ಆಂಡ್ರಾಯ್ಡ್ ನಲ್ಲಿ ಕನ್ನಡ ಪದಬಂಧ ತಂತ್ರಾಂಶ
ಪದಬಂಧವು ಪದಗಳ ರಂಗೋಲಿ. ಈ ಪದಗಳ ಚಿತ್ತಾರ ತುಂಬಾ ಪ್ರಾಚೀನವಾದುದು, ಇದು ಆಯಾ ಭಾಷೆ, ಸಂಸ್ಕೃತಿ, ಕಲೆ, ನಾಗರೀಕತೆ ಮತ್ತು ಅದರ ಸೃಷ್ಟಿ ಕರ್ತನ ಸ್ರಜನಶೀಲತೆಯ ಆಧಾರದ ಮೇಲೆ ವೈವಿಧ್ಯತೆ ಪಡೆದುಕೊಳ್ಳುತ್ತದೆ. ಕನ್ನಡದಲ್ಲಿಯೂ ಕೂಡ ನಾವು ದಿನ, ವಾರ ಮತ್ತು ಮಾಸ ಪತ್ರಿಕೆಗಳಲ್ಲಿ ಪದಬಂಧಗಳನ್ನು ನಾವು ನೋಡಬಹುದು. ಇಂದು ಕೂಡ ಸಾಕಷ್ಟು ಜನ ಪದಬಂಧವನ್ನು ಆಡುತ್ತಾರೆ. ಇದು ನಮ್ಮ ಭಾಷೆಯ ಜ್ಞಾನ ಮತ್ತು ನೆನಪಿನ ಶಕ್ತಿಯನ್ನು ಒರೆ ಹಚ್ಚುತ್ತದೆ. ಪದಬಂಧ ನಮ್ಮ ಪದ ಭಂಡಾರವನ್ನು ಹೆಚ್ಚಿಸುತ್ತದೆ. ನಮ್ಮೆಲ್ಲರ ಕನ್ನಡ ಶಬ್ದ ಭಂಡಾರವನ್ನು ಹೆಚ್ಚಿಸಲು ಈ ಒಂದು ಪ್ರಯತ್ನ. ಕನ್ನಡಕ್ಕಾಗಿ ಮತ್ತು ಕನ್ನಡಿಗರಿಗಾಗಿ ಈ ಕನ್ನಡಗಿನ ಅಳಿಲು ಸೇವೆ.
ಕನ್ನಡ ಪದಬಂಧ. ಕನ್ನಡಿಗರ ಭಾಷೆಯ ಜ್ಞಾನ ಮತ್ತು ನೆನಪಿನ ಶಕ್ತಿಯನ್ನು ಒರೆ ಹಚ್ಚುವ ಆಪ್.
ಸುಲಭವಾದ ಕನ್ನಡ ಶಬ್ದಗಳನ್ನು ಅವುಗಳ ವಿವರಣೆ ಮತ್ತು ಅಕ್ಷರಗಳ ಸಂಖ್ಯೆ ಆಧಾರದ ಮೇಲೆ ಕಂಡು ಹಿಡಿಯಿರಿ.
ವೈಶಿಷ್ಟ್ಯಗಳು
- ೭ * ೭ ಪದಬಂಧ
- ೫ ಉಚಿತ ಪದಬಂಧಗಳು
- ಜಾಹಿರಾತುಗಳಿಂದ ಮುಕ್ತ
- ಕನ್ನಡ ಕೀ ಪ್ಯಾಡ , ಕನ್ನಡದಲ್ಲಿಯೇ ಟೈಪ್ ಮಾಡಬಹುದು
- ಅಕ್ಷರ , ಪದ ,ಪದಬಂಧ ಸುಳಿವುಗಳು ಲಭ್ಯ ಮಾಡಲಾಗಿದೆ.
