ಆಡಿದ ಮಾತುಗಳಿಗಿಂತ
ಆಡದೇ ಉಳಿದ ಮಾತುಗಳೇ
ಅರ್ಥಪೂರ್ಣ!
ನನಸಾದ ಕನಸುಗಳಿಗಿಂತ
ಕಣ್ಣೊಳಗೆ ಉಳಿದ ಕನಸುಗಳೇ
ಅರ್ಥಪೂರ್ಣ!
ಎಲ್ಲ ತೆರೆದುಕೊಂಡ ಹೆಣ್ಣಿಗಿಂತ
ನಿಗೂಢವಾಗಿ ಉಳಿದ ಹೆಣ್ಣೇ
ಅರ್ಥಪೂರ್ಣ!
ಬರೆದ ಕವಿತೆಗಳಿಗಿಂತ
ಬರೆಯದೆ ಉಳಿದ ಕವಿತೆಗಳೇ
ಅರ್ಥಪೂರ್ಣ!
Comments
ಆಡದೇ ಉಳಿದದ್ದನ್ನು
ಆಡದೇ ಉಳಿದದ್ದನ್ನು ಮೌನವೆನ್ನಬಹುದೇ? ಅರ್ಥಪೂರ್ಣವಾಗಿದೆ.
ಎದುರಿನಲ್ಲಿ ಬೈದ ಮಾತುಗಳಿಗಿಂತ
ಎದುರಿನಲ್ಲಿ ಬೈದ ಮಾತುಗಳಿಗಿಂತ
ಮನದಲ್ಲಿ ಬೈದುಕೊಂಡ ಬೈಗುಳಗಳೆ
ಹೆಚ್ಚು ಅರ್ಥ ಪೂರ್ಣ !!!
ಕ್ಷಮಿಸಿ ತಮಾಷಿಗೆ !! ನಿಮ್ಮ ಕವನ ಚೆನ್ನಾಗಿದೆ