿಗೂ ಕೊಂದುಹಾಕುತ್ತಿರುವ ಚೆಂಗೇಸ್ಖಾನ್, ತೈಮೂರ್, ತುಘಲಕ್, ಖಿಲ್ಜಿ, ಔರಂಗಜೇಬನ ಸಂತತಿಯವರಿಗೆ ಬೇರೆಯವರ ಮೇಲೆ ಬೆರಳು ತೋರಿಸುವ ಕನಿಷ್ಠ ನೈತಿಕತೆಯಾದರೂ ಇದೆಯೇ? ಈ ಲೇಖನದ ಮೊದಲೇ ಹೇಳಿದಂತೆ, ಅಮೆರಿಕೆಗೆ ವಲಸೆ (ಇಂಗ್ಲಿಷಿನಲ್ಲಿ ಇಮ್ಮಿಗ್ರೇಷನ್ ಎನ್ನುತ್ತಾರೆ) ಹೋಗಲು, ಅಲ್ಲಿನ ಪೌರತ್ವ ಪಡೆಯಲು ತುಂಬ ಜನರಿಗೆ ಆಸೆ. ಕಳೆದ ವರ್ಷ ಹೀಗೆ ಅಮೆರಿಕೆಗೆ ಬರುವ ವಿದೇಶೀಯರ ಮೇಲೆ, ಅಲ್ಲಿನ ಸಕರ್ಾರವು ನಿರ್ಬಂಧಗಳನ್ನು ವಿಧಿಸಿತು, ಅಧಿಕಗೊಳಿಸಿತು. ತುಂಬ ಅರ್ಥಪೂರ್ಣವಾದ ಅಣಕುಚಿತ್ರವೊಂದನ್ನು ಅಂತರಜಾಲದಲ್ಲಿ ಯಾರೋ ತೇಲಿಬಿಟ್ಟಿದ್ದರು. ಇಂಡಿಯನ್ ಅಥವಾ ರೆಡ್ ಇಂಡಿಯನ್ ಎಂದು ಸಾಮಾನ್ಯವಾಗಿ ಇಂಗ್ಲಿಷಿನಲ್ಲಿ ಸಂಬೋಧಿಸುವ ಓರ್ವ ಮೂಲನಿವಾಸಿಯು ಖಠ, ಥಿಠಣ ಚಿಡಿಜ ಚಿರಚಿಟಿಣ ಟಟರಡಿಚಿಣಠಟಿ? ಖಠಿಟಜಟಿಜಜ! ಘಜಟಿ ಜಠ ಥಿಠಣ ಟಜಚಿತಜ? ಎಂದು ಹೇಳುತ್ತಿರುವ ಒಕ್ಕಣೆಯ ಚಿತ್ರವಿದು. ನಾನೂ ಈ ಲೇಖನದೊಂದಿಗೆ ಆ ಚಿತ್ರವನ್ನೂ ನೀಡಿದ್ದೇನೆ. ವಿದೇಶೀಯರ ವಲಸೆಯನ್ನು ಪ್ರತಿಬಂಧಿಸುವ ಈ ಶ್ವೇತವಣರ್ೀಯ ದುರಹಂಕಾರಿ ಆಡಳಿತವರ್ಗಕ್ಕೆ ಹಾಗೆ ಹೇಳುವ ನೈತಿಕತೆಯು ಸ್ವಲ್ಪವಾದರೂ ಇದೆಯೇ, ಎಂದು ಪ್ರಶ್ನಿಸುವ ವಿಶಿಷ್ಟ ಅಣಕುಚಿತ್ರವಿದು. ನಿಜವಾಗಿ ಈ ಯೂರೋಪಿಯನ್ ಶ್ವೇತವಣರ್ೀಯರೇ ಅಲ್ಲಿ ಅಕ್ರಮ ವಲಸೆಗಾರರಲ್ಲವೇ?