ಅರೆಬೆತ್ತಲೆ ಮೆರವಣಿಗೆ
ಉಪಮುಖ್ಯಮಂತ್ರಿ ಯಡಿಯೂರಪ್ಪನವರು ಅಂಬೇಡ್ಕರರ ಭಾವಚಿತ್ರವನ್ನು ತೆಗೆಸಿದ್ದಾರೆಂದು ಅವರ ವಿರುದ್ಧ ಕೂಗು ಕೇಳಿಬರುತ್ತಿದೆ.ಅದಕ್ಕೆ ಒಂದು ಉನ್ನತಸ್ಥಾನದಲ್ಲಿರುವ ಅವರ ಪ್ರತಿಕ್ರಿಯೆ ನಗುಬರಿಸುತ್ತದೆ.
ಗೋಡೆಯ ಮೇಲೆ ಹಾಕಿದ ಭಾವಚಿತ್ರಗಳಿಗೆ ಅಂಟಿದ ದೂಳಿಗಿಂತ ಗಲಬೆಗಳಿಂದ ಮೆತ್ತುವ ರಾಡಿಯೇ ಜಾಸ್ತಿ.ರಾಡಿತೊಳೆವುದು ದೂಳು ಒರೆಸುವವರಿಂದಾ ಆಗದ ಕೆಲಸವೇ?
ನಮ್ಮ ಸಂವಿಧಾನ ಇಷ್ಟರಮಟ್ಟಿಗೆ ವ್ಯವಸ್ಥಿತ ಎನ್ನುವಂತೆ ರೂಪಗೊಂಡಿದೆ ಅಂದರೆ ಅದಕ್ಕೆ ಕಾರಣೀಕರ್ತರು ಸಂವಿಧಾನಶಿಲ್ಪಿ 'ಡಾ. ಅಂಬೇಡ್ಕರ್' ಅವರು.ದಮನಕ್ಕೊಳಗಾದವರನ್ನು ಮೇಲೆತ್ತಲು ಶ್ರಮಿಸಿದ ಇವರು ದಲಿತರ ನಾಯಕರೆಂದು ಗುರುತಿಸಿಕೊಳ್ಳುತ್ತಾರೆ. ಅವರೊಬ್ಬ ಪೂಜನೀಯ ವ್ಯಕ್ತಿ ಅಂದರೆ ದಲಿತರಿಗೊಂದೆ ಎಂಬ ಅರ್ಥಮೂಡದು.
ಭ್ರಷ್ಟಾಚಾರಗಳ ಹುಟ್ಟು ಮನೆ ಸರ್ಖಾರಿ ಕಚೇರಿಗಳಲ್ಲಿ ದೇಶದ ಉನ್ನತ ನಾಯಕರುಗಳಾದ ಮಹಾತ್ಮಾಗಾಂಧಿ,ಜವಾಹರಲಾಲನೆಹರು, ಲಾಲ್ಬಹದ್ದೂರ್ ಶಾಸ್ತ್ತ್ರಿ,ಇಂದಿರಾಗಾಂದಿ ಮೊದಲಾದವರ ಭಾವಚಿತ್ರಗಳು ಕಂಡುಬರುತ್ತವೆ. ಅಲ್ಲಿ ಅವರ ಭಾವಚಿತ್ರಳನ್ನು ಹಾಕಿದ್ದಾದರೂ ಏಕೆ? ಭಕ್ತಿ ಭಾವ ಶ್ರದ್ದೆ ಗಳಿಂದ ಅವರ ತತ್ವಗಳನ್ನು ಆದರ್ಶವಾಗಿಸಿಕೊಂಡು ಅವರು ತೋರಿಸಿದ ಹಾದಿಯಲ್ಲಿ ನಡೆಯಬೇಕೆಂಬ ಉದ್ದೇಶದಿಂದಲೆ? ಬಹುಶಃ ಇದಾವುದಕ್ಕೂ ಅಲ್ಲ. ಅಂದು ಇದ್ದ ಬ್ರಿಟಿಶ್ ರಾಣಿಯ ಭಾವಚಿತ್ರವ ಇಳಿಸಿ ಅಲ್ಲಿ ನಮ್ಮನಾಯಕರನ್ನಿರಿಸಿರುವುದು ನಮ್ಮ ನಾಯಕರಿಗೆ ಕೊಟ್ಟ ಗೌರವವಿರಬಹುದು ! ಆದರೆ ಅದು ಈಗಂತೂ ಗೋಡೆಗೊಂದಿಷ್ಟು ಸಿಂಗಾರವಷ್ಟೆ.ಭ್ರಷ್ಟಾಚಾರವನ್ನು ನಿರ್ಮೂಲಗೊಳಿಸುತ್ತೇನೆಂದು ಮುನ್ನುಗ್ಗುತ್ತಿರುವ ನಮ್ಮ ಲೋಕಾಯುಕ್ತ ಎನ್.ವೆಂಕಟಾಚಲ ಅವರ ಕೈಯ್ಯೊಳಗೆ ಸಿಲುಕಿ ನಿಂತ ಹುಳಿಮೊಗದ ಅಧಿಕಾರಿಗಳ ಹಿಂದೆ ಗೋಡೆಗೆ ಸತ್ವವಿಲ್ಲದೆ,ಅರ್ಥವಿಲ್ಲದೆ,ಭಾವಮೂಡದೆ ನಿರ್ಮಲವಾಗಿ ಅಂಟಿಕೊಂಡ ಭಾವಚಿತ್ರಗಳು.
