ಆಗಸಕ್ಕೆ ಏಣಿ ಹಾಕಿ... ಹೀಗೊಂದು ಗಝಲ್

ಆಗಸಕ್ಕೆ ಏಣಿ ಹಾಕಿ... ಹೀಗೊಂದು ಗಝಲ್

ಕವನ

ಮುಗಿಲಿಗೆ ಏಣಿ ಹಾಕಿ ಅಂಬರದಿ ಮಿನುಗೊ ನಕ್ಷತ್ರ ಹಿಡಿಯುವ ಆಸೆ

ನವಿಲಿಗೆ ಚಿನ್ನದ ಆಭರಣ ತೊಡಿಸಿ

ಮನಕೆ ಆನಂದ ಪಡೆಯುವ ಆಸೆ

 

ಓಡುವ ರೈಲನು ರಭಸದಿ ಬಂದು

ಅದರೊಳು ಜಿಂಕೆಯಂತೆ ಜಿಗಿಯುವೆ

ಆಡುವ ಆಟದಿ ನವಕೌಶಲ್ಯ ಬಳಸಿ

ಎದುರಾಳಿಯ ಸೋಲಿಸುವ ಆಸೆ

 

ರಾಣಿಯ ಹೃದಯ ಗೆಲ್ಲಲು ಊರಿಂದ ಹೂವಿನ ಪಲ್ಲಕ್ಕಿತರುವೆ

ಗಿಣಿಯ ಕೊರಳಿಗೆ ಮುತ್ತಿನಸರ ಧರಿಸಿ

ಚೆಲುವ ಕಂಡು ಕುಣಿಯುವ ಆಸೆ

 

ಶರವೇಗದಿ ಉಕ್ಕುತಿರುವ  ಸಾಗರದ ಅಲೆಗಳಿಗೆ ಕಲ್ಲಾಗಿ ನಿಲ್ಲುವೆ

ತುರಗವೇರಿ ಯುದ್ಧದಲಿ ಸಾವಿರ ಸೈನಿಕರ ಸದೆ ಬಡಿಯುವ ಆಸೆ

 

ಬಾನಲಿ ಚೆಲಿಸೋ ಬೆಳ್ಳಿತಟ್ಟೆಯ

ಬಿಜಲಿಯು ತಂದು ಕೊಡುವನು

ಮದುವೆ ಮಂಟಪದಿ ಸಂಗಾತಿ ಜೊತೆಗೆ ಸಪ್ತಪದಿ ತುಳಿಯುವ ಆಸೆ

-*ಶ್ರೀ ಈರಪ್ಪ ಬಿಜಲಿ*

 

ಚಿತ್ರ್