ಅಮ್ಮಜಿಖಷೆಸ್ಸ ಖನಮ ಒಜಿ

ಅಮ್ಮಜಿಖಷೆಸ್ಸ ಖನಮ ಒಜಿ

ಬರಹ

ಇದೊಂದು ಸೀಕ್ರೆಟ್ ಭಾಷೆ :) ನಮ್ಮ ಮತ್ತು ನಮ್ಮ ಸಂಬಂಧಿಕ್ರ ಮನೆಗ್ಳಲ್ಲಿ ಸಮಯ-ಸಂದರ್ಭಾನುಸಾರ ಭಾಳ ಬಳ್ಕೆ ಆಗತ್ತೆ. ಇದಕ್ಕೆ ಮಿತಾಕ್ಷರ ಅಂತ ಯಾರು ಹೆಸರು ಕೊಟ್ರೋ ತಿಳೀದು. ಇದು ಅಕ್ಷರಗ್ಳನ್ನ ಕಡ್ಮೆ ಮಾಡಲ್ಲ. ವಿಜ್ಞಾನೇಶ್ವರನ 'ಮಿತಾಕ್ಷರ ಸಂಹಿತೆಗೂ' ಇದಕ್ಕೂ 'ಇಮಾಂ ಸಾಬಿ-ಗೋಕುಲಾಷ್ಟಮಿ' ಸಂಬಂಧ.

ಕೆಲವು ಸಂದರ್ಭಗ್ಳಲ್ಲಿ ತುಂಬಾ ಜನದ್ನಡುವೆ ಇದ್ಗೊಂಡೇ ರಹಸ್ಯ ಮಾತಾಡೋ ಸಂದರ್ಭ ಬರತ್ತೆ. ಆಗ ಬಳಕೆಯಾಗೋ ನಮ್ಮ ಆಪ್ತ ಭಾಷೆ ಇದು. ಟೆಲಿಫೋನಲ್ಲಿ ಮಾತಾಡುವಾಗ ಬೇರೆಯೋರು ಕೇಳಿಸ್ಕೋತಾರೇನೋ ಅನ್ನೋ ಹೆದರ್ಕೇಗೆ ಮೊಬೈಲ್‌ನೋರು ಮೈಲಿ ದೂರ ಹೋಗ್ಬೇಕಿಲ್ಲ ಅಥ್ವಾ ಲ್ಯಾಂಡ್‌ಲೈನ್ನೋರು ಮೂಕ ಕೋಗಿಲೆ ಥರ ಸಂಕ್ಟಪಡ್ಬೇಕಿಲ್ಲ. ಕೆಲ್ವೇ ದಿನ ಕಷ್ಟ ಪಟ್ರೆ ಆಮೇಲೆ ಯಾವ್ ಥರ ಅಭ್ಯಾಸ ಆಗತ್ತೆ ಅಂದ್ರೆ ನೀವೊಬ್ರೇ ಇದ್ದಾಗ್ಲೂ ಇದ್ರಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಹೀಗೆ ಯಾವ್ ಭಾಷೇ ಹಾಡನ್ನೂ ಪ್ರರಿವರ್ತ್ನೆ ಮಾಡಿ ಹಾಡ್ಕೋಭೋದು.
ಇದು ಬರೀ ವಿನೋದದ್ವಿಷ್ಯ ಮಾತ್ರ ಅಲ್ಲ ಉಪ್ಯೋಗ ಕೂಡ ಇದೆ!! ಇದ್ರಲ್ಲಿ ಡೈರಿ ಬರ್ಕಂಡ್ರೆ ಯಾವ್ನನ್ ಮಕ್ಳೂ ಓದಕ್ಕೆ ತಿಣಕ್ಬೇಕು. ಹಾಗಾದ್ರೆ ಇದು ಪಬ್ಲಿಕ್ಕಾಯತಲ್ಲ ಅಂತ ಕೇಳ್ಭೋದು ನೀವು!! ನಂಗೂ ಗೊತ್ತು ಕಂಡ್ರೀ. ಪುಗ್ಸಟ್ಟೆ ಸಿಕ್ಕಿದ್ದನ್ನ ಜನ ಯಾವತ್ತೂ ಕಲ್ಯಲ್ಲ. ಬೇಕಾದ್ರೆ ನೋಡಿ, ಸಂಪದಿಗ್ರಲ್ಲಿ ಮೂರೂ ಮತ್ತೊಂದು ಜನ ಇದನ್ನ ಕಲ್ತು ಖುಷಿಪಟ್ರೆ ನನ್ನಾಣೆ. ಇದು ಸುಲಭ ಅಂದ್ರೆ ಸುಲಭ, ಕಷ್ಟ ಅಂದ್ರೆ ಕಷ್ಟ. ಅಂದ್ರೆ ನಿಮ್ಮಿಚ್ಛೆಗೆ ತಕ್ಕ ಹಾಗೆ ಇದೆ. ಇದಕ್ಕೆ ಒಂದು ಸಣ್ಣ ಶ್ಲೋಕ ನೆನ್ಪಿಟ್ಕೊಂಡ್ರಾಯ್ತು. ಶ್ಲೋಕ ಅಂದ್ರೆ ಸಂಸ್ಕೃತ ಶ್ಲೋಕ ಅಲ್ಲ. ಮಯೇಸ್ ಮತ್ತು ಅವರ ಬಳಗ ಸಕ್ಕದ -ಒಕ್ಕದ ಅಂತ ಜಗಳಕ್ಬರ್ಬೇಡಿ.

ಅರೆ! ನಮ್ಮೂರಲ್ಲಿ ಗುಡ್ಗು ಸಿಡ್ಳು ಮಳೆ ಬರೋ ಥರ ಇದೆ. ಶ್ಲೋಕ ಮತ್ತು ಅದರ ಅಪ್ಲಿಕೇಶನ್ ಹೇಗೆ ಅಂತ ಮುಂದಿನ ಪೋಸ್ಟ್‌ನಲ್ಲಿ ತಿಳಿಸ್ತೀನಿ. ಅಲ್ಲೀತಂಕ ಜೀವ ಬಿಗಿ ಹಿಡ್ಕಂಡು ಕಾಯ್ತಿರಿ. ಬರ್ಲಾ? ಕಂಪ್ಯೂಟರ್ ಕನೆಕ್ಷನ್ ಡಿಸ್ಕನೆಕ್ಟ್ ಮಾಡ್ಬೇಕು.