ದಲಿತರಿಗಾಗಿ ಹೋರಾಡಿದ ನಮ್ಮ ಸಂವಿದಾನ ಶಿಲ್ಪಿ ಇಂದು ನಮ್ಮೊಡನಿದ್ದರೆ,ದಮನಕ್ಕೆ ಒಳಗಾದವರನ್ನು ಮೇಲೆತ್ತಲು ಅವರು ಮಾಡಿದ ಪ್ರಯತ್ನ ಕೊಂಡೊಯ್ಯುತ್ತಿರುವುದೆಲ್ಲ್ಲಿ ಎಂದು ಕಣ್ಣಾರೆ ನೋಡಬಹುದಿತ್ತು.ಸಿಗುವ ಹೆಚ್ಹಿನ ಮೀಸಲಾತಿಗಳಿಂದಾಗಿ ಜನರು ದಲಿತರು,ಹಿಂದುಳಿದವರು,ಎಂದು ಹೇಳಿಕೊಳ್ಳಲೇ ಹೆಚ್ಹು ಇಚ್ಹಿಸುತ್ತಾರೆ.ಅಷ್ಟಕ್ಕೂ ದಮನಕ್ಕೊಳಗಾದವರು ಅಂದರೆ ಜಾತಿಯಿದೆಯೇ? ಅದಾವುದೋ ತಲೆಮಾರುಗಳ ಹಿಂದೆ ಪೂರ್ವಿಕರು ರಾಜರಾಗಿದ್ದರೆಂದು ನೆನೆದು ಇಂದು ಅದೇರೀತಿ ಕಿರೀಟ ಮಾಡಿಸಿಕೊಳ್ಳ ಹೊರಟವರಿಗೆ ಏನೆನ್ನಬೇಕು..
ಬ್ರಿಟಿಷರ ಒಡೆದು ಆಳುವ ನೀತಿಯನ್ನು ಚೂರೂ ತಪ್ಪದೆ ಅನುಸರಿಸುವ ನಮ್ಮ ಇಂದಿನ ರಾಜಕಾರಣಿಗಳಿಗೆ ಅಂಬೇಡ್ಕರ್, ಗಾಂಧಿ,ಇಂತಹ ಪ್ರತಿಮೆಗಳು ಅಸ್ತ್ರಗಳು. ಇಂತವುಗಳನ್ನು ಕಾರ್ಯರೂಪಕ್ಕೆ ತರಲೆಂದೇ ಹುಟ್ಟಿಕೊಳ್ಲುವ ಕೆಲವು ಅಸ್ಪಷ್ಟ ರಾಜಕೀಯ ಸಂಘಟನೆಗಳು.ಮತಗಳಿಕೆಗೆಂದೇ ಜಾತಿಯೆಂಬುದನ್ನು ಎತ್ತಿ ಹಿಡಿದು ಹೂಡುವ ತಂತ್ರಗಳು. ಮಾನ್ಯ ಉಪಮುಖ್ಯಮಂತ್ರಿ ಯಡಿಯೂರಪ್ಪನವರು ಭಾವಚಿತ್ರದವಿಶಯವಾಗಿ ನಿಜವಾಗಿ ಮಾಡಿದ್ದೇನೋ ತಿಳಿಯದು.ಆದರೆ ಅವರು ತನ್ನನ್ನು ತಾನು ಸಮರ್ಥಿಸಿಕೊಳ್ಳುವಂತ ಸರಿಯಾದ ಉತ್ತರ ನೀಡಿ,ತಪ್ಪಾಗಿದ್ದರೆ ಸರಿಪಡಿಸಿಕೊಂಡು ನಡೆವುದಬಿಟ್ಟು ಗೋಗರೆವಂತೆ ಫೋಸುಕೊಟ್ಟು ದೇವರಾಣೆ ಹಾಕುತ್ತಾರಲ್ಲಾ, ಇದೇನಾ ಅವರಲ್ಲಿರುವ ನಾಯಕಗುಣ.
ನನಗನ್ನಿಸುವಂತೆ ಮಹಾನ್ ವ್ಯಕ್ತಿಗಳ ಭಾವಚಿತ್ರಗಳ ಮುಂದೆ ನಗ್ನಚಿತ್ರಗಳ ನೋಡುವುದಕ್ಕಿಂತ,ಅವರ ಭಾವಚಿತ್ರಗಳನ್ನೇ ಕೆಳಗಿಳಿಸಿದರೆ ಅವರನ್ನು ಅಲ್ಪ ಪ್ರಮಾಣದಲ್ಲಾದರೂ ಗೌರವಿಸಿದಂತೆನಿಸುತ್ತದೆ. ಇಲ್ಲವಾದರೆ ಅರೆಬೆತ್ತಲೆ ಮೆರವಣಿಗೆ ಮಾಡುತ್ತೇವೆಂದು ಕೂಗಡುವ ಕಾರ್ಯಕರ್ತರ ಸುಂದರ ಛಾಯಾಚಿತ್ರ ಪತ್ರಿಕೆಗಳ ಅಂಕಣಕ್ಕಿಳಿದಾಗ ಅದಕ್ಕೇ ಫ್ರೇಮ್ ಹಾಕಿಸಬೇಕಷ್ಟೇ???