ಅಮ್ಮ ನೀನು ಅಮೃತದಾತೆ

ಅಮ್ಮ ನೀನು ಅಮೃತದಾತೆ

ಕವನ

ಅಮ್ಮನೊಲವೆ ಸದಾ ಆಸರೆ

ಅನುರಾಗಕದು ನಿತ್ಯ ಕೈಸೆರೆ

ಅಮೃತವನೀವ ದಿವ್ಯ ಸಕ್ಕರೆ

ಅಕ್ಷಯಪಾತ್ರೆಯು ತಥ್ಯಧಾರೆ...

 

ಅವಲೊಡಲು ಸ್ವರ್ಗವದು

ಅಚ್ಚರಿಯಲಿ ಕುಸುಮವದು

ಅಕ್ಕರೆಯ ಸುವರ್ಣವದು

ಅಪರೂಪಕೆ ಭವ್ಯ ಸೌಖ್ಯವದು...

 

ಅಪ್ಪನ ಸಾರಥಿಯಿವಳು

ಅವನೆಗಲಿಗೆ ಹೆಗಲಾದಳು

ಅಮೋಘದಿ ಮಿಂದುಳು

ಅನನ್ಯತೆಗೆ ಹೆಸರಾದವಳು...

 

ಅದ್ಭುತ ದಿವ್ಯ ಕಲೆಗಾರ್ತಿ

ಅವಳೊಳಗಿನ ಅಮೋಘ ಕೀರ್ತಿ

ಅವಳೊಂತರ ದೈವ ಸ್ಫೂರ್ತಿ

ಅವಳೆ ನನಗೆ ದಿವ್ಯ ಮೂರ್ತಿ...

 

ಅಳುಕು ಹೃದಯದಿ ಸಾಗಿ

ಆಸೆ ಆಕಾಂಕ್ಷೆಗಳ ಸುಡುತ ಭಾಗಿ

ಅನುಪಮದಿ ನಾವೆಲ್ಲ ಮಲಗಿ

ಅನ್ಯತಾ ಭಾವಿಸದೆ ಮುನ್ನುಗ್ಗಿ...

 

ಅಮ್ಮನಲ್ಲವೆ ಮೊದಲ ಗುರು

ಅಪರೂಪದ ಮಾಣಿಕ್ಯದವರು

ಅಭಿಮಾನದಿ ಸಾಗುವ ಅವರು

ಅಮೋಘ ಜ್ಞಾನದಾತೆಯವರು...

 

ಅದ್ವೈತ ಮೂರ್ತಿಯ ರೂಪ

ಅನವರತ ನಗುವಿನ  ಪ್ರದೀಪ

ಅಭಿಮಾನದಕ್ಕರೆಯ ಸ್ವರೂಪ

ಅಕ್ಷಯಪಾತ್ರೆ ಹಸಿದವರ ದೀಪ..

 

ಅಂಬೆಯ ನಡೆನುಡಿಯ ಗಾಥೆ

ಅಂಬರದಂತೆ ಮನ ವಿಶಾಲತೆ

ಅಂಬಿಕೆಯಂತೆ ಮಡಿಲು ಲತೆ

ಅಂಬುಧಿಯಂತೆ ಮನ ಶುದ್ಧತೆ..ˌ

 

ಅಮ್ಮುಬಿಮ್ಮಿಲ್ಲದ ವ್ಯಕ್ತಿತ್ವದಾತೆ

ಅಮ್ಮ ನೀ ಎಂದೆಂದು ಅಮೃತದಾತೆ

ಅಭೀಪ್ಸೆಗಳ ಬದಿಗೊತ್ತ ಜನ್ಮದಾತೆ

ಅನನ್ಯತೆಯಲಿ ಅವಳೆ ವೈಶಾಲ್ಯತೆ..

 

ಅಮೋಘ ದಿಟ್ಟತೆಯ ಮೇರು

ಅಮೂಲ್ಯ ಜ್ಞಾನದ ಸೂರು

ಅಂತರ್ಮುಖಿಯ ಸದಾ ಸಾರು

ಅಜ್ಞಾನ ತೊಲಗಿಸೊ ಬೇರು...

 

ಅನಿಷ್ಠಗಳ ಓಡಿಸೋ ಧೃತಿ

ಅಭಯ ಬಿಂಬದ ಭಾತಿ 

ಅರಿವಿನ ದಾರಿಸೊ ಜ್ಯೋತಿ

ಅವಿರತ ದುಡಿವ ದಿವ್ಯಸತಿ...

 

ಅವಳಲ್ಲವೆ ನಮ್ಮ ಬೆಳಕ ದೈವ

ಅವಳಿದ್ದರಷ್ಟೆ ನಾವು ಕಲರವ

ಅಂದಣದಂತೆ ನಿತ್ಯ ಪ್ರಭಾವ

ಅಗಣಿತ ತಾರೆ ಹೊಳಪಿನ ಭಾವ...

 

-ಅಭಿಜ್ಞಾ ಪಿ ಎಮ್ ಗೌಡ

 

ಚಿತ್ರ್