- ಆಡಲು ಇಂಟರ್ನೆಟ ಅವಶ್ಯಕತೆ ಇಲ್ಲ
- ದೊಡ್ಡ ಪರದೆಯ ಇದ್ದರೆ ಉತ್ತಮ ಅನುಭವ
ಆಟ ಆಡುತ್ತಾ ನಿಮ್ಮ ಕನ್ನಡ ಶಬ್ದ ಸಂಗ್ರಹ ಬೆಳಿಸಿ
ಈ ಪದಬಂಧ ಹೇಗೆ ಆಡಬೇಕು ವೀಡಿಯೋ ಲಿಂಕ್
http://youtu.be/IzFTw1s7kmU
ಗೂಗಲ್ ಆಪ್ ಲಿಂಕ್
https://play.google.com/store/apps/details?id=com.nimblevision.kannadacr...
Comments
ಉ: ಆಂಡ್ರಾಯ್ಡ್ ನಲ್ಲಿ ಕನ್ನಡ ಪದಬಂಧ ತಂತ್ರಾಂಶ
ಮೊದಲೆಲ್ಲಾ ಪತ್ರಿಕೆ/ವಾರ ಪತ್ರಿಕೆಯ ಪದಬಂಧ ಬಿಡಿಸುವುದು ನನ್ನ ಹವ್ಯಾಸವಾಗಿತ್ತು. ಕನ್ನಡ ಪದಬಂಧವನ್ನೂ ಅಂಡ್ರಾಯ್ಡ್ ಮೊಬೈಲ್ ಗೆ ಅಳವಡಿಸಿದ್ದೀರಿ ಎಂದರೆ ಮೆಚ್ಚುವಂತ ಸಾಧನೆ.
In reply to ಉ: ಆಂಡ್ರಾಯ್ಡ್ ನಲ್ಲಿ ಕನ್ನಡ ಪದಬಂಧ ತಂತ್ರಾಂಶ by ಗಣೇಶ
ಉ: ಆಂಡ್ರಾಯ್ಡ್ ನಲ್ಲಿ ಕನ್ನಡ ಪದಬಂಧ ತಂತ್ರಾಂಶ
ಧನ್ಯವಾದಗಳು ಗಣೇಶ್.
ನನ್ನ ಸಮಸ್ತ ಕನ್ನಡ ಗೆಳೆಯೆರೆ ನಿಮಗೆ ಈ ಆಪ್ ಇಷ್ಟು ಆಗಿದ್ದರೆ ಮತ್ತು ನೀವು ನನಗೆ ಈ ಒಂದು ಪ್ರಯತ್ನದಲ್ಲಿ ಸಹಾಯ ಮಾಡಬೇಕೆಂದು ಬಯಸಿದರೆ ದಯವಿಟ್ಟು ನನಗೆ ಒಂದು ಮೇಲ್ ಅಥವಾ ಕೆಳಗಿನ ಫೇಸ್ ಬೂಕನ ಲಿಂಕಲ್ಲಿ ನಿಮ್ಮ ಇಮೇಲ್ ಬಿಡಿ. ನನಗೆ ಅ ಪದಬಂಧದ ಸಂಗ್ರಹ ಜಾಸ್ತಿ ಮಾಡಲಿಕ್ಕೆ ಸಹಾಯ ಬೇಕು. ನಿಮ್ಮೆಲ್ಲರ್ ಸಹಾದ ನಿರೆಕ್ಷೆಯಲ್ಲಿ ಇರುವ ನಿಮ್ಮ ಕನ್ನಡಿಗ.
ಇತಿ,
ಚಿನ್ನಯ್ಯ ಮಠ್ ( ಕಾವ್ಯ ನಾಮ್: ಅಲೋಕ್ )
https://www.facebook.com/nimblevision.blr
nimblevision@gmail.com
In reply to ಉ: ಆಂಡ್ರಾಯ್ಡ್ ನಲ್ಲಿ ಕನ್ನಡ ಪದಬಂಧ ತಂತ್ರಾಂಶ by chikka599
ಉ: ಆಂಡ್ರಾಯ್ಡ್ ನಲ್ಲಿ ಕನ್ನಡ ಪದಬಂಧ ತಂತ್ರಾಂಶ
ದೈನಿಕ -ಮಾಸಿಕ-ಪಾಕ್ಷಿಕಗಳಲ್ಲಿ ನಾ ಮೊದಲು ಕಣ್ಣಾಡಿಸೋದು ಪದಬಂಧ ವಿಭಾಗದತ್ತ ...!!
