ಆಗಸ್ಟ್ 17ರಿಂದ, 'ಕನ್ನಡ ಕಸ್ತೂರಿ' ಹಚ್ಚ-ಹೊಸ ಚಾನಲ್ !

ಆಗಸ್ಟ್ 17ರಿಂದ, 'ಕನ್ನಡ ಕಸ್ತೂರಿ' ಹಚ್ಚ-ಹೊಸ ಚಾನಲ್ !

ಬರಹ

ಕನ್ನಡಿಗರ ಹಚ್ಚ-ಹೊಸ ಕನ್ನಡ ಚಾನಲ್ ಪಾದಾರ್ಪಣೆ ಮಾಡಲಿದೆ.

ಇದರ ರುವಾರಿ ಯಾರು ಗೊತ್ತೆ ? ನಮ್ಮ ಮಾಜಿ ಪ್ರಧಾನಿ ದೇವೇಗೌಡರ ಸೊಸೆ ಹಾಗೂ ಹಾಲಿ ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಪತ್ನಿಯಾದ ಅನಿತಾ ಕುಮಾರಸ್ವಾಮಿಯವರು. 24x7 ಕನ್ನಡ ಮನರಂಜನಾ ವಾಹಿನಿಯನ್ನು ನಾಳೆಯೇ ನಮ್ಮಜನರೆಗೆ ಅರ್ಪಿಸುವ ಆಶೆಯಿಟ್ಟುಕೊಂಡಿದ್ದಾರೆ.
ಒಡೆತನದ ಚಂದನ, ಸರಕಾರದ ಕೈಯಲ್ಲಿದೆ. ಉದಯ, ಈ ಟೀವಿ ನೆಟ್‌ವರ್ಕ್‌ಗಳು ಖಾಸಗಿಯವರದು. ಬರಲಿರುವ 'ಕನ್ನಡ ಕಸ್ತೂರಿ' ವಾಹಿನಿ, ಇವೆರಡರ ಜೊತೆಗೆ ಸ್ಪರ್ಧೆಯನ್ನು ಎದುರಿಸಬೇಕಾಗಿರುತ್ತೆ. ಕನ್ನಡ ಕಸ್ತೂರಿ ಮೊತ್ತ ಮೊದಲ ಕನ್ನಡಿಗರ ವಾಹಿನಿ ಕೂಡ ಆಗಲಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಲಿದೆ.

ಶ್ರೀಮತಿ. ಅನಿತಾ ಕುಮಾರ ಸ್ವಾಮಿಯವರು ಕಸ್ತೂರಿ ಮೀಡಿಯ ಪ್ರೈ ಲಿ.ನ ಮುಖ್ಯಸ್ಥರಾಗಿರುತ್ತಾರೆ.

-ಯಾಹೂ ಅವರ್ ಸಿಟಿ ಬೆಂಗಳುರಿನ ಸುದ್ದಿಯ ಪ್ರಕಾರ.