ಅವನರಸಿ ಹೊರಟಿದೆ ಮನ

ಅವನರಸಿ ಹೊರಟಿದೆ ಮನ

ಕವನ

ಅರಿಯದೂರಿಗೆ ಹೊರಟಿದೆ ನನ್ನೀಮನ

ಅರಸಿ ಅವನೊಲವ ಸೊಗಸನು

ಅನುಪಮದೂಯ್ಯಾಲೆಯಲಿ ಅವಿತು

ಆಲಂಗಿಸಿದ ಅವನಾಡಿದ ನುಡಿಯನು||

 

ಆಕಸ್ಮಿಕ ಭೇಟಿಯ ಅನುಲಂಘನೀಯ ಕ್ಷಣ

ಅಪರಿಮಿತ ಖುಷಿಯ ಹೊತ್ತುತಂದಿತು

ಅನುದಿನ ಅನುಕ್ಷಣ ನನ್ನೆದೆಯ ಮಿಡಿತದಿ

ಅಭೀಪ್ಸೆಯ ಪರಿಷೆಯಲಿ ನಿಂತಿತು||

 

ಅವನಿಲ್ಲದೆ ನನ್ನೀ ಹೃದಯ ಢವಢವ

ಅಸ್ಥಿರದಿ ದಾವತಿಸಿದ ದೇಹದಂತೆ

ಅನುರಾಗ ಮಾಲಿಕೆಯ ಅನುಪಮ ರಾಗ

ಅಹೇತುವಿಲ್ಲದೆ ಒಣಗಿದ ಸುಮದಂತೆ||

 

ಅಸ್ತವ್ಯಸ್ತವಾಗಿದೆ ಮನದ ಹಾಳೆಯ ಬರಹ

ಅಸ್ಪುಟದಿ ಕಾರಣವಿಲ್ಲದೆ ಮನವು

ಅಸ್ವಸ್ಥದಿ ಸೊರಗಿತು ಅವನಿಲ್ಲದೆ ಆ ಕ್ಷಣ

ಅಹಿರ್ಬುಧ್ನ್ಯ ನೆನೆದಿದೆ ನನ್ನೀಒಲವು||

 

ಅಭಿಧಮನಿಯ ನಾಳದಲ್ಲು ಹರಿದಾಡಿದೆ 

ಅವನೊಲವ ಅಭೀಪ್ಸೆಯ ಚೇತರಿಕೆ

ಅಭಿಭವದಲ್ಲು ನೆಲಗೊಂಡ ಅಭಿಷಿಕ್ತನಿಗೆ

ಅಭಿಸಾರದಲ್ಲಿ ನಾನಾದೆ ಅಭಿಸಾರಿಕೆ||

 

ಅರಸನರಮನೆಯಲಿ ಅರಸಿನಾನದರು ಕಾದೆ

ಅಭೀಷ್ಟತೆಯ ಹಾದಿಯಲಿ ಅವನರಸಿ

ಅಲೀಕವಿಲ್ಲದ ಪ್ರೀತಿಯ ಮೇನೆಯಲಿ ತೇಲಿದೆ

ಅವಗಮ್ಯದ ನಿರೀಕ್ಷೆಯ ಒಲವರಸಿ||

 

-ಅಭಿಜ್ಞಾ ಪಿ ಎಮ್ ಗೌಡ

 

ಚಿತ್ರ್