ಆಜ್ಜಾ ನಮಸ್ಕಾರ
ಕವನ
ಅಜ್ಜಾ ನಮಸ್ಕಾರ
ಮುಗುಳುನಗುವಿರಿ, ನಿಮಗೆ
ಕಿರಿಯರೆಲ್ಲರೂ ಪ್ರೀತಿಪಾತ್ರರು
ಭೇದರಹಿತರು ನೀವು
ನಿಮ್ಮ ನಾಡನ್ನೊಮ್ಮೆ ನೋಡಬನ್ನಿ
ಬ0ಧಿಸಿರುವೆವು ನಿಮ್ಮ ಚಿತ್ರವ ಸುವರ್ಣಚೌಕಟ್ಟಿನಲ್ಲಿ
ನೀವು ಶೋಧಿಸಿದ ಸತ್ಯವನ್ನು
ಸುವರ್ಣಪಾತ್ರೆಯಲ್ಲಿ
ಸು_ವರ್ಣ ಮಾತ್ರ
ಎಲ್ಲಾ ಗಿಲೀಟು!
ಹೊಳೆಯುವ ಮುಖ
ಮೆರುಗಿನ ಮಾತು
ಬರಿಯ ಆವೇಶದುರಿಯ ಜ್ವಾಲೆ
ಕವಿದಿದೆ ತಿಳಿವಿನ ಬೆಳಕಿಲ್ಲದ ದುಸ್ಥಿತಿ...
ಮರಳಿ ಬನ್ನಿರಿ ಅಜ್ಜ,
ನಮಗೆ ಹಿರಿಯರೆನ್ನಿಸಿಕೊಣ್ಡವರು
ಹೇಗೆ ಹೇಳಲಿ ನಾನು..
. ಮೂರಾಬಟ್ಟೆ ಮಾಡಿದ
ನಿಮ್ಮ ಕನಸಿನ ಭಾರತವನ್ನು
ನಮಗಾಗಿ ಉಳಿಸಿಕೊಡಿ,
ಬರುತ್ತೀರಲ್ಲ ಅಜ್ಜಾ....