ಆಚರಿಸೋಣು ಬಾರಾ ಸ್ವಾತಂತ್ರ್ಯೋತ್ಸವ

ಆಚರಿಸೋಣು ಬಾರಾ ಸ್ವಾತಂತ್ರ್ಯೋತ್ಸವ

ಬರಹ

ಸ್ಥಳ : ಜಕ್ಕಸಂದ್ರ, ಸರ್ಜಾಪುರ ರಸ್ತೆ, ಬೆಂಗಳೂರು 

ಸ್ವ್ಯಾತಂತ್ರ್ಯೋತ್ಸವದ  ಆಚರಣೆಗೆ ಶಾಲೆಯ ಬಳಿ ನೆರೆದ ಚಿಣ್ಣರು.ನಿಮ್ಮ ಮನೆಯ ಸುತ್ತ ಮುತ್ತಲೂ ಅನೇಕ ಆಚರಣೆಗಳು ನೆಡೆದಿರ ಬೇಕಲ್ಲಾ? ಅವುಗಳ ಫೋಟೋವನ್ನೂ ಇತರರೊಂದಿಗೆ ಹಂಚಿಕೊಳ್ಳಿ.  ನನ್ನ ಶಾಲಾ ದಿನಗಳ ಆಚರಣೆಯನ್ನ ನೆನಪಿಸಿದ ಚಿತ್ರವಿದು. ಎಲ್ಲ ಇರಲಿ, ಈ ಒಂದು ಐತಿಹಾಸಿಕ ದಿನದಂದು ರಜೆಯನ್ನ ಮನೆಯಲ್ಲಿ ಟೀವಿ ಎಂಬ ಸೋಮಾರಿ ಪೆಟ್ಟಿಗೆಯ ಮುಂದೆ ಕುಳಿತು ಕೊಳೆಯೋದ್ಯಾಕೆ? ಸ್ಯ್ವಾತಂತ್ರ್ಯೋತ್ಸವದ ಆಚರಣೆಗೆ ರಜೆ ಬೇಕೆ? ಈ ದಿನವನ್ನ ನೋಡ್ಲಿಕ್ಕೆ ವರ್ಷಾನುಗಟ್ಟಲೆ ರಜೆಯಿಲ್ಲದೆ ದುಡಿದ ಯೋಧರನ್ನ, ಹೋರಾಟಗಾರರನ್ನ ನೆನೆಯಲಿಕ್ಕೆ ನಮಗ್ಯಾಕೆ ರಜೆ? ನಾವೂ ನಮ್ಮ ಸಮಯವನ್ನ ದೇಶಕ್ಕೆ ಸಮರ್ಪಿಸಿ (ಯಾವುದಾದರೂ ರೀತಿಯಲ್ಲಿ)ಆಚರಣೆಗೆ ಹೊಸ ಅರ್ಥ ಕೊಡ ಬಹುದಲ್ಲವೆ. ಏನಂತೀರಾ?

ನನ್ನ ಇಂತಹ ಕೆಲವೊಂದು ಪ್ರಶ್ನೆಗಳನ್ನ ನನ್ನ ಇಂಗ್ಲೀಷ್ ಬ್ಲಾಗ್ ನಲ್ಲೂ ಹಂಚಿಕೊಡಿದ್ದೇನೆ. ನೀವೇನಂತೀರಾ ಅಂತ ಕುತೂಹಲ.

ವಂದೇ ಮಾತರಂ.