ಅರುಣನೆದುರಿನ ತಾವರೆ
ಕವನ
ಮೌನವಾಗಿಯೆ ಮನವ ಸೇರಿದೆ
ಉಳಿದು ಮೆರೆಯುವೆ ಅಲ್ಲಿಯೇ||
ಮರೆತು ನನ್ನನೆ ನೆನೆವೆ ನಿನ್ನನೆ
ನೀನು ಮಾಡಿದ ಮೋಡಿಯೇ||೧||
ಕಣ್ಣಿನಲ್ಲಿಯೆ ಕಾವ್ಯ ಬರೆಯುವೆ
ನನ್ನ ಹೃದಯದ ಪುಟದಲಿ||
ನಿತ್ಯ ಪಠಿಸುತ ಮುದವಗೊಳ್ಳುವೆ
ಜೇನ ಸವಿಯಿದೆ ಅದರಲಿ||೨||
ನಿನ್ನ ನೆನಪಲಿ ಹಿಗ್ಗಿ ಮನವಿದು
ಅರುಣನೆದುರಿನ ತಾವರೆ||
ಬಾಳ ಪಯಣವು ಹಿತದ ಯಾನವು
ನನ್ನ ಜೊತೆಯಲಿ ನೀನಿರೆ||೩||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
