ಅವಳೇನಾದಳೋ

ಅವಳೇನಾದಳೋ

ಕವನ

 

ನೂರಾರುವರುಸದಿಂದರುಸದಿಂದಿರುವಳು

ಮುದುಕಿ, ಚಿರಯುವಕಿ ಭಾಗೀರಥಿ,

ಆ, ಪಾರ್ಕಿನ ಮೂಲೆ ಮರದಲ್ಲವಳ ವಾಸ,

ಕಾಣುವಳು ಕತ್ತಲೆಯ ರಾತ್ರಿಯಲಿ

ಎಲೆಗಳ ಸರ ಸರ ಸದ್ದಿನಲಿ,

ಮಿಂಚುಳಗಳ ಪಕ ಪಕ ಬೆಳಕಿನಲಿ

 

ಯಾರೊ ಬಂದರು

ಎನೊ ಎಂದರು

ಬೆಳಗುವ ಸೊರ್ಯನ 

ಬೆಳಂಬೆಳಗಲಿ

ಕಾಣಲು ಹೊದರೆ

ಕಾಣದ ಕೈಗಳ ಮಾಯದ ಮಾಯಕೆ, ಅವಳೇನಾದಳೊ