ಇದು ಮೊದಲಿಂದಲೂ ನನಗೆ ಇಸ್ಟ. ಆಂಡ್ರಾಯ್ಡ್ ಓ ಎಸ್ ಹಲವು ಸಾಧ್ಯತೆಗಳ ಮುಕ್ತ ಸಾಗರ -ಹೀಗಾಗಿ ಅದರ ಓ ಎಸ್ ಇರುವ ಫೋನುಗಳಿಗೆ ಈಗ ಬಹು ಬೇಡಿಕೆ -ನಮ್ಮಂತವರಿಗಾಗಿ ಈಗ ಅದನ್ನು ನೀವು ಸ್ವತಹ ಸೃಸ್ತಿಸಿ ಆ ಬಗ್ಗೆ ಇಲ್ಲಿ ಬರಹ ಬರೆದದ್ದು ನೋಡಿ ಬಹಳೇ ಖುಷಿ ಆಯ್ತು .. ಈ ಬರಹವನ್ನು ಫೇಸ್ಬುಕ್ ಸೇರಿದಂತೆ ಎಲ್ಲೆಡೆ ಪ್ರಚಾರ ಮಾಡುವೆನು ... ನಿಮ್ಮ ಈ ಪ್ರಯತ್ನಕ್ಕೆ ಅಮೋಘ ಬೆಂಬಲ ಸಿಗುವ ವಿಶ್ವಾಸ ನನ್ನದು ..
ನಿಮಗೆ ಯಾವ ತರಹದ ಸಹಾಯ ಬೇಕು ತಿಳಿಸಿ . ಕೈಲಾದ ಸಹಾಯ ಮಾಡುವೆ ...
ನನ್ನಿ
ಶುಭವಾಗಲಿ
\|/
In reply to ಉ: ಆಂಡ್ರಾಯ್ಡ್ ನಲ್ಲಿ ಕನ್ನಡ ಪದಬಂಧ ತಂತ್ರಾಂಶ by venkatb83
ಉ: ಆಂಡ್ರಾಯ್ಡ್ ನಲ್ಲಿ ಕನ್ನಡ ಪದಬಂಧ ತಂತ್ರಾಂಶ
ನಿಮ್ಮ ಪ್ರೋತ್ಸಾಹದ ಶಬ್ದಗಳಿಗೆ ತುಂಬಾ ಧನ್ಯವಾದಗಳು ವೆಂಕಟ. ನನಗೆ ಪದಬಂಧದ ಸಂಗ್ರಹ ಹೆಚ್ಚಿಗೆ ಮಾಡುವಲ್ಲಿ ಸಹಾಯ ಬೇಕು. ನೀವು ನನಗೆ ಕೆಳಗಿನ ಇಮೇಲ್ ಗೆ ಟೆಸ್ಟ್ ಮೇಲ್ ಹಾಕಿದ್ರೆ ನಾನು ನಿಮಗೆ ವಿವರಗಳನ್ನು ಕೊಡ್ತೀನಿ.
nimblevision@gmail.com
In reply to ಉ: ಆಂಡ್ರಾಯ್ಡ್ ನಲ್ಲಿ ಕನ್ನಡ ಪದಬಂಧ ತಂತ್ರಾಂಶ by chikka599
ಉ: ಆಂಡ್ರಾಯ್ಡ್ ನಲ್ಲಿ ಕನ್ನಡ ಪದಬಂಧ ತಂತ್ರಾಂಶ
ಅಲೋಕ್ ಅವರೇ ನಾನು ನಿಮಗೆ ಟೆಸ್ಟ್ ಮೇಲ್ ಕಳಿಸಿರುವೆ ನೋಡಿ
ಶುಭವಾಗಲಿ
\|/
ಉ: ಆಂಡ್ರಾಯ್ಡ್ ನಲ್ಲಿ ಕನ್ನಡ ಪದಬಂಧ ತಂತ್ರಾಂಶ
Hi All,
New version of this app is released with below updates
1. Added 5 more puzzles
2. Reduced the delay between puzzle selection to puzzle matrix display
3. Highlighted the currently selected cell with green color